ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೃತ್ಯ ಸಂಗೀತ ಮುಂತಾದ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಿದಾಗ ಮಾತ್ರ ಅದರ ಉಳಿವು ಸಾಧ್ಯ. ಕಲೆ, ಸಂಸ್ಕೃತಿಗಳಿಗೆ ಪೂರಕ ವಾತಾವರಣವಿರುವ ಬಸ್ರೂರಿನಂತಹ ಪರಿಸರದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಜನರ ಮಧ್ಯೆಯೇ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಾರದಾ ಸಂಗೀತ ಮತ್ತು ಲಲಿತ ಕಲಾ ಅಕಾಡೆಮಿ ರಿ. ಹಾಗೂ ನರ್ತನ್ ಡಾನ್ಸ್ ಅಕಾಡೆಮಿ ರಿ. ಆಯೋಜಿಸಿದ್ದ ನೃತ್ಯ-ಸಂಗೀತ ತರಬೇತಿಯನ್ನು ಉದ್ಘಾಟಿಸಿ ಶುಭಹಾರೈಸಿದರು.
ನೃತ್ಯ ತರಬೇತುದಾರರಾದ ದೀಕ್ಷಾ ಹಾಗೂ ದಿವ್ಯರಾಜ್ ಅವರನ್ನು ಗೌರವಿಸಲಾಯಿತು. ಬಸ್ರೂರು ಗ್ರಾಪಂ ಅಧ್ಯಕ್ಷ ಸಂತೋಷಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್, ಪತ್ರಕರ್ತ ಜಾನ್ ಡಿಸೋಜಾ, ಬಸ್ರೂರು ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷ ನಾಗರಾಜ ಸಂತೆಕಟ್ಟೆ, ವ್ಯವಸ್ಥಾಪಕ ಅಶೋಕ್ ಕೆರೆಕಟ್ಟೆ, ಬಸ್ರೂರು ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗ ಕೊಳ್ಕೆರೆ, ಬಿ. ಮೋಹನಚಂದ್ರ ಕಾಳಾವರ್‌ಕರ್, ಶ್ರೀ ಶಾರದಾ ಸಂಗೀತ ಮತ್ತು ಲಲಿತಕಲಾ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಕುಮಾರ್, ನರ್ತನ ಡಾನ್ಸ್ ಅಕಾಡೆಮಿಯ ಪ್ರತಿನಿಧಿ ಗಣೇಶ್ ಕಾಳಾವರ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಕರ ಸ್ವಾಗತಿಸಿ, ಗಣೇಶ್ ಹಂಗಳೂರು ವಂದಿಸಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.