ಕುಂದಾಪುರ: ತಾಲೂಕಿನ ಕಂಡ್ಲೂರು ಚೆಕ್‌ಪೋಸ್ಟ್ ಬಳಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಗೋವುವನ್ನು ಸಾಗಿಸುತ್ತಿದ್ದ ವೇಳೆ, ಓಮ್ನಿಯನ್ನು ಬೆನ್ನಟ್ಟಿದ ಪೊಲೀಸರು ಗೋವು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವಾಹನ ನಿಲ್ಲಿಸಿ ಪರಾರಿಯಾಗಿದ್ದಾರೆ. ಸೌಕೂರು ಕಡೆಯಿಂದ ಕಂಡ್ಲೂರು ಕಡೆಗೆ ಗೋವುವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಓಮ್ನಿಯನ್ನು ಅಡ್ಡಗಟ್ಟಿದರೂ ನಿಲ್ಲಿಸದೇ ಮುಂದೆ ಹೋದಾಗ ಓಮ್ನಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಸ್ವಲ್ಪ ದೂರು ವಾಹನ ಚಲಾಯಿಸಿದ ಆರೋಪಿಗಳು ಬಳಿಕ ರಸ್ತೆಯ ಬದಿಯಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ. ಓಮ್ನಿಯಲ್ಲಿ ದನವನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ಕಸಾಯಿಖಾನೆಗೆ ಕೊಂಡೊಯ್ಯಲು ಕದ್ದು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಶಪಡಿಸಿಕೊಂಡ ಜಾನುವಾರು ಹಾಗೂ ವಾಹನವನ್ನು ಠಾಣೆಗೆ ತರಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ಸುನಿಲ್ ಹೆಚ್. ಜಿ. ಬೈಂದೂರು
ವಿ.ಕೆ. ಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಪುಸ್ತಕ ಹಸ್ತಾಂತರ ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಕುಂದಾಪುರದ ವಿ.ಕೆ. ಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಾಲಯಕ್ಕೆ ಜ್ಞಾನ ದೀಪ ಯೋಜನೆಯಡಿ ಪುಸ್ತಕಗಳನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಶಾಲಾ ಮುಖ್ಯೋಪಧ್ಯಾಯ ಕೃಷ್ಣ ಅಡಿಗ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಕೋಡಿ ಉರ್ದು ಶಾಲೆಗೆ ಪುಸ್ತಕ ಹಸ್ತಾಂತರ ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಕೋಡಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಜ್ಞಾನ ದೀಪ ಯೋಜನೆಯಡಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಶಾಲಾ ಮುಖ್ಯೋಪಧ್ಯಾಯಿನಿ ರೆಹನಾ ಬೇಗಂ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ, ಶಾಲಾ ಶಿಕ್ಷಕರಾದ ದುರ್ಗಿ ಪಟಗಾರ್, ನಜಿಯಾ ಬಾನು, ಜ್ಯೋತಿ ಆಚಾರ್, ಸಂಧ್ಯಾ ರಾಣಿ, ರಂಜನಿ ಉಪಸ್ಥಿತರಿದ್ದರು.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ಕುಂದಾಪುರ ಭಂಡಾರ್‌ಕಾರ್ಸ್ ಪದವಿ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ, ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ, ತರಬೇತುದಾರರಾದ ವೇಣುಗೋಪಾಲ ಪುತ್ತೂರು, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ವಲಯ ಉಪಾಧ್ಯಕ್ಷ ನಾಗೇಂದ್ರ ಪೈ ಉಪಸ್ಥಿತರಿದ್ದರು. ಗೌತಮ್ ನಾವಡ ವಂದಿಸಿದರು.
ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಇಂಜೀನಿಯರ‍್ಸ್ ದಿನಾಚರಣೆ ಪ್ರಯುಕ್ತ ಕೋಟಾದ ನಿವಾಸಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜೀನಿಯರ್ ಮಂಜುನಾಥ್ ನಾಯರಿ ಇವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್, ಖಜಾಂಚಿ ನಾಗರಾಜ್ ಶೇಟ್, ಹಿರಿಯ ಸದಸ್ಯ ನಾರಾಯಣ ಶೆಟ್ಟಿ, ರಮಾನಂದ, ಪ್ರಕಾಶ್ ಬೆಟ್ಟಿನ್, ರಾಜೀವ್ ಕೋಟ್ಯಾನ್, ನಿರಂತನ್, ಜಯರಾಮ್ ಪಿ. ಕಲ್ಪತರು ಚಂದ್ರಶೇಖರ್, ಜಯಪ್ರಕಾಶ್, ಸಚ್ಚಿದಾನಂದ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಮತ್ತು ಲಯನೆಸ್ ಅಧ್ಯಕ್ಷ ಬಿಂದಿಯ ಬೆಟ್ಟಿನ್, ಖಜಾಂಚಿ ಸುನೀತಾ ಶೇಟ್ ಉಪಸ್ಥಿತರಿದ್ದರು.
ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿಯ ಗಣೇಶೋತ್ಸವ ಸುವರ್ಣ ಮಹೋತ್ಸವ ಕುಂದಾಪುರ: ನಮ್ಮ ದೃಷ್ಟಿಕೋನ ಹಾಗೂ ಚಿಂತನೆ ವಿಶಾಲವಾದಂತೆ ನಮ್ಮೊಳಗಿನ ಸಂಕುಚಿತ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖ್ಯ ಪಾತ್ರ ಬಹುದೊಡ್ಡದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿ ಯ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ರಕ್ಷಣೆಗೆ ಅನ್ವರ್ಥರಾಗಿರುವ ರಾಮಕ್ಷತ್ರಿಯ ಸಮಾಜ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಹಿಂದಿನಿಂದಲೂ ಮೈಗೂಡಿಸಿಕೊಂಡು ಬಂದಿದೆ, ರಾಮಕ್ಷತ್ರಿಯರು ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತುಕೊಡದೆ, ವಿಶಾಲ ದೃಷ್ಟಿಯಿಂದ ನೋಡುತ್ತಿರುವುದರ ಪರಿಣಾಮ ಸಮಾಜದಲ್ಲಿ ಸುಧಾರಣೆ ಕಾಣುವಂತಾಗಿದೆ. ಅವರೆಲ್ಲೂರ ಸಂಘಟನೆ, ಒಗ್ಗಟ್ಟು ಇನ್ನಷ್ಟು ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದ ಅವರು ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಸನ್ಮಾರ್ಗದಲ್ಲಿ ನಡೆಯಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತವಾಗಲು ಸಾಧ್ಯ ಎಂದರು. ಮಾಜಿ ಬೈಂದೂರು ಶಾಸಕ ವಿಶ್ವ ರಾಮಕ್ಷತ್ರಿಯರ ಸಂಘದ ಅಧ್ಯಕ್ಷ…
ಕುಂದಾಪುರ: ಸಮುದ್ರದಲ್ಲಿ ಉಪ್ಪು ಹೇಗೆ ಬೆರೆತಿದೆಯೋ ಹಾಗೇ ನಾವು ಭಗವಂತನೊಂದಿಗೆ ಭಕ್ತಿಯ ಮೂಲಕ ಬೆರೆಯಬೇಕು. ಭಗವಂತನಿಗೆ ಹತ್ತಿರವಾಗುವುದು ಎಂದರೆ ಆತನಲ್ಲಿ ಲೀನವಾಗುವುದು ಎಂದರ್ಥ. ಪರಿಶುದ್ಧ ಭಾವನೆಯಿಂದ ಭಗವಂತನನ್ನು ನೆನೆದು ನಮ್ಮಲ್ಲಿರುವ ಕೆಡುಕನ್ನು ದೂರ ಮಾಡುವ ಮೂಲಕ ಆತನ ಕೃಪೆಗೆ ಪಾತ್ರರಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ರಜತಮಹೋತ್ಸವದ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪಾ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಸಹಬಾಳ್ವೆ, ಸಾಹಸ, ಕಠಿಣ ಕೆಲಸಕ್ಕೆ ಖಾರ್ವಿ ಸಮಾಜ ಹೆಸರಾಗಿದ್ದು ಒಗ್ಗಟ್ಟು, ಶ್ರಮ ಜೀವನ ಸಮಾಜಕ್ಕೆ ಮಾದರಿ. ಅತ್ಯಂತ ನಂಬಿಕೆ, ಪ್ರಾಮಾಣಿಕತೆ ಖಾರ್ವಿ ಸಮಾಜದ ಹೆಚ್ಚುಗಾರಿಕೆ. ಕಳೆದ ನಾಲ್ಕಾರು ದಶಕಗಳಲ್ಲಿ ಸಮಾಜ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಎಂದ ಅವರು ದುಡಿಮೆಗೆ ತಕ್ಕ ಪ್ರತಿಫಲ ಈಗ ಸಿಗುತ್ತಿದ್ದು ಹಿಂದಿನ ಕಷ್ಟದ ಬದುಕಿಗಿಂತ ಈಗಿನ ಜೀವನ ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಬಸ್ರೂರು…
ಕುಂದಾಪುರ: ಯುವಜನರಲ್ಲಿ ಸಂಘಟನೆ, ಸೇವಾ ಭಾವ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಜೇಸಿ ಸಂಘಟನೆ ಸಪ್ತಾಹ ಆಯೋಜನೆಯ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುವ ಜೊತೆಗೆ ಸಾಂಸ್ಕೃತಿಕ ಲೋಕ ಕುಂದಾಪುರದಲ್ಲಿ ಮೇಳೈಸುವಂತೆ ಮಾಡಿದ್ದಾರೆ. ಇಂತಹ ಅಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ್ ಅವರ ಕಾರ್ಯ ವೈಖರಿ ಪ್ರಶಂಸನೀಯ ಎಂದು ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರಿಗೆ ವೃತ್ತಿ ಜೀವನದ ಸಾಧನೆಯನ್ನು ಗುರುತಿಸಿ ಜೇಸಿ ಸ್ವರ್ಣ ಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೇಸಿಐ ಕುಂದಾಪುರ ಸಿಟಿ ಪೂರ್ವಾಧ್ಯಕ್ಷ ನಿತಿನ್ ಅವಭೃತ ಅವರಿಗೆ ಕಮಲ ಪತ್ರ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ…
ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ನಡೆದ ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಪಾಲ್ಗೊಂಡ 7 ದಂಪತಿಗಳಲ್ಲಿ ಸಿದ್ದಾಪುರದ ಪುರುಷೋತ್ತಮ ಭಟ್ ಹಾಗೂ ಶ್ರೀಮತಿ ಅನಸೂಯ ಪಿ. ಭಟ್ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ನಾಗೇಶ್ ಕೋಟ ಹಾಗೂ ಶ್ರೀಮತಿ ಭವ್ಯ ನಾಗೇಶ್ ಅವರು ದ್ವಿತೀಯ ಸ್ಥಾನ ಮತ್ತು ಕೋಡಿಯ ಅಶೋಕ ಪೂಜಾರಿ ಮತ್ತು ಶ್ರೀಮತಿ ತೃತೀಯ ಸ್ಥಾನ ಪಡೆದುಕೊಂಡರು. ತೀರ್ಪುಗಾರರಾಗಿ ಉದ್ಯಮಿ ಸದಾನಂದ ನಾವಡ, ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ, ಶ್ರುತಿ ಶಶಾಂಕ್ ಪಟೇಲ್ ಸಹಕರಿಸಿದರು. ಜೇಸಿ ವಲಯ ೧೫ರ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್., ಉದ್ಯಮಿ ಸಂತೋಷ ಪ್ರಭು ಕೋಟ, ಉದ್ಯಮಿ ದಿನೇಶ್ ಗೋಡೆ, ಮೊಬೈಲ್ ಎಕ್ಸ್‌ನ ಮುಸ್ತಾಫ, ಹರೀಶ್ ಪೂಜಾರಿ ಅಂಕದಕಟ್ಟೆ, ವಲಯ ಉಪಾಧ್ಯಕ್ಷ ನಾಗೇಂದ್ರ ಪೈ, ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ, ಕಾರ್ಯದರ್ಶಿ…
ಕುಂದಾಪುರ: ತಾಲೂಕಿನ ಉಳ್ಳೂರು11ನೇ ಯರುಕೋಣೆ ಭಂಡಾರರ ಕುಟುಂಬದವರಾದ ವೈ. ಚಂದ್ರಶೇಖರ ಶೆಟ್ಟಿ (80) ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ನಿವೃತ್ತ ಮುಖ್ಯೋಪಧ್ಯಾಯರು, ಪ್ರಗತಿಪರ ಕೃಷಿಕರೂ ಆದ ಚಂದ್ರಶೇಖರ ಶೆಟ್ಟಿಯವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಹಕಾರಿ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡವರು. ಸರಕಾರಿ ಪ್ರೌಢಶಾಲೆ ಖಂಬದಕೋಣೆ, ಬೈಂದೂರು, ಉಪ್ಪುಂದಲ್ಲಿ ಮುಖ್ಯೋಪಧ್ಯಾಯರಾಗಿ ಸೇವೆಸಲ್ಲಿಸಿದ್ದ ಅವರು, ಬಳಿಕ ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಖಂಬದಕೋಣೆ ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾಗಿ, ಕುಂದಾಪುರ ಕೃಷಿಕ ಸಮಾಜದ ಅಧ್ಯಕ್ಷರಾಗಿ, ಜನತಾದಳ ಬೈಂದೂರು ಬ್ಲಾಕ್ ಅಧ್ಯಕ್ಷರಾಗಿ, ಮಣಿಪಾಲ ಕೆನರಾ ಮಿಲ್ಕ್ ಯೂನಿಯನ್ ನಿರ್ದೇಶಕರಾಗಿ, ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಮೇಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ ದುಡಿದಿದ್ದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಚಂದ್ರಶೇಖರ ಶೆಟ್ಟಿ ಅವರ ನಿಧನಕ್ಕೆ, ಅವರ ಅಪಾರ ಬಂಧು-ಮಿತ್ರರು ಹಾಗೂ ಶಿಷ್ಯವೃಂದ ಸಂತಾಪ…
ಗಂಗೊಳ್ಳಿ: ಗಂಗೊಳ್ಳಿಯ ನಿನಾದ ಸಂಸ್ಥೆಯ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಶ್ರೀ ಗಣೇಶೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಇತ್ತೀಚಿಗೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ಎ.ಪೈ ಮುಂಬೈ, ಬಿ.ಪ್ರಕಾಶ ಪಡಿಯಾರ್, ಎಚ್.ಸಂಜೀವ ನಾಯಕ್ ಹಾಗೂ ಸಂಗೀತ ಶಿಕ್ಷಕ ಶಂಭು ಭಟ್ ಅವರು ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಸಂಗೀತ ಶಾಲೆಯ ಶಿಕ್ಷಕ ಶಂಭು ಭಟ್ಟ ಅವರನ್ನು ಉದ್ಯಮಿ ಎಚ್.ಗಣೇಶ ಕಾಮತ್ ಮತ್ತು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಇವರು ಸನ್ಮಾನಿಸಿದರು ಹಾಗೂ ಕರ್ನಾಟಕ ಸರಕಾರದ ವತಿಯಿಂದ ನಡೆದ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿವ್ಯಾ ನಾಯಕ್ ಹಾಗೂ ಪ್ರಿಯಾ ಪೈ ಇವರನ್ನು ಜಿ.ಜಯಶ್ರೀ ಎನ್.ಶೆಣೈ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ದೇವಳದ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್ ಪ್ರಶಂಸನಾ ಪತ್ರ ವಿತರಿಸಿ ಶುಭ ಹಾರೈಸಿದರು. ಹಿಂದುಸ್ತಾನಿ, ಶಾಸ್ತ್ರೀಯ ಸಂಗೀತ, ತಬಲಾ ವಾದನ ಹಾಗೂ ಭಜನೆಗಳ ಮೂಲಕ ನಿನಾದ ಸಂಸ್ಥೆಯ…
