ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಪರಿವರ್ತನ ಪುನರ್ ವಸತಿ ಕೇಂದ್ರ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೭ನೇ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು. ಕೋಟ ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾದ ತಿಮ್ಮ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾನಸಿಕ ರೋಗವು ಒಂದು ಸಾಮಾಜಿಕ ಕಳಂಕವೆಂದು ಭಾವಿಸದೆ ಮನೋ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಪ್ರವೃತ್ತಿ ಇಂದು ಜನರಲ್ಲಿ ಹೆಚ್ಚುತ್ತಿದೆ ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಸಿಗುವಂತಾಗುತ್ತಿದೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಶ್ರೀಮತಿ ದೇವಕಿ .ಕೆ. ಶೆಟ್ಟಿ (ಅಧ್ಯಕ್ಷರು ಲಯನೆಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು) ಇವರು ಮಾತನಾಡಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಆದಷ್ಟು ಶ್ರೀಘ್ರದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಶ್ರೀಮತಿ ಶಕುಂತಲಾ ಶೆಟ್ಟಿ (ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್) ಇವರು ಈ ಪರಿಸರದ ಜನರು ಶಿಬಿರದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೆದ್ದಾರಿ ಅಂಡರ್ ಪಾಸ್‌ನಿಂದ ಅನುಕೂಲಕ್ಕಿಂತ ಅನನುಕೂಲವೇ ಅಧಿಕ ಎಂದು ವಾದಿಸುತ್ತಿರುವ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಹಿಂದೆ ಸಮೀಪದ ಪದ್ಮಾವತಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸುವುದರಿಂದ ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗೆ, ಅನ್ಯ ಸಂಚಾರಿಗಳಿಗೆ ತೀವ್ರ ತೊಂದರೆಯಾಗಲಿದೆ. ಇಲ್ಲಿ ಯಾವುದೇ ಸ್ಥಳೀಯ ರಸ್ತೆ ಹೆದ್ದಾರಿಗೆ ಸೇರುತ್ತಿಲ್ಲ. ಇಲ್ಲಿ ಅಂಡರ್ ಪಾಸ್ ನಿರ್ಮಿಸಿದರೆ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದರ ಬದಲಾಗಿ ಹೆದ್ದಾರಿ ಇಕ್ಕಡೆಗಳ ಬಡಾಕೆರೆ-ಮರವಂತೆ ಸ್ಥಳೀಯ ರಸ್ತೆಗಳ ಕೂಡುಸ್ಥಳದಲ್ಲಿ ಅಥವಾ ಅರೆಹೊಳೆ ಕ್ರಾಸ್‌ನಲ್ಲಿ ಅದನ್ನು ನಿರ್ಮಿಸಿದರೆ ಜನೋಪಕಾರಿಯಾಗುವುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ಆಯೋಜಿಸಿದ ಪ್ಲಾಸ್ಟಿಕ್ ನಿಷೇಧ, ಕಸ ವಿಲೇವಾರಿಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಜಾಥಾಕ್ಕೆ ಸ್ಥಳೀಯ ಬಿಇಒ ಪ್ರಕಾಶ್ ಚಾಲನೆ ನೀಡಿದರು. ರತ್ತೂಬಾ ಪ್ರೌಢಶಾಲೆ, ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿಷೇಧದ ಕುರಿತು ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಪಂ ಸದಸ್ಯರು, ಪಿಡಿಒ ರುಕ್ಕನ ಗೌಡ ಜಾಥಾದ ನೇತೃತ್ವವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೈಕಾಡಿ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಕ್ಕೆ ಬಿದ್ದ ಮಹಿಳೆಯೋರ್ವವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಹಾಲಾಡಿ ಗ್ರಾಮದ ಕಾಸಾಡಿ ನಿವಾಸಿ ನಾಗರಾಜ ದಾಮ್ಲೆ ಎಂಬುವವರ ಪತ್ನಿ ಸರೋಜಾ ಯಾನೆ ರೋಹಿಣಿ(೪೨) ಮೃತ ದುರ್ದೈವಿ. ಮಗ ಮೋಹಿತ್‌ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದ ಸರೋಜಾ, ಹಾಲಾಡಿಯಲ್ಲಿ ಬಸ್ಸು ಹತ್ತಿ ಮುಂದಿನ ಬಾಗಿಲಿನ ಬಳಿ ನಿಂತಿದ್ದರು. ಹೈಕಾಡಿ ಬಳಿ ಬಸ್ಸು ರಸ್ತೆಯಲ್ಲಿದ್ದ ಹೊಂಡವನ್ನು ಜೀಕಿ ಮುಂದಕ್ಕೆ ಸಾಗಿದ್ದರಿಂದ ನಿಯಂತ್ರಣ ಕೊಳೆದುಕೊಂಡ ಮಹಿಳೆ ಬಸ್ಸಿಂದ ಕೆಳಕ್ಕೆ ಬಿದ್ದಿದ್ದು ಚರಂಡಿಗೆ ತಲೆ ಅಪ್ಪಳಿಸಿ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಕುಳಿತುಕೊಂಡಿದ್ದ ಮಗನ ಕಣ್ಣೆದುರೇ ತಾಯಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದು ಇತರ ಪ್ರಯಾಣಿಕರಿಗೂ ಆಘಾತವನ್ನುಂಟುಮಾಡಿತ್ತು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌ರ ಹೆಸರಿನಲ್ಲಿ ಕೊಡ ಮಾಡುವ ೨೦೧೬-೧೭ರ ಸಾಲಿನ ಪ್ರಶಸ್ತಿಯನ್ನು ನಾಡಿನ ಯಕ್ಷಗಾನ ಕ್ಷೇತ್ರದ ಖ್ಯಾತ ಕಲಾವಿದ, ಏಕವ್ಯಕ್ತಿ ಪ್ರದರ್ಶನದ ರೂವಾರಿ ಮಂಟಪ ಪ್ರಭಾಕರ ಉಪಾಧ್ಯರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಬಳಗ ಆಯ್ಕೆ ಮಾಡಿದೆ. ಮಂಟಪ ಪ್ರಭಾಕರ ಉಪಾಧ್ಯರು ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸೇವೆ, ಅದರಲ್ಲೂ ಏಕವ್ಯಕ್ತಿ ಪ್ರದರ್ಶನದ ನೂತನ ಕಲ್ಪನೆಗೆ ಜೀವ ತುಂಬಿ ದೇಶ-ವಿದೇಶಗಳಲ್ಲಿ ನಿರಂತರ ತನ್ನ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಹೃನ್ಮನಗಳನ್ನು ತಣಿಸಿರುವ ನೆಲೆಯಲ್ಲಿ ಪ್ರಶಸ್ತಿ ಸಮಿತಿ ಇವರ ಹೆಸರನ್ನು ಅಂತಿಮಗೊಳಿಸಿದೆ. ಹಾಗೇ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಎರಡನೇ ವಾರ್ಷಿಕೋತ್ಸವ ಎಪ್ರಿಲ್ ೧೬ ನೇ ತಾರೀಕಿನಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಭಾಗವಹಿಸುವ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ…
ಕುಂದಾಪ್ರ ಡಾಟ್ ಕಾಂ ವಿಡಿಯೋ ನೋಡಿ ಎಸ್ಪಿ ರವಿ ಚನ್ನಣ್ಣನವರ್ ನಟ ಕಿಚ್ಚ ಸುದೀಪ್ ಹಾಗೂ ಕನ್ನಡಿಗರ ಬಗ್ಗೆ ಏನಂದ್ರು ಗೊತ್ತಾ?
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಉಡುಪಿ ನೃತ್ಯನಿಕೇತನ ಆಶ್ರಯದಲ್ಲಿ ಡಾ.ಮಾಳವಿಕ ಹೆಬ್ಬಾರ್ ರಂಗಪ್ರವೇಶ ಮಾರ್ಚ್ ೫, ಸಂಜೆ ೫ಕ್ಕೆ ಭಂಡಾರ್‌ಕಾರ‍್ಸ್ ಕಾಲೇಜು ಆರ್. ಎನ್. ಶೆಟ್ಟಿ ಹಾಲ್‌ನಲ್ಲಿ ನಡೆಯಲಿದೆ ಎಂದು ಡಾ. ಎಚ್. ಆರ್. ಹೆಬ್ಬಾರ್ ತಿಳಿಸಿದರು. ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ಮೆಡಿಕಲ್ ಜೆನೆಟಿಕ್ಸ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಡಾ.ಮಾಳವಿಕಾ ಹೆಬ್ಬಾರ್ ತನ್ನ ವ್ಯಾಸಂಗದ ಜೊತೆಗೆ ಲಲಿತಕಲಾಪ್ರಕಾರಕ್ಕೂ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತ ಉಡುಪಿ ನೃತ್ಯನಿಕೇತನ ವಿದುಷಿ ಲಕ್ಷ್ಮೀಗುರುರಾಜರಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾಹಿತಿ ಮತ್ತು ರಂಗನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ಭಾಗವಹಿಸಲಿದ್ದು, ಜಿಲ್ಲಾ ನ್ಯಾಯಧೀಶ ರಾಜಶೇಖರ ವಿ.ಪಟೀಲ್, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗ ಡಾ.ಗಿರೀಶ್ ಕಟ್ಟ ಭಾಗವಹಿಸಲಿದ್ದಾರೆ. ವಿದುಷಿ ಲಕ್ಷ್ಮೀ ಗುರುರಾಜ, ವಿದುಷಿ ಶೃದ್ದಾ ಎನ್ ಭಟ್, ವಸಂತಿ ಶ್ರೀನಿವಾಸ ಆಚಾರ್ಯ, ಪ್ರದೀಪ ಆಚಾರ್ಯ ಅವರ ಸನ್ಮಾನಿಸಲಾಗುವುದು ಎಂದರು. ಶಾಸ್ತ್ರೀಯ ನೃತ್ಯ-ಭರತನಾಟ್ಯದ ವಿದ್ಯಾರ್ಥಿಯ ಪದೋನ್ನತಿಯನ್ನು ’ಆರಂಗೇಟ್ರ’ ಅಥವಾ ’ರಂಗಪ್ರವೇಶ’ಎಂದು ಕರೆಯುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 6 ಹೊಸ ವೋಲ್ವೋ ಬಸ್ಗಳು ಮಂಗಳೂರು ಭಟ್ಕಳ ಮಾರ್ಗದಲ್ಲಿ ಮಾ.5ರಿಂದ ಸಂಚರಿಸಲಿದ್ದು ಪ್ರತಿದಿನ 9 ಟ್ರಿಪ್ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ. ಮಂಗಳೂರು ಭಟ್ಕಳದ ಪ್ರಮುಖ ಸ್ಥಳಗಳ ದರಗಳು: ಮಂಗಳೂರು- ಭಟ್ಕಳ 225ರೂ, ಮಂಗಳೂರು-ಕುಂದಾಪುರ 160 ರೂ, ಮಣಿಪಾಲ ಉಡುಪಿ-ಕುಂದಾಪುರ 65 ರೂ, ಕುಂದಾಪುರ-ಬೈಂದೂರು 45ರೂ. ಕುಂದಾಪ್ರ ಡಾಟ್ ಕಾಂ. ಸಮಯ: ಬೆಳಿಗ್ಗೆ 6:45ಕ್ಕೆ ಮಂಗಳೂರಿನಿಂದ ಹೊರಟು 9:45ಕ್ಕೆ ಭಟ್ಕಳ ತಲುಪಲಿದೆ. ಇದರಂತೆ ಬೆಳಿಗ್ಗೆ 7:15, 7:45, 10:00, 10:30, 11:00 ಅಪರಾಹ್ನ 2:45, 3:15, 3:45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ. ಭಟ್ಕಳದಿಂದ ಬೆಳಿಗ್ಗೆ 6:30, 7:00, 10:45, 11:15, 11:45, ಅಪರಾಹ್ನ 2:00, 20, 3:00ಕ್ಕೆ ಹೊರಡಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಮಣಿಪಾಲ ಮೂಲ್ಕಿ, ಸುರತ್ಕಲ್ ಬಸ್ ನಿಲುಗಡೆಯಿದ್ದು ಸಾರ್ವಜನಿಕರು ನೂತನ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 volvo…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಜಾಲತಾಣಕ್ಕೆ ಹ್ಯಾಕರ್‌ಗಳು ಲಗ್ಗೆ ಇಟ್ಟಿದ್ದು, ವೆಬ್‌ಸೈಟ್ ಹ್ಯಾಕ್ ಮಾಡಿರುವುದಲ್ಲದೇ ’ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಪ್ರಕಟಿಸಿ ಉದ್ದಟತನ ಪ್ರದರ್ಶಿಸಿದ್ದಾರೆ. ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದ ಮಾಹಿತಿಗಳುಳ್ಳ ಜಾಲತಾಣ ಆನೆಗುಡ್ಡೆ.ಇನ್ ಹೋಮ್ ಪೇಜ್ ಸರಿಯಾಗಿಯೇ ತೆರೆದುಕೊಳ್ಳುತ್ತಿದೆ. ಆದರೆ ಇವೆಂಟ್ಸ್ ಮೇಲೆ ಕ್ಲಿಕ್ ಮಾಡಿದರೇ ಹ್ಯಾಕರ‍್ಸ್‌ಗಳು ವಿನ್ಯಾಸಗೊಳಿಸಿದ ಪುಟ ತೆರೆದುಕೊಳ್ಳುತ್ತಿದೆ. ಅಲ್ಲಿ ’ಪಾಕಿಸ್ತಾನ ಜಿಂದಾಬಾದ್’ ಹ್ಯಾಕಡ್ ಬೈ ‘ಡಿ3 ಡ್ಯಾಸಿನ್’ ಎಂದು ಹೇಳಿಕೊಂಡಿದ್ದಾರೆ. ವೆಬ್ಸೈಟ್ ಹ್ಯಾಕ್ ಆಗಿರುವುದನ್ನು ಗಮನಿಸಿದ ದೇವಳದ ಭಕ್ತರೋರ್ವರು ’ಕುಂದಾಪ್ರ ಡಾಟ್ ಕಾಂ’ಗೆ ಮಾಹಿತಿ ನೀಡಿದ್ದರು. ಆದರೆ ಇದು ದೇವಸ್ಥಾನದ ಅಧಿಕೃತ ವೆಬ್ಸೈಟ್ ಅಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದಾಗ್ಯೂ ಹ್ಯಾಕ್ ಆಗಿದ್ದ ದೇವಳದ ವೆಬ್ಸೈಟ್ ಪುಟವನ್ನು ಒಂದು ದಿನದ ಬಳಿಕ ತಂತ್ರಜ್ಞರು ಸರಿಪಡಿಸಿದ್ದಾರೆ. anegudde shri vinayaka temple website hacked and ut pakistana zindabad slogan
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬಳ್ಕೂರು ಕಾರಿಕುದ್ರು, ಗುಲ್ವಾಡಿ, ಕಂಡ್ಲೂರು ನಡುವೆ ವರಾಹಿ ನದಿಯಲ್ಲಿರುವ ನೈಸರ್ಗಿಕ ಕುದ್ರುವಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು ೩೦ ಎಕರೆ ಪ್ರದೇಶದಲ್ಲಿರುವ ಬೆಲೆಬಾಳುವ ಮರಮಟ್ಟುಗಳು ಬೆಂಕಿಗಾಹುತಿಯಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಸುತ್ತಲೂ ನೀರಿನಿಂದಾವೃತವಾಗಿರುವ ಹಿನ್ನೆಲೆ ಈ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗದೇ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿರಲಿಲ್ಲ. ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಬೆಂಕಿ ಸತತ ಎರಡು ಗಂಟೆಗಳ ಕಾರ‍್ಯಾಚರಣೆ ನಡೆಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅಕ್ರಮ ಮರಳುಗಾರಿಕೆ ನಡೆಸುವವರ ಸಂಚು? ಕುದ್ರಿವಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಮರಳುಗಾರಿಕೆಗೆ ಗಿಡ ಗಂಟಿಗಳು ತೊಂದರೆ ನೀಡುತ್ತದೆ ಎನ್ನುವ ಕಾರಣಕ್ಕೆ ಮರಳು ಕಾರ್ಮಿಕರ ಮೂಲಕ ದಂಧೆಕೋರರು ಇಡೀ ಕುದ್ರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಅಲ್ಲಿದ್ದ ಕಾರ್ಮಿಕರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಬಿಡುಗಡೆಗೊಳಿಸಿದೆ. ತನಿಕೆಯ…
