Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ಸಮೀಪದ ಶಿರೂರು ಕೋಣನಮಕ್ಕಿ ನಿವಾಸಿಯಾಗಿರುವ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಸಮೀಪದ ಅಕೇಶಿಯಾ ಪ್ಲಾಂಟಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ರತ್ತೂಬಾಯಿ ಜನತಾ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಶಶಾಂಕ್ (15) ಮೃತ ವಿದ್ಯಾರ್ಥಿ. ಕೋಣನಮಕ್ಕಿ ನಿವಾಸಿ ಈಶ್ವರ ಎಂಬುವವರ ಮಗನಾದ ಶಶಾಂಕ್ ಪ್ರತಿನಿತ್ಯ ಬೆಳಿಗ್ಗೆ ವಾಕಿಂಗ್ ಗೆ ತೆರಳುವ ಅಭ್ಯಾಸ ಹೊಂದಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆಯೂ ವಾಕಿಂಗ್ ಗೆ ತೆರಳಿದ್ದ ಶಶಾಂಕ್ ಶಾಲೆಗೆ ತೆರಳುವ ಸಮಯವಾಗಿದ್ದರೂ ವಾಪಾಸು ಬಾರದೇ ಇದ್ದುದರಿಂದ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಸಮೀಪದ ಅಕೇಶಿಯಾ ಪ್ಲಾಂಟೆಶನ್ ನಲ್ಲಿ ಶಶಾಂಕ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನನ್ನ ಸಾವಿಗೆ ನಾನೇ ಕಾರಣ ಎಂದು ತನ್ನ ಬಲಗೈ ಮೇಲೆ ಬರೆದುಕೊಂಡಿರುವು ಮಾರ್ಕರ್ ಪೆನ್ನಿನಿಂದ ಬರೆದುಕೊಂಡಿದ್ದಾನೆ. ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ 9 ತರಗತಿ ಅಭ್ಯಸಿಸುತ್ತಿದ್ದ ಶಶಾಂಕ್ ಡಿಸ್ಟಿಂಕ್ಷನ್ ವಿದ್ಯಾರ್ಥಿಯಾಗಿದ್ದ. ವಿದ್ಯಾರ್ಥಿಯಾಗಿದ್ದ. ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದ ಎನ್ನಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹೆಮ್ಮಾಡಿ ಜನತಾ ಪ್ರೌಢ ಶಾಲೆ ಮತ್ತು ಕಾಲೇಜು ಕ್ರೀಡೋತ್ಸವ ಕುಂದಾಪುರ: ಕ್ರೀಡೆಯ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢತೆಯಿಂದ ಪಠ್ಯ ಚಟುವಟಿಕೆಗಳಿಗೆ ಪೂರಕವಾಗಿದೆ. ಮನೋಬಲ ವೃದ್ಧಿಗಾಗಿ ಕ್ರೀಡೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಿ ಎಂದು ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಹೇಳಿದರು. ಅವರು ಹೆಮ್ಮಾಡಿ ಶ್ರೀ.ವಿ.ವಿ.ವಿ. ಮಂಡಳಿಯ ಅಧೀನಕ್ಕೆ ಒಳಪಟ್ಟ ಜನತಾ ಪ್ರೌಢ ಶಾಲೆ ಮತ್ತು ಜನತಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಸಾಧು.ಎಸ್.ಬಿಲ್ಲವ ಸಭೆಯ ಅಧ್ಯಕ್ಷತೆ ವಹಿಸಿ, ಕ್ರೀಡಾ ದ್ವಜವನ್ನು ಅರಳಿಸಿದರು. ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಮತ್ತು ಆಧುನಿಕ ತಾಂತ್ರಿಕತೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಆಂತರಿಕ ಮತ್ತು ಬಾಹ್ಯ ಒತ್ತಡಕ್ಕೆ ಒಳಗಾಗುತ್ತಾರೆ.ವ್ಯಸನಗಳನ್ನು ಬಿಟ್ಟು ಕ್ರೀಡೆಯ ಮೂಲಕ ಸದೃಢ ಆರೋಗ್ಯವಂತರಾಗಿ, ಸುಂದರ ಬದುಕಿಗಾಗಿ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು. ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.…

Read More

ಕುಂದಾಪುರ: ರೋಟರಿ ಮಿಡ್ ಟೌನ್ ತನ್ನ ರೋಟರಿ ಮಿಡ್ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ ಕುಟುಂಬ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುಳಾ ವಿ ಪ್ರಸಾದ್ ಇವರು ನೆರೆದ ರೋಟರಿ ಕುಟುಂಬದ ಸದಸ್ಯರನ್ನು ಮತ್ತು ಆಹ್ವಾನಿತರನ್ನು ಉದ್ದೇಶಿಸಿ ಮೂಡನಂಬಿಕೆಗಳ ಬಗ್ಗೆ ಹಾಗೂ ಅವುಗಳ ನಿರ್ಮೂಲನೆಯ ಕುರಿತು ಹಾಗೂ ವೈಜ್ಣಾನಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ಬಗ್ಗೆ, ಸಮಾಜದಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿ ಉತ್ತಮ ನಾಗರಿಕರಾಗಿ ಬೆಳೆಸುವ ಬಗ್ಗೆ ಹಾಗೂ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ, ಹಣೆಗೆ ತಿಲಕ ಇಡುವ ಸಂಪ್ರದಾಯದ ಹಿಂದಿನ ಮಹತ್ವ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ೨೦೧೭-೧೮ನೇ ಸಾಲಿನಲ್ಲಿ ರಚನೆಯಾದ ರೋಟರಿಯ ಹೊಸ ಜಿಲ್ಲೆ-೩೧೮೨ಯ ಮೊದಲ ಗವರ್ನರ್ ಆಗಿ ಘೋಷಣೆಯಾದ ಬಳಿಕ ನಮ್ಮ ಕ್ಲಬ್‌ಗೆ ಅತಿಥಿಯಾಗಿ ಪ್ರಥಮವಾಗಿ ಬೇಟಿಯಿತ್ತ ಅಭಿನಂದನ್ ಶೆಟ್ಟಿಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು ಸಮ್ಮಿಲನ ಸಭೆಯಲ್ಲಿ ಮುಖ್ಯ ಅತಿಥಿ ಮಂಜುಳಾ ವಿ ಪ್ರಸಾದ್, ಅಭಿನಂದನ್ ಶೆಟ್ಟಿ ಹಾಗೂ ಜೋನಲ್ ಲೆಪ್ಟಿನೆಂಟ್ ಮಂಜುನಾಥ್ ಮಹಾಲೆಯವರು ಉಪಸ್ಥಿತರಿದ್ದರು. ರೋಟರಿ ಮಿಡ್ ಟೌನ್‌ನ ಅಧ್ಯಕ್ಷರಾದ…

Read More

ಗಂಗೊಳ್ಳಿ: ಬಾಯಿಯ ಆರೋಗ್ಯ ಸ್ವಸ್ಥವಾಗಿದ್ದರೆ ದೇಹದ ಆರೋಗ್ಯವು ಸುಧೃಡವಾಗಿರುತ್ತದೆ. ಆದುದರಿಂದ ಹಲ್ಲು ವಸಡುಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕಿದೆ. ಆರೋಗ್ಯದ ಬಗ್ಗೆ ಮುತುವರ್ಜಿವಹಿಸುವ ಪ್ರತಿಯೊಬ್ಬರು ಬಾಯಿ, ದಂತ, ವಸಡುಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟಾಗ ಬಾಯಿಯಿಂದ ಹರಡುವ ರೋಗರುಜಿನಗಳಿಂದ ಮುಕ್ತಿ ಪಡೆದುಕೊಳ್ಳ ಬಹುದು ಇಂತಹ ದಂತ ಚಿಕಿತ್ಸೆ ಶಿಬಿರದ ಸದುಪಯೋಗವನ್ನು ಪಡಿಸಿಕೊಂಡು ಉತ್ತಮ ಆರೋಗ್ಯಪೂರ್ಣ ಜೀವನವನ್ನು ಹೊಂದಿರಿ ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಹೇಳಿದರು. ಅವರು  ಗಂಗೊಳ್ಳಿಯ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ದಂತ ವಿಜ್ಞಾನ ವಿಶ್ವವಿದ್ಯಾನಿಲಯ ಮಣಿಪಾಲದ ಸಹಯೋಗದೊಂದಿಗೆ ನುರಿತ ವೈದ್ಯರಿಂದ ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ರೋಟರಿ ಕ್ಲಬ್ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಸಾರ್ವಜನಿಕ ಸಹಕಾರ ಭಾಗವಹಿಸುವಿಕೆಯಿಂದ…

Read More

ಬೈಂದೂರು: ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಜನಪರ ಕಾಳಜಿಯ ಕಾರ್ಯಗಳು ಹಾಗೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಲಯನ್ಸ್ ಸಂಸ್ಥೆಯದಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಹೇಳಿದರು. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ಗೆ ಜಿಲ್ಲೆ 317ಸಿ ಪ್ರಾಂತಿಯ ಅಧ್ಯಕ್ಷ (ರಿಜನಲ್ ಚೇರ್‌ಮನ್) ಫಿಲಿಪ್ ಡಿ’ಕೊಷ್ಟಾ ಅಧಿಕೃತ ಭೇಟಿಯ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.  ಲಯನ್ಸ್ ಕ್ಲಬ್ ಸಾಮಾಜಿಕ ಕಾರ್ಯಗಳಿಂದ ಜನ ಮನ್ನಣಿಗಳಿಸಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಲಯನ್ಸ್ ಈ ವರ್ಷ ವಿವಿಧ ಭಾಗಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ತಂದಿದೆ. ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ನ ಒಡನಾಡಿಗಳು ಜೊತೆ ಸೇರಿ ಒಳ್ಳೆಯ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುತ್ತಾ ಪ್ರಸಕ್ತ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ…

Read More

ಬೈಂದೂರು: ದೇಹದ ಮೇಲೆ ಯವುದೇ ಅಡ್ಡ ಪರಿಣಾಮ ಆಗದಂತಹ ಪ್ರಾಚೀನ ಪರಂಪರಾಗತವಾದ ಆಯುರ್ವೇದ ವೈದ್ಯಪದ್ದತಿಯಿಂದ ರೋಗಗಳಿಗೆ ಚಿಕಿತ್ಸೆ ಪಡೆದರೆ ಈ ಔಷಧಿಗಳು ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುವುದರ ಮೂಲಕ ಕಾಯಿಲೆ ಗುಣವಾಗಿ ಪುನಃ ಮರುಕಳಿಸದಂತೆ ತಡೆಯಬಲ್ಲದು. ರೋಗ ಬಂದಮೇಲೆ ಚಿಕಿತ್ಸೆ ಪಡೆಯುದಕ್ಕಿಂತ ಅದು ಬಾರದಂತೆ ಮುಂಜಾಗೃತೆವಹಿಸುವುದು ಉತ್ತಮ ಎಂದು ಬೈಂದೂರು ಠಾಣಾಧಿಕಾರಿ ಸಂತೋಷ್ ಎ. ಕಾಯ್ಕಿಣಿ ಹೇಳಿದರು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಪಂ ಉಡುಪಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಅಧ್ಯಕ್ಷತೆವಹಿಸಿದ್ದರು. ಪ್ರಕೃತಿಯಲ್ಲಿರುವ ಎಲ್ಲಾ ವಿಧದ ಸಸ್ಯಸಂಕುಲಗಳು ಕೂಡಾ ಒಂದಲ್ಲಾಒಂದು ಔಷಧಯುಕ್ತ ಗುಣಗಳನ್ನು ಹೊಂದಿದೆ. ನಮ್ಮ ಹಿಂದಿನವರು ಇವುಗಳಿಂದಲೇ ಮನೆಮದ್ದು ತಯಾರಿಸುತ್ತಿದ್ದರು. ಅವರಿಗೆ ಈ ಔಷಧಿಗಳನ್ನು ತಯಾರಿಸುವ ಬಗ್ಗೆ ಜ್ಞಾನವಿತ್ತು ಆದರೆ ಪ್ರಚಾರಕ್ಕೆ ಸಾಧ್ಯವಾಗಿಲ್ಲ. ಇಂದಿನ ತಾಂತ್ರಿಕ ಬದುಕಿನಲ್ಲಿ ಆಯುರ್ವೇದದ ಬಗ್ಗೆ ನಂಬಿಕೆ…

Read More

ಕುಂದಾಪುರ: ಲಯನ್ಸ್ ಕ್ಲಬ್ ಹಂಗಳೂರಿಗೆ ಲಯನ್ಸ್ ಜಿಲ್ಲಾ 317 ಇದರ ಗವರ್ನರ್ ಡಿ. ಶ್ರೀಧರ ಶೇಣವ ಅವರ ಅಧಿಕೃತ ಭೇಟಿಯ ಹಿನ್ನಲೆಯಲ್ಲಿ ಕುಂದಾಪುರದ ಆಶೀರ್ವಾದ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅವರ ಕಾರ್ಯ ಚಟುವಟಿಕೆ, ಸೇವೆಯನ್ನು ಪ್ರಶಂಸಿದ ಜಿಲ್ಲಾ ಗವರ್ನರ್ ಡಿ.ಶ್ರೀಧರ ಶೇಣವ ಅವರು ಸಮಾಜಕ್ಕೆ ಮಾದರಿಯಾಗಿ ಲಯನ್ಸ್ ಕ್ಲಬ್ ಹಂಗಳೂರು ಕಾರ್ಯ ನಿರ್ವಹಿಸಿದೆ ಎಂದು ಅಭಿನಂದಿಸಿದರು. ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ, ಜಿಲ್ಲಾ ಸಂಯೋಜಕ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿ ಸ್ಟ್ಯಾನಿ ಡಿ ಮೆಲ್ಲೋ ಉಪಸ್ಥಿತರಿದ್ದರು. ಕೊಲ್ಲೂರು ಭೇಟಿ : ಲಯನ್ಸ್ ಕ್ಲಬ್ ಹಂಗಳೂರಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಜಿಲ್ಲಾ ಗವರ್ನರ್ ಡಿ ಶ್ರೀಧರ ಶೇಣವ ಅವರು ಕೊಲ್ಲೂರಿಗೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.…

Read More

ಕುಂದಾಪುರ: ರಾಜ್ಯದ ಮಾಜಿ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗಂಗೊಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ದೇವಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

Read More

ಬೈಂದೂರು: ಶಿರೂರು ಗ್ರಾಮದ ಮಹತ್ವಕಾಂಕ್ಷೆ ಯೋಜನೆಯಾದ ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸಿ ಸಿಹಿ ನೀರಾಗಿ ಮಾರ್ಪಡಿಸುವ ಶುದ್ದ ಕುಡಿಯುವ ನೀರಿನ ಘಟಕವನ್ನು ಎಪ್ರಿಲ್ ಅಥವಾ ಮೇ ಅಂತ್ಯದೊಳಗೆ ಸ್ಥಾಪಿಸಲಾಗುವುದು. ಶುದ್ದ ನೀರಿನ ಕುಡಿಯುವ ಘಟಕ ಜಿಲ್ಲೆಯಲ್ಲಿಯೇ ಪ್ರಥಮ ಎಂದು ತಜ್ನರಾದ ಹರಿಪ್ರಸಾದ ಹಾಗೂ ಅವಿನಾಶ್ ಸ್ಪಷ್ಠಪಡಿಸಿದ್ದಾರೆ. ಅವರು ಶಿರೂರಿನ ವಿವಿಧ ಕಡೆ ಸ್ಥಳ ಪರಿಶೀಲನೆ ಹಾಗೂ ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು. ಶಿರೂರು ಉತ್ಸವದಲ್ಲಿ ನೀಡಿದ ಭರವಸೆ: ಕಳೆದ ಎಪ್ರಿಲ್‌ನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಡೆದ ಶಿರೂರು ಉತ್ಸವದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್ ಶಿರೂರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಪಶು ಆಸ್ಪತ್ರೆ ಸ್ಥಾಪಿಸುವ ಭರವಸೆ ನೀಡಿದ್ದರು. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಿರೂರು ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶುರವರ ಪ್ರಯತ್ನದ ಬಳಿಕ ಸ್ಥಳ ಪರಿಶೀಲನೆಗೆ ಇಸ್ರೇಲ್ ಮೂಲದ ತಾಹನ್ ಕಂಪೆನಿಯ…

Read More

ಗಂಗೊಳ್ಳಿ : ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ ಗಂಗೊಳ್ಳಿ ಹಾಗೂ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ (ಆಯುರ್ವೇದ) ತಪಾಸಣಾ ಶಿಬಿರವು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಾಮತ್, ಆಯುರ್ವೇದ ಅತ್ಯಂತ ಪ್ರಾಚೀನವಾದ ಔಷಧ ಪದ್ಧತಿಯಾಗಿದ್ದು, ಜನರಿಗೆ ಆಯುರ್ವೇದದ ಬಗ್ಗೆ ಸರಿಯಾದ ತಿಳುವಳಿ ಮಾಹಿತಿ ಇಲ್ಲ. ಹೀಗಾಗಿ ಜನರು ಆಯುರ್ವೇದ ಔಷಧ ಪದ್ಧತಿಯತ್ತ ಗಮನ ಹರಿಸುತ್ತಿಲ್ಲ. ದೇಹದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಸಹಕಾರಿಯಾಗುತ್ತದೆ ಎಂದರು. ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಭುವನೇಂದ್ರ ಟ್ರಸ್ಟ್‌ನ ಕಾರ್ಯದರ್ಶಿ ಕೆ.ದಿನೇಶ ಕಾಮತ್, ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸಂಸ್ಥೆಯ ಹಿರಿಯ ಸದಸ್ಯ…

Read More