ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.29: ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರು ಕುಂದಾಪುರಕ್ಕೆ ಹಲವು ಭಾರಿ ಭೇಟಿ ನೀಡಿದ್ದಲ್ಲದೇ, ಕುಂದಾಪುರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. 2017ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ವೇಳೆ ಪುನಿತ್ ರಾಜಕುಮಾರ್ ಅವರು ಕುಂದಾಪುರದಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ. ಇಲ್ಲಿಯ ಜನ ಸಜ್ಜನರು. ಕುಂದಾಪುರ ಚಿಕನ್, ಮೀನು ಫ್ರೈ, ನೀರ್ದೋಸೆ ಸೂಪರ್. ಹಾಗೆನೇ ಇಲ್ಲಿನ ಪರಿಸರ ಕೂಡ ಅದ್ಭುತ… ಎಂದು ಅಭಿಮಾನದಿಂದಲೇ ಉದ್ಗರಿಸಿದ್ದರು. ಅಂದು ಮಾಧ್ಯಮದವರೊಂದಿಗೆ ಮನಬಿಚ್ಚಿ ಮಾತನಾಡಿದ್ದ ಪುನಿತ್, ಕರಾವಳಿಗೂ ನಮ್ಮ ಕುಟುಂಬಕ್ಕೂ ದೊಡ್ಡ ನಂಟಿದೆ. ತಂದೆಯವರು ಕರಾವಳಿ ಜನರ ಪ್ರೀತಿಗೆ ಪಾತ್ರರಾದವರು. ಚಿಕ್ಕವನಿದ್ದಾಗ ಅವರೊಂದಿಗೆ ಈ ಭಾಗದಲ್ಲಿ ಶೂಟಿಂಗ್ ವೇಳೆ ಭಾಗವಹಿಸಿದ್ದೆ. ಒಂದು ಮುತ್ತಿನ ಕಥೆ, ಶ್ರಾವಣ ಬಂತು, ಅನುರಾಗ ಅರಳಿತು, ಅಪೂರ್ವ ಸಂಗಮ ಮೊದಲಾದ ತಂದೆಯವರು ನಟಿಸಿದ ಸಿನಿಮಾಗಳು ಈ ಭಾಗದಲ್ಲಿ ಚಿತ್ರೀಕರಣಗೊಂಡಿದ್ದರಿಂದ ಇಲ್ಲಿನ ಪರಿಚಯ ಚೆನ್ನಾಗಿಯೇ ಇದೆ. ಧರ್ಮಸ್ಥಳ, ಸುಬ್ರಹ್ಮಣ್ಯ,…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತ ಕಲಶಹಸ್ತಾಯ… ಹೀಗೆ ಸಂಗೀತದ ಲಯದೊಂದಿಗೆ ಮಂತ್ರೋಚ್ಛರಿಸಿ ಧನ್ವಂತರಿ ಯಾಗ ನಡೆಸಿದ ವಿನೂತನ ಪರಿಕಲ್ಪನೆಗೆ ತಾಲೂಕಿನ ಆಲೂರು ಚಿತ್ರಕೂಟ ಆಯುವೇದ ಚಿಕಿತ್ಸಾಲಯ ಸಾಕ್ಷಿಯಾಗಿದೆ. ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಗೀತ ಥೆರಪಿಯಿಂದ ಪ್ರೇರಿತರಾಗಿ ವಿಶ್ವದಲ್ಲಿಯೇ ಮೊದಲ ಭಾರಿಗೆಂಬಂತೆ ಮಂತ್ರದ ಜೊತೆಗೆ ಸಂಗೀತ ಸೇರಿಸಿ ಧನ್ವಂತರಿ ಹೋಮ ನಡೆಸುವ ನಿಶ್ಚಯವನ್ನು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಪ್ರವರ್ತಕ ವೈದ್ಯ ಡಾ. ರಾಜೇಶ್ ಬಾಯರಿ – ಡಾ. ಅನುಲೇಖಾ ಬಾಯರಿ ಅವರು ಕೈಗೊಂಡರು. ಹೋಮದ ಕಿರಣ ಹಾಗೂ ಸಂಗೀತದ ತರಂಗಗಳು ಅನಾರೋಗ್ಯ ಪೀಡಿತರ ಮೇಲೆ ಬೀರಬಹುದಾದ ಪರಿಣಾಮದ ಅಧ್ಯಯನ ಮಾಡುವ ಉದ್ದೇಶದೊಂದಿಗೆ ಶ್ರೀ ಶಂಕರಾಭರಣ ಧರ್ಮ ಸಂಸ್ಕೃತಿ ಪ್ರತಿಷ್ಠಾನಮ್ ಅವರ ಮುಂದಾಳತ್ವದಲ್ಲಿ ‘ವೇದನಾದೌಷದ ತರಂಗಿಣಿ’ ಎನ್ನುವ ಕಾರ್ಯಕ್ರಮದ ಆಯೋಜಿಸಿದರು. ವೇದ ಮಂತ್ರಗಳನ್ನು ಪಠಿಸುವ ಜೊತೆಗೆ ಹಾರ್ಮೋನಿಯಂ ಮೂಲಕವೂ ಕರ್ಣಾಟಕಿ ಸಂಗೀತದ ರೇವತೀ ರಾಗ ಹಾಗೂ ಹಿಂದುಸ್ಥಾನಿ ಸಂಗೀತದ ಭೈರಾಗಿ ಬೈರವ ರಾಗದ ಪನಿಸರಿ ಎಂಬ ನಾಲ್ಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನವದೆಹಲಿಯ ಆಲ್ ಇಂಡಿಯಾ ಬ್ಯುಸಿನೆಸ್ ಡೆವೆಲಪ್‌ಮೆಂಟ್ ಅಸೋಸಿಯೇಷನ್ ಕೊಡಮಾಡುವ ’ಕ್ಯಾಟರಿಂಗ್ ಕಂಪೆನಿ ಆಫ್ ದಿ ಇಯರ್ ಆವಾರ್ಡ್’ ಪ್ರಶಸ್ತ ಸಾಲಿನಲ್ಲಿ ಶೆಫ್‌ಟಾಕ್ ಫುಡ್ & ಹಾಸ್ಟಿಟಾಲಿಟಿ ಸರ್ವಿಸಸ್ ಪ್ರೈ. ಲಿ ಸಂಸ್ಥೆಗೆ ದೊರೆತಿದೆ. ಆಹಾರೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಲಾಗಿರುವ ವಿಶೇಷ ಸೇವೆ ಹಾಗೂ ದೇಶದ ಆರ್ಥಿಕತೆ ಮತ್ತು ಸಮಾಜದ ಅಭಿವೃದ್ಧಿಗೆ ನೀಡಲಾಗಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯ ಮೂಲಕ ಆಹಾರ ಮತ್ತು ಅತಿಥಿ ಸತ್ಕಾರ ವಿಭಾಗದಲ್ಲಿ ಗುಣಮಟ್ಟ ಹಾಗೂ ವೇಗದ ಪ್ರಗತಿ ಸಾಧಿಸಿ ಛಾಪು ಮೂಡಿಸಿರುವ ಡಾ. ಗೋವಿಂದ ಬಾಬು ಪೂಜಾರಿ ಅವರ ಒಡೆತನದ ಶೆಫ್‌ಟಾಕ್ ಸಂಸ್ಥೆಯ ಕೀರ್ತಿ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಶೆಫ್‌ಟಾಕ್ ಸಂಸ್ಥೆಗೆ ಈವರೆಗೆ ಹಲವು ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಪ್ರಮುಖವಾಗಿ 2016-17ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ‘ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ, ಬಿಸಿಸಿಐ ಮುಂಬೈನಿಂದ ಕ್ಷಿಪ್ರ ಬೆಳವಣಿಗೆಯ ಉದ್ಯಮ ವಿಭಾಗದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಫ್ಲೈಓವರ್‌ನಲ್ಲಿ ಕುಂದಾಪುರ ನಗರ ಪ್ರವೇಶಕ್ಕೆ ಮುಖ್ಯದ್ವಾರವೇ ಇಲ್ಲದಂತಾಗಿದೆ. ಬಹುಪಾಲು ಸರಕಾರಿ ಕಛೇರಿಗಳು ಇರುವ ಪ್ರದೇಶ ಹಾಗೂ ಕುಂದಾಪುರ ನಗರ ಆರಂಭವಾದ್ದರಿಂದ ಎಲ್‌ಐಸಿ ರಸ್ತೆ ಎದುರು ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಹಲವು ಭಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಎನ್‌ಹೆಚ್‌ಆರ್‌ಐ ನಮ್ಮ ಮನವಿಗೆ ಸ್ಪಂದಿಸದಿದ್ದರೇ ಕುಂದಾಪುರದ ನಾಗರಿಕರೇ ಪ್ರವೇಶ ಮಾಡಿಕೊಳ್ಳಬೇಕಾಗುತ್ತದೆ ಎಂದು ಪುರಸಭಾ ಸದಸ್ಯ ಗಿರೀಶ್ ದೇವಾಡಿಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಮೇಜು ತಟ್ಟಿ ಅನುಮೋದಿಸಿದರು. ಫ್ಲೈಓವರ್ ನೀರು ಸರ್ವಿಸ್ ರಸ್ತೆ ಬೀಳುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಸಮರ್ಪಕ ಕಾಮಗಾರಿ ಸರ್ವಿಸ್ ರಸ್ತೆಯೇ ಮಾಯವಾಗಿದೆ ಇದನ್ನು ಶೀಘ್ರವಾಗಿ ದುರಸ್ತಿಗೊಳಿಸುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪ ಅಳವಡಿಸದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆದರು. ಈ ವೇಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ಆ.17: ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಹೊಸ ವಿಸ್ಟಾಡೋಮ್ ಕೋಚ್ನೊಂದಿಗೆ ಸಂಚಾರಕ್ಕೆ ಆರಂಭಿಸಿದ್ದು ಕುಂದಾಪುರ ರೈಲು ನಿಲ್ದಾಣದಲ್ಲಿ ಸೋಮವಾರ ಸಾರ್ವಜನಿಕರು ಸ್ವಾಗತಿಸಿಕೊಂಡರು. ಬೆಂಗಳೂರು ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಮೊದಲು ಮಂಗಳೂರು ಜಂಕ್ಷನ್ವರೆಗೆ ಮಾತ್ರ ಸಂಚರಿಸುತ್ತಿತ್ತು. ಇದೀಗ ಮತ್ತೆ ಕಾರವಾರದ ತನಕ ರೈಲು ಸಂಚಾರ ಪುನಾರಂಭವಾಗಿದೆ. 06211 ಸಂಖ್ಯೆ ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ. ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ನದಿಗಳು, ಬೆಟ್ಟಗುಡ್ಡಗಳು, ಕೃಷಿಭೂಮಿ, ತೊರೆಗಳು ಸಹಿತ ನಯನಮನೋಹರ ದೃಶ್ಯಗಳನ್ನು ಕರಾವಳಿಯಿಂದ ಯಶವಂತಪುರದ ತನಕವೂ ವೀಕ್ಷಿಸಬಹುದಾಗಿದೆ. ಕುಂದಾಪುರಕ್ಕೆ ಆಗಮಿಸಿದ ವಿಸ್ಟಾಡೋಮ್ ಕೋಚನ್ನು ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಬಿ.ಬಿ ನಿಕ್ಕಂ ಬರಮಾಡಿಕೊಂಡು ಪ್ರಯಾಣಿಕರಿಗೆ ಶುಭಹಾರೈಸಿದರು. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಮಂಡಿಸಿದ ‘G.S.K (GAS SAVING KIT)’ ಎಂಬ ನೂತನ ಆವಿಷ್ಕಾರದ ಸಾಧನವು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ರಾಷ್ಟ್ರಮಟ್ಟದ ‘CSIR INNOVATION AWARD FOR SCHOOL CHILDREN 2021’ ಸ್ಪರ್ಧೆಗೆ ಆಯ್ಕೆಯಾಗಿ, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಲ್ಲಿನ 10ನೇ ತರಗತಿಯಲ್ಲಿ ಒದುತ್ತಿರುವ ಅನುಷಾ ಹಾಗೂ ರಕ್ಷಿತ ನಾಯ್ಕ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ. ಕೇವಲ ಕಡಿಮೆ ಬೆಲೆಯಲ್ಲಿ ತಯಾರಿಸಲಾದ ‘G.S.K’ (GAS SAVING KIT) ಉಪಕರಣವನ್ನು, ಗ್ಯಾಸ್ ಸ್ಟೌಗೆ ಅಳವಡಿಸಿದರೆ, ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ದೊರಕುತ್ತದೆ. ಪ್ರಪಂಚದಾದ್ಯಂತ ಇದನ್ನು ಎಲ್ಲಾ ಮನೆ, ಹೋಟೆಲ್‌ಗಳಲ್ಲಿ ಬಳಸಿದರೆ, ದಿವೊಂದಕ್ಕೆ ಲಕ್ಷಗಟ್ಟಲೆ ಟನ್ ಎಲ್.ಪಿ.ಜಿ. ಉಳಿತಾಯವಾಗುತ್ತದೆ ಎಂಬುದನ್ನು ಈ ಇಬ್ಬರು ವಿದ್ಯಾರ್ಥಿನಿಯರು ತೋರಿಸಿದ್ದಾರೆ. ಈ ಕಿಟ್‌ನ್ನು ಇನ್ನಷ್ಟು…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪ್ರ ಕನ್ನಡದ್ ತಾಕತ್ತೇ ಅಂತದ್ ಕಾಣಿ. ಅದ್ರೊಳಗ್ ಭಾವ-ಬಂಧ ಎರಡೂ ಇತ್ತ್. ಹಂಗಾಯೇ ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಭಾಷಿ ಉಳ್ಸಿ-ಬೆಳ್ಸು ಬಗ್ಗ್ ಒಂಚೂರಾರೂ ನಿಗಾ ವಯ್ಸ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ ‘ ಅಂದೇಳಿ ಮಾಡ್ತಿದ್ರ್. ಕಳ್ದ್ ಎರ್ಡ್ ವರ್ಷದ್ ಹಿಂದ್ ಸುರು ಆದ್ ಕುಂದಾಪ್ರ ಕನ್ನಡ ದಿನು ಅಂದಂದೆ ಸೈ, ಬ್ರಹ್ಮಾವರದಿಂದ್ ಬೈಂದೂರು ಶಿರೂರ್ ತನಕ್ , ದೇಶ-ವಿದೇಶದಂಗೆಲ್ಲಾ ಸದ್ದ್ ಮಾಡಿತ್. ಈ ಸರ್ತಿ ಕೊರೋನಾ ಇತ್ತಲಾ ಜನು ಸೇರ್ಸುಕಾತಿಲ್ಲ. ಆರೆ ಸೋಶಿಯಲ್ ಮೀಡಿಯಾದಗಂತೂ ಭಾರಿ ಸದ್ದ್ ಮಾಡ್ತಿತ್. ಬೇರ್ ಬೇರೆ ಬಗಿ ಸರ್ಧೆ, ಕಾರ್ಯಕ್ರಮ ಹಮ್ಮಕಂಡಿರ್. ವಿಶ್ವ ಕುಂದಾಪ್ರ ಕನ್ನಡ ದಿನ:ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿಕೊಂಡಿರುವ ಕುಂದಾಪ್ರ ಕನ್ನಡ ಸರಿಸುಮಾರು ಬ್ರಹ್ಮಾವರದಿಂದ ಶಿರೂರಿನ ತನಕ ಮೂರು ತಾಲೂಕುಗಳಲ್ಲಿ ವ್ಯಾಪಿಸಿಕೊಂಡಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಾವುದೇ ಸಾಕ್ಷ್ಯ ಉಳಿಸದೇ ಒಂಟಿ ಮಹಿಳೆಯ ಕೊಲೆಗೈದ ಪ್ರಕರಣವನ್ನು ಒಂದು ವಾರದ ಅಂತರದಲ್ಲಿ ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಉಡುಪಿ ಜಿಲ್ಲಾ ಪೊಲೀಸ್ ತಂಡ ಯಶಸ್ಸಿಯಾಗಿದೆ. ಕುಮ್ರಗೋಡು ಅಪಾರ್ಟ್‌ಮೆಂಟ್‌ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ವಿಷ್ಣುವರ್ದನ್ ಅವರು 5 ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಲಭ್ಯವಾದ ಸುಳಿವಿನಂತೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಆರೋಪಿ ಹುಡುಕಾಟ ನಡೆಸಿದ್ದು, ಉತ್ತರ ಪ್ರದೇಶದ ಗೋರಖ್‌ಪುರ್‌ದಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಸ್ವಾಮಿನಾಥ ನಿಶಾದ (38) ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿ ನೀಡಿದ ಮಾಹಿತಿಯಂತೆ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದ. 6 ತಿಂಗಳ ಹಿಂದೆಯೇ ಸಂಚು: ಪತ್ನಿ ವಿಶಾಲಾರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ ರಾಮಕೃಷ್ಣ ಗಾಣಿಗ ಇದಕ್ಕಾಗಿ ಆರು ತಿಂಗಳ ಹಿಂದೆಯೇ ದುಬೈನಲ್ಲಿ ಕುಳಿತು ಸಂಚು ರೂಪಿಸಿದ್ದ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಹ್ಮಾವರ ಸಮೀಪದ ಕುಮ್ರಗೋಡು ಮಿಲನ ರೆಸಿಡೆನ್ಸಿಯಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಕೆಯ ಪತಿ ಬಿಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಕೆಗಾಗಿ ಆರೋಪಿಯನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಓರ್ವ ಸುಪಾರಿ ಕಿಲ್ಲರ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮಕೃಷ್ಣ ಗಾಣಿಗ ಇಬ್ಬರು ಉತ್ತರ ಪ್ರದೇಶ ಮೂಲದ ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ ಪತ್ನಿಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದು ತನಿಕೆಯಲ್ಲಿ ಬಯಲಾಗಿದ್ದು ಅದರಂತೆ ಇಬ್ಬರು ಸುಪಾರಿ ಕಿಲ್ಲರ್‌ಗಳು ಈ ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಕೆಯಲ್ಲಿ ತಿಳಿದುಬಂದಿದೆ. ಪತಿ ಪತ್ನಿಯರ ಮಧ್ಯೆ ಇದ್ದ ವಿರಸವೇ ಕೊಲೆಗೆ ಪ್ರಮುಖ ಕಾರಣವೆಂಬುದು ತನಿಕೆಯಲ್ಲಿ ತಿಳಿದುಬಂದಿದೆ. ಪತ್ನಿಯ ಅಂತ್ಯ ಸಂಸ್ಕಾರಕ್ಕೆಂದು ದುಬೈನಿಂದ ಊರಿಗೆ ಬಂಧಿದ್ದ ರಾಮಕೃಷ್ಣ ಗಾಣಿಗನ್ನು ಪೊಲೀಸರು…
ಕುಂದಾಪ್ರ ಡಾಟ್ ಕಾಂ ವರದಿ. ಕೊಲ್ಲೂರು: ಪ್ರಸಿದ್ಧ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಕೈಗೊಳ್ಳುವವರಿಗೆ ಪ್ರವೇಶ ಶುಲ್ಕವೇ ದುಬಾರಿಯಾಗಿರುವುದು ಚಾರಣಪ್ರಿಯರ ನಿದ್ದೆಗೆಡಿಸಿದೆ. ಚಾರಣದ ದರ ದುಪ್ಪಟ್ಟು ಜೊತೆಗೆ ಕ್ಯಾಮರಾ ಕೊಂಡೊಯ್ಯುವವರಿಗೂ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶವಾದ ಕೊಡಚಾದ್ರಿಯು ಕುದುರೆಮುಖ ವನ್ಯಜೀವಿ ಅರಣ್ಯ ವಿಭಾಗದ ಕೊಲ್ಲೂರು ವನ್ಯಜೀವಿ ಇಲಾಖಾ ವ್ಯಾಪ್ತಿಯಲ್ಲಿದ್ದು ಎಪ್ರಿಲ್ 1ರಿಂದಲೇ ಜಾರಿಯಾಗುವಂತೆ ಚಾರಣ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಕಟ್ಟಿನಹೊಳೆಯ ಚೆಕ್’ಪೋಸ್ಟ್ ಮೂಲಕ ವಾಹನದಲ್ಲಿ ಕೊಡಚಾದ್ರಿಗೆ ತೆರಳುವ ವಯಸ್ಕ ಪ್ರವಾಸಿಗರಿಗೆ 50 ರೂ. ಮಕ್ಕಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹಿಡ್ಲುಮನೆ ಹಾಗೂ ವಳೂರು ಮೂಲಕ ಕೊಡಚಾದ್ರಿಗೆ ಹೋಗುವ ವಯಸ್ಕರು 100 ರೂ., ಮಕ್ಕಳಿಗೆ 50 ರೂ. ಶುಲ್ಕ ಹಾಗೂ ಕಟ್ಟಿನಹೊಳೆ, ಹಿಡ್ಲುಮನೆ ಮಾರ್ಗದ ಮೂಲಕ ಪಯಣ ಬೆಳೆಸುವ ವಿದೇಶಿಯರಿಗೆ 400 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಟ್ರೆಕ್ಕಿಂಗ್ ಕೈಗೊಳ್ಳುವವರಿಗೆ ತಲಾ 300 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಾಹನದ ಪ್ರತಿ ಟ್ರಿಪ್ಪಿಗೆ 100 ರೂ ನಿಗದಿಪಡಿಸಲಾಗಿದ್ದು, ಗೈಡ್ ಅವಶ್ಯಕತೆ ಇದ್ದರೆ…
