ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜು.4: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಪಾರಂಪರಿಕವಾಗಿ ಪೂಜೆ ನಡೆಸುವ ಅರ್ಚಕ ಕುಟುಂಬದ, ಪ್ರಸ್ತುತ ಬ್ರಹ್ಮಾವರದಲ್ಲಿ ನೆಲೆಸಿದ್ದ ಅರುಣ ಅಡಿಗ ಅಸೌಖ್ಯದಿಂದ ನಿಧನರಾಗಿದ್ದಾರೆ. ಒಂದು ವರ್ಷದ ಹಿಂದೆ ಬ್ರಹ್ಮಾವರದ ತಮ್ಮ ನಿವಾಸಿದಿಂದ ಬ್ಯಾಂಕಿಗೆ ತೆರಳುತ್ತಿದ್ದ ಸಂದರ್ಭ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿಂಡಿಕೇಟ್ ಬ್ಯಾಂಕಿನ ಹಿರಿಯ ಉದ್ಯೋಗಿಯಾಗಿ ಬೈಂದೂರು, ಬ್ರಹ್ಮಾವರ ಮುಂತಾದೆಡೆ ಸೇವೆ ಸಲ್ಲಿಸುತ್ತಲೇ ತಮ್ಮ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು. ದಿವಂಗತ ವಿ.ಎಸ್. ಆಚಾರ್ಯ ಅವರ ಪರಮಾಪ್ತರಲ್ಲಿ ಓರ್ವರಾಗಿದ್ದ ಅಡಿಗರು ಅಭಿವೃದ್ಧಿಯ ವಿಷಯದಲ್ಲಿ ಪಕ್ಷಾತೀತ ನಿಲುವು ತಳೆದಿದ್ದರು. ಬೈಂದೂರು ಒತ್ತಿನಣೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೀರ್ಣೋದ್ಧಾರದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಇದರ ನೂತನ ವೃಂದಾವನ ಸಮರ್ಪಣೆ ಕಾರ್ಯಕ್ರಮ ಶನಿವಾರ ಮಠದ ವಠಾರದಲ್ಲಿ ನಡೆಯಿತು. ವೇದಮೂರ್ತಿ ವಿಜಯ ಪೆಜತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೃಂದಾವನ ದಾನಿಗಳಾದ ಶಾರದಾ ಪುಂಡಲೀಕ ಗಾಣಿಗ, ಉದ್ಯಮಿ ನಿತ್ಯಾನಂದ ಗಾಣಿಗ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಗ್ರಾಮ ಪಂಚಾಯಿತಿ ಸದಸ್ಯ ರವಿ ಗಾಣಿಗ ಆಜ್ರಿ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಹಿತ್ಲು ರಸ್ತೆಯು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಈ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ದುಸ್ತರವಾಗಿದೆ. ಕಳಿಹಿತ್ಲು ಪರಿಸರದಲ್ಲಿ ಸುಮಾರು 60ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು ತಮ್ಮ ದಿನಿತ್ಯದ ಅವಶ್ಯಕತೆಗಳಿಗೆ ಗುಜ್ಜಾಡಿ ಪೇಟೆಯನ್ನು ಅವಲಂಬಿಸಿದ್ದಾರೆ. ಕಳಿಹಿತ್ಲುವಿನಿಂದ ಗುಜ್ಜಾಡಿಗೆ ಬರಲು ಇರುವ ಏಕೈಕ ರಸ್ತೆಯಾಗಿರುವ ಈ ರಸ್ತೆಯು ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಹಾನಿಯಾಗುತ್ತಿತ್ತು. ಪ್ರತಿವರ್ಷ ಅಲ್ಪಸ್ವಲ್ಪ ಹಾನಿಗೊಳಗಾಗುತ್ತಿದ್ದ ಈ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ದುರಸ್ಥಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಕಳೆದ ವರ್ಷ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಶಾಸಕರ ನಿಧಿಯಿಂದ ಸುಮಾರು 3ಲಕ್ಷ ರೂ. ಮಂಜೂರಾಗಿದ್ದು, ಈ ಅನುದಾನವನ್ನು ಬಳಸಿಕೊಂಡು ರಸ್ತೆಯುದ್ಧಕ್ಕೂ ಒಂದು ಒಂದು ಅಡಿಯಷ್ಟು ಕೆಂಪು ಮಣ್ಣು ಹಾಕಿ ರಸ್ತೆಯ ಅಭಿವೃದ್ಧಿಪಡಿಸಲಾಗಿತ್ತು ಎನ್ನಲಾಗಿದೆ. ಆದರೆ ಇತ್ತೀಚಿಗೆ ಸುರಿದ ಧಾರಾಕರ ಮಳೆಗೆ ಇಡೀ ಕಳಿಹಿತ್ಲು ರಸ್ತೆ ರಸ್ತೆಯೇ ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿ ಮಾರ್ಪಾಡಾಗಿದೆ. ರಸ್ತೆಯ ಮೇಲೆ ಜನರು ನಡೆದಾಡಲು ಕಷ್ಟಪಡುತ್ತಿದ್ದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಸಮಾಜ ಭಾಂದವರ ಸಮ್ಮುಖದಲ್ಲಿ ಶ್ರಮದಾನ ಕಾರ್ಯಕ್ರಮ ಸೋಮವಾರ ಮಠದ ವಠಾರದಲ್ಲಿ ನಡೆಯಿತು. ವಿವಿಧ ಘಟಕಗಳ ಸಮಾಜ ಭಾಂದವರೂ ಹಾಗೂ ಮಹಿಳಾ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಶ್ರಮದಾನದ ಮೂಲಕ ಮಠದ ಸ್ವಚ್ಚತೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಮಹಾಬಲ ಗಾಣಿಗ, ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು, ಪುಂಡಲೀಕ ಗಾಣಿಗ, ಶಿಕ್ಷಕ ಭಾಸ್ಕರ ಗಾಣಿಗ ಕೊಡಪಾಡಿ, ಸುಬ್ರಮಣ್ಯ ಚರ್ಚ್‌ರೋಡ್, ನಿವೃತ್ತ ಸೈನಿಕ ರಾಮಚಂದ್ರ ಗಾಣಿಗ, ಚಂದ್ರಶೇಖರ ಕೋಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಛಾಯಾಗ್ರಾಹಕರ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಒಂದು ದಿನದ ಶಾಂತಿಯುತ ಛಾಯಾಗ್ರಹಣ ಬಂದ್ ರಾಜ್ಯಾದ್ಯಂತ ನಡೆದಿದ್ದು, ಕುಂದಾಪುರದಲ್ಲಿ ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಕುಂದಾಪುರ ವಲಯದಿಂದ ಪ್ರತಿಭಟನೆ ನಡೆಯಿತು. ಕರ್ನಾಟಕ ರಾಜ್ಯದಲ್ಲಿರುವ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಛಾಯಾ ಮತ್ತು ವೀಡಿಯೋ ವೃತ್ತಿ ಬಾಂಧವರು ಅನುಭವಿಸುತ್ತಿರುವ ಸಂಕಷ್ಟಗಳ ಮತ್ತು ಅವುಗಳ ಪರಿಹಾರವನ್ನು ಕೋರಿ ಇಂದು ಕುಂದಾಪುರ ವಲಯ ಛಾಯಾಗ್ರಾಹಕರು ಶಾಂತಿಯುತ ಬಂದ್ ಆಚರಿಸಿ ಮೆರವಣಿಗೆಯ ಮೂಲಕ ಆಗಮಿಸಿ ಕುಂದಾಪುರ ಎಸಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಕುಂದಾಪುರ ತಾಲೂಕು ಕಛೇರಿಯ ಎದುರು ಶಾಸಕರಿಗೆ ಮನವಿಯನ್ನು ಕೊಟ್ಟು ನಂತರ ಮೆರವಣಿಗೆಯ ಮೂಲಕ ಏಸಿ ಕಛೇರಿಗೆ ಹೋಗಿ ಅಲ್ಲಿ ಕುಂದಾಪುರ ಏಸಿ ಯವರಿಗೆ ಮನವಿಯನ್ನು ನೀಡಲಾಯಿತು ಏಸಿ ಪರವಾಗಿ ಪ್ರಭಾರ ತಹಶೀಲ್ದಾರ್ ಕಿರಣ್ ಗೋರಯ್ಯ ಇವರು ಮನವಿಯನ್ನು ಸ್ವೀಕರಿಸಿದರು. ಕುಂದಾಪುರ ಛಾಯಾಗ್ರಾಹಾಕರ ಸಂಘದ ಅಧ್ಯಕ್ಷ ಗ್ರೇಷನ್ ಡಿಸೋಜಾ, ಉಪಾದ್ಯಕ್ಷ ರಾಜಾ ಮಠದಬೆಟ್ಟಿ, ಗಿರೀಶ್ ಚಿತ್ತೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರತಿಷ್ಠಿತ ಆರ್ಯಭಟ ಇಂಟರ್‌ನ್ಯಾಶನಲ್ ಅವಾರ್ಡ್‌ನ್ನು ಪಡೆದ ಗಾಯಕ, ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸತೀಶ್ ಪೂಜಾರಿ ಅವರನ್ನು ವೈದ್ಯರ ದಿನಾಚರಣೆಯ ಅಂಗವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ವತಿಯಿಂದ ಸನ್ಮಾನಿಸಲಾಯಿತು. ಮಣಿಪಾಲ ಕೆಎಂಸಿ ಆಸಪತ್ರೆಯ ಸರ್ಜರಿ ವಿಭಾಗದ ಪ್ರೋಫೆಸರ್ ರಾಜ್‌ಗೋಪಾಲ ಶೆಣೈ ಅವರು ಸತೀಶ್ ಪೂಜಾರಿಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಐಎಂಎ ಕುಂದಾಪುರ ಅಧ್ಯಕ್ಷೆ ಡಾ. ಭವಾನಿ ರಾವ್, ಖ್ಯಾತ ಮನೋರೋಗ ತಜ್ಞ ಡಾ. ಕೆ. ಎಸ್. ಕಾರಂತ್, ಐಎಂಎ ಕಾರ್ಯದರ್ಶಿ ಶ್ರೀದೇವಿ ಕಟ್ಟೆ, ಡಾ.ರಮೇಶ್ ರಾವ್, ಶ್ರೀಮತಿ ಸುಜಾತ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಇದರ ನೂತನ ಮಠದ ದೇವರ ರಜತ ಪೀಠ ಸಮರ್ಪಣೆ ಕಾರ್ಯಕ್ರಮ ಭಾನುವಾರ ಮಠದ ವಠಾರದಲ್ಲಿ ನಡೆಯಿತು. ವೇದಮೂರ್ತಿ ವಿಜಯ ಪೆಜತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದಾನಿಗಳಾದ ತ್ರಾಸಿ ಅಣ್ಣಪ್ಪಯ್ಯ ಸಭಾ ಭವನದ ಮಾಲಿಕ ಶ್ರೀಧರ ಗಾಣಿಗ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಗ್ರಾಮ ಪಂಚಾಯಿತಿ ಸದಸ್ಯ ರವಿ ಗಾಣಿಗ ಆಜ್ರಿ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು, ಪುಂಡಲೀಕ ಗಾಣಿಗ, ಉದ್ಯಮಿ ನಿತ್ಯಾನಂದ ಗಾಣಿಗ, ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟೂರಿನ ಋಣ ದೊಡ್ಡದೆನಿಸಿಕೊಳ್ಳುತ್ತದೆ. ಬದುಕು, ಉದ್ಯೋಗಕ್ಕಾಗಿ ಎಲ್ಲಿಗೇ ತೆರಳಿದರೂ ತನ್ನೂರಿನ ಮಣ್ಣಿನ ಋಣ ತೀರಿಸುವ ಗುಣ ಬೆಳೆಸಿಕೊಳ್ಳಬೇಕು. ಉಪ್ಪುಂದ ಚಂದ್ರಶೇಖರ ಹೊಳ್ಳರಲ್ಲಿ ಈ ಗುಣವಿದ್ದುದರಿಂದಲೇ ಇಂದು ರಾಜ್ಯದ ಭೂಪಟದಲ್ಲಿ ಉಪ್ಪಂದ ಎಂಬ ಊರನ್ನು ಗುರುತಿಸುವಂತಾಗಿದೆ ಎಂದು ಸಿರಿ ಮೊಗೇರಿ ಸಂಸ್ಥಾಪಕ, ಬೆಂಗಳೂರು ಮಾಧ್ಯಮ ಭಾರತಿ ನಿರ್ದೇಶಕ ಜಯರಾಮ ಅಡಿಗ ಹೇಳಿದರು. ಉಪ್ಪುಂದದ ಕುಂದ ಅಧ್ಯಯನ ಕೇಂದ್ರವು ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಪೂರ್ವದಲ್ಲಿ ‘ಸಹೃದಯ ಸಂವಹನ’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹುಟ್ಟೂರಿನ ಮೇಲಿನ ಅಭಿಮಾನದಿಂದ ತಮ್ಮ ವೃತ್ತಿಯನ್ನು ತ್ಯಜಿಸಿ ಉಪ್ಪಂದಕ್ಕೆ ಬಂದ ನೆಲೆಸಿದ್ದ ಹೊಳ್ಳರು, ಸಾಹಿತ್ಯ ರಚನೆ, ಸಂಘಟನೆ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಈ ಪರಿಸರವನ್ನು ಸಾಂಸ್ಕೃತಿಕ, ಸಾಹಿತ್ತಿಕ ಕೇಂದ್ರವಾಗಿ ಬೆಳೆಸಿದವರು. ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೊಳ್ಳರ ಸಾಧನೆ ಅನನ್ಯವಾದ್ದು ಎಂದು ಹೇಳಿದರು. ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯ ಅಭ್ಯಾಸದಲ್ಲಿ ತೊಡಗಿಕೊಂಡು ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿಯೂ ಪರಿಪೂರ್ಣತೆಯನ್ನು ಪಡೆದು ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ ಅರಬ್ ಸಂಯುಕ್ತ ರಾಷ್ಟ್ರದ ಶಾರ್ಜಾ ಡೆಲ್ಲಿ ಪ್ರೈವೇಟ್ ಸ್ಕೂಲ್ ಗ್ರೇಡ್ 9 ವಿದ್ಯಾರ್ಥಿನಿ ಪ್ರೇರಣಾ ಪೈ. ಮಣಿಪಾಲದ ನಿವಾಸಿ ಶಾರದಾ ಮತ್ತು ಬಾಂಡ್ಯ ಸಂಜೀವ ಪೈ ಇವರ ಮೊಮ್ಮಗಳಾಗಿರುವ ಶಾರ್ಜಾ ನಿವಾಸಿ ರಾಗಿಣಿ ಪೈ ಮತ್ತು ಬಾಂಡ್ಯ ಹರೀಶ್ ಪೈ ದಂಪತಿಯ ಪುತ್ರಿಯಾಗಿರುವ ಪ್ರೇರಣಾ ಇವಳು ತನ್ನ ಐದನೆಯ ವಯಸ್ಸಿನಿಂದಲೇ ನೃತ್ಯ ಅಭ್ಯಾಸದಿಂದ ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿ ಪರಿಪೂರ್ಣತೆಯನ್ನು ಪಡೆದಿದ್ದಾಳೆ. ಪ್ರೇರಣಾ ಪೈ ತನ್ನ ಐದನೇಯ ವಯಸ್ಸಿನಲ್ಲಿ 2007ರಲ್ಲಿ ಶಾರ್ಜಾ ಕೈರಳಿ ಕಲಾ ಕೇಂದ್ರಮ್‌ನಲ್ಲಿ ಗುರು ಮುರಳಿ ಅವರಿಂದ ಪ್ರಾರಂಭವಾದ ಪ್ರಥಮ ಹಂತದ ತರಬೇತಿಯನ್ನು ಪಡೆದು ನಂತರ 2013ರಿಂದ ಶಾರ್ಜಾದ ಪ್ರಸಿದ್ಧ ಕಲಾ ಸಂಸ್ಥೆ ಕ್ಲಾಸಿಕಲ್ ರಿದಂಸ್ ಇದರ ಸ್ಥಾಪಕ ನಿರ್ದೇಶಕಿ ವಿದೂಷಿ ರೋಹಿಣಿ ಅನಂತ ಅವರ ಶಿಷ್ಯೆಯಾಗಿ ಭರತನಾಟ್ಯದಲ್ಲಿ ಐದು ಹಂತಗಳಲ್ಲಿ ಪರೀಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾಗಿ ಕುಂದಾಪುರ ವ್ಯ. ಸೇ. ಸಹಕಾರಿ ಸಂಘ(ನಿ.) ವಡೇರಹೋಬಳಿ ಶಾಖೆಯ ವ್ಯವಸ್ಥಾಪಕ ಕೆ. ನರಸಿಂಹ ಹೊಳ್ಳ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾಗೇಶ ನಾವಡ, ಕ್ಲಬ್ ಸರ್ವಿಸ್‌ನ ನಿರ್ದೇಶಕರಾಗಿ ಬಿ. ಎಮ್. ಚಂದ್ರಶೇಖರ, ಒಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶಿವಾನಂದ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ದಿನೇಶ್ ಗೋಡೆ, ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕರಾಗಿ ಉಲ್ಲಾಸ್ ಕ್ರಾಸ್ತಾ, ಯೂತ್ ಸರ್ವಿಸ್ ನಿರ್ದೇಶಕರಾಗಿ ರಾಜು ಪೂಜಾರಿ, ಸತೀಶ್ ಎನ್. ಶೇರೆಗಾರ್(ಟಿಆರ್‌ಎಫ್ ಛೇರ್‌ಮೆನ್), ಅಬುಶೇಖ್ ಸಾಹೇಬ್(ಪೋಲಿಯೋ ಪ್ಲಸ್ ಛೇರ್‌ಮೆನ್), ಅಜಯ್ ಹವಲ್ದಾರ್ (ವಾಷಿಂಗ್ ಸ್ಕೂಲ್ ಛೇರ್‌ಮೆನ್), ದಿನಕರ್ ಆರ್ ಶೆಟ್ಟಿ (ಲಿಟ್ರಸಿ ಛೇರ್‌ಮೆನ್), ದಂಡಪಾಣಿಯಾಗಿ ಸದಾನಂದ ಉಡುಪ, ಕೋಶಾಧಿಕಾರಿಯಾಗಿ ಸಿ.ಎಚ್. ಗಣೇಶ್, ಬುಲೆಟಿನ್ ಎಡಿಟರ್ ಗಜಾನನ ಭಟ್, ನಿಯೋಜಿತ ಅಧ್ಯಕ್ಷರಾಗಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಜುಲೈ 3ರಂದು ಸಂಜೆ 7ಗಂಟೆಗೆ ಕೋಟೇಶ್ವರದ ಸಹನಾ ಕನ್‌ವೆನ್‌ಶನ್ ಸೆಂಟರ್‌ನಲ್ಲಿ ಪದಾಪ್ರದಾನ ಸಮಾರಂಭ ನಡೆಯಲಿದೆ.
