Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2016-17ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದ ಭಾಗವಾಗಿ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯ ಆವರಣದಲ್ಲಿ ಕುಂದಾಪುರದ ಅಗ್ನಿಶಾಮಕ ದಳದವರಿಂದ ಅರಿವು ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಆರಕ್ಷಕ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಮಾಹಿತಿ ನೀಡಿದರು. ಕುಂದಾಪುರ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ನವೀನ್ ಸುಧೀಂದ್ರ ಉಡುಪ, ರಘುರಾಮ್ ಶೆಟ್ಟಿ ಹೆಗ್ಗದ್ದೆ, ರವೀಶ್ಚಂದ್ರ ಶೆಟ್ಟಿ ವಕೀಲರು, ತಾಲೂಕು ಪಂಚಾಯತ್ ಸದಸ್ಯ ಉದಯ್ ಪೂಜಾರಿ, ನಾರಾಯಣ ಶೆಟ್ಟಿ, ಗುರುರಾಜ ಆಚಾರ್ಯ, ರಾಘವೇಂದ್ರ ಗುಲ್ವಾಡಿ ಅಶೋಕ್ ಶೆಟ್ಟಿ ದೇವಲ್ಕುಂದ, ಪ್ರವೀಣ್ ಶೆಟ್ಟಿ ಹೊಸೂರು, ಎನ್.ಎಸ್.ಎಸ್. ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಹಯೋಜನಾಧಿಕಾರಿ ಪ್ರೀತಿ ಹೆಗ್ಡೆ, ಶಿಬಿರಾಧಿಕಾರಿಗಳಾದ ಚೇತನ್ ಶೆಟ್ಟಿ ಕೋವಾಡಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ, ವಾಣಿಜ್ಯ ಉಪನ್ಯಾಸಕ ಶಿವರಾಜ್ ದೇವಾಡಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ 37ವರ್ಷಗಳಿಂದ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಕುಂದಾಪುರ ಮುಖ್ಯ ಶಾಖೆಯಲ್ಲಿ ನಿವೃತ್ತಿ ಹೊಂದಿದ ಜಿ. ಮಂಜುನಾಥ್ ಅವರನ್ನು ಮುಖ್ಯ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಪ್ರಬಂಧಕಿ ಪೂನಮ್ ಪ್ರಭು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ರಾಘವೇಂದ್ರ ರಾವ್ ಆಗಮಿಸಿದ್ದರು. ಶಾಖೆಯ ವತಿಯಿಂದ ಜಿ. ಮಂಜುನಾಥ್ ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ವಿವಿಧ ಸ್ತರಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿ. ಮಂಜುನಾಥ್ ಅವರನ್ನು ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಸನ್ಮಾನಿಸಿದರು. ಕಿಶೋರ್, ಪ್ರಸನ್ನ, ಭೋಜರಾಜ ಶೆಟ್ಟಿ ಮಾತನಾಡಿ ಜಿ. ಮಂಜುನಾಥ್‌ರ ಸೇವಾ ತತ್ಪರತೆಯನ್ನು ಪ್ರಶಂಶಿಸಿದರು. ನಿತ್ಯಾನಂದ ತೋಳಾರ್ ಅತಿಥಿಗಳನ್ನು ಸ್ವಾಗತಿಸಿದರು. ಗೋಪಾಲಕೃಷ್ಣ ಕುಂಭಾಸಿ ಕಾರ್ಯಕ್ರಮವನ್ನು ನಿರ್ವಹಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ಶಾಲೆಯ ಕಟ್ಟಡ ಮತ್ತಿತರ ಮೂಲ ಸೌಲಭ್ಯಗಳನ್ನು ತಲಾ ರೂ ೧೫ ಲಕ್ಷ ಮೊತ್ತದಲ್ಲಿ ಆರಂಭದ ಹಂತದಲ್ಲೇ ಸೃಷ್ಟಿಸಿ ಅವುಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಹೇರಂಜಾಲಿನಲ್ಲಿ ರೂ೫.೫೩ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡ, ಬಾಲಕ ಬಾಲಕಿಯರ ವಸತಿಗೃಹ, ಅಡುಗೆಮನೆ ಹಾಗೂ ಭೋಜನಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಸಮಾಜದ ಅವಕಾಶ ವಂಚಿತರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮುದಾಯದ ಆಸ್ತಿಯಾಗಿ ರೂಪಿಸುವುದು ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ಶಾಲೆಗಳ ಉದ್ದೇಶ. ಇಲ್ಲಿ ಕಲಿಯುವ ಮಕ್ಕಳಿಗೆ ಶಾಲಾ ಸಮವಸ್ತ್ರ, ಪುಸ್ತಕಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಪೂರೈಸಲಾಗುತ್ತಿದೆ. ಅವರ ಪ್ರತಿನಿಧಿಗಳೇ ಆಯ್ಕೆ ಮಾಡಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಮಿ ತಿರಂಗಾ ಫೆಂಡ್ಸ್ ಇದರ ಮೂರನೇ ವಾರ್ಷಿಕೋತ್ಸವ ದುರ್ಮಿಯಲ್ಲಿ ಜರುಗಿತು. ಹಿಂದೂ ಹಾಗೂ ಕ್ರೈಸ್ತ ಸಮುದಾಯದವರು ಈ ಪ್ರದೇಶದಲ್ಲಿ ಅನ್ಯೂನ್ಯತೆಯಿಂದ ವಾಸಿಸುತ್ತಿದ್ದು ಪ್ರತಿವರ್ಷ ಹೊಸವವರ್ಷದ ಸಂದರ್ಭದಲ್ಲಿ ತಿಂರಂಗಾ ಫ್ರೆಂಡ್ಸ್ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಡುವರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಮಾಣಿಕ್ಯ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಪೇಟೆ ಸಮೀಪ ಮಧ್ಯಾಹ್ನ ಒಬ್ಬೊಂಟಿ ಮಹಿಳೆ ಮನೆಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಉಚಿತ ಚಿನ್ನಾಭರಣ ಪಾಲೀಶ್ ಮಾಡುವ ನೆವದಲ್ಲಿ ಕಳವಿಗೆ ಯತ್ನಿಸಿದ್ದು, ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಹಾರ ಮೂಲದ ರಾಮಚಂದ್ರ ಯಾದವ್ (32) ಚಿನ್ನ ಎಗರಿಸಲು ಹೋಗಿ ಸಿಕ್ಕಿಬಿದ್ದು, ಗೂಸಾ ತಿಂದ ವ್ಯಕ್ತಿ. ವಕ್ವಾಡಿ ಬಾಬಿ ಭಂಡಾರಿ ಎಂಬವರ ಮನೆಗೆ ಬಂದ ಯಾದವ್ ಸಮೀಪದ ಕೋಟೇಶ್ವರದಲ್ಲಿ ಚಿನ್ನಾಭರಣ ಕೆಲಸ ಮಾಡಿಕೊಂಡಿದ್ದೇನೆ ಎಂದು ನಂಬಿಸಿದ್ದಾನೆ. ಉಚಿತ ಚಿನ್ನ ಫಾಲಿಶ್ ಮಾಡಿಕೊಡುವುದಾಗಿ ಮಹಿಳೆ ನಂಬಿಸಿದ್ದಾನೆ. ಯಾದವ್ ಮಾತು ನಂಬಿದ ಮಹಿಳೆ ತನ್ನ ಬಳಿಯಿದ್ದ ೩ ಪವನ್ ಮಾಂಗಲ್ಯ ಸರ ಹಾಗೂ ಒಂದೂವರೆ ಪವನ್ ಚಿನ್ನದ ಸರ ಕೊಟ್ಟಿದ್ದಾಳೆ. ಚಿನ್ನ ಪಡೆದ ಯಾದವ್ ಯಾವುದೋ ರಾಸಾಯನಿಕ ಮಿಶ್ರಿತ ನೀರಿಗೆ ಹಾಕಿ ಬೆಂಕಿಯಲ್ಲಿ ಕಾಯಿಸಿದ್ದಾನೆ. ಬಳಿಕ ಚಿನ್ನ ಬಾಬಿಗೆ ವಾಪಾಸ್ ಕೊಟ್ಟಿದ್ದಾನೆ. ಚಿನ್ನದ ಬಣ್ಣ ಸಂಪೂರ್ಣ ಮಾಸಿದ್ದು, ಸರ ಕೂಡ ತುಂಡಾಗಿತ್ತು. ಚಿನ್ನದ ಬಣ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಂಬೇಡ್ಕರ್ ಅವರ ತತ್ವಾದರ್ಶಗಳು ಎಲ್ಲಾ ಸಮುದಾಯಕ್ಕೂ ಮಾದರಿಯಾಗಿದ್ದು, ಅದರ ಪಾಲನೆಯೊಂದಿಗೆ ಸಮ ಸಮಾಜದ ನಿರ್ಮಾಣಕ್ಕೆ ಪಣತೊಡಬೇಕಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಬೈಂದೂರಿನಲ್ಲಿ ನಿರ್ಮಾಣಗೊಂಡ ಸಮಾಜ ಕಲ್ಯಾಣ ಇಲಾಖೆಯ ನೂತನ ಅಂಬೇಡ್ಕರ್ ಭವನದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸರಕಾರ ಅನುದಾನ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಬೈಂದೂರು ಅಂಬೇಡ್ಕರ್ ಭವನದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿ ಎಲ್ಲಾ ಸಮಾಜದವರಿಗೂ ಉಪಯೋಗವಾಗುವಂತೆ ಮಾಡಲು ಹೆಚ್ಚಿನ ೫೦ಲಕ್ಷ ರೂ. ಮಂಜೂರು ಮಾಡುವುದಾಗಿ ಅವರು ತಿಳಿಸಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಯಡ್ತರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಲಾವತಿ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನವಾಗಿ ನೇಮಕಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ್ ಟಿ ಅವರಿಗೆ ಕುಂದಾಪುರ ಬಾರ್ ಅಸೋಸಿಯೇಶನ್ ಕುಂದಾಪುರ ಇದರ ವತಿಯಿಂದ ಸ್ವಾಗತ ಕಾರ್ಯಕ್ರಮ ಕೋರ್ಟ್ ಸಭಾಂಗಣದಲ್ಲಿ ನಡೆಯಿತು. ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಟಿ, ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ ಐದು ವರ್ಷಗಳಲ್ಲಿ ಈ ದಿನ ನನಗೆ ಹೆಚ್ಚು ಸ್ಮರಣೀಯವಾದುದು. ಕಾನೂನಿನ ಪರವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪ್ರದೇಶಗಳು ಮುಖ್ಯವಲ್ಲ ಬದಲಾಗಿ ಅಂತಹ ಮನಸ್ಥಿತಿ ಮುಖ್ಯ ಎಂದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆಯವರು ನೂತನ ನ್ಯಾಯಾಧೀಶರನ್ನು ಸ್ವಾಗತಿಸಿ, ವಕೀಲರ ಸಂಘಕ್ಕೆ ನೂತನ ಕಟ್ಟಡದ ಪ್ರಕ್ರಿಯೆ ನಡೆಯುತ್ತಿದ್ದು ಆದಷ್ಟು ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ನೂತನ ಕಟ್ಟಡವನ್ನು ರಚಿಸಲು ಸಹಕಾರ ನೀಡುವಂತೆ ಕೋರಿದರು. ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ವಿ ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀ ಲಾವಣ್ಯ ಎಚ್. ಎನ್. ಉಪಸ್ಥಿತರಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮಯ್ಯಾಡಿ ಯುವಕರು ಸ್ವಚ್ಛ ಭಾರತ್ ಅಭಿಯಾನ ಮಿಷನ್ ಅಡಿಯಲ್ಲಿ ಹೊಸ ವರ್ಷದಂದು ಪಡುವರಿ ಸೋಮೇಶ್ವರ ಬೀಚ್ ತೀರ ಸ್ವಚ್ಚಗೊಳಿಸಿದರು. ಮಯ್ಯಾಡಿಯ ಯುವಕರ ತಂಡ ಬೆಳ್ಳಂಬೆಳಿಗ್ಗೆ ಸೋಮೇಶ್ವರ ಬೀಚಿಗೆ ತೆರಳಿ ಸ್ವಪ್ರೇರಣೆಯಿಂದ ಸ್ವಚ್ಚತಾ ಅಭಿಯಾನದಲ್ಲಿ ತೊಡಗಿಕೊಂಡು, ಪರಿಸದ ಸ್ವಚ್ಛತೆಯನ್ನು ಕಾಪಾಡುವಲ್ಲಿ ನೆರವಾದರು. ಸಂದೇಶ್ ಹೆಚ್, ಶಬರೀಶ್ ಅಭಿಯಾನದ ನೇತೃತ್ವ ವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರಿನ ಕೊಂಚಾಡಿ ರಾಧಾ ಗೋಪಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಉದ್ಘಾಟಿಸಿದರು. ಕುಂದಾಪುರ ಉದ್ಯಮಿ ಸುಭಾಶ್ ಭಂಡಾರಿ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಗ್ರಾಮ ಪಂಚಾಯತ್ ಸದಸ್ಯರಾದ ಕಾವ್ಯ ಶೇರುಗಾರ್, ವೇದಾವತಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಚಿತ್ತಾಲ್, ಪತ್ರಕರ್ತ ಬಿ.ರಾಘವೇಂದ್ರ ಪೈ, ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತ ಬಿಲ್ಲವ, ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ, ಶಾಲಾ ವಿದ್ಯಾರ್ಥಿ ನಾಯಕ ಕೀರ್ತಿರಾಜ್, ಪ್ರಭಾರ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು, ಶಾಲೆಯ ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಶ್ರೇಯಸ್ಸಿಗಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಜಡ್ಕಲ್ ಕ್ರಾಸ್‌ನಿಂದ ಕೊಲ್ಲೂರು ದೇವಳದ ತನಕ ಪಾದಯಾತ್ರೆ ಹಾಗೂ ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ನಡೆಯಿತು. ಜಡ್ಕಲ್ ಕ್ರಾಸ್‌ನಿಂದ ಕೊಲ್ಲೂರು ದೇವಳದ ತನಕ ಅಮ್ಮನೆಡೆಗೆ ನಮ್ಮ ನಡಿಗೆ ಕಾಲ್ನಡಿಗೆ ಜಾಥದಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ದೇವಳದಲ್ಲಿ ನಾಯಕರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ತಾರನಾಥ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪುಪ್ಪರಾಜ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಜಿಪಂ ಮಾಜಿ ಸದಸ್ಯ ಪ್ರಕಾಶ್ ಟಿ. ಮೆಂಡನ್, ತಾಪಂ ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ರಾಜ್ಯ ಕಾರ್ಯಕಾರಿಣಿ…

Read More