Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಗಂಗೊಳ್ಳಿ : ಹದಿವಯಸ್ಸಿನ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸುವ೦ತಹ ಅನೇಕ ಆಕರ್ಷಣೆಗಳು ಸುತ್ತಲಿನ ಸಮಾಜದಲ್ಲಿ ಇದ್ದೇ ಇರುತ್ತವೆ. ಆದರೆ ಅಂತಹ ಆಕರ್ಷಣೆಗಳ ನಡುವೆ ನಮ್ಮ ಬೆಳವಣಿಗೆಗೆ ಪೂರಕವಾದುದಷ್ಟನ್ನೇ ಆರಿಸಿಕೊಂಡು ಮುನ್ನಡೆಯುವುದರ ಕಡೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಗಮನ ನೀಡಬೇಕು. ಸಮಸ್ಯೆಗಳನ್ನು ದೊಡ್ಡವರೊಡನೆ ಹಂಚಿಕೊಳ್ಳುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಸಹಾಯಕ ಪೋಲಿಸ್ ಉಪನಿರ್ದೇಶಕ ವೆಂಕಟೇಶ್ ಅವರು ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಅಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸುರಕ್ಷತೆ ಮತ್ತು ಕಾನೂನು ಮಾಹಿತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ನಾಗರಾಜ ಅವರು ಮಾತನಾಡಿ ವಿದ್ಯಾರ್ಥಿಗಳು ಅವರ ಕಲಿಕೆಗೆ ಅಡ್ಡಿಯಾಗಿರುವ ಅನಗತ್ಯ ಮೊಬೈಲ್ ಸಹವಾಸದಿಂದ ದೂರವಿರಬೇಕು. ಮತ್ತು ಅಪರಿಚಿತರೊ೦ದಿಗೆ ವ್ಯವಹರಿಸುವಾಗ ಎಚ್ಚರದಿಂದಿರಬೇಕು ಎ೦ದು ಅಭಿಪ್ರಾಯಪಟ್ಟರು.ಆರಕ್ಷಕ ಠಾಣೆಯ ಸಿಬ್ಬ೦ದಿ ಚ೦ದ್ರಶೇಖರ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್…

Read More

ದೇಶಾಧ್ಯಂತ ಎದ್ದಿರುವ ಪ್ರಬಲ ವಿರೋಧದ ಕಾರಣಕ್ಕಾಗಿ “ಭೂಸ್ವಾದೀನ ತಿದ್ದುಪಡಿ ಮಸೂದೆ” ಯನ್ನು ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದಾರೆ. ತಿದ್ದುಪಡಿ ಮಸೂದೆಯನ್ನು ಹೀಗೆ ಹಿಂಪಡೆಯುವ ನಿರ್ಧಾರ ಪ್ರಕಟಿಸುವ ಮೂಲಕ ಸ್ವತಃ ಮೋದಿಯವರು ಈ ಮಸೂದೆಯು “ದೋಷಪೂರಿತ”ವಾಗಿತ್ತು ಎಂದು ಒಪ್ಪಿ ಕೊಂಡಂತಾಗಿದೆ. ಈ “ಭೂ ಸ್ವಾಧೀನ ತಿದ್ದುಪಡಿ ಮಸೂದೆ”ಯು ರೈತ ವಿರೋಧಿ ಅಂಶ ಗಳನ್ನೊಳಗೊಂಡಿವೆ, ಇದನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸತತವಾಗಿ ಒಂದು ವರ್ಷ ಕಾಲ ದೇಶಾದ್ಯಂತ ರೈತರ ಜೊತೆಗೂಡಿ ನಡೆಸಿದ್ದ ಪ್ರತಿಭಟನೆ ಕೊನೆಗೂ ಫಲ ಪಡೆದುಕೊಂಡಿದೆ. ಪ್ರಪಂಚದ ಅತ್ಯುತ್ಕೃಷ್ಟ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು ಎಂದೇ ಖ್ಯಾತರಾಗಿರುವ ಮನಮೋಹನ್ ಸಿಂಗ್ ರವರ ಯುಪಿಎ ಸರಕಾರ 2013 ರಲ್ಲಿ ಮಂಡಿಸಿದ್ದ ಭೂ ಸ್ವಾಧೀನ ಮಸೂದೆಯಲ್ಲಿ ಸ್ವಾಧೀನಕ್ಕೊಳಗಾಗುವ ಕೃಷಿ ಭೂಮಿಯ ಒಡೆತನ ಹೊಂದಿರುವ ಶೇಕಡಾ ಎಂಭತ್ತರಷ್ಟು ರೈತರ ಒಪ್ಪಿಗೆ ದೊರೆತರೆ ಮಾತ್ರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳಿಸುವ ಮತ್ತು ಭೂ ಸ್ವಾಧೀನಕ್ಕೊಳಗಾದ ಭೂಮಿಯನ್ನು ಐದು ವರ್ಷಗಳೊಳಗೆ ಉದ್ದೇಶಿತ ಯೋಜನೆಗೆ…

Read More

ಕುಂದಾಪುರ: ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 25ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಅರ್ಪಿಸಲು ಸಿದ್ಧವಾಗಿರುವ ರಜತ ಸಿಂಹಾಸನವನ್ನು ವೈಭವದ ಮೆರವಣಿಗೆಯ ಮೂಲಕ ಮಂಗಳವಾರ ಸಂಜೆ ಕುಂದಾಪುರದ ಖಾರ್ವಿಕೇರಿಗೆ ತರಲಾಯಿತು. ಕೋಟೇಶ್ವರದಿಂದ ಕುಂದಾಪುರದ ತನಕ ನಡೆದ ವಾಹನಗಳ ಮೆರವಣಿಗೆಯ ಮೂಲಕ ಈ ರಜತ ಸಿಂಹಾಸನವನ್ನು ತರಲಾಯಿತು. ಈ ಸಂದರ್ಭದಲ್ಲಿ ಈ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಖಾರ್ವಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ ಎಸ್.ಎಸ್. ಕಾರ್ಯದರ್ಶಿ ಅರುಣ್ ಖಾರ್ವಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಜರಿದ್ದರು.

Read More

ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ರಜತ ಮಹೋತ್ಸವ ಸೆ.17ರಿಂದ ಸೆ.21ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ, ಅದ್ದೂರಿಯ ಪುರಮೆರವಣಿಗೆ, ಜಲಸ್ಥಂಭನದ ವಿಶಿಷ್ಟತೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.17ರಂದು ರಜತೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ನಡೆಯಲಿದೆ. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ರಾತ್ರಿ ಗೋಳಿಗರಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸೆ.18ರಂದು ಭಜನಾ ಕಾರ್ಯಕ್ರಮ, ರಾತ್ರಿ 9ರಿಂದ ಗಾನ ನೃತ್ಯ ವೈಭವ ನಡೆಯಲಿದೆ. ಸೆ.19ರಂದು ಸಂಜೆ 5ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಮಂಜುನಾಥ ಸಭಾಭವನವನ್ನು ಉದ್ಘಾಟಿಸಿ, ಆಶೀರ್ವಚನ ನೀಡುವರು. ಸೆ.20ರಂದು ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ರಜತೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಸಮ್ಮಾನ…

Read More

ಬೈಂದೂರು: ಬೈಂದೂರು ಹಾಗೂ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಂಬೆ-ಶಿರೂರು ಭಾಗದ ಜನರಿಗೆ ಮಂಗಗಳ ಉಪಟಳ ಬಾರಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ತೆಂಗಿನ ಮರಗಳ ತೋಟಕ್ಕೆ ಲಗ್ಗೆ ಇಟ್ಟು ಎಗ್ಗಿಲ್ಲದೇ ಎಳನೀರು ಕುಡಿದು ಎಸೆಯುತಿರುವುದು ರೈತಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಅವರು ತೋಟಗಳಿಲ್ಲಿ ಬೆಳೆದ ಸಿಯಾಳವನ್ನು ಸಾಲು ಸಾಲಾಗಿ ಲಗ್ಗೆ ಇಟ್ಟು ತಿಂದು ಎಲ್ಲೆಂದರಲ್ಲಿ ಎಸೆಯುತ್ತಿರುವುದಲ್ಲದೇ, ಓಡಿಸಲು ಹೊದರೆ ಮನುಷ್ಯರಿಗೆ ಹೆದರಿಸುತ್ತಿವೆ. ದೊಂಬೆಯ ಕಾವೇರಿ ಎಂಬುವವರ ಮನೆಯ ತೋಟವೊಂದರಲ್ಲಿಯೇ 2 ತಿಂಗಳಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಎಳನೀರನ್ನು ಮಂಗಗಳು ಕುಡಿದು ಎಸೆದಿವೆ. ಮರದ ಕೆಳಗೆ ನಿಂತು ಓಡಿಸಲು ಹೋದರೆ ಮನೆಯವರನ್ನು ಗದರಿಸುವುದಲ್ಲದೇ ಹಲ್ಲೆಗೂ ಮುಂದಾಗುತ್ತವೆ. ಹೀಗಾಗಿ ಮಂಗಗಳು ತೆಂಗಿನ ಮರಗಳಿಗೆ ಲಗ್ಗೆ ಇಟ್ಟಾಗ ಮನೆಯಿಂದ ಹೊರಬಂದು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮನೆಯವರು ಹೆದರುತ್ತಿದ್ದಾರೆ. 2 ತಿಂಗಳಿನಿಂದಲೂ ಇಲ್ಲಿನ ಮನೆಗಳಿಗಳಲ್ಲಿ ಇದು ನಿರಂತರವಾಗಿ ಸಾಗಿದೆ. ಈಗ ತೆಂಗು ಬೆಳೆ ನಾಶಪಡಿಸುತ್ತಿರುವ ಮಂಗಗಳು ಗದ್ದೆಗಳಲ್ಲಿ ಪೈರು ಬೆಳೆದು ನಿಲ್ಲುತ್ತಿದ್ದಂತೆ…

Read More

ಗ೦ಗೊಳ್ಳಿ: ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ… ಹಾಗ೦ತ ಗ೦ಗೊಳ್ಳಿಯ ಬೀಚಿಗೆ ಹೋದ ಜನರು ಮೂಗು ಮುಚ್ಚಿಕೊ೦ಡು ಮಾತನಾಡುತ್ತಿದ್ದರೆ ಇಡೀ ಊರಿಗೆ ಊರೇ ತಲೆತಗ್ಗಿಸುವ೦ತಾಗುತ್ತದೆ. ಅದು ಮಾತನಾಡುತ್ತಿರುವವರ ತಪ್ಪಲ್ಲ. ಅಲ್ಲಿಯ ಪರಿಸ್ಥಿತಿಯೇ ಹಾಗಿರುವುದು ನಿಜ. ಗ೦ಗೊಳ್ಳಿಯ ಸಮುದ್ರ ತೀರದಾದ್ಯ೦ತ ಅಲ್ಲಲ್ಲಿ ತ್ಯಾಜ್ಯದ ರಾಶಿಗಳೇ ಕ೦ಡುಬರುತ್ತಿದ್ದು ಇಡೀ ಪರಿಸರ ದುರ್ನಾತ ಹೊಡೆಯುತ್ತಿದೆ. ಗ೦ಗೊಳ್ಳಿಯ ಚರ್ಚ್ ರಸ್ತೆಯಿ೦ದ  ಬೀಚಿನ ಪ್ರಮುಖ ಭಾಗವನ್ನು ಸ೦ಪರ್ಕಿಸುವ ರಸ್ತೆಯ ಕೊನೆಯಲ್ಲ೦ತೂ ತ್ಯಾಜ್ಯದ ಒ೦ದು ದೊಡ್ಡ ವಲಯವೇ ನಿರ್ಮಾಣವಾದ೦ತಿದ್ದು ಸಮುದ್ರ ತೀರಕ್ಕೆ ಆಗಮಿಸುವವರನ್ನು ಅತ್ಯ೦ತ ಕೆಟ್ಟ ರೀತಿಯಲ್ಲಿ ಸ್ವಾಗತ ಕೋರುತ್ತಿದೆ. ಅಪರೂಪಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ಈ ತ್ಯಾಜ್ಯವನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿರುವುದು ಯಾವ ಊರಿಗೂ ಶೋಭೆ ತರುವ೦ತದ್ದಲ್ಲ. ಇಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮಳೆಯ ನೀರಿನೊ೦ದಿಗೆ ಸೇರಿಕೊ೦ಡು ಕೊಳೆತು ನಾರುತ್ತಾ ಊರಿನಲ್ಲಿ ಸಾ೦ಕ್ರಾಮಿಕ ರೋಗದ ಭೀತಿಯನ್ನು ಹುಟ್ಟುಹಾಕಿದೆ. ದೊಡ್ಡ ಮಳೆಗೆ ಈ ತ್ಯಾಜ್ಯ ರಸ್ತೆಯ ಮೇಲೆ ಹರಿದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.ಪಕ್ಕದಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲೆಯ ಆಟದ ಬಯಲುಗಳಿದ್ದು ಈ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಾಂತ್ರಿಕ ವಿಭಾಗದಿಂದ  ಭಾರತ  ರತ್ನ ಸರ್ ಎಂ.ವಿ.  ವಿಶ್ವೇಶ್ವರಯ್ಯ ಇವರ 155 ನೇ ಜನ್ಮದಿನದಂದು  ಇಂಜಿನಿಯರ್ಸ್  ಡೇ ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ  ಹಾಗೂ ಅಧೀಕ್ಷಕ  ಕೆ. ರಾಮಕೃಷ್ಣ ಅಡಿಗ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದ ಅಭಿಯಂತರರಾದ  ಪ್ರದೀಪ್ ಡಿ.ಕೆ.  ಮಾತನಾಡಿ    ಸರ್ ಎಂ.ವಿ.  ವಿಶ್ವೇಶ್ವರಯ್ಯನವರು ನಡೆದು ಬಂದ ದಾರಿ ಅವರ ದೂರ ದೃಷ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಜೀವನದಲ್ಲಿ ಅಳವಡಿಸಿಕೊಂಡ ಪ್ರಾಮಾಣಿಕತೆ, ಸರಳತೆ ಶಿಸ್ತು, ದ್ಯೇಯ, ಉದ್ಧೇಶಹಾಗೂ ಸಮರ್ಪಣಾ ಮನೋಬಾವದ ಬಗ್ಗೆ ತಿಳಿಸುತ್ತಾ ಸರ್ ಎಂ.ವಿ. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸುವುದು  ಅಗತ್ಯವಾಗಿರುತ್ತದೆ ಎಂದರು. ಕಾರ್ಯಕ್ರಮವನ್ನು ದೇವಳದ ಕಿರಿಯ ಅಭಿಯಂತರರಾದ ಮುರಳಿಧರ ಹೆಗಡೆ ಇವರು ನಿರೂಪಿಸಿ ವಂದಿಸಿದರು. ಎ. ಗಂಗಾಧರ ಹೆಗ್ಡೆ ಇವರು ಪ್ರಾರ್ಥಿಸಿದರು.

Read More

ಕುಂದಾಪುರ: ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ವಿರೋಧಿ ಅಂಶಗಳು ಮೇಲ್ಗೈ ಸಾಧಿಸಿದ ಕಾರಣ ಅದು ಅರ್ಥ ಕಳೆದುಕೊಂಡಿದೆ. ಇಲ್ಲಿ ಜನತಂತ್ರ ಪದ್ಧತಿಯ ಬದಲಿಗೆ ಅಧಿಕಾರಶಾಹಿ ವಿಜೃಂಭಿಸುತ್ತಿದೆ. ಅದರಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ನೈಜ ಉದ್ದೇಶವಾದ ಗ್ರಾಮೀಣಾಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಪಂಚಾಯತ್ ರಾಜ್ ಒಕ್ಕೂಟ ಮತ್ತು ಜನಪ್ರತಿನಿಧಿಗಳು ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ ರಾಜ್ಯ ಪಂಚಾಯತ್ ರಾಜ್ ಕಾಯಿದೆಗೆ ಸಮಗ್ರ ತಿದ್ದುಪಡಿ ಸೂಚಿಸಲು ಶಾಸಕ, ಮಾಜಿ ಸ್ಪೀಕರ್ ರಮೇಶಕುಮಾರ್ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಸಮಿತಿ ಇದೀಗ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತುನೀಡುವ ಶಿಫಾರಸುಗಳನ್ನು ಮಾಡಿದೆ. ಅವುಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಸ್ವೀಕರಿಸಲಾಯಿತು. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ತಾಲೂಕಿನ ಎಲ್ಲ ಗ್ರಾಮ ಪಂಚಾಯತ್…

Read More

ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ  ಕಟ್ಟಡ ಗೊಂಬೆಮನೆಯಲ್ಲಿ  ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ ಜರುಗಿತು. ಈ ತಿಂಗಳ ಗೊಂಬೆ ಮನೆ ಅತಿಥಿಯಾಗಿ ಸದಾನಂದ ಸೇರುಗಾರ್ , ಉಪ್ಪಿನಕುದ್ರು ಭಾಗವಹಿಸಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ  ಭಾಸ್ಕರ್ ಕೊಗ್ಗ ಕಾಮತ್ ಅವರು ಕಾರ್ಯಕ್ರಮದ ಪ್ರಾಯೋಜಕ ಕರುಣಾಕರ ಪೈ, ಹೆಮ್ಮಾಡಿ, ನಿವೃತ್ತ ಹಿರಿಯ ಶಿಕ್ಷಕಿ ಸೆವರಿನ್ ಮೆಂಡೋನ್ಸಾ ಇವರನ್ನು ಶಿಕ್ಷಕ ದಿನಾಚರಣೆ  ಪ್ರಯುಕ್ತ ಸನ್ಮಾಸಿದರು. ಯು.ವಾಮನ್ಸೆಪ್ಟೆಂಬರ್: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಾರ್ಯಕ್ರಮ ಪೈ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ  ಶ್ರೀ ದುರ್ಗಾಪರಮೇಶ್ವರಿ ಬಾಲಕಿಯರ ಯಕ್ಷಗಾನ ತಂಡ, ಹೆಮ್ಮಾಡಿ ಇವರಿಂದ ಮಧುರ ಮಹೇಂದ್ರ ಯಕ್ಷಗಾನ ಬಯಲಾಟ ಕಿಕ್ಕಿರಿದು ಸೇರಿದ ಪ್ರೇಕ್ಷಕರನ್ನು  ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿದ್ದರು.

Read More

ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿ ಕುಂದಾಪುರ:  ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ವತಿಯಿಂದ, ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕುಂದಾಪುರ ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಥ್ರೋಬಾಲ್ ಟೂರ್ನಿಯನ್ನು ಆರ್. ಬಿ ನಾಯಕ್ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ದೈಹಿಕ ಉಪ ನಿರ್ದೇಶಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ಭಾಷಣ ಮಾಡಿಗರು. ಉದ್ಘಾಟಕರಾದ ಆರ್,ಬಿ. ನಾಯಕ್ ಇಂತಹ  ಟೂರ್ನಿಯನ್ನು ಕೆಳಹಂತದಿಂದ ಹಿಡಿದು ಮೇಲ್ಪಟ್ಟದ ವರೆಗೆ ಅನೇಕ ಕಡೆ ಆಯೋಜಿಸ ಬೇಕಾಗುತ್ತದೆ, ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂತಹ ಒಂದು ಟೂರ್ನಿ ಆಯೋಜಿಸಿದೆ, ಈ ಕಾಲೇಜು ಆಟದಲ್ಲದೆ ಶಿಕ್ಷಣದಲ್ಲಿ ಮುಂದೆ ಇದ್ದು, ಈ ಸಾಲಿನಲ್ಲಿ…

Read More