ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನವಾಗಿ ರಚನೆಗೊಂಡ ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ವೈಫಲ್ಯ ಹಾಗೂ ಆಡಳಿತ ಪಕ್ಷದ ಸದಸ್ಯರು ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇಡೂರು ಕುಂಜ್ಙಾಡಿ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಆಯ್ಕೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮರು ನೇಮಕಾತಿಗೆ ಆದೇಶ ನೀಡಿದ್ದರೂ ಯಾವುದೇ ಕ್ರಮಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿಲ್ಲ ಎಂಬುದಾಗಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಆರೋಪಿಸಿದರು. ಬಡ ಜನರಿಗೆ ಹಕ್ಕು ಪತ್ರ ನೀಡುವಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹೊಸೂರು ಗ್ರಾಮದಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟವನ್ನು ಅಕ್ರಮವಾಗಿ ನಡೆಸಲಾಗುತ್ತಿದೆಯಾದರೂ ಪಂಚಾಯಿತಿ ಮೌನ ವಹಿಸಿದೆ. ಸರ್ಕಾರೀ ಶಾಲೆಯೊಂದರ ಆವರಣ ಗೋಡೆ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹಸ್ತಕ್ಷೇಪ ನಡೆಸಿ ಅಡಚಣೆ ಉಂಟುಮಾಡಿದ್ದಾರೆ. ಪಂಚಾಯಿತಿ ವ್ಯಾಪ್ತಯ ಬಹುತೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸದಸ್ಯರು ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೃತ್ಯ ಸಂಗೀತ ಮುಂತಾದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಿದಾಗ ಮಾತ್ರ ಅದರ ಉಳಿವು ಸಾಧ್ಯ. ಕಲೆ, ಸಂಸ್ಕೃತಿಗಳಿಗೆ ಪೂರಕ ವಾತಾವರಣವಿರುವ ಬಸ್ರೂರಿನಂತಹ ಪರಿಸರದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಜನರ ಮಧ್ಯೆಯೇ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಾರದಾ ಸಂಗೀತ ಮತ್ತು ಲಲಿತ ಕಲಾ ಅಕಾಡೆಮಿ ರಿ. ಹಾಗೂ ನರ್ತನ್ ಡಾನ್ಸ್ ಅಕಾಡೆಮಿ ರಿ. ಆಯೋಜಿಸಿದ್ದ ನೃತ್ಯ-ಸಂಗೀತ ತರಬೇತಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ನೃತ್ಯ ತರಬೇತುದಾರರಾದ ದೀಕ್ಷಾ ಹಾಗೂ ದಿವ್ಯರಾಜ್ ಅವರನ್ನು ಗೌರವಿಸಲಾಯಿತು. ಬಸ್ರೂರು ಗ್ರಾಪಂ ಅಧ್ಯಕ್ಷ ಸಂತೋಷಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಪತ್ರಕರ್ತ ಜಾನ್ ಡಿಸೋಜಾ, ಬಸ್ರೂರು ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷ ನಾಗರಾಜ ಸಂತೆಕಟ್ಟೆ, ವ್ಯವಸ್ಥಾಪಕ ಅಶೋಕ್ ಕೆರೆಕಟ್ಟೆ, ಬಸ್ರೂರು ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗ ಕೊಳ್ಕೆರೆ, ಬಿ. ಮೋಹನಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೈನಂದಿನ ವ್ಯವಹಾರದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಉದ್ದೇಶದಿಂದ ಆರಂಭಿಸಿರುವ ಇ-ಸ್ಟಾಂಪಿಂಗ್ ಸೌಲಭ್ಯ, ಠಸ್ಸೆ ಪತ್ರಕ್ಕಾಗಿ ದೂರದ ಊರುಗಳಿಗೆ ತೆರಳುತ್ತಿದ್ದ ಸಾರ್ವಜನಿಕ ಬಹಳಷ್ಟು ಅನುಕೂಲವಾಗಿದೆ. ಇಂದಿನ ದಿನಗಳಲ್ಲಿ ಸರಕಾರದ ಪ್ರತಿ ವ್ಯವಹಾರಕ್ಕೂ ಇ-ಸ್ಟಾಂಪ್ ಅಗತ್ಯವಿದ್ದು, ಈ ಸೌಲಭ್ಯದ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಬೈಂದೂರು ವಿಶೇಷ ತಹಶಿಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ನಾಗೂರು ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ನಾಗೂರು ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಎಸ್., ಕರ್ಣಾಟಕ ಬ್ಯಾಂಕ್ ನಾಗೂರು ಶಾಖಾ ವ್ಯವಸ್ಥಾಪಕ ಹರೀಶ್, ವಿಜಯಾ ಬ್ಯಾಂಕ್ ಖಂಬದಕೋಣೆ ಶಾಖಾ ವ್ಯವಸ್ಥಾಪಕ ಸುಕೇಶ್ ಕುಮಾರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಾಗೂರು ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ ಜಿ., ಮುಖ್ಯ ಅತಿಥಿಳಾಗಿದ್ದರು. ಕಿರಿಮಂಜೇಶ್ವರ ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಈಶ್ವರ ದೇವಾಡಿಗ, ಸುಧಾಕರ ಶೆಟ್ಟಿ, ಉದ್ಯಮಿ ಗೋಕುಲ್ ಶೆಟ್ಟಿ, ಕಿರಿಮಂಜೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರ್ಕಾರದ ಹಣ ಸದ್ಬಳಕೆ ಆಗಬೇಕು. ಗ್ರಾಮೀಣ ಪ್ರದೇಶಗಳಿಗೆ ಅನುದಾನ ತಲುಪಬೇಕು ಎನ್ನುವ ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿಯೇ ಸಾಕಷ್ಟು ಕಾಮಗಾರಿಗೆ ಅತೀ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಇದರ ಅಧ್ಯಕ್ಷ ನಿವೇದಿತ್ ಆಳ್ವ ಹೇಳಿದರು. ಅವರು ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಣಕಟ್ಟೆಯಲ್ಲಿ ನಡೆದ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹತ್ತಿರದಿಂದ ಸಂನ್ಯಾಸಿಬೆಟ್ಟುವಿಗೆ ಕಾಲು ಸಂಕ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೊಲ್ಲೂರು ಗ್ರಾ. ಪಂ. ವ್ಯಾಪ್ತಿಯ ಕೊಲ್ಲೂರು ಗ್ರಾಮದ ಹಳ್ಳಿಬೇರು ರಾಮ ಮನೆ ಹತ್ತಿರ ಕಾಲುಸಂಕ ನಿರ್ಮಾಣ, ವಂಡ್ಸೆ ಗ್ರಾ.ಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ಕಾಡಿಯ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಪೂರ್ವಪ್ರಾಥಮಿಕ ತರಗತಿಯ ಚಿನ್ನರುಗಳು ’ಶೇರಿಂಗ್ ಡೇ’ ಆಚರಿಸಿದರು. ಮಕ್ಕಳಲ್ಲಿ ಹಂಚಿಕೊಳ್ಳುವ ಅಭ್ಯಾಸವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಸಬೇಕೆಂಬ ಉದ್ದೇಶದೊಂದಿದೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಾವು ತಂದ ತಿಂಡಿ ತಿನಿಸುಗಳುನ್ನು ಹಂಚುವುದರ ಮೂಲಕ ಸಾಂಕೇತಿಕವಾಗಿ ಆಚರಿಸಿದರು. ಇದರೊಂದಿಗೆ ಮಕ್ಕಳಿಂದ ಸಂಗ್ರಹಿಸಿದ ಪುಸ್ತಕ, ಪೆನ್ಸಿಲ್, ಮತ್ತಿತರ ಕಲಿಕ ಸಾಮಗ್ರಿಗಳನ್ನು ಬೇಳೂರಿನ ಸ್ಪೂರ್ತಿಧಾಮಕ್ಕೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲ ಶೆಟ್ಟಿ, ಸಹಶಿಕ್ಷಕಿಯರಾದ ಶುಭಲಕ್ಷ್ಮಿ, ರೇಣುಕಾ ಹಾಗೂ ಮಕ್ಕಳಿಂದ ಸ್ಪೂರ್ತಿಧಾಮದ ಮುಖ್ಯಸ್ಥರಾದ, ಡಾ. ಕೇಶವ ಕೋಟೇಶ್ವರವರು ಕೊಡುಗೆಯನ್ನು ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮುಂಬಾಯಿಯ ಛಾಯಾಚಿತ್ರಗಾರ ಸುಧಾರಕ ಓಳ್ವೆ ಉಡುಪಿ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ (ಉಪ್ಪಾ) ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರ ಲಯನ್ ಕೆ. ನವೀನ್ಚಂದ್ರ ಬಲ್ಲಾಳ್ರವರನ್ನು ಉಡುಪಿಯ ನವೀನ್ ಸ್ಟುಡಿಯೋದಲ್ಲಿ “ಛಾಯಾ ಸ್ಫೂರ್ತಿ” ಬಿರುದು ನೀಡಿ ಸನ್ಮಾನಿಸಿ ಮಾತನಾಡಿದರು. ಛಾಯಾಗ್ರಹಣವಿಲ್ಲದ ಪ್ರಪಂಚವನ್ನು ನಾವಿಂದು ಊಹಿಸಲೂ ಸಾಧ್ಯವಿಲ್ಲ. ವೃತ್ತಿಯಲ್ಲಿ ಸೇವಾ ಮನೋಭಾವದೊಂದಿಗೆ ವ್ಯವಹರಿಸಿದರೆ ಯಶಸ್ಸು ಖಂಡಿತ ಎಂದರು. ಉಪ್ಪಾ ಪುರಸ್ಕಾರ ಸ್ವಿಕರಿಸಿದ ಕೆ. ನವೀನ್ಚಂದ್ರ ಬಲ್ಲಾಳ್ ೩೫ ವರ್ಷದಿಂದ ಈ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದೇನೆ. ಕಪ್ಪು ಬಿಳುಪಿನ ಸಮಯದಲ್ಲಿ ಛಾಯಾಗ್ರಹಣ ಬಹಳ ಕಷ್ಟದ ಕೆಲಸ. ಉಡುಪಿಗೆ ಬಂದ ವಿವಿಐಪಿಗಳ ಫೋಟೋ ತೆಗೆಯಲು ಅಧಿಕೃತ ಛಾಯಾಚಿತ್ರಗ್ರಾಹಕನಾಗಿ ತನ್ನ ಅನುಭವವನ್ನು ಹಂಚಿಕೊಂಡು ಉಪ್ಪಾ ಸಂಘಟನೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪ್ಪಾದ ಅನಂತಕೃಷ್ಣ ಭಾಗವತ್ ಹಾಗು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶಸೇವೆಯಲ್ಲಿ ತೊಡಗಿ ಪ್ರಾಣತ್ಯಾಗಗೈದ ಹುತಾತ್ಮರನ್ನು ಸ್ಮರಿಸುತ್ತಿರುವ ಸಂದರ್ಭದಲ್ಲಿ ದೇಶವಿರೋಧಿ ಘೋಷಣೆ ಕೂಗುವವರಿಗೆ ಪರೋಕ್ಷವಾಗಿ ರಾಜ್ಯ ಸರಕಾರ ಹೈಕಮಾಂಡ್ ಆದೇಶದಂತೆ ಬೆಂಬಲವಾಗಿ ನಿಂತಿದೆ. ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ, ಕಿರುಕುಳ ನೀಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದು ಹೀಗೆಯೇ ಮುಂದುವರಿದರೇ ರಾಜ್ಯದಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ದಾರೆ. ಶನಿವಾರ ಹೆಮ್ಮಾಡಿ ಜಯಶ್ರಿ ಸಭಾಂಗಣದಲ್ಲಿ ಜರುಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಮಾವೇಶ, ಮಂಡಲಗಳ ಪದಗ್ರಹಣ ಹಾಗೂ ಬೈಂದೂರು ತಿರಂಗಾ ಯಾತ್ರೆ ಬೈಕ್ ರ್ಯಾಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಭಾರಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದಾದ್ಯಂತ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲು ಪ್ರಧಾನಿ ಮೋದಿ ಕರೆ ನೀಡಿದ್ದು ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಿಸುಮಾರು ಮೂವತ್ತೇಂಟು,ಮೂವತೊಂಬತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ಹೈಸ್ಕೂಲಿನಲ್ಲಿ ಸಹಪಾಠಿಗಳಾಗಿದ್ದವರು ಒಂದೆಡೆ ಸೇರಿದ ಅಪೂರ್ವ ಮಿಲನಕ್ಕೆ ಕುಂದಾಪುರ ಜೆಕೆ ಟವರ್ಸ್ ನ ಸಭಾಂಗಣವು ಸಾಕ್ಷಿಯಾಯಿತು. 1977ರ ಸಾಲಿನಲ್ಲಿ ಕುಂದಾಪುರದ ಸೈಂಟ್ ಮೇರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ತನಕ ಜತೆಯಾಗಿ ವಿದ್ಯಾಭ್ಯಾಸ ಮಾಡಿದ್ದ ಸಹಪಾಠಿಗಳು ಸಾಂಕೇತಿಕವಾಗಿ ಒಗ್ಗೂಡುವ ಸಮಾರಂಭಕ್ಕೆ ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಕುಂದಾಪುರದ ರಾಜೇಂದ್ರ ಹೋಸ್ಕೋಟೆ ಮುನ್ನುಡಿ ಬರೆದರೆ, ಅದಕ್ಕೆ ಜತೆಯಾಗಿ ಚಾಲನೆ ನೀಡಿದವರು ಕುಂದಾಪುರದವರಾಗಿ ವಿದೇಶದಲ್ಲಿ ಉದ್ಯಮಿಯಾಗಿ ಬೆಳೆದು ಇದೀಗ ಮಂಗಳೂರಿನಲ್ಲಿ ನೆಲೆಸಿರುವ ವಿಲ್ಸನ್ ಡಿಸೋಜ, ಹಾಗೂ ಉಡುಪಿ ಮಹಿಳಾ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಅಡಿಗ ಅವರು. ಮತ್ತೇ ಈ ಅಪರೂಪದ ಮಿಲನಕ್ಕೆ ರೂವಾರಿಯಾಗಿ ನಿಂತವರು ಕುಂದಾಪುರದ ಖ್ಯಾತ ಓರ್ಥೋಪೆಡಿಕ್ ತಜ್ಞ ಡಾ. ಶಿವಕುಮಾರ್, ಮೈಸ್ ಕಂಪ್ಯೂಟರಿನ ವಾಲ್ಟರ್ ಫೆರ್ನಾಂಡೀಸ್. ಸಮಾರಂಭದ ಅರಂಭದಲ್ಲಿ ತಮ್ಮನ್ನು ಅಗಲಿರುವ ಸಹಪಾಠಿಗಳಿಗೆ, ಶಿಕ್ಷಕರಿಗೆ ಶೃದ್ದಾಂಜಲಿ ಅರ್ಪಿಸಿದ ಪುರಾತನ ಗೆಳೆಯರು ಅಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಐದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನಾಲ್ಕು ನೂತನ ಶೌಚಾಲಯವನ್ನು ಉದ್ಘಾಟನೆ ಹಾಗೂ ರೂ. 54 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 2 ತರಗತಿ ಕೊಠಡಿ ಹಾಗೂ ಹೆಚ್ಚುವರಿ ನಾಲ್ಕು ಶೌಚಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಶಾಸಕ ಕೆ. ಗೋಪಾಲ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು. ಪ್ರಾಂಶುಪಾಲ ಪಾಲಾಕ್ಷ ಟಿ., ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಂ. ನಾಗರಾಜ ಗಾಣಿಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲೌಕಿಕ ಶಿಕ್ಷಣದಿಂದ ಬದುಕು ಹಸನಾಗಲು ಸಾಧ್ಯವಿಲ್ಲ. ಆಂತರಿಕವಾದ ಮನಸಿನಲ್ಲಿ ಒಳ್ಳೆಯ ಜೀವನಾದರ್ಶಗಳ ಶಿಕ್ಷಣದ ಅಗತ್ಯತೆ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಅಭಿಪ್ರಾಯಪಟ್ಟರು. ಅವರು ಇಅಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ನೆರವಿನೊಂದಿಗೆ ನಡೆದ ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವೆನ್ನುವುದು ನಮ್ಮ ಬದುಕಿನ ಅತಿಮುಖ್ಯವಾದ ಹಂತವಾಗಿದೆ. ಬದುಕು ಸಾಗಿಸಲು ಲೌಕಿಕ ಶಿಕ್ಷಣ ನೆರವಾಗುತ್ತದೆ. ಆದರೆ ಒಳ್ಳೆಯ ಬದುಕು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸುಸಂಸ್ಕೃತವಾಗಲು, ಗೌರವಾನ್ವಿತರಾಗಲು ಇಂಥ ಜೀವನ ಮೌಲ್ಯ ಶಿಕ್ಷಣ ಬೇಕಾಗುತ್ತದೆ. ಸ್ವತಂತ್ರ ಚಿಂತನೆಗೆ , ಉಜ್ವಲ ಭವಿಷ್ಯಕ್ಕೆ ಇಂಥ ಶಿಕ್ಷಣ ಶಿಬಿರಗಳು ನೆರವಾಗುತ್ತವೆ. ಸಂಸ್ಥೆಯ ಈ ಕಾರ್ಯಕ್ರಮ ಇತರ ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು. ದಿನನಿತ್ಯದ ಬದುಕಿನಲ್ಲಿ ಸಾಮಾಜಿಕ ವ್ಯವಸ್ಥೆಯೊಂದಿಗೆ…
