Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕೊಡಮಾಡುವ ಸ್ಟೂಡೆಂಟ್ ಆಫ್ ದಿ ಇಯರ್ ಅವಾರ್ಡ್‌ನ್ನು ಶತಮಾನೋತ್ಸವ ಆಚರಿಸುತ್ತಿರುವ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಯಿತು. ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಹಿರಿಯ ಶಾಖಾಧಿಕಾರಿ ಕೃಷ್ಣ ವಿ. ಕುಲಕರ್ಣಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದ್ದು, ಭೀಮಾ ಗ್ರಾಮ ಯೋಜನೆ, ಭೀಮಾ ಶಾಲೆ ಯೋಜನೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನಗಳನ್ನು ನೀಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು ತಿಳಿಸಿದರು. ಮುಖ್ಯ ಜೀವ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ವಿಮಾ ಪಾಲಿಸಿಗಳನ್ನು ಮಾಡುವುದರೊಂದಿಗೆ ದೀರ್ಘಕಾಲಿಕ ಉಳಿತಾಯದ ಮನೋಭಾವನೆಯನ್ನು ಬೆಳಸಿಕೊಳ್ಳಿ, ಇಂದಿನ ಚಿಕ್ಕ ಉಳಿತಾಯ ಮುಂದಿನ ಸಧೃಢ ಆರ್ಥಿಕತೆಯ ಮೆಟ್ಟಿಲು ಎಂದರು ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಸಹಾಯಕ ಶಾಖಾಧಿಕಾರಿ ಗುರುರಾಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗ೦ಗೊಳ್ಳಿ: ಹರೆಯದಲ್ಲಿ ವಿರುದ್ಧ ಲಿಂಗಿಗಳೆಡೆಗೆ ಆಕರ್ಷಣೆ ಸಹಜವಾದದ್ದು. ಆದರೆ ಆಕರ್ಷಣೆಯನ್ನು ತಪ್ಪಾಗಿ ಭ್ರಮಿಸಿಕೊಂಡು ನಮ್ಮ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಅನಾಕರ್ಷಕವನ್ನಾಗಿ ಮಾಡಿಕೊಳ್ಳಬಾರದು. ನಮ್ಮ ಇತಿಮಿತಿಗಳ ಅರಿವು ನಮಗಿರಬೇಕು ಎಂದು ಗಂಗೊಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತಂತೆ ಅರಿವು ಮೂಡಿಸಲು ವಿಶೇಷವಾಗಿ ಹಮ್ಮಿಕೊ೦ಡಿದ್ದ ಹದಿವಯಸ್ಸು ಮತ್ತು ಮನಸ್ಸು ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ಕಾಣಸಿಕೊಂಡಾಗ ಅದನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸಬಾರದು. ಅಸಡ್ಡೆಯನ್ನೂ ಮಾಡಬಾರದು. ಸೂಕ್ತ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು.ವೈದ್ಯರ ಬಳಿ ಮುಚ್ಚುಮರೆ ಬೇಡ ಎಂದು ಅವರು ಸಲಹೆ ನೀಡಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಜ್ವಲಾ, ಉಪನ್ಯಾಸಕರಾದ ಸುಮತಿ ಉಡುಪ, ಪ್ರತಿಮಾ,ಪ್ರಮೀಳ ಉಪಸ್ಥಿತರಿದ್ದರು.. ಉಪನ್ಯಾಸಕಿ ಸುಗುಣ ಆರ್ ಕೆ ಕಾರ‍್ಯಕ್ರಮ ನಿರ್ವಹಿಸಿದರು. ಶಾಲೆಟ್ ಲೋಬೊ…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಮಣಿಪಾಲದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟು ತಗಲಿ ಬ್ರೈನ್ ಡೆಡ್ ಆಗಿದ್ದ ಬೈಂದೂರಿನ ಖ್ಯಾತ ವೈದ್ಯ ಡಾ. ರವಿರಾಜ್ ಅವರ ಪುತ್ರ ಹಿಮಾಂಶುವಿನ ದೇಹದೊಳಗಿನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಅಗತ್ಯವಿರುವವರಿಗೆ ಜೋಡಿಲಾಗಿದ್ದು, ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಮುಂದಾಗಿದ್ದ ಕುಟುಂಬದ ನಿರ್ಣಯದಿಂದಾಗಿ ಯುವಕನ ಅಂಗಾಗಗಳು ಐವರ ಬಾಳಿಗೆ ಬೆಳಕಾಗಿದೆ. ಅ.8ರ ಶನಿವಾರ ನಡೆದ ಅಪಘಾತದಲ್ಲಿ ಹಿಮಾಂಶುವಿನ ಬ್ರೈನ್ ಡೆಡ್ ಆಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ನುರಿತ ವೈದ್ಯರ ತಂಡ ಸೋಮವಾರ ಬೆಳಿಗ್ಗೆ 2:30ರ ವೇಳೆಗೆ ಅಂಗಾಂಗಗಳನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದು ಅದನ್ನು ಬೆಂಗಳೂರಿಗೆ ರವಾನೆ ಮಾಡಿ ಬೇರೆ ದೇಹಕ್ಕೆ ಯಶಸ್ವಿಯಾಗಿ ಜೋಡಣೆ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. ಅಂಗಾಂಗ ದಾನ ಮಾಡುವ ಕುರಿತು ಸ್ವತಃ ವೈದ್ಯರಾಗಿರುವ ಡಾ. ರವಿರಾಜ್ ಹಾಗೂ ಸುಜಾತ ದಂಪತಿಗಳಿಂದ ಭಾನುವಾರ ಸಮ್ಮತಿ ದೊರೆತ ಕೂಡಲೇ ಕಾನೂನಿನ ವಿವಿಧ ಪ್ರಕ್ರಿಯೆಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರಕುಮಾರ್ ಇವರು ಸಂಘದ ಅಧ್ಯಕ್ಷರಾದ ಪ್ರಕಾಶಚಂದ್ರ ಶೆಟ್ಟಿ ಮತ್ತು ಕಾರ್ಯದರ್ಶಿ ಕುಶಕುಮಾರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನವರಾತ್ರಿಯ ಅಂಗವಾಗಿ ಪ್ರಸಿದ್ಥ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಸಹಸ್ರಾರು ಭಕ್ತರು ವಿಜಯದಶಮಿಯಂದು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು. ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ. ಈ ಬಾರಿ ಕೊಲ್ಲೂರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಬೈಂದೂರು ಶಾಖಾ ವ್ಯವಸ್ಥಾಪಕ ಮಹೇಶ್ ಸುವರ್ಣ (32) ಸೋಮವಾರ ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾದರು. ರಕ್ತದೊತ್ತಡದಲ್ಲಿ ಒಮ್ಮೆಲೇ ತೀವ್ರ ಕುಸಿತವಾದ ಕಾರಣ ಹೃಯಾಘಾತ ಸಂಭವಿಸಿತು ಎನ್ನಲಾಗಿದೆ. ಬ್ರಹ್ಮಾವರದ ಇಂದಿರಾನಗರ ನಿವಾಸಿ ಶೀನ ಮರಕಾಲ ಅವರ ಪುತ್ರರಾದ ಮಹೇಶ್ ಐದು ತಿಂಗಳ ಹಿಂದೆ ಚಿಕ್ಕಮಗಳೂರು ಶಾಖೆಯಿಂದ ಇಲ್ಲಿಗೆ ಶಾಖಾಧಿಕಾರಿಯಾಗಿ ಬಡ್ತಿಹೊಂದಿ ಬಂದಿದ್ದರು. ಶಾಲಾ ದಿನಗಳಿಂದಲೂ ಕ್ರೀಡಾಪಟುವಾಗಿದ್ದ ಅವರು ಕೊಕ್ಕೋ ಮತ್ತು ಕ್ರಿಕೆಟ್ ಆಟದಲ್ಲಿ ಪರಿಣತಿ ಹೊಂದಿದ್ದರು. ಬ್ರಹ್ಮಾವರದ ಎಂಜೋಯ್ ಕ್ರಿಕೆಟರ‍್ಸ್ ತಂಡದ ಸದಸ್ಯರಾಗಿ ವಿಶೇಷ ಸಾಧನೆ ಮಾಡಿದ್ದರು. ಅವಿವಾಹಿತರಾಗಿರುವ ಅವರು ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಅವರ ಅಂತಿಮ ಸಂಸ್ಕಾರ ಮಂಗಳವಾರ ಬ್ರಹ್ಮಾವರದಲ್ಲಿ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮಚಂದ್ರ ದೇವಸ್ಥಾನದ ಶ್ರೀ ರಾಮಕ್ಷತ್ರಿಯ ಯುವಕ ಮಂಡಳಿಯ 30ನೇ ವರ್ಷದ ಶಾರದೋತ್ಸವದ ಪುರಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಡೋಲು, ಕೀಲು ಕುದುರೆ, ಡೈನಾಸಾರೋ, ಬೆಂಕಿಯಾಟ, ಹುಲಿವೇಶ ಟ್ಯಾಬ್ಲೋ ಸಾರ್ವಜನಿಕರ ಗಮನ ಸೆಳೆದವು. ಬೈಂದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಶಾರದಾ ಮಾತೆಯ ಜಲಸ್ತಂಭನ ಕಾರ್ಯಕ್ರಮ ಜರುಗಿತು.  More photos of Sharadotsava here – https://www.facebook.com/kundapra/posts/1203626803044421

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಸೇನೇಶ್ವರ ದೇವಸ್ಥಾನದ ಸಾರ್ವಜನಿಕ ಶಾರದೋತ್ಸವ ಸಮಿತಿಯ 43ನೇ ವರ್ಷದ ಶಾರದೋತ್ಸವದ ಪುರಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಡೋಲು, ಕೀಲು ಕುದುರೆ, ಕೋಳಿ, ನಾರದ, ಟ್ಯಾಬ್ಲೋ ಗಮನ ಸೆಳೆದವು. ಬೈಂದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಶಾರದಾ ಮಾತೆಯ ಜಲಸ್ತಂಭನ ಕಾರ್ಯಕ್ರಮ ಜರುಗಿತು. More Photos here – https://www.facebook.com/kundapra/posts/1203616506378784

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಚಂಡಿಕಾಯಾಗ ಹಾಗೂ ನವರಾತ್ರಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಣಿಪಾಲ ಸಮೀಪ ಮಣ್ಣಪಳ್ಳದ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಂದೂರಿನ ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ ಅವರ ಪುತ್ರ ಹಿಮಾಂಶು ರಾವ್ (16) ಅವರ ಬ್ರೈನ್ ಡೆಡ್ ಆಗಿದ್ದು, ಆತನ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದ್ದಾರೆ. ಹಿಮಾಂಶುವಿನ ಕಣ್ಣು (ಕಾರ್ನಿಯಾ), ಕಿಡ್ನಿ, ಲಿವರ್ ದಾನ ಮಾಡಲು ನಿರ್ಧರಿಸಲಾಗಿದ್ದು ಸೋಮವಾರ ಬೆಳಿಗ್ಗೆ ಗ್ರೀನ್ ಕಾರಿಡಾರ್ ಮೂಲಕ, ಝೀರೊ ಟ್ರಾಫಿಕ್ ನಲ್ಲಿ 6 ಗಂಟೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಹಿಮಾಂಶುವನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಫಘಾತದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಶಿರ್ವ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಸಹ ಸವಾರ ಹಿಮಾಂಶುವಿಗೆ ಗಂಭೀರವಾಗಿ ಗಾಯಗಳಾಗಿ ಬ್ರೈನ್ ಡೆಡ್ ಆಗಿತ್ತು. ನೋವಿನಲ್ಲಿಯೂ ಪೊಷಕರು ಅಂಗಾಂಗದಾನಕ್ಕೆ ಮುಂದಾಗುವ ಮೂಲಕ ಮಾದರಿ ಕಾರ್ಯವೆಸಗಿದ್ದಾರೆ.

Read More