ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆಯ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯ ಕಾಯಕಲ್ಪಕ್ಕೆ ನಗರಾಭಿವೃದ್ಧಿ ಸಚಿವರು ಹೆಚ್ಚುವರಿ ಅನುದಾನವನ್ನು ನೀಡುವ ಭರವಸೆಯನ್ನು ನೀಡಿರುವುದು ಅತ್ಯಂತ ಸಂತೋಷದ ವಿಚಾರವೆಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಆದರೆ ಈಗಾಗಲೇ ಬಹು ನಿರೀಕ್ಷೆಯ ಒಳಚರಂಡಿ ಯೋಜನೆಯು ನಿಗದಿತ ಅವಧಿಯಲ್ಲಿ ಮುಗಿಯದೆ ಇರಲು ಕಾರಣ ವೆಟ್ ವೆಲ್ ಮತ್ತು ಎಸ್ ಟಿ ಪಿ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸಿ ಅದು ಖಾಸಗಿ ಸ್ಥಳವಾಗಿದ್ದರೆ ಅದನ್ನು ಖರೀದಿ ಮಾಡಿಯೋ ಇಲ್ಲಾ ಭೂ ಸ್ವಾದಿನ ಪ್ರಕ್ರಿಯೆಗಳಾದ 4(1) ಹಾಗೂ 6(1) ಪ್ರಕಿಯೆಗಳನ್ನು ಮಾಡದೆ ಇದ್ದದ್ದು ಈ ಮಹತ್ವದ ಯೋಜನೆ ಹಿನ್ನಡೆಗೆ ಕಾರಣ. ಅದರ ಜೊತೆ ಇಂದೂ ಕೂಡ ವೆಟ್ ವೆಲ್ ಮತ್ತು ಎಸ್ ಟಿ ಪಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ಭಾಗದ ಸಾರ್ವಜನಿಕರ ವಿರೋಧವಿರುವುದು ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಜನಪ್ರತಿನಿದಿನಗಳಿಗೆ ಹಾಗೂ ಪುರಸಭಾ ಆಡಳಿತಕ್ಕೆ ತಿಳಿದ ವಿಚಾರ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮಾವಿನಕಟ್ಟೆ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಅಂಪಾರು ಸಂಜಯ್ ಗಾಂಧಿ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅಂಪಾರು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯನಿ ಬೇಬಿ ಶೆಟ್ಟಿ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಕುಶಲ ಶೆಟ್ಟಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಉದ್ಯಮಿಗಳಾದ ಹಾಜಿ ಜಿ.ಎಂ. ಚೆರಿಯಬ್ಬ ಸಾಹೇಬ್ ಕ್ರೀಡಾ ಧ್ವಜಾರೋಹಣ ನೆರವೇರಿಸದರು. ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಶೆಟ್ಟಿ ಗುಲ್ವಾಡಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ ಪೂಜಾರಿ, ಕ್ರೀಡಾ ಜ್ಯೋತಿ ಬೆಳಗಿಸಿದರು. ಬೈಂದೂರು ವಲಯದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪದವಿ ಪೂರ್ವ ಕಾಲೇಜು ಕ್ರೀಡಾ ಸಂಚಾಲಕ ಸುಕೇಶೆಟ್ಟಿ, ಸಿ.ಆರ್.ಪಿ ರವಿಚಂದ್ರ, ನೆರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣ ಕೊಠಾರಿ, ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೋಷಕರು ತಮ್ಮ ಮಕ್ಕಳನ್ನು ದೈಹಿಕ ಆರೋಗ್ಯದ ಜೊತೆ ಬುದ್ಧಿಮತ್ತೆಯ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳ ವರ್ತನೆ, ಬಾಲ್ಯದಿಂದ ಪ್ರೌಢವಸ್ಥೆಯ ಬದಲಾವಣೆ, ಕಲಿಕೆಮಟ್ಟ, ದೈಹಿಕ ನ್ಯೂನ್ಯತೆ ಮತ್ತು ಆರೋಗ್ಯದ ಬಗ್ಗೆ ಸದಾ ನಿಗಾ ವಹಿಸಬೇಕು. ಮಕ್ಕಳೊಂದಿಗೆ ಅಗಾಗ ಸಮಾಲೋಚನೆ ನಡೆಸಿ ಸಾಂದರ್ಬಿಕ ಮಾಹಿತಿ ಸಲಹೆಯನ್ನು ನೀಡಬೇಕು. ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು, ದುಶ್ಚಟಗಳಿಂದ ದೂರವಿದ್ದು, ಓದು ಹಾಗೂ ಕ್ರೀಡೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ತಿಳಿಸಬೇಕು ಎಂದು ಪ್ರಸಿದ್ಧ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಪೋಷಕರಿಗೆ ಕಿವಿಮಾತು ಹೇಳಿದರು. ಅವರು ಇಲ್ಲಿನ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶೇಷ ಪೋಷಕರ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಶಂಕರ್ ಅವರು ಶಾಲಾ ಶೈಕ್ಷಣಿಕ ಚಟುವಟಿಕೆಗಳು ಮತ್ತು ಶಾಲಾ ಅಭಿವೃದ್ಧಿಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಶ್ರೀ ಮೂಕಾಂಬಿಕ ಚಾರಿಟೇಬಲ್ ಟ್ರಸ್ಟ್ ಪಾತ್ರ ಬಗ್ಗೆ ವಿವರಿಸಿದರು. ಸಭೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮಸ್ಕತ್: ಓಮಾನ್ ದೇಶದ ಮಸ್ಕತ್ ನಲ್ಲಿ ಕನ್ನಡ ಸಂಘ ಮಸ್ಕತ್ ಆಯೋಜಿಸಿದ್ದ ಮೂರನೇ ‘ವಿಶ್ವ ಕನ್ನಡ ಹಬ್ಬ’ ದಲ್ಲಿ ಕುವೈತ್ ನಿಂದ ಆಗಮಿಸಿದ ಸುರೇಶ್ ರಾವ್ ನೇರಂಬಳ್ಳಿ ಅವರಿಗೆ, ಕನ್ನಡ ಸೇವೆ ಹಾಗೂ ಸಾಮಾಜಿಕ ಸೇವೆಗಾಗಿ ವಿಶ್ವ ಮಾನ್ಯ ಬಿರುದಿನಿಂದ ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮ್ಮೇಳನದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಸರ್ವಾಧ್ಯಕ್ಷರಾದ ನಾಡೋಜ ಷಡಕ್ಷರಿ, ನಟಿ ಸುಧಾರಾಣಿ, ನೆನಪಿರಲಿ ಖ್ಯಾತಿಯ ಪ್ರೇಮ್, ನಾಗೇಂದ್ರ ಪ್ರಸಾದ್, ಸು ಫ್ರಮ್ ಸು ಖ್ಯಾತಿಯ ರವಿಯಣ್ಣ, ಕಾಂತಾರ ಖ್ಯಾತಿಯ ಪ್ರಕಾಶ್ ತೂಮಿನಾಡು ರಂತಹ ಹಲವಾರು ಚಲನಚಿತ್ರ ತಾರೆಯರು, ಮೂರನೇ ‘ವಿಶ್ವ ಕನ್ನಡ ಹಬ್ಬ’ ದಲ್ಲಿ ಭಾಗವಹಿಸಿದ್ದರು. ಅದೇ ರೀತಿ ಅನೇಕ ಸಾಹಿತಿಗಳು, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಹಲವಾರು ಪತ್ರಕರ್ತ ಮಿತ್ರರು, ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವ ರಹೀಂ ಖಾನ್ ಮತ್ತು ವೆಂಕಟೇಶ್ ಮಾಜಿ ಶಾಸಕ ಮೊಯಿದ್ದೀನ್ ಬಾವ ಕನ್ನಡ ಸಂಘ ಮಸ್ಕತ್ ನ ಅಧ್ಯಕ್ಷರಾದ ಮಂಜುನಾಥ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರ್ಕಳ ತಾಲೂಕು ಇಪ್ಪತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇದರ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವ ದಿ. ಪ್ರೊ. ಎಂ. ರಾಮಚಂದ್ರ ಸ್ಮರಣೆಯ ಉಡುಪಿ ಜಿಲ್ಲಾ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ರಿಷಿಕಾ ದೇವಾಡಿಗ ಬೈಂದೂರು ಆಯ್ಕೆಯಾಗಿದ್ದಾರೆ. ರಿಷಿಕಾ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2025ರ ಸರ್ವಾಧ್ಯಕ್ಷೆಯಾಗಿದ್ದು, ಆ ಸಂದರ್ಭ ಅವರ ‘ಮೊದಲ ಹೆಜ್ಜೆ’ ಕಥಾ ಸಂಕಲನ ಪ್ರಕಟಗೊಂಡಿರುತ್ತದೆ. ಅವರು ರಾಜ್ಯ ಮಟ್ಟದ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ ಸ್ಪರ್ಧೆ, ಏಕಪಾತ್ರಾಭಿನಯ ಸಾಹಿತ್ಯ ಕೃತಿ ವಿಮರ್ಶೆ ಮೊದಲಾದವುಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅವರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ಮತ್ತು ಶಿಕ್ಷಕಿ ರೂಪ ದಂಪತಿಯ ಪುತ್ರಿ. ಯುವ ಸಾಹಿತ್ಯ ರತ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬದುಕಿನುದ್ದಕ್ಕೂ ಬರುವಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸ ಮತ್ತು ಧೈರ್ಯ ಇವೆರಡೂ ಅಗತ್ಯವಾಗಿರುತ್ತದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಸದಾನಂದ ನಾವಡ ಹೇಳಿದರು. ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಟಿಸಿಹೆಚ್ಆರ್ ಆಪ್ ಬೆಂಗಳೂರು ಇವರು ಸಹಯೋಗದಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ವಲಯ ಮಟ್ಟದ ಅಂತರ್ ಪ್ರೌಢಶಾಲೆಗಳ ಮಟ್ಟದ “ಜಾನಪದ ನೃತ್ಯ ವೈಭವ” ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಸವಾಲುಗಳನ್ನು ಸ್ವೀಕರಿಸಲು ಕೇವಲ ಪುಸ್ತಕದ ಓದು ಸಾಲದು. ನಿಮ್ಮ ವಿದ್ಯಾರ್ಥಿ ಜೀವನದ ಪಾಠೇತರ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಅದು ನಿಮ್ಮ ಬದುಕಿನಲ್ಲಿ ಸುಗಮ ರೀತಿಯಲ್ಲಿ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಸಹನಾ ಅವರು ಮಾತನಾಡಿ, ಜೀವನದಲ್ಲಿ ಬರುವ ಸವಾಲುಗಳು ದೊಡ್ಡದಿರುತ್ತದೆ. ಈ ವಿದ್ಯಾರ್ಥಿ ಜೀವನ…
ಕುಂದಾಪ್ರ ಡಾಟ್ ಕಾಂ ಸುದ್ದಿಮಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ತೆಕ್ಕಟ್ಟೆಯ ಅಬ್ದುಲ್ ಲತೀಫ್ ಮೊಹಿದ್ದೀನ್ ಹಾಗೂ ಅವರೊಂದಿಗಿದ್ದ ಮನೆಯವರಿಗೆ ಡಿ.10ರ ರಾತ್ರಿ ಹಲ್ಲೆಗೈದು, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ರಿಯಾಸುದ್ದೀನ್, ಸುಹೇಲ್ ಅಹಮ್ಮದ್, ಸರ್ಫರಾಜ್, ಮಹಮ್ಮದ್ ತನೂಫ್ ಹಾಗೂ ಸೌಹಾನ್ ಬಂಧಿತರು. ಅಬ್ದುಲ್ ಲತೀಫ್ ಮೊಹಿದ್ದೀನ್ (39) ಹಾಗೂ ಅವರ ಪತ್ನಿ ಮಂಗಳೂರು ಕಂಕನಾಡಿಯ ರೂಹಿ ಶಮಾ ನಡುವೆ ವೈಮನಸ್ಸು ಉಂಟಾಗಿ ಪ್ರತ್ಯೇಕವಾಗಿದ್ದರು. ಡಿ.10ರಂದು ರಾತ್ರಿ 7 ವರ್ಷದ ಪುತ್ರಿಯನ್ನು ಪತ್ನಿಗೆ ತೋರಿಸಲೆಂದು ಕರೆದುಕೊಂಡು ಬಂದಿದ್ದರು. ಈ ವೇಳೆ ಪತ್ನಿಯ ಜತೆ ಬಂದಿದ್ದಈ ಐವರು ಆರೋಪಿಗಳು ತನಗೆ ಹಲ್ಲೆ ಮಾಡಿರುವುದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ. ಜತೆಗೆ ಪುತ್ರಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ಪ್ರಯತ್ನಿಸಿರುವುದಾಗಿ ಲತೀಫ್ ದೂರು ನೀಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿಟ್ಟೆ ಎನ್. ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಸವಿಧನ್ ಶೆಟ್ಟಿ ಸಿ.ಎಸ್. ಅವರಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್ ಡಾಕ್ಟರೇಟ್ ಪದವಿ ನೀಡಿದೆ. ಇತ್ತೀಚೆಗೆ ನಡೆದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಅವರು ಮಂಡಿಸಿದ ಎನ್. ಚಾನೆಲ್ ಮಾಡೆಲ್‌ಗಳು ಮತ್ತು ಕಾರ್ಯಕ್ರಮತೆಯ ವಿಶ್ಲೇಷಣೆಯ ವೈವಿಧ್ಯತೆಯ ಪ್ರಸಾರ ಮತ್ತು ದೋಷ ನಿಯಂತ್ರಣ ಕೋಡಿಂಗ್ ಯೋಜನೆಗಳು ನೀರಿನ ಅಡಿಯಲ್ಲಿ ಲಂಬವಾದ ವೈರ್‌ಲೆಸ್ ಅಪ್ಟಿಕಲ್ ಸಂವಹನ ಲಿಂಕ್‌ಗಳು” ಎಂಬ ವಿಷಯಕ್ಕೆ ಪ್ರೊ. ಯು. ಶ್ರೀಪತಿ ಅಚಾರ್ಯ ಅವರು ಮಾರ್ಗದರ್ಶನ ಪಡೆದು ಪ್ರಬ೦ಧ ಮಂಡಿಸಿದ್ದರು. ಸವಿಧನ್ ಶೆಟ್ಟಿ ಅವರು ಪಿಡಬ್ಲ್ಯೂಡಿ, ನಿವೃತ್ತ ಶೆಟ್ಟಿ ಎಕ್ಸಿಕ್ಯೂಟಿವ್ ಇಂಜೀನಿಯರ್ ಮೇಪು ಶಶಿಧರ ಶೆಟ್ಟಿ ಮತ್ತು ಹೊಳಗೆ ವಿಮಲಾ ಎಸ್. ಶೆಟ್ಟಿಯವರ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದ.ಕುಂದಾಪುರ: ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು 2025-26ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ಹಂತದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಾದ ಜಾನಪದ ಗೀತೆಯಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯುಕ್ತಾ ಹೊಳ್ಳ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ಈ ಕೆಳಕಂಡ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಕಾಳುಮೆಣಸು, ಗೇರು, ಅಂಗಾಂಶ ಬೆಳೆ, ಹೈಬ್ರಿಡ್ ತರಕಾರಿ ಹೊಸ ತೋಟಗಳ ಸ್ಥಾಪನೆಗೆ ಶೇ. 50 ರ ಸಹಾಯಧನ, ಪ್ಲಾಸ್ಟಿಕ್ ಹೊದಿಕೆ ಅಳವಡಿಸಲು ಶೇ. 50 ರ ಸಹಾಯಧನ, ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ರೈತರಿಗೆ ಶೇ. 90 ರಷ್ಟು ಸಹಾಯಧನ ಲಭ್ಯವಿದ್ದು, ಮೊದಲ 5 ಎಕರೆ ವರೆಗೂ ಶೇ.90 ರಷ್ಟು ಹಾಗೂ ನಂತರ 5 ಎಕರೆಯಿಂದ 12.50 ಎಕರೆ ವರೆಗೂ ಮಾರ್ಗಸೂಚಿಯನ್ವಯ ಶೇ. 45 ರಂತೆ ಸಹಾಯಧನ ನೀಡಲಾಗುವುದು. ಭವಿಷ್ಯದ ಬೆಳೆಯಾದ ತಾಳೆ…
