ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ : ಮೊಗವೀರ ಯುವ ಸಂಘ ಹಾಗೂ ಮಹಿಳಾ ಘಟಕ ಕೋಟ ಇವರುಗಳ ಆಶ್ರಯದಲ್ಲಿ ಕೋಟ ವ್ಯಾಪ್ತಿಯ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಚಾಲನೆ ನೀಡಿ ಮಾತನಾಡಿ ಮೊಗವೀರ ಸಂಘಟನೆ ರಕ್ತದಾನ ಶಿಬಿರಗಳ ಮೂಲಕ ಹೊಸ ದಾಖಲೆಯನ್ನು ಸೃಷ್ಠಿಸಿ ಇತರ ಸಮಾಜ ಮುಖಿ ಕಾರ್ಯಕ್ಕೂ ಸೈ ಎನಿಸಿದೆ ಆ ಮೂಲಕ ಇತರ ಸಂಘಗಳಿಗೆ ಮಾದರಿಯಾಗಿದೆ ಅಲ್ಲದೆ ಜಿಲ್ಲಾದ್ಯಂತ ಮೊಗವೀರ ಸಂಘಟನೆಯ ಮೂಲಕ ಬೃಹತ್ ಮಟ್ಟದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ನಾಡೋಜ ಡಾ. ಜಿ ಶಂಕರ್ ಕರೆಕೊಟ್ಟ ಹಿನ್ನಲೆಗೆ ವಿವಿಧ ಘಟಕಗಳ ಮೂಲಕ ಹಿಂದೂ ರುದ್ರಭೂಮಿ ಸ್ವಚ್ಚಗೊಳಿಸಲು ಕಾರ್ಯದಲ್ಲಿ ತೋಡಗಿರುವುದು ಪ್ರಶಂಸನೀಯ ಇದು ಇನ್ನೂ ವಿಸ್ತರಿಸಿ ಮುಂದಿನ ದಿನಗಳಲ್ಲಿ ಇತರ ಸಂಘಗಳ ಮೂಲಕ ಸ್ಥಳೀಯ ಪರಿಸರವನ್ನು ಸ್ವಚ್ಚಗೊಳಿಸಲು ಕರೆ ನೀಡಿದರು ಮೊಗವೀರ ಯುವ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷ ಎಮ್.ಎಸ್ ಸಂಜೀವ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ೧ರ ಕ್ರೀಡಾಕೂಟ ಸ್ಪೂರ್ತಿ-೨೦೧೬ರ ಬಹುಮಾನ ವಿತರಣಾ ಸಮಾರಂಭ ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಆಶೀರ್ವಾದ ಹಾಲ್‌ನಲ್ಲಿ ಜರುಗಿತು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಬಹುಮಾನ ವಿತರಿಸಿ, ಕ್ರೀಡಾ ಮನೋಭಾವ ಭಾಂಧವ್ಯದ ವೃದ್ಧಿಗೆ ಸಹಕಾರಿಯಾಗಿದೆ ಎಂದು ವಿಜೇತರನ್ನು ಅಭಿನಂದಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಅತ್ಯುತ್ತಮ ರೀತಿಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ರೋಟರಿ ಸದಸ್ಯರನ್ನು ಅಭಿನಂದಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್‌ನ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷ ಡಾ. ಸಂತೋಷ್ ಟಿ. ಸೋನ್ಸ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೃಷ್ಣಯ್ಯ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ, ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ರೋಟರಿ ಕುಂದಾಪುರ ಸ್ಥಾಪಕ ಸದಸ್ಯ ಸೋಲೋಮನ್ ಸೋನ್ಸ್ ಇನ್ನಿತರರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಧ್ಯಯನದಿಂದ ಮಾತ್ರ ಹೊಸ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯವಿದೆ. ಸಾಹಿತ್ಯದಲ್ಲಿ ಹಾಸ್ಯ ಮಾರ್ಗವಾಗಿರಬೇಕೇ ಹೊರತು ಹಾಸ್ಯಕ್ಕೆ ಗುರಿಯಾಗಿರಬಾರದು. ಹಾಸ್ಯದ ಮೂಲಕ ಕಟು ಸತ್ಯವನ್ನು ದಾಟಿಸಬಹುದು. ಹೀಗಾಗಿ ಯುವಜನರು ಸಾಹಿತಿಗಳು ಮತ್ತು ಕವಿಗಳು ವಿಭಿನ್ನವಾಗಿ ಆಲೋಚಿಸಬೇಕು. ಕವಿತೆಗಳು ಹೊಸತನದಿಂದ ಕೂಡಿರಬೇಕು ಎಂದು ಖ್ಯಾತ ಚುಟುಕು ಸಾಹಿತಿ ಎಚ್.ದುಂಡಿರಾಜ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಾಹಿತ್ಯ ವೇದಿಕೆ ಮತ್ತು ಗಂಗೊಳ್ಳಿ ಯು. ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಸಹಭಾಗಿತ್ವದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಜರಗಿದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಸವಿ ನುಡಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಸುದಷ್ಟೇ ಶಿಕ್ಷಣಕ್ಕೆ ಸೀಮಿತವಾಗಿ ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂತಹ ಒತ್ತಡದ ಪ್ರಪಂಚದಲ್ಲಿ ಸಾಹಿತ್ಯ ಕಲೆ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ಬೆಳೆಸುವ ಅವರನ್ನು ಪ್ರೋತ್ಸಾಹಿಸುವ ಕೆಲಸಕಾರ್ಯ ಮಾಡಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಕ್ಕಳ ವಿಕಸನದ ಜೊತೆಗೆ ಸಮಾಜದಲ್ಲಿ ಗುರುತಿಸಲ್ಪಡುವ ಸಾಧನೆ ಸಾಹಿತ್ಯದ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಹಬ್ಬ ಸಂಭ್ರಮದಿಂದ ಜರಗಿತು. ದೇವರ ವಾಕ್ಯದ ಭಕ್ತಿಯ ದೇವರ ವಾಕ್ಯದ ಭಕ್ತಿಯ ಪೂಜಾ ವಿಧಿಯಿಂದ ಆರಂಭಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು ಜೀವನವೆಂಬ ನಾವೆಗೆ, ದೇವರ ವಾಕ್ಯವೆ ಆಧಾರ ಎಂಬ ಧ್ಯೇಯ ವಾಕ್ಯದ ಈ ಪೂಜಾ ವಿಧಿಯನ್ನು ತಲ್ಲೂರು ಇಗರ್ಜಿಯ ಧರ್ಮಗುರು ವಂ| ವಿಕ್ಟರ್ ಡಿಸೋಜಾ ನೆಡೆಸಿ ಕೊಟ್ಟು, ನಾವೆಯು ಸುರಕ್ಷಿತವಾಗಿ ಮುನ್ನಡೆಯ ಬೇಕಿದ್ದರೆ ಅದಕ್ಕೆ ಚಾಲಕನ ಮಾರ್ಗದರ್ಶನ ಬೇಕಾಗುತ್ತದೆ, ಹಾಗೇ ನಾವು ಜೀವನದಲ್ಲಿ ಮುನ್ನಡೆಯ ಬೇಕಾದರೆ ಪವಿತ್ರ ಧರ್ಮ ಗ್ರಂಥ, ಅದರಲ್ಲಿರುವರ ದೇವರ ವಾಕ್ಯಗಳು ನಮಗೆ ಮಾರ್ಗದರ್ಶನ ನೀಡುತ್ತದೆ. ಬಾಳಲ್ಲಿ ನೀವು ಪರಿವರ್ತನೆಗೊಳ್ಳಬೇಕು. ನಮ್ಮ ಜೀವನದಲ್ಲಿ ಎಸ್ಟು ಸಾಧನೆ ಮಾಡಿದರೂ, ಬಡವರ ಕಣ್ಣಿರನ್ನು ಒರೆಸಲಿಕ್ಕಾಗದಿದ್ದರೆ ನಿಮ್ಮ ಸಾಧನೆ ವ್ಯರ್ಥ ಎಂದು ಅವರು ಸಂದೇಶ ನೀಡಿದರು ಕಲ್ಯಾಣಪುರ ವಲಯ ಪ್ರಧಾನ, ಕಲ್ಯಾಣಪುರ ಕಾಥೆಡ್ರಾಲನ ರೆಕ್ಟರ್ ಧರ್ಮಗುರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ “ವಿಶ್ವ ಏಡ್ಸ್ ದಿನ”ದ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಮತ್ತು ಯೂತ್ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿನ್ಮಯಿ ಆಸ್ಪತ್ರೆ ಕುಂದಾಪುರ ಇದರ ನಿರ್ದೇಶಕರಾದ ಡಾ| ಉಮೇಶ್ ಪುತ್ರನ್ ಮಾತನಾಡಿ ನಾವು ಏಡ್ಸ್ ದಿನವನ್ನು ಆಚರಣೆ ಮಾಡುವಂತಾಗಬಾರದು. ಇದರ ಬಗ್ಗೆ ಅರಿವು ಮೂಡಿಸಿ, ಏಡ್ಸ್‌ನ್ನು ನಿಯಂತ್ರಣಕ್ಕೆ ತರುವಂತಾಗಬೇಕು ಅಂತ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಡಾ| ಹೆಚ್.ಎಸ್. ಮಲ್ಲಿ, ಮುತ್ತಯ್ಯ ಶೆಟ್ಟಿ, ಶ್ರೀ ಶಿವರಾಮ ಶೆಟ್ಟಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಎಂ. ಗೊಂಡ ಎಲ್ಲರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರಿನ ಪಿಡಬ್ಲ್ಯೂಡಿ ಕಂಟ್ರ್ಯಾಕ್ಟರ್ ಟಿ. ಕೆ. ಶೇಖರ ಶೆಟ್ಟಿ ಕಡೇಮನೆ ತಲ್ಲೂರು (೪೬ ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಡಿ. ೦೨ರಂದು ಹೃದಯಾಘಾತದಿಂದ ನಿಧನರಾದರು. ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ, ಎಲ್‌ಐಸಿ ಪ್ರತಿನಿಧಿಯಾಗಿರುವ ಇವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನ, ತಲ್ಲೂರು ರಾಜಾಡಿಯ ಶ್ರೀ ರಕ್ತೇಶ್ವರಿ ದೇವಸ್ಥಾನ, ತಲ್ಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಯಾಗಿ, ರೋಟರಿ ಸಮುದಾಯ ದಳ ತಲ್ಲೂರಿನ ಅಧ್ಯಕ್ಷರಾಗಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರಿ, ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಡಿ1: ತಾಲೂಕಿನ ಬಳ್ಕೂರು ಗ್ರಾಮ ಪಂಚಾಯತ್‌ನ ಬಳಿ ರಸ್ತೆ ಬದಿಯಲ್ಲಿ ನೆಲಕ್ಕುರುಳಿದ್ದ ಮರದಲ್ಲಿ ಮರದ ಬುಡದಲ್ಲಿದ್ದ ಜೇನು ಹುಳು ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥ ಸೇರಿದಂತೆ ಪಂಚಾಯತ್ ಸಿಬ್ಬಂಧಿಗಳು ಘಟನೆಯನ್ನು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಬಡಾಬೆಟ್ಟು ನಿವಾಸಿ ಮಹೇಂದ್ರ, ಬಳ್ಕೂರು ನಿವಾಸಿಗಳಾದ ಲಕ್ಷ್ಮೀ, ಶಾರದಾ, ಜಯಲಕ್ಷ್ಮಿ, ಪ್ರಭಾಕರ ಬಿಲ್ಲವ, ಬಳ್ಕೂರು ಗ್ರಾಪಂ ಸಿಬ್ಬಂಧಿಗಳಾದ ಲಕ್ಷ್ಮೀ ಪೂರ್ಣಿಮಾ ಜೇನು ದಾಳಿಗೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಂದ್ರ ಅವರ ಮೇಲೆ ಮೊದಲು ದಾಳಿ ಮಾಡಿದ್ದ ಜೇನು ಬಳಿಕ ಪಂಚಾಯತ್ ಸಿಬ್ಬಂಧಿಗಳು ಹಾಗೂ ಅವರನ್ನು ತಪ್ಪಿಸಲು ಬಂದ ಸ್ಥಳೀಯರ ಮೇಲೆಯೂ ದಾಳಿ ಮಾಡಿತ್ತು. ಇಂದು ಬೆಳಿಗ್ಗೆಯಷ್ಟೇ ಖಂಬದಕೋಣೆ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಗುರುಗುಂಜಿ ಹುಳು ದಾಳಿ ಮಾಡಿ 17 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ► ಖಂಬದಕೋಣೆ: ವಿದ್ಯಾರ್ಥಿಗಳಿಗೆ ಗುರುಗುಂಜಿ ಹುಳು ಕಡಿತ. ಅಪಾಯದಿಂದ ಪಾರು – http://kundapraa.com/?p=19611 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಖಂಬದಕೋಣೆ ಪ್ರಾಥಮಿಕ ಶಾಲೆ ಸಮೀಪದ ತೆಂಗಿನ ಮರಕ್ಕೆ ಕಟ್ಟಿದ್ದ ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಕುಕ್ಕಿದ ಪರಿಣಾಮ ಶಾಲಾ ವಠಾರದಲ್ಲಿ ನಿಂತಿದ್ದ ಮಕ್ಕಳಿಗೆ ಗುರುಗುಂಜಿ ಹುಳು ಕಚ್ಚಿ ಗಾಯಗೊಂಡ ಘಟನೆ ವರದಿಯಾಗಿದೆ. ಗಂಭೀರ ಗಾಯಗೊಮಡ ವಿದ್ಯಾರ್ಥಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಯ ಆವರಣದೊಳಗಡೆ ನಿಂತಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗುರುಗುಂಜಿ ಹುಳುವಿನ ಗೂಡಿಗೆ ಹದ್ದು ಬಡಿದು ಚೆಲ್ಲಾಪಿಲ್ಲಿಯಾದ ಹುಳಗಳು ಸಮೀಪದ ಶಾಲೆಯ ಆವರಣದೊಳಗಿದ್ದ ಮಕ್ಕಳನ್ನು ಸುತ್ತುವರಿದು ಕಚ್ಚಿದೆ. ಘಟನೆ ನಡೆದ ತಕ್ಷಣ ಸಾರ್ವಜನಿಕರ ಸಹಕಾರದೊಂದಿಗೆ ಶಾಲಾ ಶಿಕ್ಷಕ ನಾಗ ದೇವಾಡಿಗ ವಿದ್ಯಾರ್ಥಿಗಳನ್ನು ಕೂಡಲೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನೆಯಲ್ಲಿ ವೀಕ್ಷಿತಾ(9) ಹಾಗೂ ಶಶಿಕಲಾ(13) ಎಂಬ ವಿದ್ಯಾಥಿಗಳಿಗೆ ಜಾಸ್ತಿ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ಉಳಿದಂತೆ ಪ್ರಜ್ವಿತಾ(7), ಸುಜನ್(8), ಆದರ್ಶ್(9), ಹರ್ಷಿತ್(10), ಅಂಜಲಿ(10) ಅಂಕುಶ್(12), ಸುಭಾಶ್(12),…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮ ವಿವಿದೋದ್ಧೇಶ ಟ್ರಸ್ಟ್ ಹಾಗೂ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಉಡುಪಿಯ ಸಹಯೋಗದೊಂದಿಗೆ ಯಡ್ತರೆ ಜೆ.ಎನ್. ಆರ್. ಸಭಾಭವನದಲ್ಲಿ ಒಂದು ದಿನದ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿತ್ತು. ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್ ಬೈಂದೂರಿನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದು ಫಲಿತಾಂಶವನ್ನು ಹೆಚ್ಚಿಸಬೇಕೆಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ ರವರುವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ಪುಷ್ಪರಾಜ ಶೆಟ್ಟಿ, ಶ್ರೀ ರಾಮಾ ವಿವಿದೋದ್ಧೇಶ ಟ್ರಸ್ಟ್‌ನ ವಿಶ್ವಸ್ಥರಾದ ಶ್ರೀ ವೆಂಕಟ್ರಮಣ ಬಿಜೂರು ಶ್ರೀನಿವಾಸ ಬಿಜೂರು, ವಿಶ್ವೇಶ್ವರ ಎನ್. ಶ್ರೀನಿವಾಸ ಮದ್ದೋಡಿಯವರು ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಣಾಧಿಕಾರಿಗಳಾದ ನಾಗರಾಜರವರು ಸ್ವಾಗತಿಸಿದರು, ಟ್ರಸ್ಟ್ ನ ಸಂಚಾಲಕ ಶಿಕ್ಷಕ ಆನಂದ ಮದ್ದೋಡಿಯವರು ಪ್ರಸ್ತಾವನೆಗೈದರು. ಜಿಲ್ಲಾ ಅಕ್ಷರದಾಸೋಹದ ಸಹಾಯಕ ಅಧಿಕಾರಿ ಚಂದ್ರ ನಾಯ್ಕ ರವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದ್ದರು. ರತ್ತುಬಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಕುಂದಾಪುರದ ಸಹನಾ ಕನ್ವೆಶ್ಯನ್ ಹಾಲ್‌ನಲ್ಲಿ ನಡೆದ ೬ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪಂಚ್-೨೦೧೬ರಲ್ಲಿ ಆರ್.ಎನ್.ಶೆಟ್ಟಿ ಕಾಲೇಜಿನ ವಿದ್ಯಾರ್ಥಿನಿ ಸಾಹಿತ್ಯ ಎಂ.ಡಿ. ೧೪-೧೬ರ ವಯೋಮಾನದ ಬಾಲಕಿಯರ ವಿಭಾಗದ ಕಟಾದಲ್ಲಿ ತೃತೀಯ, ಕಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈಕೆ ಕುಂದಾಪುರದ ಕ್ರೈಂ ಎಸ್ಸೈ ದೇವರಾಜ್ ಹಾಗೂ ಶಿಕ್ಷಕಿ ರತ್ನ ಇವರ ಪುತ್ರಿ.
