Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ಮೀನುಗಾರ ಮಹಿಳೆ ಹಾಗೂ ದಿನಸಿ ಅಂಗಡಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಮತ್ತು ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಶೆಣೈ ಅವರಿಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ದೊರೆತ 7 ಸಾವಿರ ರೂ.ಗಳನ್ನು ವಾರೀಸುದಾರರಾದ ಬಿಜೂರು ನಿವಾಸಿ ತಿಮ್ಮಪ್ಪ ಎಂಬುವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ‍್ಸ್ ಸಮೀಪ ಮುಖ್ಯರಸ್ತೆಯಲ್ಲಿ ಜುಲೈ 16 ರಂದು ಮಧ್ಯಾಹ್ನ ವ್ಯಕ್ತಿಯೋರ್ವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಸುಮಾರು 7 ಸಾವಿರ ರೂ. ಹಣ ರಸ್ತೆಯ ಮೇಲೆ ಬಿದ್ದಿದ್ದು, ಇದೇ ವೇಳೆ ಅಂಗಡಿಯಲ್ಲಿ ದಿನಸಿ ಸಾಮಾನು ಖರೀದಿಗೆ ಬಂದಿದ್ದ ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಎಂಬುವರು ರಸ್ತೆಯ ಮೇಲೆ ಬಿದ್ದಿದ್ದ ಹಣವನ್ನು ಒಟ್ಟು ಮಾಡಿ ಸ್ಥಳೀಯ ಅಂಗಡಿ ಮಾಲೀಕರಾದ ಜಿ.ವಿಠಲ ಶೆಣೈ ಅವರಿಗೆ ನೀಡಿದ್ದರು. ಇದೇ ಸಂದರ್ಭ ರಸ್ತೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಚಿತ್ರ ನಟ, ನಿರ್ದೇಶಕ, ಪ್ರಕಾಶ್ ರೈ ದಂಪತಿಗಳು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ಚಂಡಿಕಾಹೋಮ ಸೇವೆ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ ದೇವಳದ ವತಿಯಿಂದ ರೈ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭ ಉದ್ಯಮಿ ವಾಸುದೇವ ಶೆಟ್ಟಿ ದಂಪತಿಗಳು ರೈ ಕುಟುಂಬದ ಜತೆಗಿದ್ದರು .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸನ್ಮಾರ್ಗವನ್ನು ತೋರಿಸುವ, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ಮಹಾನ್ ಚೇತನ ಗುರು ಮಾತ್ರ ಎಂದು ಮಂಗಳೂರು ವಿಭಾಗ ಆರ್‌ಎಸ್‌ಎಸ್ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಹೇಳಿದರು. ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ’ಗುರುಪೂಜೆ’ ಕಾರ್ಯಕ್ರಮದ ಬೌದ್ಧಿಕ್‌ನಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಯಾವುದೇ ವ್ಯಕ್ತಿ ಗುರುವಾಗಲಾರ. ಆ ದಿಸೆಯಲ್ಲಿ ಆ ಸ್ಥಾನದಲ್ಲಿ ಸಂಘದ ಸ್ಥಾಪಕರಾದ ಡಾ. ಹೆಡಗೆವಾರು ಅವರು ಜ್ಞಾನ, ಪರಾಕ್ರಮ, ತ್ಯಾಗ ಹಾಗೂ ಸಮರ್ಪಣಾ ಸಂಕೇತವಾಗಿರುವ ಭಗವಾಧ್ವಜವನ್ನು ಗುರುವಾಗಿ ಪೂಜಿಸಲು ಪ್ರಾರಂಭಿಸಿದರು. ಒಂದು ಸಂಘಟನೆಯ ಪ್ರಮುಖ ವ್ಯಕ್ತಿ ಯಾರಾದರೂ ಆ ವ್ಯಕ್ತಿಗೆ ಸಾವಿದೆ. ಆತನ ಮರಣಾ ನಂತರ ಅದನ್ನು ಮುನ್ನೆಡೆಸಲು ಯೋಗ್ಯ ವ್ಯಕ್ತಿಗಳು ಇಲ್ಲದಿದ್ದರೆ ಅಂತಹ ಸಂಘಗಳು ಅವನತಿ ಹೊಂದುತ್ತದೆ. ಅದನ್ನು ಯೋಚಿಸಿ ಸಂಘವು ಅಜರಾಮರವಾಗಿರಬೇಕೆಂಬ ಉದ್ದೇಶದಿಂದ ಸ್ಥಾಪಕರು ಈ ನಿರ್ಧಾಕ್ಕೆ ಬಂದರು. ಹಾಗಾಗಿ ಕಳೆದ ೯೦ ವರ್ಷಗಳಿಂದ ಸಂಘದ ಸ್ವಯಂ ಸೇವಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತನ್ನ ಪೋಷಕರ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದ ಯುವತಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಬೆಳ್ವೆ ಗಣೇಶ್ ಶೆಟ್ಟಿ ಅವರ ಮಗಳು ಪ್ರಗತಿ (16) ಆತ್ಮಹತ್ಯೆಗೆ ಶರಣಾದ ಯುವತಿ. ಬಿದ್ಕಲಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಕಾಮರ್ಸ್ ವಿಭಾಗದಲ್ಲಿ ಕಲಿಯುತ್ತಿದ್ದ ಪ್ರಗತಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ಸಂಜೆ ಕಾಲೇಜಿನಿಂದ ಬಂದವಳು ಸಿಟ್ಟಿನಿಂದ ಸೀದಾ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಈ ಹಿಂದೆಯೂ ಹಲವು ಬಾರಿ ಹೀಗೆಯೇ ಮಾಡಿದ್ದರಿಂದ ಅದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ಪೋಷಕರು ಮರುದಿನ ಬೆಳೆಗ್ಗೆಯಾದರೂ ತನ್ನ ರೂಮಿನಿಂದ ಹೊರಬರದಿದ್ದಾಗ ಆತಂಕಗೊಂಡು ಬಾಗಿಲು ತೆರೆದು ನೋಡಿದಾಗ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿವುದು ಗಮನಕ್ಕೆ ಬಂದಿತ್ತು. ಡೆತ್‌ನೋಟ್‌ನಲ್ಲಿ ತನ್ನ ಪೋಷಕರು ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ನೊಂದಿದ್ದೇನೆ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ: ಬದುಕಿಗೊಂದು ಸಾರ್ಥಕತೆ ದೊರೆಯಬೇಕಿದ್ದರೇ ನಾವು ಸಮಾಜದ ಋಣ ತೀರಿಸಬೇಕಿದೆ. ಒಳ್ಳೆಯ ಚಿಂತನೆಗಳನ್ನು ಬಿತ್ತಿದರೆ ಅದು ಮುಂದೆ ದೊಡ್ಡ ಕೊಡುಗೆಯಾಗುವುದು. ಸಂವಿಧಾನದಲ್ಲಿ ನೈಜ ಸ್ವತಂತ್ರ್ಯದ ಸತ್ಯಗಳು ಅಡಕವಾಗಿದ್ದು, ಆ ಬಗ್ಗೆ ನಾವು ಇನ್ನಷ್ಟು ಅಧ್ಯಯನ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ್ ಹೇಳಿದರು. ಅವರು ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಡ್ಡರ್ಸೆ ದೃಷ್ಠಿಕೋನದಲ್ಲಿ ಪತ್ರಿಕೋದ್ಯಮ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಬಳಿಕ ಮಾತನಾಡಿದರು. ರಾಜಕಾರಣಿಗಳು ಜನರ ಸೇವಕರು. ಅವರಿಂದ ನಾವು ಕೆಲಸ ಮಾಡಿಸಿಕೊಳ್ಳಬೇಕೇ ಹೊರತು ನಾವು ಅವರ ಆಳುಗಳಾಗಬಾರದು. ಕೆಲಸವಾಗದಿದ್ದರೇ ನಾವು ಅವರ ವಿರುದ್ಧ ನಿಲ್ಲುವ, ಪ್ರತಿಭಟಿಸುವ ಧೈರ್ಯ ಹೊಂದಿರಬೇಕು. ರೈತರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು. ಕಾರ್ಪರೇಟ್ ಸೆಕ್ಟರ್‌ಗೆ ಬದಲಾಗಿ ಸಹಕಾರಿ ತತ್ವ ದೇಶದಲ್ಲಿ ಅನಿಷ್ಠಾನಗೊಂಡರೇ…

Read More

ನರೇಂದ್ರ ಎಸ್ ಗಂಗೊಳ್ಳಿ. ಕುಂದಾಪ್ರ ಡಾಟ್ ಕಾಂ ಲೇಖನ. ಒಬ್ಬ ವ್ಯಕ್ತಿಗೆ ಹೊಟ್ಟೆ ಹಸಿಯಲು ಆರಂಭವಾಗಿದೆ ಎಂದಿಟ್ಟುಕೊಳ್ಳಿ. ಹೋಟೆಲನ್ನು ಹುಡುಕಿ ದುಡ್ಡುಕೊಟ್ಟು ತಿನ್ನಬಲ್ಲ ತಾಕತ್ತೂ ಇದೆ. ಸುತ್ತಮುತ್ತಲಲ್ಲಿ ಹಲವಾರು ಹೋಟೆಲುಗಳು ಕಾಣಿಸುತ್ತಿವೆ. ಈ ನಡುವೆ ಸರ್ಕಾರಿ ಎಂದು ಬೋರ್ಡು ಹಾಕಿಕೊಂಡ ಹೋಟೆಲ್ಲೊಂದು ಬನ್ನಿ ನಮ್ಮ ಹೋಟೆಲ್ಲಿಗೆ ಬನ್ನಿ. ತಿಂಡಿ ಇನ್ನೂ ರೆಡಿಯಾಗಿಲ್ಲ. ಆದರೆ ನೀವು ಬಂದ ಮೇಲೆ ನೀವು ಆರ್ಡರ್ ಕೊಟ್ಟ ಮೇಲೆ ಅದನ್ನು ತಯಾರಿಸಲು ಬೇಕಾಗುವ ಸಮಾಗ್ರಿ ದಿನಸಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ನಿಮಗೆ ರುಚಿಕರವಾದ ತಿಂಡಿಯನ್ನು ಬಡಿಸುತ್ತೇವೆ ಎಂದು ಪ್ರಲಾಪಿಸುತ್ತಿದ್ದರೆ ಯಾವುದಾದರೂ ಗ್ರಾಹಕ ಆ ಹೋಟೆಲನ್ನು ನಂಬಿಕೊಂಡು ಬರುತ್ತಾನೆಯೆ? ಖಂಡಿತಾ ಇಲ್ಲ ಎನ್ನುವುದು ಈ ಜಗತ್ತಿನ ಅಪ್ಪಟ ನಿರಕ್ಷರಕುಕ್ಷಿಗೂ ಗೊತ್ತು. ಯಾಕೆಂದರೆ ಇದು ಕಾಮನ್ ಸೆನ್ಸ್. ಆದರೆ ಇಷ್ಟೊಂದು ಚಿಕ್ಕ ಕಾಮನ್ ಸೆನ್ಸ್ ಕೂಡ ನಮ್ಮ ಸರಕಾರದ ಶೈಕ್ಷಣಿಕ ವರ್ಗದ ಆಡಳಿತಾಧಿಕಾರಿಗಳಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಸಚಿವರುಗಳಲ್ಲಿ ಇಲ್ಲದೇ ಹೋಗಿರುವುದು ನಿಜಕ್ಕೂ ದೊಡ್ಡ ವಿಪರ‍್ಯಾಸ. ನೀವೇ ಗಮನಿಸಿ ನೋಡಿ. ಶಿಕ್ಷಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುತ್ತಿದ್ದು ಇದು ಸರ್ಕಾರಿ ಶಾಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಂಡ್ಸೆ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿ ಬೇರೆ ಬೇರೆ ಕಡೆಗಳಿಂದ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವ ಕೆಲಸ ಆಗಿದೆ. ಆದರೆ ಈಗಿನ ವಿದ್ಯಾರ್ಥಿಗಳ ಸಂಖ್ಯೆಗೆ ಇನ್ನೂ ಶಿಕ್ಷಕರ ಅವಶ್ಯಕತೆ ಇರುವಾಗ ಇದ್ದ ಶಿಕ್ಷರನ್ನೇ ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆಗೆ ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು. ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ನಡೆದ ವಂಡ್ಸೆ ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್‌ನಲ್ಲಿ ಸೋಮವಾರದಿಂದಲೇ ಬಾಪೂಜಿ ಸೇವಾಕೇಂದ್ರ ಆರಂಭವಾಗಿದ್ದು ಇಲ್ಲಿ ಪಹಣಿ ಪತ್ರ ಸೇರಿದಂತೆ ಕಂದಾಯ ಇಲಾಖೆಯ ೩೯ ಸೇವೆಗಳನ್ನು ಪಡೆಯಲು ಅವಕಾಶವಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನೆ, ನಿವೇಶನ ರಹಿತರು ನಿವೇಶನ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಹಲವಾರು ವರ್ಷಗಳಾದರೂ ನಿವೇಶನ ಹಕ್ಕು ಪತ್ರ ವಿತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಸಬೇಕಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಹೇಳಿದರು. ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ನವದೆಹಲಿಗೆ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ವಿಸ್ಕೃತ ಸಭೆಯು ಕುಂದಾಪುರ ಕಾರ್ಮಿಕ ಭವನದಲ್ಲಿ ಜರುಗಿತ್ತು. ಕೃಷಿ ಕೂಲಿಕಾರರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು. ದಾಸಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಮಹಾಬಲ ವಡೇರ ಹೋಬಳಿ, ಸುರೇಶ ಕಲ್ಲಾಗರ, ಉಪಸ್ಥಿತರಿದ್ದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಮಳೆಗಾಲದಲ್ಲಿ ಪ್ರತಿಯೊಂದಕ್ಕೂ ಆ ತೊರೆಯನ್ನು ದಾಟಿಯೇ ನಡೆಯಬೇಕು. ಶಾಲೆಗೆ ಹೋಗುವ ಪುಟಾಣಿಗಳು ಹೊಂಡಾಗುಂಡಿ ದಾರಿ ಸವೇಸಿ ಹಳ್ಳ ದಾಟುವುದು ಅನಿವಾರ್ಯ. ಇತಿಹಾಸ ಪ್ರಸಿದ್ಧ ದೇವಾಲಯವೊಂದಕ್ಕೆ ತೆರಳಲೂ ಭಕ್ತರು ಇದೇ ಮಾರ್ಗವನ್ನು ಹಾದುಹೋಗಬೇಕು. ಇದು ವಂಡ್ಸೆ ಗ್ರಾಮದ ಅತ್ರಾಡಿ ಬಳಿಯ ತೊರೆಯಿಂದಾದ ದುಸ್ಥಿತಿ. ಬೈಂದೂರು ವಿಧಾನ ಸಭಾ ಕ್ಷೇತ್ರ ವಂಡ್ಸೆ ಗ್ರಾಮ ಅಡಿಕೆಕೊಡ್ಲುವಿಗೆ ತೆರಳುವಲ್ಲಿ ಇರುವ  ತೊರೆ ಮಳೆಗಾದಲ್ಲಿ ಅಗ್ನಿ ಪರೀಕ್ಷೆ ನಡೆಸುತ್ತಿದ್ದರೆ, ಬೇಸಿಗೆಯಲ್ಲಿ ಸತ್ತು ಮಲಗುತ್ತದೆ. ವಂಡ್ಸೆ ಮೂಲಕ ಆತ್ರಾಡಿ ಹೋಗುವ ದಾರಿಗೆ ಅಡ್ಡವಾಗಿ ತೊರೆಯ ಹೋರಿದೆ. ದಿನ ನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ತೊರೆಯಲ್ಲಿ ಸರ್ಕಸ್ ಮಾಡಿ ದಾಟಿಬೇಕು. ಬೇಸಿಗೆಯಲ್ಲಿ ಅಡ್ಡಿಯಿಲ್ಲ. ಮಳೆಗಾದಲ್ಲಿ ಎಚ್ಚರ ತಪ್ಪಿದರೆ ದೇವರೇ ಕಾಪಾಡಬೇಕು. ಈ ದಾರಿ ಇತಿಹಾಸ ಪ್ರಸಿದ್ಧ ಶ್ರೀ ವನದುರ್ಗಾ ಪರಮೇಶ್ವರಿ ಕಾನಮ್ಮ ದೇವಸ್ಥಾನಕ್ಕೂ ಸಂಪರ್ಕ ಕಲ್ಪಸುತ್ತದೆ. ನಿತ್ಯ ಶಾಲಾ ಮಕ್ಕಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ವಂಡ್ಸೆ, ಅಡಿಕೆಕೊಡ್ಲು ಆತ್ರಾಡಿ ಸಮೀಪ ಬೆಸೆಯುವ ದಾರಿಯೂ ಹೌದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅನ್ನದಾತ ರೈತ ತಾಯಿಯ ಸಮಾನವಾಗಿದ್ದು, ರೈತರನ್ನು ಗೌರವಿಸಿ, ಬೆಂಬಲಿಸಿ ಸಹಾಯ ಮಾಡುವುದರ ಮೂಲಕ ರೋಟರಿ ಜಿಲ್ಲಾ ರೈತಮಿತ್ರ ಯೋಜನೆ ಯಶಸ್ವಿಯೊಳಿಸೋಣ ಎಂದು ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷ ದಿನಕರ ಆರ್. ಶೆಟ್ಟಿ ಹೇಳಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೈತಮಿತ್ರ ಕಾರ್ಯಕ್ರಮದ ಅಂಗವಾಗಿ ರೈತರಾದ ಕೋಟಿ ಪೂಜಾರಿ ಮತ್ತು ನಾರಾಯಣ ಆಚಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು. ರೋಟರಿ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಕ್ಲಬ್ ಪರವಾಗಿ ಉಚಿತ ಗೊಬ್ಬರ ರೈತರಿಗೆ ಹಂಚಿದರು. ರೈತರೊಂದಿಗೆ ಸಂವಾದದಲ್ಲಿ ಮತ್ತು ಕೃಷಿ ಕಾರ್ಯದಲ್ಲಿ ರೋಟರಿ ಸದಸ್ಯರು ಪಾಲ್ಗೊಂಡರು. ರೋಟರಿ ಸನ್‌ರೈಸ್ ನಿಕಟ ಪೂರ್ವಾಧ್ಯಕ್ಷ ದಿನಕರ ಪಟೇಲ್, ಸದಸ್ಯರಾದ ಕೆ.ಹೆಚ್. ಚಂದ್ರಶೇಖರ್, ರಾಜಶೇಖರ್ ಹೆಗ್ಡೆ, ಬಿ.ಎಂ. ಚಂದ್ರಶೇಖರ್, ಗಜಾನನ ಭಟ್, ರಾಮಕೃಷ್ಣ ಐತಾಳ್, ಉಲ್ಲಾಸ್, ಸುಬ್ಬರಾವ್, ಶಿವಾನಂದ, ದಿನೇಶ್ ಗೋಡೆ, ಸದಾನಂದ ಉಡುಪ, ರಾಜು ಪೂಜಾರಿ, ಮಂಜುನಾಥ ಕೆ.ಎಸ್., ಡುಂಡಿರಾಜ್, ಕಾರ್ಯದರ್ಶಿ ನಾಗೇಶ್ ನಾವಡ ಉಪಸ್ಥಿತರಿದ್ದರು.

Read More