ಕುಂದಾಪುರ: ಲಾಭವನ್ನು ಯೋಚಿಸಿ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ದಿನಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಬಗೆಗೆ ಚಿಂತಿಸದೇ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯದ ಕನಸು ಕಂಡಿದ್ದ ಶಾಲೆಯ ಪ್ರವರ್ತಕರನ್ನು ಎಂದಿಗೂ ಸ್ಮರಿಸಲೇಬೇಕು. ತಾನು ಗಳಿಸಿದ್ದು ಮಣ್ಣಿನಲ್ಲಿಯೇ ತನ್ನ ಸೇವೆಯೂ ಇರಬೇಕೆಂಬ ಕೃತಾಜ್ಞತೆ ಭಾವ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯತ್ತದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು. ಅವರು ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಉತ್ತಮ ಶಿಕ್ಷಣ ನೀಡಿದರೇ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ಹುಟ್ಟು ಸಾವುಗಳ ನಡುವಿನ ಜೀವನ ಅರ್ಥಪೂರ್ಣವಾಗಬೇಕಾದರೇ ಉತ್ತಮ ಸಮಾಜಕ್ಕೆ ನಮ್ಮ ಕೊಡುಗೆ ನೀಡಬೇಕಾಗುತ್ತದೆ ಎಂದವರು ಹೇಳಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಶ್ರೀ ಕ್ಷೇತ್ರ ಮಾಣಿಕೊಳಲು ವ್ಯವಸ್ಥಾಪನಾ ಸಮಿತಿ…
Author: ನ್ಯೂಸ್ ಬ್ಯೂರೋ
* ನಿಮ್ಮ ಕೂದಲು ನೈಸರ್ಗಿಕ ಹೊಳಪು ಪಡೆಯಬೇಕಾದರೆ, ದಾಸವಾಳದ ಎಲೆಯನ್ನು ಮೊಸರಿನ ಜೊತೆ ಸೇರಿಸಿ ರುಬ್ಬಿ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. * ಕೂದಲಿನಲ್ಲಿ ಪದೇ ಪದೇ ಜಿಡ್ಡಿನಾಂಶ ಕಾಣಿಸಿಕೊಳ್ಳುತ್ತಿದ್ದರೆ, ನಿಂಬೆರಸವನ್ನು ಬಳಸಿ ಕೂದಲನ್ನು ತೊಳೆಯಿರಿ. * ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ನಿವಾರಣೆಗೆ ರಾಮಬಾಣ ನೆಲ್ಲಿಕಾಯಿ. ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಹಚ್ಚಬಹುದು ಅಥವಾ, ಅದನ್ನು ಎಣ್ಣೆಯ ಜೊತೆಗೆ ಕುದಿಸಿ ನಂತರ ಆ ಎಣ್ಣೆಯನ್ನು ಹಚ್ಚಬಹುದಾಗಿದೆ. * ಶುದ್ಧವಾದ ತೆಂಗಿನ ಎಣ್ಣೆಯನ್ನು ಸಮರ್ಪಕವಾಗಿ ಬಳಸುತ್ತ ಬಂದರೆ, ಕೂದಲಿನ ಸೌಂದರ್ಯ ಹೆಚ್ಚುತ್ತದೆ. (ಕುಂದಾಪ್ರ ಡಾಟ್ ಕಾಂ) * ಮೆಂತೆಕಾಳನ್ನು ನೆನೆಸಿ ಅದನ್ನು ರುಬ್ಬಿ ತಲೆಗೆ ಪ್ಯಾಕ್ ಹಾಕಿ ತೊಳೆಯುತ್ತ ಬಂದರೆ, ಒಣ ತ್ವಚೆಯ ಕಡಿಮೆಯಾಗುವುದರ ಜೊತೆಗೆ ಹೊಟ್ಟು ನಿವಾರಣೆಯಾಗುತ್ತದೆ. * ಮೊಟ್ಟೆಯ ಬಿಳಿ ಭಾಗವನ್ನು ವಾರಕೊಮ್ಮೆ ತಲೆಗೆ ಹಚ್ಚಿ ಅರ್ಧಗಂಟೆಯ ನಂತರ ಅದನ್ನು ತೊಳೆಯಿರಿ. ಹೀಗೆ ಮಾಡುತ್ತ ಬಂದರೆ ಕೂದಲ ಗುಣಮಟ್ಟ ಹೆಚ್ಚುತ್ತದೆ. * ಲೋಳೆಸರ(ಅಲೋವೆರಾ) ಕೂದಲು ಕವಲು…
ಕುಂದಾಪುರ: ಸಂವಿಧಾನದ ಮೂರು ಅಂಗಗಳು ಇಂದು ಪರಿಸ್ಥಿತಿಗೆ ಅನುಗುಣವಾಗಿ ರಾಜಿಯಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾಲ್ಕನೇ ಅಂಗವಾದ ಪತ್ರಿಕಾರಂಗ ತತ್ವಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಹೇಳಿದರು. ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಭವನದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಸಮಾಜ ವಿಜ್ಞಾನ ಸಂಘ ಮತ್ತು ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಲಾದ ಪತ್ರಿಕೋದ್ಯಮ ಪ್ರವೇಶ ಏಕೆ ಮತ್ತು ಹೇಗೆ ಎನ್ನುವ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳು ಇಂದು ಸೇವೆಯ ಚೌಕಟ್ಟನ್ನು ಮೀರಿ ಉದ್ಯಮವಾಗಿ ಬೆಳೆದು ನಿಂತಿದೆ. ಒಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮ ಪ್ರಾರಂಭವಾದರೆ ಅಲ್ಲಿ ಸಾಕಷ್ಟು ಉದ್ಯೋಗವಕಾಶಗಳ ತೆರೆದುಕೊಳ್ಳತ್ತದೆ, ಪತ್ರಿಕೋದ್ಯಮ ಪ್ರವೇಶಕ್ಕೆ ಪತ್ರಿಕೋದ್ಯಮ ಕೋರ್ಸ್ ಮಾಡಬೇಕೆಂಬ ನಿಯಮವಿಲ್ಲ. ಆದರೆ ಇಂದು ಪತ್ರಿಕೋದ್ಯಮ ಪದವಿ ಅಥವಾ ಕೋರ್ಸ್‌ಗಳ ಮಾಡಿಯೂ ಅಲ್ಲಿ ಉದ್ಯೋಗವನ್ನು ಸುಲಭವಾಗಿ ಗಿಟ್ಟಿಸಬಹುದು. ಬರೆಯುವ, ಪ್ರಶ್ನಿಸುವ ಮನೋಭಾವ ಮತ್ತು ಸಾಮಾಜಿಕ…
ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭವಿಷ್ಯದ ಭದ್ರ ಬುನಾದಿಯಾದ ಹಕ್ಲಾಡಿ ಸೂರಪ್ಪ ಶೆಟ್ಟಿ ಸರಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಶಾಲೆಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಊರವರು ಒಂದಾಗಿ ನಿಂತಿದ್ದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಡಿಸೆಂಬರ್ 5ರ ಬೆಳಿಗ್ಗೆ 8ಗಂಟೆಗೆ ಮಾಣಿಕೊಳಲು ಶ್ರೀಚನ್ನಕೇಶ್ವರ ದೇವಸ್ಥಾನದಿಂದ ಕುಂದರಬಾಡಿ ಮಾಸ್ತಿಕಟ್ಟೆಯವರೆಗೆ ಸುವರ್ಣ ಪುರಮೆರವಣಿಗೆ ನಡೆಯಲಿದೆ. 9ಗಂಟೆಗೆ ಸುವರ್ಣ ಮಹೋತ್ಸವದ 1ನೇ ವೇದಿಕೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮಕ್ಕೆ ಗೌರಿ ದೇವಾಡಿಗ ಚಾಲನೆ ನೀಡಲಿದ್ದಾರೆ, ಶಾಲಾ ಮುಖಮಂಟಪವನ್ನು ಆನಗಳ್ಳಿ ಶ್ರೀ ನರಸಿಂಹ ಶೆಟ್ಟಿ ಬಾಳೆಮನೆ ಉದ್ಘಾಟಿಸಲಿದ್ದಾರೆ. ರಾತ್ರಿ 7ಗಂಟೆಗೆ ಸುವರ್ಣ ಮಹೋತ್ಸವ 2ನೇ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಲಿದ್ದು, ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹೂವಿ ನಾಟಕ, ಹಿರಿಯ ವಿದ್ಯಾರ್ಥಿಗಳಿಂದ…
ಕುಂದಾಪುರ: ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಅಪರಾಧ ತಡೆಯ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪಠ್ಯಪುಸ್ತಕಗಳಲ್ಲಿ ಈ ಬಗ್ಗೆ ಒಂದು ಪಠ್ಯವನ್ನು ಮೀಸಲಿಡುವತ್ತ ಶಿಕ್ಷಣ ತಜ್ಞರು ಹಾಗೂ ಸರಕಾರ ಮನಸ್ಸು ಮಾಡಬೇಕಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಹೇಳಿದರು. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಇಲ್ಲಿನ ಜ್ಯೂನಿಯರ್ ಕಾಲೇಜು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿ, ವಿಚಾರ, ವ್ಯಕ್ತಿತ್ವದಲ್ಲಿ ವೈವಿಧ್ಯತೆ ವ್ಯತ್ಯಾಸ ಇದ್ದೇ ಇರುತ್ತದೆ. ವ್ಯತ್ಯಾಸವಿದ್ದಲ್ಲಿ ಸಂಘರ್ಷ ಸಾಮಾನ್ಯ. ಇದನ್ನು ಹೊರತಾದ ಸಮಾಜವನ್ನು ಕಾಣಲು ಸಾಧ್ಯವಿಲ್ಲ. ಸಂಪೂರ್ಣ ಅಪರಾಧರಹಿತ ಸಮಾಜವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಅಪರಾಧ ನಿಯಂತ್ರಣ ಸಾಧ್ಯವಿದೆ. ಈ ಬಗ್ಗೆ ಅರಿವು ಮೂಡಿಸುವುದು ಜಾಗೃತಿ ಮೂಡಿಸುವುದು ಅಗತ್ಯ ಎಂದವರು ಹೇಳಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ| ಭವಾನಿ, ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಸುಬ್ರಮಣ್ಯ ಜೋಷಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ ವೇದಿಕೆಯಲ್ಲಿದ್ದರು. ಕುಂದಾಪುರ…
ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟನೆ ಕುಂದಾಪುರ: ಶಿಕ್ಷಣವೆನ್ನುವುದು ಬದುಕಿಗೆ ದಾರೀಪವಾಗುವುದಲ್ಲದೇ ಸಮೃದ್ಧ ಬದುಕನ್ನು ಕಟ್ಟಿಕೊಡುತ್ತದೆ. ಅಂತಹ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸುವುದು ಅತ್ಯಗತ್ಯ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಬಲ್ಲಾಳ್ ಹೇಳಿದರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿನಾಡಿದ ಅವರು ಜನನ ಮರಣಗಳ ನಡುವಿನ ಕಿರು ಅವಧಿಯ ಬದುಕಿನಲ್ಲಿ ಪರೋಪಕಾರಿಯಾಗದಿದ್ದರೇ ಬದುಕಿದ್ದೂ ಇಲ್ಲದಂತಾಗುತ್ತದೆ ಎಂದರು. ಕಾರ್ಯಕ್ರಮದ ಮುಖ್ಯಅತಿಥಿಗಲಾಗಿ ಆಗಮಿಸಿದ್ದ ಯುವಜನ ಮತ್ತು ಮೀನುಗಾರಿಕೆ ಸಚಿವ ಅಭಯಚಮದ್ರ ಜೈನ್ ಮಾತನಾಡಿ ಶಿಕ್ಷಣವೆನ್ನುವುದು ಮರೀಚಿಕೆಯಾಗಿದ್ದ ಕಾಲದಲ್ಲಿ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಜನರ ವಿದ್ಯಾವಂತರಾಗಬೇಕು ಮತ್ತು ಉದ್ಯೋಗಿಗಲಾಗಬೇಕೆಂಬ ಕನಸನ್ನು ನನಸಾಗಿಸಿದ ಸ್ಥಾಪಕರಿಗೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ. ಜನರ ಸೇವೆಗಾಗಿ ಪರೋಪಕಾರಿಗಳಾಗಿ ಬದುಕಬೇಕು. ಅಲ್ಲದೇ ವಿದ್ಯಾಸಂಸ್ಥೆಗಳ ಪರಿಪೂರ್ಣ ಅಭಿವೃದ್ಧಿಗಾಗಿ ಕಾಯಕಲ್ಪವನ್ನು ತೊಡಬೇಕು ಮತ್ತು ಶ್ರಮಿಸಬೇಕು ಎಂದು ಕರೆ ನೀಡಿದರು. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್…
ಕುಂದಾಪುರ: ತಾಲೂಕಿನ ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬಿ. ಚಂದ್ರಲೇಖಾ ಜೆ.ಹೆಗ್ಡೆ ಚಾಲನೆ ನೀಡಿದರು. ರಘುನಾಥ ಶೆಟ್ಟಿ ಹೊಳ್ಮಗೆ ಧ್ವಜಾರೋಹಣ ನೆರವೇರಿಸಿದರು. ಆನಗಳ್ಳಿ ನರಸಿಂಹ ಶೆಟ್ಟಿ ಬಾಳೆಮನೆ ನೂತನ ಮುಖಮಂಟಪ ಉದ್ಘಾಟಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಳೆಮನೆ ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಓಎನ್‌ಜಿಸಿ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ನಾರಾಯಣ ನಾಯ್ಕ್, ಉದ್ಯಮಿ ಚಂದ್ರಶೇಖರ ಶೆಟ್ಟಿ, ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಳದ ಧರ್ಮದರ್ಶಿ ಅರುಣಕುಮಾರ್ ಶೆಟ್ಟಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ದೇವಾಡಿಗ, ಮಾಣೀಕೊಳಲು ಲಕ್ಷ್ಮೀನಾರಾಯಣ ಹೆಬ್ಬಾರ್, ನಿವೃತ್ತ ಆರೋಗ್ಯಾಧಿಕಾರಿ ಎಚ್.ಮಹಾಬಲ ಶೆಟ್ಟಿ, ಉದ್ಯಮಿ ಚತ್ತರಂಜನ್ ಹೆಗ್ಡೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಡಾ| ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಸಂಜೀವ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಾಣಿಕೊಳಲು ಶ್ರೀ ಚನ್ನಕೇಶವ ದೇವಾಲಯ ಸನ್ನಿಧಾನದಿಂದ…
ಕುಂದಾಪುರ: ತಮಿಳುನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಡೀ ರಾಜ್ಯವೇ ಜಲಪ್ರಳಯಕ್ಕೆ ತುತ್ತಾಗಿದ್ದು ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಜನತೆ ಶೀಘ್ರ ತೊಂದರೆಯಿಂದ ಪಾರಾಗಲಿ ಹಾಗೂ ಪ್ರಳಯದಂತಹ ಭೀಕರ ಸನ್ನಿವೇಶ ಎಲ್ಲಿಯೂ ಸಂಭವಿಸಬಾರದೆಂದು ಆಶಯದೊಂದಿಗೆ ಲೋಕಕಲ್ಯಾಣಾರ್ಥವಾಗಿ ಅರಾಟೆಯ ದೀಕ್ಷಾ ಯುತ್ ಫ್ರೆಂಡ್ಸ್ ವತಿಯಿಂದ ಇಲ್ಲಿನ ಐತಿಹಾಸಿಕ ಪ್ರಸಿದ್ಧಿಯ ದೇವಸ್ಥಾನ ಗುಜ್ಜಾಡಿ-ಕೊಡಪಾಡಿಯ ಗುಹೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 7 ಗಂಟೆಯಿಂದ ದೇವಸ್ಥಾನದಲ್ಲಿ ಮಂಗಳಾರತಿ, ಗಣಪತಿ ಹೋಮ ಹಾಗೂ ಗಣಪತಿ ಹಾಗೂ ಗುಹೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಕುಂದಾಪುರ: ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಪೂರ್ಣಿಮಾ.ಪಿ.ನಾಯಕ್ ಅವರು ಉಡುಪಿಯಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಕ್ರ ಎಸೆತದಲ್ಲಿ ಪ್ರಥಮ ಮತ್ತು ೮೦೦ ಮೀ ಓಟದ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಗಂಗೊಳ್ಳಿ: ಪರಿಸರ ರಕ್ಷಣೆ ಎನ್ನುವದು ಕೇವಲ ವೇದಿಕೆಗಳಿಗೆ ಸೀಮಿತವಾಗಬಾರದು. ನಮ್ಮ ಕಾಳಜಿ ಎಚ್ಚರಿಕೆ ಎಲ್ಲವೂ ಕಾರ‍್ಯರೂಪದಲ್ಲಿ ಮೂಡಿಬರಬೇಕು.ಪ್ರಕೃತಿಯೊಂದಿಗೆ ಅಭಿವೃದ್ಧಿಯ ಚಿಂತನೆ ಮತ್ತು ನಡೆಗಳು ನಮ್ಮದಾಗಬೇಕು ಎಂದು ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಕುರಿತಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ ನಾಯ್ಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿನಿ ವಿದ್ಯಾ ಸ್ವಾಗತಿಸಿದರು. ನವ್ಯಶ್ರೀ ಪ್ರಾರ್ಥಿಸಿದರು. ಅನುಷಾ ಕಾರ‍್ಯಕ್ರಮ ನಿರೂಪಿಸಿದರು.ನಿಖಿಲ್ ಧನ್ಯವಾದ ಅರ್ಪಿಸಿದರು. ವರದಿ ; ನರೇಂದ್ರ ಎಸ್ ಗಂಗೊಳ್ಳಿ
