ಕುಂದಾಪುರ: ಇಂಗ್ಲೀಷ್ ಭಾಷೆ ಬಹುಭಾಷಾ ಸಾಹಿತ್ಯಕ್ಕಿರುವ ದೊಡ್ಡ ಸವಾಲು. ಇಂಗ್ಲಿಷಿನ ವ್ಯಾಮೋಹಕ್ಕೆ ಸಿಕ್ಕಿ ಮಾತೃ ಭಾಷೆಯನ್ನು ಮರೆಯುತ್ತಿದ್ದೇವೆ. ನಮ್ಮ ಸರಕಾರಗಳ ಭಾಷಾ ನಿಲುವು ಹಾಗೂ ಪೋಷಕರಲ್ಲಿನ ಭ್ರಮೆ ಇದಕ್ಕೆ ಮುಖ್ಯ ಕಾರಣ ಎಂದು ಬೆಂಗಳೂರಿನ ಖ್ಯಾತ ಲೇಖಕ ಡಾ| ಓ. ಎಲ್. ನಾಗಭೂಷಣಸ್ವಾಮಿ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಕೊಯಾಕುಟ್ಟಿ ಸಭಾಂಗಣದಲ್ಲಿ ಆಯೋಸಿದ ಎರಡು ದಿನಗಳ ಯುಜಿಸಿ ಪ್ರಾಯೋಜಿತ ’ಭಾರತೀಯ ಬಹುಭಾಷಾ ಸಾಹಿತ್ಯ’ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಭಾಷೆಗೆ ಮತ್ತೊಂದು ಭಾಷೆ ಶತ್ರುವಲ್ಲ. ಆದರೆ ಒಂದು ಭಾಷೆಯನ್ನಾಡುವ ಜನ ಮತ್ತೊಂದು ಭಾಷೆಗೆ ಶತ್ರುಗಳಾಗಿರುತ್ತಾರೆ ಭಾರತದಂತಹ ದೇಶದಲ್ಲಿ ಬಂಡವಾಳ ಶಾಹಿತ್ವ, ಬಲಪಂಥೀಯ ರಾಜಕೀಯ ಹಾಗೂ ಇಂಗ್ಲಿಷ್ನ ವ್ಯಾಮೋಹವು ಭಾಷಾ ವೈವಿಧ್ಯತೆಯನ್ನು ನಾಶ ಮಾಡಿ ಎಲ್ಲವನ್ನೂ ಏಕತೆಯಿಂದ ನೋಡುವಂತೆ ಮಾಡಿರುವುದು ಬಹುಭಾಷಾ ಸಾಹಿತ್ಯದ ನಾಶಕ್ಕೆ ಕಾರಣವಾಗಿದೆ ಯುವಜನತೆ ಮಾತೃಭಾಷೆಯಿಂದ ದೂರ ಸರಿಯುತ್ತಿರುವುದು ಹಾಗೂ ಜ್ಞಾನದ ವ್ಯಾಖ್ಯಾನವು ಬದಲಾಗುತ್ತಿರುವುದು ಬಹುಭಾಷಾ ಸಾಹಿತ್ಯಕ್ಕೆ ಎದುರಾಗಿರುವ ದೊಡ್ಡ ವಿಪತ್ತು ಎಂದವರು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕಾರವಾರ-ಬೆಂಗಳೂರು ರೈಲಿನ ವೇಗ ಹೆಚ್ಚಿಸುವಂತೆ ಹಾಗೂ ರಾತ್ರಿ ಪ್ರಯಾಣದ ರೈಲು ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಸಿಪಿಎಂ (ಐ) ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಮಾಜಿ ಶಾಸಕ ಹಾಗೂ ಸಿಪಿಎಂ (ಐ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಉದ್ಘಾಟಿಸಿದರು. ಮಾರ್ಚ್ 15ರಿಂದ ಬೆಂಗಳೂರು-ಹಾಸನ ರೈಲುದಾರಿಯ 110 ಕಿ.ಮೀ.ನಲ್ಲಿ ಜೋಡಿ ರೈಲು ಹಾಕುವ ಮೂಲಕ ಕನಿಷ್ಠ ಎರಡು ಗಂಟೆ ಪ್ರಯಾಣ ಉಳಿತಾಯವಾಗುತ್ತದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿಗಳು ಹೇಳಿಕೆ ನೀಡಿದ್ದರೂ ಈವರೆಗೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದ ಅವರು, ಉಡುಪಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲು 15 ಗಂಟೆ ಯಾಕೆ ಸುತ್ತಬೇಕು. ಕಳೆದ ಬಜೆಟ್ನಲ್ಲಿ ಅಂದು ರೈಲ್ವೇ ಮಂತ್ರಿಯಾಗಿದ್ದ ಸದಾನಂದ ಗೌಡರು ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲಿನ ಓಡಾಟ ಪ್ರಕಟಿಸಿದ್ದರೂ ಅದು ಹಗಲು ಸಂಚರಿಸುವುದರಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈಗ ಚಲಿಸುತ್ತಿರುವ ರೈಲಿನ ವೇಗವನ್ನು ಹೆಚ್ಚಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಹಾಗೂ…
ಬೈಂದೂರು: ಇಂದು ಸನ್ನಿವೇಶದ ಒಂದು ಸಂಭಾಷಣೆಯೇ ಒಂದು ನಾಟಕವಾಗುತ್ತಿದೆ. ಇದು ಸಾಧ್ಯವಾದದ್ದು ನಮ್ಮೊಳಗಿನ ಹುಡುಕಾಟದಿಂದ. ಹುಡುಕಾಟದೊಂದಿಗೆ ನಾವು ವಿಕಾಸಗೊಳ್ಳುತ್ತಿದ್ದೇವೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ಸಾಂಸ್ಕೃತಿಕ ಪ್ರಕಾರಗಳು ಮನುಷ್ಯನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ಜಾದೂಗಾರ ಓಂ ಗಣೇಶ ಉಪ್ಪುಂದ ಹೇಳಿದರು. ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹೊಸೂರು-ತೂದಳ್ಳಿಯ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ‘ಶರತ್ ರಂಗ ಸಂಚಲನ -2015′ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಚಿಕ್ಕವರಿದ್ದಾಗ ಸಂಪೂರ್ಣ ರಾಮಾಯಣದ ನಾಟಕಗಳನ್ನು ನೋಡುತ್ತಿದ್ದೇವು. ವರ್ಷಗಳು ಕಳೆದಂತೆ ರಾಮಾಯಣ ಒಂದು ದೃಶ್ಯ ನಾಟಕವಾಯಿತು. ಬಳಿಕ ದೃಶ್ಯದ ಒಂದು ಸನ್ನಿವೇಶಗಳೇ ನಾಟಕವಾಯಿತು ಎಂದು ಉದಾಹರಿಸಿದರು. ರಾಜ್ಯದಲ್ಲಿ ಸರಕಾರ ನೂರಾರು ಸಾಂಸ್ಕೃತಿಕ ಕಲಾಪ್ರಾಕಾರಗಳ ಕಾರ್ಯಕ್ರಮಗಳಿಗೆ ಆರ್ಥಿಕವಾದ ಧನಸಹಾಯ ಮಾಡುತ್ತದೆ. ಆದರೆ ಸಂಚಲನದಂತಹ ಸಂಸ್ಥೆಗಳು ಮಾತ್ರ ಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುತ್ತವೆ ಎಂದ ಸಂಚಲನದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕುಂದಾಪುರ ಕೊರಗರ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…
ಬೈಂದೂರು: “ನಾನು ಸುವರ್ಣ ಸುದ್ದಿ ವಾಹಿನಿಯ ವರದಿಗಾರ ಮಾತನಾಡುತ್ತಿರುವುದು. ನಿಮ್ಮ ಅಸಲಿ ಬಂಡವಾಳದ ವೀಡಿಯೋ ನನ್ನ ಬಳಿಯಿದ್ದು ಅದನ್ನು ಸುವರ್ಣ ವಾಹಿನಿಯಲ್ಲಿ ಬಿತ್ತರಿಸಿ ಮಾನ ಮರ್ಯಾದೆಯನ್ನು ಹರಾಜು ಮಾಡುತ್ತೇನೆ. 2 ಲಕ್ಷ ರೂಪಾಯಿಯನ್ನು ಸೋಮವಾರ ಕುಂದಾಪುರದ ಮಣಿಪಾಲ ಬೇಕರಿ ಬಳಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ಮಗನನ್ನು ಕೊಲೆ ಮಾಡುತ್ತೇನೆ” ಹೀಗೆ ತನ್ನ ಸ್ವಂತ ಮಾವನಿಗೆ ಬೆದರಿಗೆ ಹಾಕಿ ಹಣ ಎಗರಿಸಲು ಹೊರಟಿದ್ದ ಅಳಿಯ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಪ್ಪುಂದದ ಪ್ರದೀಪ ಖಾರ್ವಿ (23) ಸಿಸಿಬಿ ಪೊಲೀಸರು ಬಂಧಿಸಿದ ಬಿದ್ದ ನಕಲಿ ವರದಿಗಾರ. . ಘಟನೆಯ ವಿವರ: ತ್ರಾಸಿಯಲ್ಲಿ ಬೋಟ್ಗಳಿಗೆ ಜಿಪಿಎಸ್ ಅಳವಡಿಸುವ ಅಂಗಡಿ ಹೊಂದಿದ್ದ ಪ್ರದೀಪ ಖಾರ್ವಿ ಶನಿವಾರ ಬೆಳಗ್ಗೆ 12ಗಂಟೆ ಸುಮಾರಿಗೆ ತನ್ನ ಸ್ವಂತ ಮಾವನಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ, ಉಪ್ಪುಂದ ಕರ್ಕಿಕಳಿ ನಿವಾಸಿ ಅಣ್ಣಪ್ಪ ಖಾರ್ವಿ ಎಂಬುವವರಿಗೆ ದೂರವಾಣಿ ಕರೆ ಮಾಡಿ ತಾನು ಸುವರ್ಣ ನ್ಯೂಸ್ ವರದಿಗಾರನಾಗಿದ್ದು ತಮ್ಮ ಬಗ್ಗೆ ಇರುವ…
ಬೈಂದೂರು: ಮಡಗಾವ್ – ಮಂಗಳೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಜನರಲ್ ಬೋಗಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಂಗಳೂರಿನ ದಂಪತಿಗಳ ಬ್ಯಾಗ್ನಲ್ಲಿರಿಸಲಾಗಿದ್ದ ಲಕ್ಷಾಂತರ ರೂ. ಚಿನ್ನಾಭರಣಗಳು, ಮೊಬೈಲ್ ನಗದನ್ನು ಕಳವುಗೈದಿರುವ ಬಗ್ಗೆ ಬೈಂದೂರು ಠಾಣಯಲ್ಲಿ ತಡವಾಗಿ ದೂರು ದಾಖಲಾಗಿದೆ. ಮಂಗಳೂರು ಬಾಲಕೃಷ್ಣ ಶ್ರೀಧರ ಪೈ ಅವರು ಮೇ 21ರಂದು ಮಡಗಾಂವ್ – ಮಂಗಳೂರು ಇಂಟರ್ ಸಿಟಿ ರೈಲು ಜನರಲ್ ಬೋಗಿಯಲ್ಲಿ ಕುಳಿತು ಕಾರವಾರದಿಂದ ಮಂಗಳೂರಿಗೆ ಪತ್ನಿಯೊಂದಿಗೆ ಪ್ರಯಾಣಿಸುತ್ತಿರುವಾಗ ಈ ಪ್ರಕರಣ ನಡೆದಿದೆ. ಎಲ್ಲ ಲಗೇಜುಗಳನ್ನು ಪತ್ನಿ ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿದ್ದು. ಬಾಲಕೃಷ್ಣ ಪೈ ಅವರ ಪತ್ನಿ ಕುಮಟಾ ರೈಲು ನಿಲ್ದಾಣ ಬಿಟ್ಟ ನಂತರ ಮಲಗಿದ್ದರು. ರೈಲು ಬೈಂದೂರು ನಿಲ್ದಾಣ ಬಿಟ್ಟ ಅನಂತರ ನಿದ್ರೆಯಿಂದ ಎದ್ದು ನೋಡಿದಾಗ ಅವರ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಈ ಬ್ಯಾಗ್ನಲ್ಲಿ 30 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸೂತ್ರ, ಚಿನ್ನದ ಕಿವಿಯ ಜುಮ್ಕಿ, ಚಿನ್ನದ ಕಿವಿಯ ರಿಂಗ್, ಪತ್ನಿಯ ಚಾಲನ…
ಕುಂದಾಪುರ: ಪಂಚಾಯತಿಯಲ್ಲಿ ಕೆಲಸ ಮಾಡುವ ಉಗ್ರಾಣಿಯೊಬ್ಬ ಸರ್ಕಾರಿ ಕೆಲಸಕ್ಕಾಗಿ ಬಂದಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿ ಪಂಚಾಯತಿಯಲ್ಲಿ ಉಗ್ರಾಣಿಯಾಗಿ ಕೆಲಸ ಮಾಡುವ ಉಮೇಶ್ ಎಂಬಾತ ಈ ಪ್ರಕರಣದಲ್ಲಿ ಆರೋಪಿ. ಪಡಿತರ ಚೀಟಿಗಾಗಿ ಹಲವಾರು ದಿನದಿಂದ ಸತಾಯಿಸುತ್ತಿದ್ದ ಉಮೇಶ್ ಮಹಿಳೆಯೊಬ್ಬರಿಗೆ ಜೂನ್ 26ರಂದು ಕಛೇರಿಗೆ ಬರಲು ಹೇಳಿದ್ದ. ತದನಂತರ ದಿನವೂ ಆಕೆಯನ್ನು ಸತಾಯಿಸುತ್ತಿದ್ದ ಆರೋಪಿ ಇಂದು ಆಕೆಗೆ ಕಛೇರಿಗೆ ಬರುವಂತೆ ತಿಳಿಸಿದ್ದ. ಆಕೆ ಕಛೇರಿಗೆ ಬಂದಾಗ ಆಕೆಯ ಮೈ ಮುಟ್ಟಲು ಯತ್ನಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ತಕ್ಷಣ ಕೂಗಿಕೊಂಡ ಮಹಿಳೆ ಹೊರಗಡೆ ಓಡಿ ಬಂದಾಗ ಜನರೆಲ್ಲ ಸೇರಿ ನಡೆದ ಘಟನೆ ತಿಳಿದು ಆರೋಪಿಯನ್ನು ಹಿಡಿಯಲು ಯತ್ನಿಸಿದರಾದರೂ ಆತ ಅಲ್ಲಿಂದ ಪರಾರಿಯಾದ. ಪ್ರಕರಣದಲ್ಲಿರುವ ಯುವತಿ ವಿಧವೆಯಾಗಿದ್ದು ಕಳೆದ ವರ್ಷ ವಿಧವಾ ವೇತನ ಮಾಡಿಸಿಕೊಡುತ್ತೇನೆಂದು ಆರೋಪಿ ಈಕೆಯ ಬೆನ್ನ ಹಿಂದೆ ಬಿದ್ದಿದ್ದ ಎಂಬ ಸುದ್ದಿಯೂ ಇದೀಗ ತಿಳಿದುಬಂದಿದೆ. ಮಾನಭಂಗ ಮತ್ತು ಜೀವ ಬೆದರಿಕೆ ಪ್ರಕರಣ ಗಂಗೊಳ್ಳಿ ಠಾಣೆಯಲ್ಲಿ ದಾಖಲಾಗಿದೆ. ದಾಖಲಾಗಿದೆ.
ಕುಂದಾಪುರ: ಕುಂದಾಪುರ ತಹಶೀಲ್ದಾರ್ ಸೇರಿದಂತೆ, ಉಪವಿಭಾಗಾಧಿಕಾರಿಗಳ ಸಹಿತ ಇನ್ನಿತರ ಅಧಿಕಾರಿಗಳ ಸಹಿ ಬಳಸಿ ಖೊಟ್ಟಿ ದಾಖಲೆಗಳನ್ನು ತಯಾರಿಸುತ್ತಿದ್ದ ಕೋಡಿ ನಾಗೇಶ್ ಕಾಮತ್ ಎಂಬವನನ್ನು ಕುಂದಾಪುರ ಪೋಲಿಸರು ಬಂಧಿಸಿದ್ದಾರೆ. ಬಂಧಿತ ನಾಗೇಶ್ ಕುಂದಾಪುರ ತಾಲೂಕು ಕಛೇರಿ ಹಾಗೂ ಇನ್ನಿತರ ಕಛೇರಿಗಳ ಖಾಸಗಿ ಡಾಕ್ಯುಮೆಂಟರ್ ರೈಟರ್ ಆಗಿದ್ದು ಹಲವಾರು ವರ್ಷಗಳಿಂದಲೂ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಿಂದ ಅಗತ್ಯವಿರುವ ದಾಖಲೆಗಳನ್ನು ಇನ್ನಿತರ ಮದ್ಯ ವರ್ತಿಗಳಂತೆ ಒದಗಿಸಿ ಕೊಡುತ್ತಿದ್ದ ಎನ್ನಲಾಗಿದೆ. ಆದರೆ ಖುದ್ದು ತಹಶೀಲ್ದಾರರೇ ಮಾನ್ಯ ಮಾಡದಿದ್ದ ದಾಖಲೆಗಳನ್ನು ಸಹಾ ಕ್ಷಣಮಾತ್ರದಲ್ಲಿ ಓ.ಕೆ. ಮಾಡಿಸಿಕೊಡುವ ತಾಕತ್ತು ಹೊಂದಿದ್ದ ನಾಗೇಶ್ ಕಾಮತ್ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದು ತಾಲೂಕು ಕಛೇರಿ, ಉಪವಿಭಾಗಾಧಿಕಾರಿಗಳ ಕೆಲಸ ಯಾವುದೇ ತಡೆಯಿಲ್ಲದೆ ಆಗ ಬೇಕಾದಲ್ಲಿ ಸಂಬಂಧ ಪಟ್ಟವರು ಇನ್ನಿತರ ಬ್ರೋಕರ್ ಗಳಿಗಿಂತಲೂ ನಾಗೇಶನನ್ನೇ ಅರಸಿ ಬರುವಂತಾಗಿತ್ತು. ಇತೀಚೆಗಷ್ಟೇ ಕುಂದಾಪುರ ಕಸಬಾ ಕೋಡಿ ಗ್ರಾಮದ ರುಕ್ಸಾನಾ ಬಿನ್ ದಿ. ಆಸಿಯಾ ಯಾ ಐಸಾಬಿ ಎಂಬವರಿಗೆ ಸೇರಿದ ಕುಂದಾಪುರ ಕಸಬ ಗ್ರಾಮದ ಸ.ನ.267/14 ರಲ್ಲಿ 10 ಎಕ್ರೆ…
ಕುಂದಾಪುರ: ಪತ್ರಿಕಾ ದಿನಾಚರಣೆ ಎನ್ನುವುದು ಆಚರಣೆಗೆ ಮಾತ್ರ ಸೀಮಿತವಾಗದೇ, ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ದಿನವಾಗಬೇಕು. ವಿದ್ಯಾರ್ಥಿಗಳು ಎಲ್ಲಿಯವರೆಗೆ ಅಧ್ಯಯನಶೀಲರಾಗುವಿದಿಲ್ಲವೋ ಅಲ್ಲಿಯ ವರೆಗೆ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಪ್ರೈಮ್ ಟಿವಿಯ ಕಾರ್ಯಕ್ರಮ ನಿರ್ದೇಶಕ ರವಿರಾಜ್ ವಳಲಂಬೆ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಯೋಜಿಸಿದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಬರವಣಿಗೆ, ಆಸಕ್ತಿ ಮತ್ತು ಹೊಸತನ್ನು ತಿಳಿಯುವ ಉತ್ಸಾಹ ಪತ್ರಿಕೋದ್ಯಮದಲ್ಲಿ ಬೆಳೆಯಲು ಸಹಕಾರಿಯಾದರೇ, ಸಂಶೋಧನಾತ್ಮಕ ದೃಷ್ಠಿಕೋನದಿಂದ ನಮ್ಮೊಳಗಿನ ವಿಚಾರಗಳು ಹೆಚ್ಚಾಗುತ್ತಾ ಹೋಗುತ್ತವೆ. ಒಂದು ಘಟನೆಯನ್ನು ಕೇವಲ ಸುದ್ದಿಯಾಗಿ ಮಾತ್ರವೇ ನೋಡದೆ ಅದರ ಒಳಹೊರವನ್ನು ಅರಿಯುವ ಮತ್ತು ಅದಕ್ಕೆ ಸ್ಪಂದಿಸುವ ಗುಣವನ್ನು ಪತ್ರಕರ್ತರಾಗುವವರು ಬೆಳೆಸಿಕೊಳ್ಳಬೇಕಿದೆ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರವಿರಾಜ್ ವಳಲಂಬೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪತ್ರಿಕೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಪ್ರಬಂಧ ಸ್ವರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಇಂಗ್ಲೀಷ್…
ಗ೦ಗೊಳ್ಳಿ : ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅ೦ತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ. ಆ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಯ೦ತ್ರಿಸಲು ಸಾಧ್ಯ ಎ೦ದು ಹಟ್ಟಿಗ೦ಗಡಿಯ ನಮ್ಮಭೂಮಿಯ ಕಾರ್ಯಕರ್ತೆ ಲಕ್ಷ್ಮೀ ಅವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಹಮ್ಮಿಕೊ೦ಡಿದ್ದ ಮಹಿಳಾ ಹಕ್ಕುಗಳು ಮತ್ತು ರಕ್ಷಣೆಯ ಕುರಿತಾಗಿನ ಮಾಹಿತಿ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹ೦ಚಿಕೊ೦ಡರು.ಅಧ್ಯಕ್ಷತೆ ವಹಿಸಿದ್ದ ಕು೦ದಾಪುರ ತಾಲೂಕು ಪ೦ಚಾಯತ್ನ ಮಹಿಳಾ ಮಿತ್ರದ ಫಿಲೋಮಿನಾ ಅವರು ಮಾತನಾಡಿ ದೌರ್ಜನ್ಯಕ್ಕೊಳಗಾದ ಸ೦ದರ್ಭದಲ್ಲಿ ಮಹಿಳೆಯರು ದೂರು ನೀಡಲು ಹಿ೦ಜರಿಯಬಾರದು. ಧೈರ್ಯದಿ೦ದ ಹೋರಾಟವನ್ನು ನಡೆಸಬೇಕು ಎ೦ದು ಹೇಳಿದರು. ಉಪನ್ಯಾಸಕಿ ಕವಿತಾ ಎಮ್ ಸಿ, ಮಹಿಳಾ ಮಿತ್ರದ ಕಾವೇರಿ ,ಸರಸ್ವತಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಸ್ವಾಗತಿಸಿದರು.ಉಪನ್ಯಾಸಕ ಭಾಸ್ಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಯುವಕರೆಲ್ಲ ಒಂದೊಂದು ಉದ್ಯೋಗ ನಿರತರು. ಆದರೆ ತಮ್ಮ ಕೆಲಸ-ಕಾರ್ಯದ ನಡುವೆಯೂ ಒಂದಿಷ್ಟು ಹೊತ್ತನ್ನು ಕಡ್ಡಾಯವಾಗಿ ಸಮಾಜಸೇವೆಗೆ ಮೀಸಲಿಡಬೇಕೆಂಬ ಅವರ ತುಡಿತ ಮಾತ್ರ ಬಹು ಅಪರೂಪವಾದುದು. ಸ್ನೇಹಿತನ ನೆನಪಲ್ಲಿ ಆರಂಭಗೊಂಡ ತೆಕ್ಕಟ್ಟೆ ಫ್ರೆಂಡ್ಸ್ ಎಂಬ ಸಂಘಟನೆಯೊಂದು ಇಂದು ನೂರಾರು ಕುಟುಂಬಗಳಿಗೆ ನೆಲೆ-ಬೆಲೆ ತಂದುಕೊಟ್ಟಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಸಮಾಜಮುಖಿ, ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವ ಪಡೆಯ ಕಾರ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಉಚಿತ ಅಂಬ್ಯಲೆನ್ಸ್: ಆರೋಗ್ಯ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ತೆಕ್ಕಟ್ಟೆ ಫ್ರೆಂಡ್ಸ್ 2011ರಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಚಿಂತನೆಯಲ್ಲಿದ್ದಾಗ ಅದನ್ನು ಕಾರ್ಯರೂಪಕ್ಕಿಳಿಸಲು ಮೊದಲು ಸಹಾಯಹಸ್ತ ಚಾಚಿದವರು ಉದ್ಯಮಿ ವಿ. ಕೆ. ಮೋಹನ್, ಬಳಿಕ ಸಂಸ್ಥೆಯ ಉದ್ದೇಶ ಅರಿತ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಸಂಸ್ಥೆಗೆ ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದರು. ಅಂದಿನಿಂದ ಇಂದಿನ ತನಕ ಹಗಲು ರಾತ್ರಿ ಎನ್ನದೇ ಯಾರೇ ಕರೆ ಮಾಡಿದರೂ ತೆಕ್ಕಟ್ಟೆ ಫ್ರೆಂಡ್ಸ್…
