“ಅಬ್ಬಾ.. ಈ ತಿಂಗಳ್ ಒಂದ್ extra ರಜೆ ಸಿಕ್ಕತ್ತ್…” ಜುಲೈ ತಿಂಗಳು ಮುಗಿದ ಕೂಡ್ಲೆ ನೆನಪಾಪುದೆ ಅದೇ. ಈಗೀಗ ಆಫೀಸಿನ ಅದೇ routine ಕೆಲಸ ಮಾಡಿ ಮಾಡಿ ಬೇಜಾರ್ ಆದ ಕೂಡ್ಲೆ calendarಗೆ ಈ ತಿಂಗಳು ಎಲ್ಲಿ extra ಕೆಂಪು number ಇತ್ತ್ ಅಂದೇಳಿ ಕಾಂಬುಕೆ ಶುರು ಮಾಡ್ದಾಗಳಿಕೆಲ್ಲಾ, ಆಗಸ್ಟ್ ತಿಂಗಳ 15 ನೇ ತಾರೀಕು ಏಗಳಿಕೂ ಕೆಂಪಲ್ಲೆ ಇರತ್ತ್. ನಮ್ಮ ಸೌಭಾಗ್ಯ ಒಂದ್ ದಿನ like ಮಾಡಿ 11 ಗಂಟಿ ವರಿಗೆ ನಿದ್ರೆ ಮಾಡ್ಲಕಲಾ ಅಂದೇಳಿ. ಆದ್ರೂ ಆಗಸ್ಟ್ ತಿಂಗಳು ಬಂದ ಕೂಡ್ಲೆ ನೆನಪಾಪುದೆ primary ಶಾಲಿಯ ಆ ದಿನಗಳು. ಉಳ್ತೂರು ಶಾಲೆಯಲ್ಲಿ ವಿಜ್ರಂಭಣೆಯಿಂದ ಮಾಡುತಿದ್ದ ಸ್ವಾತಂತ್ರ್ಯೋತ್ಸವ. ಪ್ರತಿ ವಿಧ್ಯಾರ್ಥಿಗಳಿಗೆ ದೇಶ ಪ್ರೇಮದ ಕಿಚ್ಚನ್ನ ಪುಟಿದೆಳಿಸುವಂತೆ ಮಾಡುವ ಸ್ವಾತಂತ್ರ್ಯದ ಸ್ವತಂತ್ರ ದಿನಗಳು. ಮಕ್ಕಳಿಗೆ ವಿಧ್ಯಾರ್ಥಿಗಳಾಗಿ ಇಪ್ಪುವತಿಗೆ ಅವರಿಗೆ ದೇಶದ ಬಗ್ಗೆ, ದೇಶದ ವಿಶಿಷ್ಟತೆಯ ಬಗ್ಗೆ ಅಚ್ಚುಕಟ್ಟಾಗಿ ಹೇಳಿಕೊಡ್ತಿದ್ದ ಆ ದಿನಗಳು. ಆಗಳಿಕೆ ಆಗಸ್ಟ್ 15 ಕ್ಕೆ ಒಂದು ತಿಂಗಳು ಇಪ್ಪತಿಗೆ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ತಾಲೂಕಿನ ವಕ್ವಾಡಿ ಗ್ರಾಮದ ಗೊಳಿಕಟ್ಟೆ ನಿವಾಸಿ ಗೋವಿಂದ ಪೂಜಾರಿ ಹಾಗೂ ದೇವಕಿ ದಂಪತಿಗಳ ಮಗ ಚಂದ್ರ ಪೂಜಾರಿ ಎಂಬುವರು ಮೇದೋಜಿರಕ ಗೃಂಥಿಯ ಊತ ಹಾಗೂ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ ಸೇರಿದಂತೆ ತುರ್ತುಚಿಕಿತ್ಸೆಯ ಅಗತ್ಯವಿದೆ. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಇವರ ಚಿಕಿತ್ಸೆಗೆ ಸುಮಾರು 1.5 ಲಕ್ಷ ರೂಪಾಯಿ ಬೇಕಾಗಿದ್ದು, ಆರ್ಥಿಕವಾಗಿ ಕಡುಬಡವರಾದ ಇವರು ದಾನಿಗಳ ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ಇವರಿಗೆ ಸಹಾಯ ಮಾಡಲಿಚ್ಚಿಸುವ ದಾನಿಗಳು ಸಿಂಡಿಕೇಟ್ ಬ್ಯಾಂಕ್ ಕೋಟೇಶ್ವರ ಶಾಖೆಯ ಖಾತೆ ಸಂಖ್ಯೆ 01492210039370 ಕ್ಕೆ ಹಣ ಪಾವತಿಸಿ ಇವರ ಚಿಕಿತ್ಸೆಗೆ ನೆರವಾಗಬಹುದು.
ಕುಂದಾಪುರ: ತೆಕ್ಕಟ್ಟೆ ಫ್ರೆಂಡ್ಸ್ 200 ಸದಸ್ಯ ಬಲದೊಂದಿದೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಮಾಜಮುಖಿ ಕಾರ್ಯಗಳನ್ನು ಶೃದ್ದೆಯಿಂದ ಮಾಡಿಕೊಂಡು ಬರುತ್ತಿದ್ದು, ಕಳೆದ 5 ವರ್ಷಗಳಿಂದ ಉಚಿತ ಅಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ತನಕ 700ಕ್ಕೂ ಹೆಚ್ಚು ಜೀವಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ ತೃಪ್ತಿ ಸಂಸ್ಥೆಗಿದೆ. ಈ ಉಚಿತ ಅಂಬುಲೆನ್ಸ್ ನಿರ್ವಹಣೆಯಾಗಿ ಆ.15ರಂದು ಸಂಜೆ 6 ಗಂಟೆಯಿಂದ ತೆಕ್ಕಟ್ಟೆ ಕಾಲೇಜು ವಠಾರದಲ್ಲಿ ತೆಂಕುತಿಟ್ಟು ಯಕ್ಷಗಾನ ’ಅಕ್ಷಯಾಂಬರ-ಗದಾಯುದ್ಧ’ವನ್ನು ಆಯೋಜಿಸಲಾಗಿದೆ ಎಂದು ತೆಕ್ಕಟ್ಟೆ ಫ್ರೆಂಡ್ಸ್ ಸಂಚಾಲಕ ಪ್ರಕಾಶ್ ಶೆಟ್ಟಿ ತಿಳಿಸಿದರು. ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ವಿಶೇಷ ಆಚರಣೆಗಾಗಿ ಯಕ್ಷ ಹೊನಲು-2015 ನಡೆಯಲಿದ್ದು, ಉಚಿತ ಅಂಬುಲೆನ್ಸ್ ನಿರ್ವಹಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಕ್ಷಗಾನ ಸ್ಟಾರ್ ಭಾಗವತರೆಂದೇ ಗುರುತಿಸಲ್ಪಟ್ಟ ಪಟ್ಲ ಸತೀಶ್ ಶೆಟ್ಟಿ ಓರ್ವ ಕಲಾವಿದರಾಗಿ, ಕಲೆಯ ಮೂಲಕ ತೆಕ್ಕಟ್ಟೆ ಫ್ರೆಂಡ್ಸ್‌ನ ಸಮಾಜ ಸೇವೆಯ ಕೈಂಕರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಆ ಮೂಲಕ ಯಕ್ಷ ಹೊನಲಿಯಲ್ಲಿ ಅವರ ರಸಧಾರೆ ಪ್ರೇಕ್ಷಕರನ್ನು ರಂಜಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ತೆಂಕಿನ ಖಾತಿವೆತ್ತ ಕಲಾವಿದರು ಭಾಗವಹಿಸಲಿದ್ದಾರೆ. ಪಟ್ಲರ…
ಕುಂದಾಪುರ: ತಾಲೂಕಿನ ಉಪ್ಪುಂದಂದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮೃತಪಟ್ಟ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ. ರೇಮಂಡ್ ನಜ್ರತ್ ಮೃತ ದುರ್ದೈವಿ. ಘಟನೆಯ ವಿವರ: ರೇಮಂಡ್ ನಜ್ರತ್ ಉಪ್ಪುಂದದ ತನ್ನ ಮನೆಯಿಂದ ಬೈಂದೂರಿನ ನಿತ್ಯಾನಂದ ನಗರಕ್ಕೆ ಕೆಲಸದ ನಿಮಿತ್ತ ತನ್ನ ಬೈಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಸಾಗುತ್ತಿದ್ದ ವೇಳೆಗೆ ಹಿಂಬದಿಯಿಂದ ಬಂದ ಅಪರಿಚಿತ ಲಾರಿಯೊಂದು ಬೈಂದೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎದುರು ಬೆಳಿಗ್ಗೆ 3:30ರ ವೇಳೆಗೆ ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ರೇಮಂಡ್ ನಜ್ರತ್ ರಸ್ತೆಗೆ ಬಿದ್ದುದರಿಂದ ಅವರ ತಲೆಗೆ ತೀವ್ರ ಗಾಯಗಳಾಗಿತ್ತು. ಆಪಘಾತವಾದ ಬಳಿಕ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಗ್ಗಿನ ಸಮಯವಾದ್ದರಿಂದ ಆ ಮಾರ್ಗದಲ್ಲಿ ಯಾರೂ ಕೂಡ ಸಂಚರಿಸುತ್ತಿರಲಿಲ್ಲವಾದ್ದರಿಂದ ಬಹಳ ಹೊತ್ತಿನ ತನಕ ಅವರು ರಸ್ತೆಯ ಬದಿಗೆ ಬಿದ್ದಿದ್ದರೆಲ್ಲನಾಗಿದೆ. ತಡವಾಗಿ ಬಂದ…
ಕುಂದಾಪುರ: ಭಾರತೀಯ ಜೇಸಿಐನ ಪೂರ್ವ ನಿರ್ದೇಶಕ, ಗೆಲಾಕ್ಸಿ ಸ್ಫೂರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ನಾವಡ ಅವರು ಇಟಲಿಯ ಮಿಲನ್‌ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕುಂದಾಪುರ, ಉಡುಪಿ, ಮಣಿಪಾಲ, ಭಟ್ಕಳ, ಮಂಗಳೂರಿನಲ್ಲಿ ಗೆಲಾಕ್ಸಿ ಸ್ಫೂರ್ಟ್ಸ್ ಕಂಪನಿಯ ಮೂಲಕ ಕ್ರೀಡೋಪಕರಣಗಳ ಬೃಹತ್ ಮಳಿಗೆಗಳನ್ನು ನಡೆಸುತ್ತಿರುವ ಸದಾನಂದ ನಾವಡ ಅವರು ಜಾಗತಿಕ ವ್ಯವಹಾರ ಸಮ್ಮೇಳನದಲ್ಲಿ ಭಾಗವಿಸುತ್ತಿದ್ದು, ವ್ಯವಹಾರ ಉದ್ಯಮದ ಅಧ್ಯಯನದ ದೃಷ್ಠಿಯಿಂದ ಇದೇ ಮೊದಲ ಬಾರಿಗೆ ಜರ್ಮನಿ, ಫ್ರಾನ್ಸ್, ರೋಮ್, ಸ್ವಿಜರ್‌ಲ್ಯಾಂಡ್, ಇಟಲಿ, ಡೆನ್ಮಾರ್ಕ್, ಆಸ್ಟ್ರೀಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಕುಂದಾಪುರ: ಕರ್ನಾಟಕ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಆಶ್ರಯದಲ್ಲಿ ಎಸಿಸಿಪಿಎಲ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ 2015-16ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಯೋಜನೆಯಡಿ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ. ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳ ತರಬೇತಿಗೆ ಅಧ್ಯಾಯನ ಸಾಮಗ್ರಿಗಳನ್ನು ನಿರ್ದೇಶನಾಲಯದಿಂದ ಸರಬರಾಜು ಮಾಡಲಾಗುವುದು. ಉಚಿತ ಸಿಇಟಿ ತರಬೇತಿ ನೀಡುವ ಕೇಂದ್ರಗಳು ಉಡುಪಿ ಜಿಲ್ಲೆಯಲ್ಲಿ ಆರ್.ಎನ್.ಶೆಟ್ಟಿ ಕಾಲೇಜು ಕುಂದಾಪುರ, ಪೂರ್ಣಪ್ರಜ್ಞ ಪಿ.ಯು. ಕಾಲೇಜು ಉಡುಪಿ, ಭುವನೇಂದ್ರ ಪಿ.ಯು. ಕಾಲೇಜು ಕಾರ್ಕಳ, ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜು, ಮಂಗಳೂರು, ಸೈಂಟ್ ಆಗ್ನೇಸ್ ಪಿ.ಯು. ಕಾಲೇಜು ಮಂಗಳೂರು, ಸೈಂಟ್ ಫಿಲೋಮಿನಾ ಪಿ.ಯು. ಕಾಲೇಜು ಪುತ್ತೂರು, ಕಾರ್ಮೆಲ್ ಪಿ.ಯು. ಕಾಲೇಜು ಮೂಡನ್ಕಾಪ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈಂಟ್ ಜೋಸೆಪ್ ಪಿ.ಯು. ಕಾಲೇಜು ಕಾರವಾರ, ಅಕ್ಷಯ ಕೋಚಿಂಗ್ ಕ್ಲಾಸಸ್ ಕುಮಟಾ ಮತ್ತು ಭಟ್ಕಳಗಳಲ್ಲಿ ತರಬೇತಿ ನೀಡಲಾಗುತ್ತದೆ. ಆಸಕ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳು…
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್ ಗಂಗೊಳ್ಳಿ ಮತ್ತು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ಪೋಟ್ಸ್ ಕ್ಲಬ್‌ನ 40ರ ಸಂಭ್ರಮಾಚರಣೆಯ ಪ್ರಯುಕ್ತ ಜರಗಿದ ರಾಜ್ಯ ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಂಗಳೂರಿನ ಅಮಿತ್ ಮತ್ತು ಪ್ರವೀಣ್ ಜೋಡಿಯು ಪ್ರಥಮ ಸ್ಥಾನ ಪಡೆದು ಪ್ರತಿಷ್ಠಿತ ಎಸ್.ಆರ್.ಎಸ್.ಸಿ. ಟ್ರೋಫಿ-೨೦೧೫ ಮತ್ತು ನಗದನ್ನು ತನ್ನದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಸುನೀಲ್ ಗ್ಲಾಡ್ಸನ್ ಮತ್ತು ವೈಭವ್ ಜೋಡಿಯು ರನ್ನರ‍್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿಮಲೇಶ್ ಮತ್ತು ಅಖಿಲ್ ಜೋಡಿಯು ತೃತೀಯ ಮತ್ತು ಚೇತನ್ ಮತ್ತು ದರ್ಶನ್ ಜೋಡಿಯು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್.ಗಣೇಶ ಕಾಮತ್ ಮತ್ತು ಮುಖ್ಯ ಅತಿಥಿ ಪಿ. ಜನಾರ್ದನ ಪೂಜಾರಿ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಆಟಗಾರರ ಪರವಾಗಿ…
ಗಂಗೊಳ್ಳಿ: ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಬೇಕೆನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದರಿಂದ ಶಿಕ್ಷಣ ಕ್ಷೇತ್ರ ಕ್ರಾಂತಿಕಾರಕ ಬೆಳವಣಿಗೆ ಕಂಡಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಮಕ್ಕಳಿಗೆ ಮಧ್ಯಾಹ್ನದೂಟದ ವ್ಯವಸ್ಥೆ, ಕಬ್ಬಿಣದ ಅಂಶದ ಮಾತ್ರೆಗಳ ವಿತರಣೆ ಮಾಡಲಾಗುತ್ತಿದ್ದು, ವಾರಕ್ಕೆ ಮೂರು ದಿನ ವಿತರಣೆ ಮಾಡಲಾಗುತ್ತಿದ್ದ ಹಾಲನ್ನು ವಾರಕ್ಕೆ ಐದು ದಿನ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಸ್.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಇಂಟರ್‌ಲಾಕ್ ಅಳವಡಿಕೆಗೆ ಸುಮಾರು ೩.೫ ಲಕ್ಷ ರೂ. ಮಂಜೂರಾಗಿದ್ದು, ಕಾಲೇಜು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಿನ ಕ್ರಿಯಾಯೋಜನೆಯಲ್ಲಿ ಅಗತ್ಯ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು. ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ…
ಕುಂದಾಪುರ: ಗಂಗೊಳ್ಳಿ ಬಂದರಿನ ಮೂಲಕ ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ಗಂಗೊಳ್ಳಿ ಸಮೀಪ ಸಮುದ್ರದಲ್ಲಿ ದುರಂತಕ್ಕೀಡಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗಂಗೊಳ್ಳಿಯ ರಾಘವೇಂದ್ರ ಖಾರ್ವಿ ಮಾಲಕತ್ವದ ಶ್ರೀ ಮಂಜುನಾಥೇಶ್ವರ ಹೆಸರಿನ ಮೀನುಗಾರಿಕೆಯ ಬೋಟು ಇಂದು ಬೆಳಿಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬಂದರಿನಿಂದ ಕೆಲವೇ ದೂರದಲ್ಲಿ ಸಮುದ್ರದಲ್ಲಿ ತೆರಳುತ್ತಿದ್ದ ಸಂದರ್ಭ ಭಾರಿ ಗಾತ್ರದ ಅಲೆಯೊಂದು ಬೋಟಿಗೆ ಅಪ್ಪಳಿಸಿದ ಪರಿಣಾಮ ಬೋಟು ಮಗುಚಿ ಬಿದ್ದಿತು ಎನ್ನಲಾಗಿದೆ. ಇದೇ ಸಂದರ್ಭ ಸಮೀಪದಲ್ಲಿ ಸಾಗುತ್ತಿದ್ದ ಸುಮಾರು ನಾಲ್ಕೈದು ಬೋಟಿನ ಮೀನುಗಾರರು ಮಗುಚಿ ಬಿದ್ದ ಬೋಟಿನಲ್ಲಿದ್ದ ಪಾಂಡು ಗಂಗೊಳ್ಳಿ, ಪ್ರಭಾಕರ ಗಂಗೊಳ್ಳಿ, ಈಶ್ವರ ಉಪ್ಪುಂದ ಹಾಗೂ ಮಂಜುನಾಥ ಕೊರವಡಿ ಎಂಬುವರನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮೀನುಗಾರರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಬೋಟು ಸಮುದ್ರದಲ್ಲಿ ಮುಳುಗಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಲೆ ಮತ್ತಿತರ ಸಲಕರಣೆಗಳು ಸಮುದ್ರ ಪಾಲಾಗಿದೆ. ಅಪಘಾತದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನೆಯ…
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಮೂರುವರೆ ಲಕ್ಷ ರೂ. ವೆಚ್ಚದ ಹೈ-ಮಾಸ್ಟ್ ವಿದ್ಯುತ್ ದೀಪಸ್ಥಂಭವನ್ನು ಸೋಮವಾರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಲೋಕಾರ್ಪಣೆಗೊಳಿಸಿದರು. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಉಪ ಮಹಾಪ್ರಬಂಧಕ ಜಿ.ವಿ.ಪ್ರಭು, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ಸತೀಶ್ ಬೀಡು, ಅಧಿಕಾರಿ ಗಿರೀಶ್ ಭಂಡಾರಿ, ಸಿಬ್ಬಂದಿ ಈಶ್ವರ್ ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
