Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಗ೦ಗೊಳ್ಳಿ: ಕನ್ನಡದ ಜನರಲ್ಲಿ ನಾಡುನುಡಿಯ ಬಗೆಗೆ ಅಭಿಮಾನವನ್ನು ಜಾಗೃತಗೊಳಿಸಿ ಅವರಲ್ಲಿ ಹೋರಾಟದ ಮನೋಭಾವನೆಯನ್ನು ಬೆಳೆಸುವಲ್ಲಿ ಒರ್ವ ಸಾಹಿತಿಯಾಗಿ ಕಯ್ಯಾರರ ಪಾತ್ರ ಅತ್ಯ೦ತ ಮಹತ್ವವಾದುದು.ನಾವು ಕಯ್ಯಾರರು ಬದುಕಿ ಬ೦ದ ದಾರಿಯನ್ನು ಅಧ್ಯಯನ ಮಾಡುವ ಮೂಲಕ ಅವರನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾ೦ಜಲಿ ಎ೦ದು ಸರಸ್ವತಿ ವಿದ್ಯಾಲಯದ ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಅವರು ಅಭಿಪ್ರಾಯಪಟ್ಟರು. ಅವರು ಕಳೆದ ಭಾನುವಾರ ನಿಧನರಾದ ಕನ್ನಡದ ಖ್ಯಾತ ಕವಿ ಸಾಹಿತಿ ಕಯ್ಯಾರ ಕಿ೦ಞ್ಞಣ್ಣ ರೈ ಅವರಿಗೆ ಶ್ರದ್ಧಾ೦ಜಲಿ ಅರ್ಪಿಸುವ ನಿಟ್ಟಿನಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊ೦ಡಿದ್ದ ‘ಕಯ್ಯಾರ ನಮನ’ ಕಾರ‍್ಯಕ್ರಮದಲ್ಲಿ ನುಡಿನಮನಸಲ್ಲಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಎನ್ ಸದಾಶಿವನಾಯಕ್, ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್,ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ ಅವರು ನುಡಿನಮನ ಸಲ್ಲಿಸಿದರು. ಕಾರ‍್ಯಕ್ರಮದ ಮೊದಲಿಗೆ ಕಯ್ಯಾರರ ಭಾವಚಿತ್ರಕ್ಕೆ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಪುಷ್ಪನಮನ ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ…

Read More

ಕುಂದಾಪುರ: 1938ರಲ್ಲಿ ಆರಂಭಗೊಂಡು ಗಂಗೊಳ್ಳಿಯಲ್ಲಿ ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರತಿಷ್ಠಿತ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಸ್ಕೂಲ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ವೈದ್ಯರಾಗಿರುವ ಡಾ.ಕಾಶೀನಾಥ ಪಿ.ಪೈ ಆಯ್ಕೆಯಾಗಿದ್ದಾರೆ.

Read More

ಕುಂದಾಪುರ: ಇಲ್ಲಿನ 150ರಿಂದ 200 ಸಮಾನ ಮನಸ್ಕರು ಸೇರಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇರಿ ಕುಂದಾಪುರ ಮಿತ್ರರು ಎನ್ನುವ ವೇದಿಕೆಯನ್ನು ನಿರ್ಮಿಸಿಕೊಂಡಿದ್ದು, ಇದರ ಉದ್ಘಾಟನೆ ಆ.22ರಂದು ಸಂಜೆ 4:30ಕ್ಕೆ ಕುಂದಾಪುರದ ಪಾರಿಜಾತ ಹೋಟೆಲ್‌ನ ಸ್ನೇಹಾ ಸಭಾಂಗಣದಲ್ಲಿ ನಡೆಯಲಿದೆ.  ಹಿರಿಯ ಕಲಾವಿದರು, ಸಾಹಿತಿಗಳೂ ಆದ ಕೆ,ಕೆ ಕಾಳಾವರ್‌ಕರ್ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ ಎಂದು  ಕುಂದಾಪುರ ಮಿತ್ರರು ವೇದಿಕೆಯ ಕಾರ್ಯಾಧ್ಯಕ್ಷ ರಾಮದಾಸ ನಾಯಕ್ ಹೇಳಿದರು ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ವಿಶಿಷ್ಠವಾದ ವೇದಿಕೆಯಾಗಿದ್ದು, ಸಾಮಾಜಿಕವಾಗಿ ಸಮಾಜದ ಅಪೇಕ್ಷಿತ ವರ್ಗದವರಿಗೆ ಸೇವೆಯನ್ನು ನೀಡುವುದು,  ವೇದಿಕೆಯ ಸದಸ್ಯರು ಹಾಗೂ ಕುಟುಂಬದವರು ನೀಡಲು ಇಚ್ಛಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಆಯೋಜಿಸುವುದು, ಸ್ಥಳೀಯ ಉತ್ಸಾಹಿ ಪ್ರತಿಭೆಗಳಿಗೆ ಅವಕಾಶ ನೀಡುವುದು, ಚಿಕ್ಕ ಪುಟ್ಟ ಸಹ ಸಂಸ್ಥೆಗಳನ್ನು ನಡೆಸಲು ಮಾರ್ಗದರ್ಶನ ನೀಡುವುದು, ಕ್ರೀಡಾ ಕಾರ್ಯಕ್ರಮಗಳ ಆಯೋಜನೆ, ಸಾಧಕರ ಸಾಧನೆಯನ್ನು ಗುರುತಿಸುವಿಕೆ, ರಾಷ್ಟ್ರೀಯ ಹಬ್ಬಗಳನ್ನು ಸಾರ್ವಜನಿಕವಾಗಿ ಆಯೋಜಿಸುವುದು ಮೊದಲಾದ ಉದ್ದೇಶಗಳನ್ನು ವೇದಿಕೆ ಹೊಂದಿದೆ ಎಂದರು. ಪರಿಸರದ ಬಹುದಿನಗಳ ಬೇಡಿಕೆಗಳನ್ನು ಸಾಕಾರಗೊಳಿಸಲು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ…

Read More

ಕುಂದಾಪುರ: ಹಿಂದುಳಿದ ವರ್ಗಗಳ ಮುಂದಿರುವ ಸವಾಲುಗಳು, ಮಿತಿಗಳನ್ನು ಬಹಳಷ್ಟು ಅರ್ಥಸಿಕೊಂಡ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅರಸು ಅವರು ಮೇಲ್ಪಂಕ್ತಿಯಲ್ಲಿ ಕಾಣಿಸುತ್ತಾರೆ.  ಇಂದು ಯಾವುದೇ ಕ್ಷೇತ್ರದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಬಡವರ್ಗಕ್ಕೆ ಸಮಾನತೆಯ ನೀತಿಯ ಕೊಡುಗೆಯನ್ನು ನೀಡಿದ್ದೇ ದೇವರಾಜು ಅರಸುವರ ಚಿಂತನೆಗಳು ಹಾಗೂ ಆದರ್ಶಗಳು. ಅವರೊಬ್ಬ ಹಿಂದುಳಿದ ವರ್ಗಗಳ ಸೂರ್ಯ ಎಂದರು ಕೋಟ ಪಡುಕೆರೆಯ ಸೋಮ ಬಂಗೇರ ಸರಕಾರಿ  ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲ ಡಾ|ರಾಜೇಂದ್ರ ಎಸ್.ನಾಯಕ್ ಹೇಳಿದರು. ಅವರು ಕುಂದಾಪುರ ತಾ.ಪಂ.ನಲ್ಲಿ  ಗುರುವಾರ ತಾಲೂಕು ಆಡಳಿತ, ತಾ.ಪಂ. ಕುಂದಾಪುರ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ್ ಅರಸು ಅವರ ಜನ್ಮ ಶತಮಾನೋತ್ಸವ ದಿನಾಚರಣೆಯಂದು ದೇವರಾಜ್ ಅರಸು-ಬದುಕು-ಸಾಧನೆ-ಚಿಂತನೆ ಬಗ್ಗೆ ಉಪನ್ಯಾಸ ನೀಡಿದರು. ಸಮಾರಂಭವನ್ನು ಉದ್ಘಾಟಿಸಿದ ಕುಂದಾಪುರ ಪುರಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್. ಮಾತನಾಡಿ, ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ್ ಅರಸ್ ಅವರ ಸಾಧನೆ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ.…

Read More

ಬೈಂದೂರು: ಕೆ.ಜಿಗೆ ಒಂದು ರೂಪಾಯಿಯ ಬಹುಕೋಟಿ ಅನುದಾನದ ಯೋಜನೆ ಹಳ್ಳ ಹಿಡಿಯುತ್ತಿರುವುದಕ್ಕೆ ಕರಾವಳಿ ತೀರ ಕುಂದಾಪುರವೂ ಹೊರತಾಗಿಲ್ಲ ಎನ್ನುವದಕ್ಕೆ ಸಾಕ್ಷಿ ದೊರಕಿದಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆ.ಜಿಗೆ ಒಂದು ರೂಪಾಯಿ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದರೂ ಇಲಾಖೆಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲಮೀ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸರ್ಕಾರದ ಯೋಜನೆ ಈ ರೀತಿ ದುರುಪಯೋಗವಾಗುತ್ತಿರುವುದರ ಬಗ್ಗೆ ತಲೆಕೆಡಿಸಿಕೊಳ್ಳದಿರುವ ನಡುವೆಯೇ ಪಡಿತರ ಅಕ್ಕಿ ಸೌಲಭ್ಯವನ್ನು ಪಡೆಯುತ್ತಿರುವ ಫಲಾನುಭವಿಗಳಿಂದ ಅಕ್ರಮವಾಗಿ ಅಕ್ಕಿ ಖರೀದಿಸಿ ದಂಧೆ ನಡೆಸುತ್ತಿರುವ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಿ ಖರೀದಿಸಲಾದ ಅಕ್ಕಿ ಸಮೇತ ವಾಹನವನ್ನು ವಶಪಡಿಸಿಕೊಂಡ ಘಟನೆ ಉಪ್ಪುಂದದ ಜನತಾ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬಂಧಿತ ಆರೋಪಿಯನ್ನು ಓಮ್ನಿ ಚಾಲಕ ಕುಂದಾಪುರ ಮೂಲದ ಮಹಮ್ಮದ್ ನಾಸೀರ್(34) ಎಂದು ಗುರುತಿಸಲಾಗಿದ್ದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ವಿವರ: ಆರೋಪಿ ಮಹಮ್ಮದ್ ನಾಸೀರ್ ಇತರ ಇಬ್ಬರ ಜೊತೆಗೆ ಪ್ರತೀ ಹದಿನೈದು ದಿನಗಳಿಗೊಮ್ಮೆ ಉಪ್ಪುಂದ ಹಾಗೂ ಇತರೆಡೆಗಳಲ್ಲಿ…

Read More

ಬೈಂದೂರು: ತಾಲೂಕಿನ ಉಪ್ಪುಂದ ಸಮೀಪದ ನಂದನವನ ಎಂಬಲ್ಲಿ ದುರಸ್ತಿಗಾಗಿ ವಿದ್ಯುತ್ ಟ್ರಾನ್ಸ್‌ಫರ್ಮರ್ ಹತ್ತಿದ ಲೈಮ್‌ಮೆನ್ ಒಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ರವಿರಾಜ್ ದವಾಖಾನೆ(33) ಮೃತ ದುರ್ದೈವಿ. ಘಟನೆಯ ವಿವರ: ಉಪ್ಪುಂದ ವ್ಯಾಪ್ತಿಯ ಕಟ್ಕೇರಿ ಎಂಬಲ್ಲಿ ವಿದ್ಯುತ್ ಇಲ್ಲದಿದ್ದುದರಿಂದ ಟ್ರಾನ್ಸ್‌ಫಾರ್ಮರ್‌ಗೆ ದುರಸ್ತಿಗಾಗಿ (ಪ್ಯೂಸ್ ಹಾಕಲು) ಮೇಲೆ ಹತ್ತಿದ್ದ ರವಿರಾಜ್ ದವಾಖಾನೆ ಆಯತಪ್ಪಿ ಒಮ್ಮೆಲೆ ಕೆಳಗೆ ಬಿದ್ದಿದ್ದಾರೆ. ಗಾಯಾಳು ಕೂಗಿಕೊಳ್ಳುವುದನ್ನು ಕೇಳಿ ಘಟನಾ ಸ್ಥಳಕ್ಕೆ ಓಡಿ ಬಂದ ಸ್ಥಳೀಯರೋರ್ವರು, ಕೂಡಲೇ ಅಂಬುಲೆನ್ಸ್ ಮೂಲಕ ಅವರನ್ನು ಬೈಂದೂರಿನ ಖಾಸಗಿ ಆಸ್ವತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ರವಿರಾಜ್ ದಾರಿಮಧ್ಯೆ ಕೊನೆಯುಸಿರೆಳೆದರು. ಬಾಗಲಕೋಟೆ ಮೂಲದವರಾದ ರವಿರಾಜ್ ಕಳೆದ ಎಪ್ರಿಲ್ ತಿಂಗಳಿನಲ್ಲಿ ಬೈಂದೂರು ಮೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಹೊಸದಾಗಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ಈ ದುರ್ಘಟನೆ ನಡೆದಿರುವುದು ಮನೆಯವರನ್ನು ಕಂಗಾಲಾಗಿಸಿದೆ. ಮೃತರು ಪತ್ನಿ ಹಾಗೂ ಎರಡು ವರ್ಷದ…

Read More

ಕುಂದಾಪುರ: ತಾಲೂಕಿನ ತಲ್ಲೂರು ಬಸ್ ನಿಲ್ದಾಣದಲ್ಲಿ ಕುಂದಾಪುರ ಬರಲು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಕರಿಮಣಿ ಸರವನ್ನು ಹರಿದ ಬೈಕಿನಲ್ಲಿ ಬಂದ ಆಗಂತುಕರು, ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನದ ವರದಿಯಾಗಿದೆ. ಘಟನೆಯ ವಿವರ: ಕುಂದಾಪುರ ತಾಲೂಕಿನ ನೇರಳಕಟ್ಟೆ ಹಿಲ್ಕೋಡುವಿನ ನಿವಾಸಿಯಾದ ತೇಜ ಗಾಣಿಗ ಹಾಗೂ ಅವರ ಪತ್ನಿ ಸೀತಾ ಗಾಣಿಗ ಎಂಬುವವರು ತಲ್ಲೂರಿನ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ತೆರಳುವ ಬಸ್ಸಿಗಾಗಿ ತಲ್ಲೂರಿನ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಕಪ್ಪು ಬಣ್ಣದ ೨೨೦ ಸಿಸಿ ಪಲ್ಸರ್ ಬೈಕಿನಲ್ಲಿ ಬಂದ ಮಧ್ಯ ವಯಸ್ಸಿನ ಯುವಕರೀರ್ವರು ಒಮ್ಮೆಲೆ ಸೀತಾ ಗಾಣಿಗ ಅವರ ಕತ್ತಿಗೆಗೆ ಕೈ ಹಾಕಿ ಅವರ ಕರಿಮಣಿ ಸರವನ್ನು ಎಗರಿಸಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರಿಗೆ ಸರಗಳ್ಳತನದ ಮಾಹಿತಿ ದೊರಕುತ್ತಿದ್ದಂತೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ನಾಕಬಂಧಿ ಹಾಕಿ ನಿಂತಿದ್ದರು. ಆದರೆ ಅತಿವೇಗದಿಂದ ಬಂದ ಬೈಕ್ ಸವಾರರು ಅಲ್ಲಿಯೂ ಬೈಕ್ ನಿಲ್ಲಿಸದೇ ಪರಾರಿಯಾಗಿದ್ದಾರೆ.…

Read More

ಕುಂದಾಪುರ: ಅಂದಿನ ಗಾಂಧಾರದಿಂದ ಬ್ರಹ್ಮದೇಶದವರೆಗೆ ಜಗತ್ತಿನ ಅತ್ಯಂತ ಹೆಸರುವಾಸಿಯಾದ ಹಿಮಾಲಯದಿಂದ ಸಮುದ್ರದ ವರೆಗೆನ ಅಖಂಡ ಭೂಭಾಗವನ್ನು ಭಾರತ ಎಂದು ಕರೆಯುತ್ತಿದ್ದ ಅಂದಿನ ಭಾರತ ಹೇಗೆ ಅಖಂಡವಾಗಿತ್ತೋ, ಅದೇ ಭಾರತವನ್ನು ಮತ್ತೊಮ್ಮೆ ಕಟ್ಟುವ ಸಂಕಲ್ಪವೇ ಈ ಅಖಂಡ ಭಾರತ ಸಂಕಲ್ಪ ದಿನದ ಉದ್ಧೇಶ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು. ಕುಂದಾಪುರದ ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನದ ಅಂಗಣದಲ್ಲಿ ತಲ್ಲೂರು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಂಡ ಭಾರತ ಸಂಪಕಲ್ಪ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾಂತಂತ್ರ್ಯಾಪೂರ್ವದಲ್ಲಿ ಅಖಂಡ ಭಾರತದ ರಕ್ಷಣೆಗೆ ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರೂ ಹೋರಾಟವನ್ನು ರೂಪಿಸಿದ್ದರೋ ಅದೇ ರೀತಿ ಹರಿದು ಹಂಚಿ ಹೋಗುತ್ತಿರುವ ಭಾರತಮಾತೆಯ ರಕ್ಷಣೆಗಾಗಿ ಪಣ ತೊಡಬೇಕಾಗಿದೆ. ದೇಶದ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸುವ ಹೋರಾಟಕ್ಕಾಗಿ ಸಿದ್ಧಗೊಳ್ಲಬೇಕಾದ ಅನಿವಾರ್ಯತೆ ಮತ್ತೆ ಭಾರತಕ್ಕೆ ಬಂದಿದೆ. ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಭಾರತೀಯರಾದ ನಾವೆಲ್ಲರೂ ಸಂಘಟಿತರಾಗುವತ್ತ ದೃಢ ಮನಸ್ಸು ಮಾಡಬೇಕಿದೆ ಎಂದರು.…

Read More

ಕುಂದಾಪುರ: ಆಗಸ್ಟ್ 1ರಂದು ಪುತ್ತೂರಿನಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕ್ಷುಲಕ ಕಾರಣಕ್ಕೆ ಹಲ್ಲೆ ನಡೆಸಿದ ಆರೋಪಿಗಳಾದ ಮೊಹಮ್ಮದ್ ಇಕ್ಬಾಲ್ ಮತ್ತು ಸಹಚರರ ವಿರುದ್ಧ ದೂರು ದಾಖಲಾದರೂ ಈವರೆಗೆ ಬಂದಿಸಿಲ್ಲ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಕುಂದಾಪುರ ಐಎಂಎ ಆಗ್ರಹಿಸಿದೆ. ಈ ಸಂಬಂಧ ಪುತ್ತೂರು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ವೈದ್ಯರ ವೇದಿಕೆ ವೃತ್ತಿ ಬಾಂಧವರು ಕೆಲಸ ಕಾರ್ಯ ಸ್ಥಗಿತಗೊಳಿಸಿ, ಪ್ರತಿಭಟಿಸುತ್ತಿರುವುದಕ್ಕೆ ಕುಂದಾಪುರ ಶಾಖೆಯು ಬೆಂಬಲ ವ್ಯಕ್ತ ಪಡಿಸಿದ್ದು, ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ ಕುಂದಾಪುರ ಶಾಖೆ ತಹಶೀಲ್ದಾರರ ಮೂಲಕ ಮನವಿಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಸಲ್ಲಿಸಿತು. ಕುಂದಾಪುರ ಐಎಂಎ ಶಾಖೆಯ ಅಧ್ಯಕ್ಷರಾದ ಡಾ.ಮೋಹನ ಕಾಮತ್, ಕಾರ್ಯದರ್ಶಿ ಡಾ.ರಂಜಿತ್ ಹೆಗ್ಡೆ, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More