ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಿದ್ಧ &ಟಿವಿ ಹಿಂದಿ ವಾಹಿನಿಯ ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಸಂಗೀತದ ರಿಯಾಲಿಟಿ ಶೋನಲ್ಲಿ ಸ್ವರ್ಧಿಸುತ್ತಿರುವ ಕುಂದಾಪುರ ಮೂಲದ ಕುವರಿ ಸಾನ್ವಿ ಶೆಟ್ಟಿ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ. ತನ್ನ ಸುಮಧುರ ಕಂಠದ ಮೂಲಕ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿರುವ ನಮ್ಮೂರಿನ ಹುಡುಗಿ ಫೈನಲ್ ಹಂತ ತಲುಪಬೇಕಿದ್ದರೇ ನಾವು ವೂಟ್ ಮಾಡಿ ಬೆಂಬಲಿಸುವ ಅಗತ್ಯವಿದೆ. 7330599807 ಈ ಮೊಬೈಲ್ ನಂಬರ್‌ಗೆ ನೀವು ಎಷ್ಟು ಭಾರಿಯಾದರೂ ಮಿಸ್ಡ್ ಕಾಲ್ ನೀಡಿ ನೀವು ಓಟ್ ಮಾಡಬಹುದು. ಅಥವಾ SAN ಎಂದು ಟೈಪ್ ಮಾಡಿ 57575 ಈ ನಂಬರ್‌ಗೆ ಮೆಸೆಜ್ ಮಾಡಿ ವೋಟ್ ಮಾಡಬಹುದು. ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಕಾರ್ಯಕ್ರಮ ಅಕ್ಟೋಬರ್ ೨ನೇ ತಾರೀಕು 9ರಿಂದು 10ಗಂಟೆಯವರೆಗೆ ಇದ್ದು, ರಾತ್ರಿ 10ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ತನಕ ನೀವು ವೋಟ್ ಮಾಡಬಹುದಾಗಿದೆ. Read this ► ಹಿಂದಿ ವಾಹಿನಿಯಲ್ಲಿ ಹಾಡಿನ ಮೋಡಿ ಮಾಡುತ್ತಿದ್ದಾಳೆ ಕುಂದಾಪುರ ಪೋರಿ ಸಾನ್ವಿ ಶೆಟ್ಟಿ – http://kundapraa.com/?p=16375
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಾರಟಕ್ಕೆಂದು ಅಂಗಡಿಯಲ್ಲಿ ಇರಿಸಲಾಗದ್ದ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಸಿಡಿದು ಆಗಸದೆತ್ತರಕ್ಕೆ ಹಾರಿದ ಘಟನೆ ತಾಲೂಕಿನ ಗಂಗೊಳ್ಳಿಯಲ್ಲಿ ವರದಿಯಾಗಿದೆ. ಗಂಗೊಳ್ಳಿಯ ರಥಭೀದಿಯ ಉದ್ಯಮಿ ಜಿ. ಮನೋಹರ ಶೆಣೈ ಅವರ ದಿನಸಿ ಅಂಗಡಿಯಲ್ಲಿ ಇರಿಸಲಾಗಿದ್ದ ಸೆವೆನ್ ಅಪ್ ಕಂಪೆನಿಯ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಇದ್ದಕ್ಕಿದ್ದಂತೆ ಸಿಡಿದು ಹೋಗಿವೆ. ಬಾಂಬ್ ಸ್ಟೋಟವಾದಂತೆ ಪ್ಲಾಸ್ಟಿಕ್ ಬಾಟಲಿಗಳು ಬುಡದಲ್ಲಿ ಒಡೆದು ಮೇಲಕ್ಕೆ ಹಾರಿದೆ. ಅಂಗಡಿಯ ಮೇಲ್ಛಾವಣಿಗೆ ಸ್ವಲ್ಪ ಹಾನಿಯಾಗಿದೆ. ಸುಮಾರು ನಾಲ್ಕೈದು ಬಾಟಲಿಗಳು ಇದ್ದಕ್ಕಿಂದತೆ ಇದೇ ರೀತಿಯಾಗಿ ಒಡೆದು ಹೋಗಿದ್ದು ಅಂಗಡಿ ಮಾಲೀಕರು ಘಟನೆ ನೋಡಿ ಅಚ್ಚರಿಗೊಳಗಾಗಿದ್ದಾರೆ. ಉಳಿದ ಬಾಟಲಿಗಳನ್ನು ಕಂಪೆನಿಯ ಡೀಲರ್‌ಗೆ ಹಿಂದಿರುಗಿಸಿದ್ದಾರೆ. ಬಾಟಲಿಗಳು ಒಡೆದು ಹಾರಲು ಕಾರಣವೇನು ಎಂಬುದು ಮಾತ್ರ ಪತ್ತೆಯಾಗಿಲ್ಲ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ಕೂಡಾ ಕರಾವಳಿ ಭಾಗದ ಪ್ರತಿಭಾವಂತ ಮತ್ತು ಅನುಭವಿ ವೃತ್ತಿ ಕಲಾವಿದರು ಯಕ್ಷಗಾನ ಸಂಘಟನೆ ಹಾಗೂ ಪ್ರಸಾರದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ರಾಜ್ಯ ಮೀನುಗಾರಿಕಾ, ಯುವಜನ ಸೇವಾ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಮತ್ತು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಯಕ್ಷಗುರು ಹೇರಂಜಾಲು ವೆಂಕಟರಮಣ ಗಾಣಿಗ ವೇದಿಕೆಯಲ್ಲಿ ಆಯೋಜಿಸಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಯಕ್ಷಗಾನಕ್ಕಾಗಿ ಕೆಲವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂತವರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಬೇಕು. ಅಲ್ಲದೇ ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈ ಹಿಂದೆ ಯಕ್ಷಗಾನದಲ್ಲಿ ಸಾಧನೆ ಮಾಡಿ ನಮ್ಮನ್ನಗಲಿದ ಹೆಸರಾಂತ ಕಲಾವಿದರನ್ನು ಯಕ್ಷವೇದಿಕೆಯಲ್ಲಿ ಸ್ಮರಿಸಿಕೊಳ್ಳುವುದರಿಂದ ಕಲಾಜೀವನದ ಸಾರ್ಥಕತೆ ಕಾಣಬಹುದಾಗಿದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪುರಸಭೆ ವತಿಯಿಂದ ಕುಂದಾಪುರದ ಮಹಾತ್ಮಾಗಾಂಧಿ ಪಾರ್ಕ್ ಹಾಗೂ ಶಾಸ್ತ್ರೀ ವೃತ್ತದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಪಾರ್ಕಿನಲ್ಲಿರುವ ಗಾಂಧೀಜಿ ಅವರ ಪ್ರತಿಮೆ ಹಾಗೂ ಶಾಸ್ತ್ರಿವೃತ್ತದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗಳಿಗೆ ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಮೋಹನ ಸಾರಂಗ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ರೋಟರಿ ನಿಕಟಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತನ್ನ ಸರಳ ಜೀವನದ ಮೂಲಕ ವಿಶ್ವಕ್ಕೆ ಶಾಂತಿ ಮಾರ್ಗವನ್ನು ತೋರಿದ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ತತ್ವಾದರ್ಶಗಳು ಸದಾ ಅನುಕರಣೀಯ. ಗಾಂಧೀಜಿಯನ್ನು ನೆನೆಯುವುದೆಂದರೆ ಅವರ ಆದರ್ಶಗಳ ಸ್ಮರಿಸಿದಂತೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯ ಪೋಟೋಗೆ ಪುಪ್ಪಾರ್ಚನೆಗೈದು ಮಾತನಾಡಿ ಯುವ ಜನತೆ ಮಹಾತ್ಮರ ಬದುಕಿನ ಅಧ್ಯಾಯಗಳ ಬಗೆಗೆ ಚಿಂತಿಸುವುದಲ್ಲದೇ ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು. ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ವಿಜಯ ಶೆಟ್ಟಿ, ಯಡ್ತರೆ ಗ್ರಾ.ಪಂ ಸದಸ್ಯರುಗಳಾದ ನಾಗರಾಜ ಶೆಟ್ಟಿ, ಸುಧಾಕರ ದೇವಾಡಿಗ, ಬೈಂದೂರು ಕಾಂಗ್ರೆಸ್ ಮುಖಂಡ ವಾಸುದೇವ ಯಡಿಯಾಳ್ ಮೊದಲಾದವರು ಉಪಸ್ಥಿತಿದ್ದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ಅರಂಭವಾಗುತ್ತಿದ್ದಂತೆ ಗೌಜು ಗದ್ದಲವೂ ಆರಂಭವಾಯಿತು. ವಿರೋಧ ಪಕ್ಷದ ಚಂದ್ರಶೇಖರ ಖಾರ್ವಿ, ಸದಸ್ಯರು ಮಧ್ಯಪಾನ ಮಾಡಿ ಸಭೆಗೆ ಬರುತ್ತಾರೆ ಎಂದು ಹೇಳುವ ಮೂಲಕ ಸದಸ್ಯರ ಅವಮಾನಿಸಿದ್ದಾರೆ. ಅದಕ್ಕೆ ಉಪಾಧ್ಯಕ್ಷರು ಉತ್ತರ ಕೊಡಲಿ ಎಂದು ಒತ್ತಾಯಿಸಿದ್ದು, ಸಾಮಾನ್ಯ ಸಭೆ ನಡೆಯುವಾಗಿ ಎಲ್ಲಾ ಸದಸ್ಯರನ್ನು ಗೌರವದಿಂದ ನೋಡಿಕೊಳ್ಳಲಾಗಿದೆ. ಹೊರಗೆ ನಡೆದ ವಿಷಯಕ್ಕೆ ಸಭೆಯಲ್ಲಿ ಉತ್ತರ ಕೊಡಲು ಬರೋದಿಲ್ಲ ಎಂದು ಉಪಾಧ್ಯಕ್ಷ ರಾಜೇಶ್ ಕಾವೇರಿ ಉತ್ತರ ನಂತರ ಸಭೆಯಲ್ಲಿ ಗೌಜು ಗದ್ದಲ ನಡೆಯಿತು. ಸಭೆಯಲ್ಲಿ ಏನು ನಡೆಯುತ್ತದೆ ಎನ್ನೋದು ಅರ್ಥವಾಗಲಿಲ್ಲ. ಕಳೆದ ಆರು ತಿಂಗಳಿಂದ ನೋಡುತ್ತಿದ್ದೇನೆ ಯಾವುದದಾರೂ ಒಂದು ಕಾರಣ ಹಿಡಿದು ಕೊಂಡು ವಿರೋಧ ಪಕ್ಷದವರು ಗಲಾಟೆ ಮಾಡುವ ಮೂಲಕ ಸಾಮಾನ್ಯ ಸಭೆ ಸಮಯ ಹಾಳಾಗುತ್ತಿದೆ. ಅಜೆಂಡ ಮುಂದಿವರಿಯಲು ಅವಕಾಶ ಮಾಡಿಕೊಡುತ್ತಿಲ್ಲ. ಸದಸ್ಯರು ಎಲ್ಲೋ ನಡೆದ ವಿಷಯ ಹಿಡಿದುಕೊಂಡು ಸದನದಲ್ಲಿ ಪ್ರಶ್ತಾಪಿಸುವುದು ತರವಲ್ಲ. ಸದನದಲ್ಲಿ ಸದಸ್ಯರಿಗೆ ಅಗೌರವ ಆಗಿಲ್ಲ ಎಂದು ಚಂದ್ರಶೇಖರ್ ಖಾರ್ವಿ…
ಸಂಘಟನಾತ್ಮಕ ಕಾರ್ಯದಿಂದ ಪಕ್ಷ ಸದೃಢ: ಶ್ರೀನಿವಾಸ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಮಹತ್ತರವಾದ ಜವಾಬ್ದಾರಿ ಬಿಜೆಪಿಯ ಕಾರ್ಯಕರ್ತರಿಗಿದ್ದು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಬಿಜೆಪಿಯ ವಿವಿಧ ಮೋರ್ಚಾಗಳು ಸಂಘಟನಾತ್ಮವಾಗಿ ಕಾರ್ಯನಿರ್ವಹಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಾಗೂರು ಮಹಾಲಸಾ ಕಲ್ಚರಲ್ ಹಾಲ್‌ನಲ್ಲಿ ನಡೆದ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾಗಳ ಪದಗ್ರಹಣ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಡವರು ಹಾಗೂ ದುರ್ಬಲ ವರ್ಗದವರನ್ನು ಮರೆತಿದೆ. ಕುಂದಾಪುರ ತಾಲೂಕಿನಲ್ಲಿ 2,000ಕ್ಕೂ ಹೆಚ್ಚು ಮಂದಿ ಹಕ್ಕುಪತ್ರಕ್ಕಾಗಿ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಸರಣಿ ರೈತರ ಆತ್ಮಹತ್ಯೆಗಳು ನಡೆದಿವೆ. ಕಾವೇರಿ ನೀರಿನ ವಿಷಯದಲ್ಲಿಯೂ ರಾಜಕೀಯ ಮಾಡಿದೆ ಎಂದ ಅವರು ಜನಪರ ಕಾಳಜಿಯ ಕಾರ್ಯಗಳಬೇಕಾದರೆ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ ಎಂದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ…
ಬೈಂದೂರು ಪ್ರಥಮ ದರ್ಜೆ ಕಾಲೇಜು ವಿಜ್ಞಾನ ವಿಭಾಗ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಕರ್ಯ ಒದಗಿಸಿ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ನಮ್ಮ ಗುರಿಯಾಗಿದ್ದು, ಆ ನೆಲೆಯಲ್ಲಿ ಕಾರ್ಯೋನ್ಮಖರಾಗಿ ಬೈಂದೂರು ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಿ ಅಗತ್ಯ ಸೌಕರ್ಯ ಒದಗಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳೂ ಕುಂದಾಪುರ ಅಥವಾ ಭಟ್ಕಳಕ್ಕೆ ತೆರಳುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಹೊರೆಯಾಗುವುದನ್ನು ಮನಗಂಡು ಬೈಂದೂರು ಕಾಲೇಜಿನಲ್ಲಿ ವಿಜ್ಞಾನ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಿವಿಧ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿ ಸದ್ಯ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ವಿಷಯಗಳನ್ನು ಕಲಿಸಲಾಗುವುದು. ಮುಂದಿನ ವರ್ಷ ಅನ್ಯ ವಿಷಯಗಳ ಬೋಧನೆಯನ್ನೂ ಇಲ್ಲಿ ಆರಂಭಿಸಲಾಗುವುದು. ವಿಜ್ಞಾನ ವಿಷಯ ಬೋಧನೆಗೆ ಈಗಾಗಲೇ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಯೋಗಾಲಯಗಳನ್ನು ಸಜ್ಜುಗೊಳಿಸಲಾಗಿದೆ. ಕಾಲೇಜಿಗೆ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೇಡ್ ಪೋನ್ ಧರಿಸಿ ಹಳಿಯ ಮೇಲೆ ತೆರಳುತ್ತಿದ್ದ ಯುವಕನಿಗೆ ರೈಲು ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕುಂದಬಾರಂದಾಡಿಯಲ್ಲಿ ಬಳಿ ವರದಿಯಾಗಿದೆ. ಕುಂದಬಾರಂದಾಡಿ ಮೂಲದ ಯುವಕ ಜಗತ್ ಹೆಗ್ಡೆ (23) ಮೃತ ದುರ್ದೈವಿ. ಮೂಲತಃ ಕುಂದಬಾರಂದಾಡಿಯವರಾದ ಜಗತ್ ಹೆಗ್ಡೆ ಕುಟುಂಬ ಪ್ರಸ್ತುತ ಬೆಂಗಳೂರಿನಲ್ಲಿದೆ. ತನ್ನ ಅಜ್ಜಿಯನ್ನು ಊರಿಗೆ ಬಿಡುವ ಸಲುವಾಗಿ ಕುಂದಬಾರಂದಾಡಿಯ ಮನೆಗೆ ಬಂದಿದ್ದ ಜಗತ್ ಹೆಗ್ಡೆ ಪ್ರತಿಭಾರಿಯಂತೆ ಸಂಜೆಯ ವೇಳೆ ಸಮಯ ಕಳೆಯುವುದಕ್ಕಾಗಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಡೆಮೋ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದ ಜಗತ್ ಹೆಗ್ಡೆ ರಾತ್ರಿ ಮರಳಿ ಬೆಂಗಳೂರಿಗೆ ತೆರಳುವವರಿದ್ದರು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಅ.೦೧ರಿಂದ ಶರನ್ನವರಾತ್ರಿ ಉತ್ಸವವು ಆರಂಭವಾಗಲಿದ್ದು ಅ.೧೧ರವರೆಗೆ ನಡೆಯಲಿದೆ. ಶ್ರೀ ಗುರು ಪರಾಶಕ್ತಿ ಮಠ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ಬ್ರಹ್ಮಶ್ರೀ ವೇ. ಮೂ. ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳಲಿದೆ. ಅ.೦೧ರಂದು ಕಲಶ ಸ್ಥಾಪನೆ ಪೂಜೆಯಿಂದ ಆರಂಭಗೊಂಡು ಪ್ರತಿದಿನ ವಿಶೇಷ ಪೂಜೆ, ಸಂಜೆ ಭಜನೆ, ಅ.೦೯ರಂದು ಬೆಳಿಗ್ಗೆ ಪುಣ್ಯಾಹ ಗಣಪತಿ ಪೂಜೆ, ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿರುವುದು. ಅ.೧೧ರಂದು ಕಲಶ ವಿಸರ್ಜನಾ ಪೂಜೆ ನಡೆಯಲಿದೆ.
