ಕುಂದಾಪುರ: ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 25ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಅರ್ಪಿಸಲು ಸಿದ್ಧವಾಗಿರುವ ರಜತ ಸಿಂಹಾಸನವನ್ನು ವೈಭವದ ಮೆರವಣಿಗೆಯ ಮೂಲಕ ಮಂಗಳವಾರ ಸಂಜೆ ಕುಂದಾಪುರದ ಖಾರ್ವಿಕೇರಿಗೆ ತರಲಾಯಿತು. ಕೋಟೇಶ್ವರದಿಂದ ಕುಂದಾಪುರದ ತನಕ ನಡೆದ ವಾಹನಗಳ ಮೆರವಣಿಗೆಯ ಮೂಲಕ ಈ ರಜತ ಸಿಂಹಾಸನವನ್ನು ತರಲಾಯಿತು. ಈ ಸಂದರ್ಭದಲ್ಲಿ ಈ ಸಾಲಿನ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್ ಖಾರ್ವಿ, ಉಪಾಧ್ಯಕ್ಷ ಸಂದೀಪ್ ಖಾರ್ವಿ ಎಸ್.ಎಸ್. ಕಾರ್ಯದರ್ಶಿ ಅರುಣ್ ಖಾರ್ವಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಜರಿದ್ದರು.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇಲ್ಲಿನ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ರಜತ ಮಹೋತ್ಸವ ಸೆ.17ರಿಂದ ಸೆ.21ರ ತನಕ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ, ಅದ್ದೂರಿಯ ಪುರಮೆರವಣಿಗೆ, ಜಲಸ್ಥಂಭನದ ವಿಶಿಷ್ಟತೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.17ರಂದು ರಜತೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ನಡೆಯಲಿದೆ. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ರಾತ್ರಿ ಗೋಳಿಗರಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಸೆ.18ರಂದು ಭಜನಾ ಕಾರ್ಯಕ್ರಮ, ರಾತ್ರಿ 9ರಿಂದ ಗಾನ ನೃತ್ಯ ವೈಭವ ನಡೆಯಲಿದೆ. ಸೆ.19ರಂದು ಸಂಜೆ 5ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಆಗಮಿಸಲಿದ್ದು, ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಮಂಜುನಾಥ ಸಭಾಭವನವನ್ನು ಉದ್ಘಾಟಿಸಿ, ಆಶೀರ್ವಚನ ನೀಡುವರು. ಸೆ.20ರಂದು ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ರಜತೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯಲಿದ್ದು, ಸಮ್ಮಾನ…
ಬೈಂದೂರು: ಬೈಂದೂರು ಹಾಗೂ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಂಬೆ-ಶಿರೂರು ಭಾಗದ ಜನರಿಗೆ ಮಂಗಗಳ ಉಪಟಳ ಬಾರಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ತೆಂಗಿನ ಮರಗಳ ತೋಟಕ್ಕೆ ಲಗ್ಗೆ ಇಟ್ಟು ಎಗ್ಗಿಲ್ಲದೇ ಎಳನೀರು ಕುಡಿದು ಎಸೆಯುತಿರುವುದು ರೈತಜನರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಅವರು ತೋಟಗಳಿಲ್ಲಿ ಬೆಳೆದ ಸಿಯಾಳವನ್ನು ಸಾಲು ಸಾಲಾಗಿ ಲಗ್ಗೆ ಇಟ್ಟು ತಿಂದು ಎಲ್ಲೆಂದರಲ್ಲಿ ಎಸೆಯುತ್ತಿರುವುದಲ್ಲದೇ, ಓಡಿಸಲು ಹೊದರೆ ಮನುಷ್ಯರಿಗೆ ಹೆದರಿಸುತ್ತಿವೆ. ದೊಂಬೆಯ ಕಾವೇರಿ ಎಂಬುವವರ ಮನೆಯ ತೋಟವೊಂದರಲ್ಲಿಯೇ 2 ತಿಂಗಳಿನಲ್ಲಿ ಸುಮಾರು 1,000ಕ್ಕೂ ಹೆಚ್ಚು ಎಳನೀರನ್ನು ಮಂಗಗಳು ಕುಡಿದು ಎಸೆದಿವೆ. ಮರದ ಕೆಳಗೆ ನಿಂತು ಓಡಿಸಲು ಹೋದರೆ ಮನೆಯವರನ್ನು ಗದರಿಸುವುದಲ್ಲದೇ ಹಲ್ಲೆಗೂ ಮುಂದಾಗುತ್ತವೆ. ಹೀಗಾಗಿ ಮಂಗಗಳು ತೆಂಗಿನ ಮರಗಳಿಗೆ ಲಗ್ಗೆ ಇಟ್ಟಾಗ ಮನೆಯಿಂದ ಹೊರಬಂದು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮನೆಯವರು ಹೆದರುತ್ತಿದ್ದಾರೆ. 2 ತಿಂಗಳಿನಿಂದಲೂ ಇಲ್ಲಿನ ಮನೆಗಳಿಗಳಲ್ಲಿ ಇದು ನಿರಂತರವಾಗಿ ಸಾಗಿದೆ. ಈಗ ತೆಂಗು ಬೆಳೆ ನಾಶಪಡಿಸುತ್ತಿರುವ ಮಂಗಗಳು ಗದ್ದೆಗಳಲ್ಲಿ ಪೈರು ಬೆಳೆದು ನಿಲ್ಲುತ್ತಿದ್ದಂತೆ…
ಗ೦ಗೊಳ್ಳಿ: ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ… ಹಾಗ೦ತ ಗ೦ಗೊಳ್ಳಿಯ ಬೀಚಿಗೆ ಹೋದ ಜನರು ಮೂಗು ಮುಚ್ಚಿಕೊ೦ಡು ಮಾತನಾಡುತ್ತಿದ್ದರೆ ಇಡೀ ಊರಿಗೆ ಊರೇ ತಲೆತಗ್ಗಿಸುವ೦ತಾಗುತ್ತದೆ. ಅದು ಮಾತನಾಡುತ್ತಿರುವವರ ತಪ್ಪಲ್ಲ. ಅಲ್ಲಿಯ ಪರಿಸ್ಥಿತಿಯೇ ಹಾಗಿರುವುದು ನಿಜ. ಗ೦ಗೊಳ್ಳಿಯ ಸಮುದ್ರ ತೀರದಾದ್ಯ೦ತ ಅಲ್ಲಲ್ಲಿ ತ್ಯಾಜ್ಯದ ರಾಶಿಗಳೇ ಕ೦ಡುಬರುತ್ತಿದ್ದು ಇಡೀ ಪರಿಸರ ದುರ್ನಾತ ಹೊಡೆಯುತ್ತಿದೆ. ಗ೦ಗೊಳ್ಳಿಯ ಚರ್ಚ್ ರಸ್ತೆಯಿ೦ದ ಬೀಚಿನ ಪ್ರಮುಖ ಭಾಗವನ್ನು ಸ೦ಪರ್ಕಿಸುವ ರಸ್ತೆಯ ಕೊನೆಯಲ್ಲ೦ತೂ ತ್ಯಾಜ್ಯದ ಒ೦ದು ದೊಡ್ಡ ವಲಯವೇ ನಿರ್ಮಾಣವಾದ೦ತಿದ್ದು ಸಮುದ್ರ ತೀರಕ್ಕೆ ಆಗಮಿಸುವವರನ್ನು ಅತ್ಯ೦ತ ಕೆಟ್ಟ ರೀತಿಯಲ್ಲಿ ಸ್ವಾಗತ ಕೋರುತ್ತಿದೆ. ಅಪರೂಪಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ಈ ತ್ಯಾಜ್ಯವನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿರುವುದು ಯಾವ ಊರಿಗೂ ಶೋಭೆ ತರುವ೦ತದ್ದಲ್ಲ. ಇಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮಳೆಯ ನೀರಿನೊ೦ದಿಗೆ ಸೇರಿಕೊ೦ಡು ಕೊಳೆತು ನಾರುತ್ತಾ ಊರಿನಲ್ಲಿ ಸಾ೦ಕ್ರಾಮಿಕ ರೋಗದ ಭೀತಿಯನ್ನು ಹುಟ್ಟುಹಾಕಿದೆ. ದೊಡ್ಡ ಮಳೆಗೆ ಈ ತ್ಯಾಜ್ಯ ರಸ್ತೆಯ ಮೇಲೆ ಹರಿದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.ಪಕ್ಕದಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲೆಯ ಆಟದ ಬಯಲುಗಳಿದ್ದು ಈ…
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಾಂತ್ರಿಕ ವಿಭಾಗದಿಂದ ಭಾರತ ರತ್ನ ಸರ್ ಎಂ.ವಿ. ವಿಶ್ವೇಶ್ವರಯ್ಯ ಇವರ 155 ನೇ ಜನ್ಮದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ ಹಾಗೂ ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದ ಅಭಿಯಂತರರಾದ ಪ್ರದೀಪ್ ಡಿ.ಕೆ. ಮಾತನಾಡಿ ಸರ್ ಎಂ.ವಿ. ವಿಶ್ವೇಶ್ವರಯ್ಯನವರು ನಡೆದು ಬಂದ ದಾರಿ ಅವರ ದೂರ ದೃಷ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಜೀವನದಲ್ಲಿ ಅಳವಡಿಸಿಕೊಂಡ ಪ್ರಾಮಾಣಿಕತೆ, ಸರಳತೆ ಶಿಸ್ತು, ದ್ಯೇಯ, ಉದ್ಧೇಶಹಾಗೂ ಸಮರ್ಪಣಾ ಮನೋಬಾವದ ಬಗ್ಗೆ ತಿಳಿಸುತ್ತಾ ಸರ್ ಎಂ.ವಿ. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸುವುದು ಅಗತ್ಯವಾಗಿರುತ್ತದೆ ಎಂದರು. ಕಾರ್ಯಕ್ರಮವನ್ನು ದೇವಳದ ಕಿರಿಯ ಅಭಿಯಂತರರಾದ ಮುರಳಿಧರ ಹೆಗಡೆ ಇವರು ನಿರೂಪಿಸಿ ವಂದಿಸಿದರು. ಎ. ಗಂಗಾಧರ ಹೆಗ್ಡೆ ಇವರು ಪ್ರಾರ್ಥಿಸಿದರು.
ಕುಂದಾಪುರ: ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ವಿರೋಧಿ ಅಂಶಗಳು ಮೇಲ್ಗೈ ಸಾಧಿಸಿದ ಕಾರಣ ಅದು ಅರ್ಥ ಕಳೆದುಕೊಂಡಿದೆ. ಇಲ್ಲಿ ಜನತಂತ್ರ ಪದ್ಧತಿಯ ಬದಲಿಗೆ ಅಧಿಕಾರಶಾಹಿ ವಿಜೃಂಭಿಸುತ್ತಿದೆ. ಅದರಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ನೈಜ ಉದ್ದೇಶವಾದ ಗ್ರಾಮೀಣಾಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಪಂಚಾಯತ್ ರಾಜ್ ಒಕ್ಕೂಟ ಮತ್ತು ಜನಪ್ರತಿನಿಧಿಗಳು ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ ರಾಜ್ಯ ಪಂಚಾಯತ್ ರಾಜ್ ಕಾಯಿದೆಗೆ ಸಮಗ್ರ ತಿದ್ದುಪಡಿ ಸೂಚಿಸಲು ಶಾಸಕ, ಮಾಜಿ ಸ್ಪೀಕರ್ ರಮೇಶಕುಮಾರ್ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಸಮಿತಿ ಇದೀಗ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತುನೀಡುವ ಶಿಫಾರಸುಗಳನ್ನು ಮಾಡಿದೆ. ಅವುಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಸ್ವೀಕರಿಸಲಾಯಿತು. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ತಾಲೂಕಿನ ಎಲ್ಲ ಗ್ರಾಮ ಪಂಚಾಯತ್…
ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ ಜರುಗಿತು. ಈ ತಿಂಗಳ ಗೊಂಬೆ ಮನೆ ಅತಿಥಿಯಾಗಿ ಸದಾನಂದ ಸೇರುಗಾರ್ , ಉಪ್ಪಿನಕುದ್ರು ಭಾಗವಹಿಸಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಕಾರ್ಯಕ್ರಮದ ಪ್ರಾಯೋಜಕ ಕರುಣಾಕರ ಪೈ, ಹೆಮ್ಮಾಡಿ, ನಿವೃತ್ತ ಹಿರಿಯ ಶಿಕ್ಷಕಿ ಸೆವರಿನ್ ಮೆಂಡೋನ್ಸಾ ಇವರನ್ನು ಶಿಕ್ಷಕ ದಿನಾಚರಣೆ ಪ್ರಯುಕ್ತ ಸನ್ಮಾಸಿದರು. ಯು.ವಾಮನ್ಸೆಪ್ಟೆಂಬರ್: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಾರ್ಯಕ್ರಮ ಪೈ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಾಲಕಿಯರ ಯಕ್ಷಗಾನ ತಂಡ, ಹೆಮ್ಮಾಡಿ ಇವರಿಂದ ಮಧುರ ಮಹೇಂದ್ರ ಯಕ್ಷಗಾನ ಬಯಲಾಟ ಕಿಕ್ಕಿರಿದು ಸೇರಿದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿದ್ದರು.
ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿ ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ವತಿಯಿಂದ, ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕುಂದಾಪುರ ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಥ್ರೋಬಾಲ್ ಟೂರ್ನಿಯನ್ನು ಆರ್. ಬಿ ನಾಯಕ್ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ದೈಹಿಕ ಉಪ ನಿರ್ದೇಶಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ಭಾಷಣ ಮಾಡಿಗರು. ಉದ್ಘಾಟಕರಾದ ಆರ್,ಬಿ. ನಾಯಕ್ ಇಂತಹ ಟೂರ್ನಿಯನ್ನು ಕೆಳಹಂತದಿಂದ ಹಿಡಿದು ಮೇಲ್ಪಟ್ಟದ ವರೆಗೆ ಅನೇಕ ಕಡೆ ಆಯೋಜಿಸ ಬೇಕಾಗುತ್ತದೆ, ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂತಹ ಒಂದು ಟೂರ್ನಿ ಆಯೋಜಿಸಿದೆ, ಈ ಕಾಲೇಜು ಆಟದಲ್ಲದೆ ಶಿಕ್ಷಣದಲ್ಲಿ ಮುಂದೆ ಇದ್ದು, ಈ ಸಾಲಿನಲ್ಲಿ…
ಗ೦ಗೊಳ್ಳಿ: ಇತ್ತೀಚೆಗೆ ನಾವು೦ದದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಾಲಕಿಯರ ತ೦ಡವು ದ್ವಿತೀಯ ಸ್ಥಾನಗಳಿಸಿತು. ಆಟಗಾರ್ತಿಯರಾದ ಸ೦ಪ್ರೀತಾ,ರಶ್ಮಿತಾ,ಅನುಷಾ,ದೀಕ್ಷಿತಾ,ಪ್ರಮಿತಾ,ನಿಶಾ,ದಶಮಿ,ರೋಹಿಣಿ ಅವರೊ೦ದಿಗೆ ದೈಹಿಕ ಶಿಕ್ಷಕ ನಿರ್ದೇಶಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್ಕರ್ ಉಪಸ್ಥಿತರಿದ್ದಾರೆ. ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.
ಎಲ್ಲರೊಂದಿಗೆ ಬೆರತು ಬದುಕುವಂತೆ ಮಾಡುವುದೇ ನಮ್ಮ ದೊಡ್ಡ ಜವಾಬ್ದಾರಿ: ಡಾ. ನಾಗತಿಹಳ್ಳಿ ಕುಂದಾಪುರ: ಇಂದು ಪರಸ್ಪರ ಒಬ್ಬರಿಗೊಬ್ಬರು ಆತುಕೊಳ್ಳುತ್ತಾ, ಮೆಚ್ಚಿಕೊಳ್ಳುತ್ತಾ, ಪ್ರಾಮಾಣಿಕವಾಗಿ ವಿಮರ್ಷಿಸುತ್ತಾ ಮುಂದುವರಿಯಬೇಕಾದ ತುರ್ತು ಎದುರಾಗಿದೆ. ಎಲ್ಲರೂ ಬೆರೆತು ಬದುಕುವಂತೆ ಮಾಡುವುದೇ ನಮಗೂ ನಿಮಗೂ ಇರುವ ದೊಡ್ಡ ಜವಾಬ್ದಾರಿಯಾಗಿದೆ. ಅದರ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಖ್ಯಾತ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು. ಅವರು ಗುಲ್ವಾಡಿಯ ತೋಟದಮನೆಯಲ್ಲಿ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂತೋಷಕುಮಾರ್ ಗುಲ್ವಾಡಿ ಸ್ಮಾಕರ ಕೊಡಮಾಡುವ ಗುಲ್ವಾಡಿ ಗೌರವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ಹೊಸತನವನ್ನು ತಂದ ಸಂತೋಷಕುಮಾರ್ ಗುಲ್ವಾಡಿ ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಖುಷಿ ನೀಡಿದೆ. ಎಷ್ಟೇ ದೇಶ ಸುತ್ತಿ ಬಂದರೂ ನಾವಿರುವ ಜಾಗವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು ಬಹಳ ಮುಖ್ಯವಾದುದು. ಆ ನಿಟ್ಟಿನಲ್ಲಿ ಯಾಕುಬ್ ಖಾದರ್ ಗುಲ್ವಾಡಿಯವರ ಪ್ರಯತ್ನ ಶ್ಲಾಘನೀಯ ಎಂದರು. ಗುಲ್ವಾಡಿ…
