ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಮಯ್ಯಾಡಿ ಯುವಕರು ಸ್ವಚ್ಛ ಭಾರತ್ ಅಭಿಯಾನ ಮಿಷನ್ ಅಡಿಯಲ್ಲಿ ಹೊಸ ವರ್ಷದಂದು ಪಡುವರಿ ಸೋಮೇಶ್ವರ ಬೀಚ್ ತೀರ ಸ್ವಚ್ಚಗೊಳಿಸಿದರು. ಮಯ್ಯಾಡಿಯ ಯುವಕರ ತಂಡ ಬೆಳ್ಳಂಬೆಳಿಗ್ಗೆ ಸೋಮೇಶ್ವರ ಬೀಚಿಗೆ ತೆರಳಿ ಸ್ವಪ್ರೇರಣೆಯಿಂದ ಸ್ವಚ್ಚತಾ ಅಭಿಯಾನದಲ್ಲಿ ತೊಡಗಿಕೊಂಡು, ಪರಿಸದ ಸ್ವಚ್ಛತೆಯನ್ನು ಕಾಪಾಡುವಲ್ಲಿ ನೆರವಾದರು. ಸಂದೇಶ್ ಹೆಚ್, ಶಬರೀಶ್ ಅಭಿಯಾನದ ನೇತೃತ್ವ ವಹಿಸಿದ್ದರು.