ಕುಂದಾಪುರ: ಕಲಾಂ ವಿವಿಧ ರಂಗಗಳಲ್ಲಿ ತೋರಿದ ಸಾಧನೆಗಳಿಗಿಂತ ಅವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಅತ್ಯುತ್ತಮ ಮಾನವೀಯ ಮೌಲ್ಯಗಳಿಂದಾಗಿ ಎಲ್ಲರ ಹೃದಯಕ್ಕೆ ಹೆಚ್ಚು ಆಪ್ತವಾಗುತ್ತಾರೆ.ಅವರ ಸರಳತೆ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರೆಪಣೆ ನೀಡುವಂತಾದ್ದು ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಆಶ್ರಯದಲ್ಲಿ ನಡೆದ ಕಲಾಂ ಮತ್ತು ನಾವು ಎನ್ನುವ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಕಲಾಂರಂತಹ ಮಹಾನ್ ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡುವುದರ ಜೊತೆಯಲ್ಲೇ ನಮ್ಮದೇ ಆದ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತ ಪ್ರತಿಯೊಬ್ಬ ವ್ಯಕ್ತಿಯೂ ಕಾರ‍್ಯಶೀಲರಾಗಬೇಕು.ನಮ್ಮ ಧನಾತ್ಮಕ ವಿಭಿನ್ನತೆಗಳ ಮೂಲಕವೇ ಸಮಾಜದಲ್ಲಿ ವ್ಯಕ್ತಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೇಂಜರ್ಸ್ ಘಟಕದ ಸಂಯೋಜಕಿ ಕು.ಜ್ಯೋತಿ ಮೊಗವೀರ ಸ್ವಾಗತಿಸಿದರು. ವಿದ್ಯಾರ್ಥಿನಿ ಆಶಾ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು.ವಿದ್ಯಾರ್ಥಿ ಶಿವಪ್ರಸಾದ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.…
Author: ಸುನಿಲ್ ಹೆಚ್. ಜಿ. ಬೈಂದೂರು
ಲಕ್ಷ ಮೋದಕ ಗಣಪತಿ ಮಹಾಯಾಗ ಹಾಗೂ ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ಹಾಗೂ ನಾಗದೇವರ ಸನ್ನಿಧಿನಲ್ಲಿ ಫೆಬ್ರವರಿ ೯ರಿಂದ ೧೩ರ ವರೆಗೆ ನಡೆಯಲಿರುವ ಲಕ್ಷ ಮೋದಕ ಗಣಪತಿ ಮಹಾಯಾಗ ಹಾಗೂ ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದ ವಠಾರದಲ್ಲಿ ಬಿಡುಗಡೆಗೊಳಿಸಲಾಯಿತು. ಬೆಂಗಳೂರಿನ ಉದ್ಯಮಿ ದುಗ್ಗಪ್ಪ ಶೆಟ್ಟಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಬಾಬು ಶೆಟ್ಟಿ, ಪಡುವರಿ ಗ್ರಾ.ಪಂ ಉಪಾಧ್ಯಕ್ಷ ಸದಾಶಿವ ಡಿ, ಬೈಂದೂರು ಗ್ರಾ.ಪಂ ಸದಸ್ಯ ವೆಂಕ್ಟ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ಸೇನೇಶ್ವರ ದೇವಳದ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ, ಬೈಂದೂರು ದೇವಾಡಿಗ ಸಂಘದ ಅಧ್ಯಕ್ಷ ಸುಬ್ಬಣ್ಣ, ಟೆಂಪೋ ಯುನಿಯನ್ ಅಧ್ಯಕ್ಷ ಮಹಾಬಲ ದೇವಾಡಿಗ, ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ಸೇವಾ ಸಮಿತಿಯ ಗೌರವಾಧ್ಯಕ್ಷ ರಾಜು ಪೂಜಾರಿ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ ಮೊದಲಾದವರು ಉಪಸ್ಥಿತರಿದ್ದರು.…
ಬೈಂದೂರು: ಇಲ್ಲಿನ ಯಡ್ತರೆ ಜೆ.ಎನ್.ಆರ್. ಕಲಾಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ರಾತ್ರಿ 10 ಗಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿ, ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿಯ ರಭಸಕ್ಕೆ ಬಸ್ ರಸ್ತೆ ಬದಿಯ ಸಣ್ಣ ಕಂದಕಕ್ಕೆ ಉರುಳಿದ್ದರೇ, ಲಾರಿ ರಸ್ತೆಯ ಇನ್ನೊಂದು ಬದಿಗೆ ಸರಿದು ನಿಂತಿದೆ. ಘಟನೆಯ ವಿವರ: ಮಂಗಳೂರಿನಿಂದ ಬಾಗಲಕೋಟೆಗೆ ಹೊರಟ್ಟಿದ್ದ ಸರಕಾರಿ ಬಸ್ ಯಡ್ತರೆಯ ಕೊಲ್ಲೂರು ಕ್ರಾಸ್ ಸಮೀಪ ಬರುತ್ತಿದ್ದಾಗ ಮುಂದೆ ವಾಹನವಿದ್ದುದರಿಂದ ಬಸ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದನ್ನರಿಯದೇ ಬಸ್ಸಿನ ಹಿಂದೆಯೇ ಇದ್ದ ಲಾರಿಯು ನಿಯಂತ್ರಣಕ್ಕೆ ಬಾರದೇ ಬಸ್ಸಿನ ಹಿಂಭಾಗಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಬಸ್ ಸ್ವಲ್ಪ ಮುಂದೆ ಚಲಿಸಿ ಎಡಭಾಗದಲ್ಲಿದ್ದ ಸಣ್ಣ ಕಮರಿಗೆ ಹೊಗಿ ಬಿದ್ದಿದೆ. ಬಸ್ಸಿಗೆ ತಾಕಿದ ಬಳಿಕ ಲಾರಿಯೂ ಬಲಭಾಗದ ರಸ್ತೆ ಬದಿಗೆ ಹೋಗಿ ನಿಂತಿದೆ. ಲಾರಿ ಮಂಗಳೂರಿನಿಂದ ಕೊಪ್ಪಳಕ್ಕೆ ಕೋಕ್ ತುಂಬಿಸಿಕೊಂಡು ತೆರಳುತ್ತಿತ್ತು. (ಕುಂದಾಪ್ರ ಡಾಟ್ ಕಾಂ) ಅಪಘಾತದಲ್ಲಿ ಬಸ್ಸಿನ ಹಿಂಬದಿ ಕುಳಿತಿದ್ದ ಪ್ರಯಾಣಿಕರುಗಳಿಗೆ…
ಕುಂದಾಪುರ: ಕೋಟೇಶ್ವರ ಶ್ರೀ ಕಾಳಾವರ ವರದರಾಜ.ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಇದೇ ಕಾಲೇಜಿನ ಹಿರಿಯ ಉಪನ್ಯಾಸಕ ನಿತ್ಯಾನಂದ.ವಿ.ಗಾಂವ್ಕರ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು 23 ವರ್ಷಗಳ ಕಾಲ ಆಂಗ್ಲ ಭಾಷಾ ಉಪನ್ಯಾಸಕರಾಗಿ ವಿವಿಧ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆಯ ನೊಡಲ್ ಅಧಿಕಾರಿಯಾಗಿ ಮಾರ್ಗದರ್ಶನ ನೀಡಿದ್ದಲ್ಲದೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಆಡಳಿತದ ಅನುಭವ ಪಡೆದಿರುತ್ತಾರೆ.
ಬೈಂದೂರು: ನಾವುಂದ ಕಡಲತೀರದ ಬೊಬ್ಬರ್ಯನಹಿತ್ಲುವಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಪದ್ಮಾವತಿ ಅಮ್ಮನವರ ದೇವಸ್ಥಾನ ಕಾಮಗಾರಿಗೆ ಉದ್ಯಮಿ ಡಾ. ಜಿ. ಶಂಕರ್ ಬುಧವಾರ ಚಾಲನೆ ನೀಡಿದರು. ಆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ದೇವಸ್ಥಾನ ನಿರ್ಮಾಣದಲ್ಲಿ ಪರಿಸರದ ಎಲ್ಲ ಜಾತಿಯವರನ್ನು ಒಡಗೂಡಿಸಿಕೊಂಡಿರುವುದು ಸ್ತುತ್ಯರ್ಹ ಕಾರ್ಯ. ದೇವಾಲಯ ನಿರ್ಮಾಣವಾದ ಬಳಿಕ ಅಲ್ಲಿ ಅನೂಚಾನವಾಗಿ ಪೂಜೆ ಪುನಸ್ಕಾರ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿ ನಿರ್ಮಾಣ ಕಾರ್ಯಕ್ಕೆ ನೆರವಿನ ಭರವಸೆಯಿತ್ತರು. ಸಭೆಯನ್ನು ಉದ್ಘಾಟಿಸಿದ ಶಾಸಕ ಕೆ. ಗೋಪಾಲ ಪೂಜಾರಿ ದೇವಸ್ಥಾನದ ಪುಷ್ಕರಣಿಯ ಪುನರುಜ್ಜೀವನಕ್ಕೆ ಸರಕಾರದಿಂದ ರೂ. ೫೦ ಲಕ್ಷ ಮಂಜೂರು ಮಾಡಿಸಿದ್ದು, ಶೀಘ್ರ ಟೆಂಡರ್ ಕರೆದು ಕೆಲಸ ಆಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಣು ಡಿ. ಚಂದನ್ ಅಧ್ಯಕ್ಷತೆ ವಹಿಸಿದ್ದರು. ಭೂಮಿ ಪೂಜೆ ನೆರವೇರಿಸಿದ ಪುರೋಹಿತ ಆನಗಳ್ಳಿ ಚೆನ್ನಕೇಶವ ಭಟ್ ಆಶೀರ್ವಚನಗೈದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕೋಟ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿ ಆನಂದ ಸಿ. ಕುಂದರ್, ಕೊಲ್ಲೂರು…
ಕುಂದಾಪುರ: ಇತ್ತಿಚಿನ ದಿನಗಳಲ್ಲಿ ಪತ್ರಿಕೆಯನ್ನು ಓದುವವರಿಗಿಂತ ಹೆಚ್ಚಾಗಿ ನೋಡುಗರ ಸಂಖ್ಯೆ ಜಾಸ್ತಿಗಾಗುತ್ತಿದೆ. ಮೊಬೈಲ್, ಟಿ.ವಿಯ ಕಾರಣದಿಂದಾಗಿ ಯುವಜನತೆ ಪತ್ರಿಕೆ ಓದುವ ಹವ್ಯಾಸದಿಂದಲೇ ದೂರ ಸರಿಯುತ್ತಿದ್ದಾರೇನೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂದು ಸುದ್ದಿಮನೆ ವಾರಪತ್ರಿಕೆಯ ಸಂಪಾದಕ ಸಂತೋಷ ಕೋಣಿ ಆತಂಕ ವ್ಯಕ್ತಪಡಿಸಿದರು. ಅವರು ಮೇಲ್ಕಟ್ಕೆರೆ ಸ.ಹಿ.ಪ್ರಾ. ಶಾಲೆಯಲ್ಲಿ ಜರುಗಿದ ಬಸ್ರೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಶೈಕ್ಷಣಿಕ ಕಾರ‍್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮ ಮತ್ತು ಯುವಜನತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪ್ರತಿದಿನವೂ ಪತ್ರಿಕೆಯನ್ನು ಓದಿ ಆಲೋಕಿಸುವ, ಸತ್ಯ-ಅಸತ್ಯಗಳನ್ನು ವಿಚಾರ ಮಾಡುವ ಕೆಲಸ ಮಾಡಿದರೇ ನಮಗೆ ಗೊತ್ತಿಲ್ಲದೇ ನಮ್ಮಲ್ಲೊಬ್ಬ ವಿಮರ್ಷಕ ಹುಟ್ಟಿಕೊಳ್ಳುತ್ತಾನೆ ಜೊತೆಗೆ ನಮ್ಮ ವಿವೇಕವೂ ಬೆಳೆಯುತ್ತದೆ ಎಂದ ಅವರು ಯುವಜನತೆ ಪತ್ರಿಕೋದ್ಯಮದ ಅಂಕುಡೊಂಕುಗಳನ್ನು ಅವಲೋಕಿಸುವುದರೊಂದಿಗೆ ಒಳಿತನ್ನು ಪ್ರಶಂಶಿಸುವ, ಕೆಡುಕನ್ನು ಪ್ರಶ್ನಿಸುವ ಜಾಗೃತ ಮನಸ್ಥಿತಿಯನ್ನು ಬೆಳೆಸಿಕೊಳ್ಳವುದು ಇಂದಿನ ಅಗತ್ಯವಾಗಿದೆ ಎಂದರು. ಕಾಳಾವಾರ ಗ್ರಾ.ಪಂ ಸದಸ್ಯ ರತ್ನಾಕರ ಶೆಟ್ಟಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ‍್ಯಕ್ರಮದಲ್ಲಿ ಕೋಟ ವಿವೇಕ ಪದವಿಪೂರ್ವ…
ಬಿ. ರಾಘವೇಂದ್ರ ಪೈ ಗಂಗೊಳ್ಳಿ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಸಂಘ ಸಂಸ್ಥೆಗಳು ವಿವಿಧ ಇಲಾಖೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ದೊರೆಯುತ್ತಿಲ್ಲ. ಕಲಾವಿದ ಆರ್ಥಿಕ ಸ್ಥಿತಿವಂತನಾಗಿದ್ದರೆ ಮಾತ್ರ ಆತನ ಕಲೆಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ದೊರೆಯುತ್ತಿರುತ್ತದೆ ಎಂಬ ಮಾತುಗಳಿಗೆ ಇಂಬು ನೀಡುವಂತಿದೆ ಗಂಗೊಳ್ಳಿ ಸಮೀಪದ ಗುಜ್ಜಾಡಿಯ ಕಲಾವಿದನೊಬ್ಬನ ಕಲಾ ಬದುಕು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿರುವ ದಿ. ಚಂದ್ರ ಆಚಾರಿ ಮತ್ತು ಸುಶೀಲಾ ಆಚಾರಿ ದಂಪತಿಯ ಪುತ್ರ ಮಂಜುನಾಥ ಆಚಾರಿ (36) ಎಂಬಾತ ಕಲಿತದ್ದು 7ನೇ ತರಗತಿ ಮಾತ್ರ. ಆದರೆ ಈತನಲ್ಲಿರುವ ಪ್ರತಿಭೆ ಮಾತ್ರ ಅತ್ಯದ್ಬುತವಾದದ್ದು. ವಿವಿಧ ರೀತಿಯ ಕೈಚಳಕ, ಕಲೆಗಳನ್ನು ಕರಗತ ಮಾಡಿಕೊಂಡಿರುವ ಅದೆಷ್ಟೋ ಕಲಾವಿದರು ನಮ್ಮ ಮುಂದೆ ಇದ್ದರೂ ಕಡಿಮೆ ಶಿಕ್ಷಣ ಪಡೆದುಕೊಂಡ ಮಂಜುನಾಥನ ಕಲಾ ಸಾಧನೆ ಎಲ್ಲರನ್ನೂ ನಿಬ್ಬೆರಗಾಗುವಂತೆ…
ಕುಂದಾಪುರ: ಯುವ ಸಾಹಿತಿ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರನ್ನು ಇತ್ತಿಚಿಗೆ ಜೇಸಿಐ ಚಿತ್ತೂರು-ಮಾರಣಕಟ್ಟೆಯ ಅದ್ವಿತಾ 2015 ಕಾರ‍್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಸಂದೀಪ್ ಅವರನ್ನು ಸನ್ಮಾನಿಸಿರು. ಜೇಸಿಐ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪುರ: ವಂಡ್ಸೆ ಗ್ರಾಮವನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಮರು ಸೇರ್ಪಡೆಗೊಳಿಸಿದ್ದನ್ನು ಖಂಡಿಸಿ, ಅ. ೧೩ ರಂದು ವಂಡ್ಸೆಯಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು. ಅವೈಜ್ಞಾನಿಕವಾದ ವರದಿಯಿಂದ ವಂಡ್ಸೆ ಗ್ರಾಮವನ್ನು ತಕ್ಷಣ ಕೈಬಿಡಬೇಕು. ನಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ಸ್ಥಳಕ್ಕೆ ಬಂದು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾ ನಿರತರು ಕೆಲವೊಷ್ಟು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ವಂಡ್ಸೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ.ಸದಸ್ಯ ಹೆಚ್. ಮಂಜಯ್ಯ ಶೆಟ್ಟಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನರಲ್ಲಿ ಗೊಂದಲವಿದೆ. ಸ್ಪಷ್ಟ ಮಾಹಿತಿಯನ್ನು ನೀಡುವ ಕೆಲಸ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿಲ್ಲ. ಅವೈಜ್ಞಾನಿಕವಾಗಿ ಪಶ್ಚಿಮಘಟ್ಟಗಳಿಂದ ದೂರವಿರುವ ಗ್ರಾಮಗಳನ್ನು ಮರು ಸೇರ್ಪಡೆಯಾಗಲು ಯಾವ ಬೇಜಬ್ದಾರಿ ಕಾರಣವೋ ಗೊತ್ತಿಲ್ಲ. ಒಟ್ಟಾರೆಯಾಗಿ ಜನರಿಗೆ ತೊಂದರೆ ಆಗಬಾರದು ಎಂದರು. ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕತೆಯ ಬಗ್ಗೆ…
ಕುಂದಾಪುರ: ಸಮಾಜ ತಿದ್ದಲಿಕ್ಕೆ ಆಗದ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಬುದ್ದಿ ಹೇಳುವ ಕೆಲಸ ಮಾಡುತ್ತದೆ. ಸಮಾಜದ ಶಾಂತಿ ಕದಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಸಂಖ್ಯೆ ಇರುವುದು ಬೆರಳೆಣಿಕೆ ಮಾತ್ರ. ಅಂತಹ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕಾನೂನು ಕೈಗೆ ಒಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ತಾಲ್ಲೂಕಿನ ಬೆಳ್ವೆ ಗೋಳಿಯಂಗಡಿಯಲ್ಲಿ ನಡೆದ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಅಮಾನುಷವಾಗಿ ಹತ್ಯೆಯಾಗಿದ್ದ ಯುವತಿಯ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಕೊಲೆಯಾದ ಅಮಾಯಕ ಹುಡುಗಿ ನಮ್ಮ ಮನೆ ಮಗಳು ಎನ್ನುವ ಭಾವನೆ ನಮ್ಮಲ್ಲಿದೆ. ಸಾರ್ವಜನಿಕರ ಸಹಕಾರದಿಂದ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಯನ್ನು ಕಾನೂನು ತೆಕ್ಕೆಗೆ ಒಪ್ಪಿಸುವ ಕೆಲಸವನ್ನು ಇಲಾಖೆ ಮಾಡಿದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗೆ ಕಾನೂನು ವ್ಯಾಪ್ತಿಯ ಒಳಗೆ ಗರಿಷ್ಠ ಶಿಕ್ಷೆಯಾಗುವಂತೆ ಇಲಾಖೆ ಪ್ರಾಮಾಣಿಕ ಪ್ರಯತ್ನ…
