ಗಂಗೊಳ್ಳಿ: ಕ್ರೀಡೆಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಪಾಠೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಹಕಾರ ನೀಡಬೇಕಾಗಿದೆ. ಕ್ರೀಡೆಗಳನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಂಡು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಕ್ರೀಡೆಯ ನಿಜವಾಗ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅನಂತ ಮೊವಾಡಿ ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕುಂದಾಪುರ ಹಾಗೂ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಸಹಕಾರದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ…
Author: ಸುನಿಲ್ ಹೆಚ್. ಜಿ. ಬೈಂದೂರು
ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕು ತನ್ನ ಕಾರ್ಯವ್ಯಾಪ್ತಿಯ ಗಂಗೊಳ್ಳಿ, ನಾಯಕವಾಡಿ, ತಲ್ಲೂರು ಹಾಗೂ ನೇರಳಕಟ್ಟೆಯಲ್ಲಿ ಶಾಖೆಗಳನ್ನು ಹೊಂದಿ, ಈ ಮೂಲಕ ಬ್ಯಾಂಕಿನ ಎಲ್ಲಾ ಸದಸ್ಯರುಗಳಿಗೆ ಸಾರ್ಥಕ ಸೇವೆಯನ್ನು ನೀಡುತ್ತಿದೆ. ಸದಸ್ಯರ ಹೆಚ್ಚಿನ ಪ್ರೋತ್ಸಾಹದಿಂದ ಬ್ಯಾಂಕ್ ಪ್ರತಿವರ್ಷ ಠೇವಣಿ ಸಂಗ್ರಹಣೆ ಮತ್ತು ಸಾಲ ವಸೂಲಾತಿಯಲ್ಲಿ ಗುರಿ ಸಾಧಿಸುತ್ತಿದ್ದು, ೨೦೧೪-೧೫ನೇ ಸಾಲಿನಲ್ಲಿ ಸುಮಾರು 69 ಕೋಟಿ ರೂ. ವ್ಯವಹಾರ ನಡೆಸಿದ್ದು, 20.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಸದಸ್ಯರಿಗೆ ಶೇ.15ಪಾಲು ಮುನಾಫೆ ನೀಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಜರಗಿದ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕಿನ ಎಲ್ಲಾ ಶಾಖೆಗಳನ್ನು ಹೆಚ್ಚಿನ ಪ್ರಗತಿಯತ್ತ ಸಾಗಿಸುವ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಬ್ಯಾಂಕು ಸದ್ರಿ ವರ್ಷದಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ’ಎ’ ವರ್ಗೀಕರಣ ಪಡೆದುದರ ಬಗ್ಗೆ ಮತ್ತು ಸಾಲ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರ…
ಕುಂದಾಪುರ: ಯುವಜನತೆ ಉತ್ತಮ ಉದ್ದೇಶದೊಂದಿಗೆ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕು. ಸಂಘಟನೆಗಳು ಸಮಾಜದ ಅಭಿವೃದ್ಧಿಯನ್ನೇ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ವಿದ್ಯಾರ್ಥಿವೇತನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ಅಂಜಲಿ ಚಂದ್ರಕಾಂತ ಹೇಳಿದರು. ಅವರು ಇತ್ತೀಚಿಗೆ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದ ವತಿಯಿಂದ ಜರಗಿದ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮತ್ಸ್ಯೋದ್ಯಮಿ ಜಗದೀಶ ಗಂಗೊಳ್ಳಿ ಅವರು ಕುಂದಾಪುರ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಶ್ರೀಧರ ಬಿ.ಟಿ., ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ, ಅರ್ಚಕ ರಾಮ ಬಿ. ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಆನಂದ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಜಿ.ಎಂ. ವಂದಿಸಿದರು.
ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಸತೀಶ್ ಜಿ. ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳ ವಿವರ ಇಂತಿದೆ : ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ (ಗೌರವಾಧ್ಯಕ್ಷ), ಶ್ರೀಧರ ಎನ್.ಸಕ್ಲಾತಿ (ಪ್ರಧಾನ ಕಾರ್ಯದರ್ಶಿ), ಕೆ.ಗೋಪಾಲಕೃಷ್ಣ ರಾವ್, ಜಿ.ಉದಯಶಂಕರ ರಾವ್, ಜಿ.ಚಿಕ್ಕಯ್ಯ ಪೂಜಾರಿ, ಡಾ.ಕಾಶೀನಾಥ ಪೈ, ಸುಧೀರ ಪಂಡಿತ್, ಬಿ.ಸದಾನಂದ ಶೆಣೈ, ಎಂ.ರಾಮಕೃಷ್ಣ ಪೈ, ಬಿ.ಲಕ್ಷ್ಮೀಕಾಂತ ಮಡಿವಾಳ, ಉಮಾನಾಥ ದೇವಾಡಿಗ, ರತ್ನಾಕರ ಗಾಣಿಗ, ಸೌಪರ್ಣಿಕಾ ಬಸವ ಖಾರ್ವಿ, ಟಿ.ವಾಸುದೇವ ದೇವಾಡಿಗ, ವೈ.ಸುರೇಶ ಖಾರ್ವಿ (ಉಪಾಧ್ಯಕ್ಷರು), ಗೋಪಾಲ ಚಂದನ್ (ಕಾರ್ಯದರ್ಶಿ), ಜಿ.ವೆಂಕಟೇಶ ಶೆಣೈ, ರವೀಂದ್ರ ಪಟೇಲ್, ಉಮೇಶ್ ಮೇಸ್ತ, ಸುರೇಶ ಜಿಎಫ್‌ಸಿಎಸ್, ಜಿ.ಮಹೇಶ ಎನ್.ಗಾಣಿಗ, ರಘುನಾಥ ಖಾರ್ವಿ, ಮಹೇಶ ಕೆ. ಎಸ್‌ಆರ್‌ಜಿ., ಗೋಪಾಲ ಖಾರ್ವಿ ದಾವನಮನೆ, ನಾರಾಯಣ ಶೆಣೈ, ರಾಘವೇಂದ್ರ ಗಾಣಿಗ, ಶೇಖರ ಜಿ., ಗಂಗಾಧರ ಕೆ. ಎಸ್‌ಆರ್‌ಜಿ., ಬಿ.ಸುರೇಂದ್ರ ಖಾರ್ವಿ, ಎಚ್.ಎಸ್.ಚಿಕ್ಕಯ್ಯ ಪೂಜಾರಿ (ಜತೆ…
ಕುಂದಾಪುರ: ಕೆಲವು ವರ್ಷಗಳಿಂದ ವಕ್ವಾಡಿ ಗ್ರಾಮದ ಹಲವೆಡೆ ಅಕ್ರಮವಾಗಿ ಮಣ್ಣು ಲೂಟುವ ಮಾಫಿಯಾಗಳು ಹೆಚ್ಚುತ್ತಿವೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ, ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಮಣ್ಣು ಮಾಫಿಯಾವನ್ನು ತಡೆಯುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರು ನೀಡಿದ ಮನವಿಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಮಂಗಳವಾರ ವಕ್ವಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮಸ್ಭೆಯಲ್ಲಿ ಈ ಆಗ್ರಹ ಕೇಳಿ ಬಂದಿತು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ನೂರಾರು ಎಕ್ರೆ ಸರ್ಕಾರೀ ಭೂಮಿಯಿಂದ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಯಾವುದೇ ಕ್ರಮಕ್ಕೆ ಮುಮದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗಣಿ ಇಲಾಖೆ ನಿದ್ದೆ ಮಾಡುತ್ತಿದೆಯೇ ಅಥವಾ ಅಕ್ರಮ ಮಣ್ಣ ದಂಧೆಕೋರರಿಂದ ಮಾಮೂಲಿ ಪಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ವಕ್ವಾಡಿ ಗ್ರಾಮ ಸೇರಿದಂತೆ ಕಾಳಾವರ ಗ್ರಾಮ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಲಿಟ್ರಸಿ ಯೋಜನೆಯಡಿ ಹ್ಯಾಪಿ ಸ್ಕೂಲ್ ರಚನೆಯ ಕುರಿತು ಸಮಾಲೋಚನ ಸಭೆ ನಡೆಯಿತು. ವಂಡ್ಸೆಯಂತಹ ಗ್ರಾಮೀಣ ಪ್ರದೇಶದಲ್ಲಿ ಶತಮಾನೋತ್ಸವವನ್ನು ಆಚರಿಸುತ್ತಿರುವ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹ್ಯಾಪಿ ಸ್ಕೂಲ್‌ನ್ನಾಗಿ ಮಾಡುವ ಕುರಿತು ರೋಟರಿ ಕ್ಲಬ್ ಕುಂದಾಪುರ ಆಸಕ್ತಿಯನ್ನು ಹೊಂದಿದೆ ಎಂದು ಹ್ಯಾಪಿ ಸ್ಕೂಲ್‌ನ ವಿಶೇಷತೆಯನ್ನು ಕ್ಲಬ್‌ನ ಲಿಟ್ರಸಿ ಚೇರ್‌ಮೆನ್ ಗೋಪಾಲ ಶೆಟ್ಟಿ ಸಭೆಗೆ ವಿವರಿಸಿದರು. ವಂಡ್ಸೆ ಗ್ರಾ. ಪಂ. ಅಧ್ಯಕ್ಷ ಹಾಗೂ ರೋಟರಿ ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕ್ಲಬ್ ಸೇವೆ ನಿರ್ದೇಶಕ ಸಾಲಗದ್ದೆ ಶಶಿಧರ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯಿನಿ ಮೋಹಿನಿ ಬಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ಮೊಗವೀರ ರಾಯಪ್ಪನಹಾಡಿ, ಉಪಾಧ್ಯಕ್ಷೆ ಕಲ್ಪನಾ ಶೆಟ್ಟಿ, ಸದಸ್ಯರಾದ ಉದಯ ಕೆ. ನಾಯ್ಕ್, ದಯಾನಂದ ಆಚಾರ್, ಶಂಕರ ಆಚಾರ್, ರಘುರಾಮ, ಇಂದಿರಾ,…
ಕುಂದಾಪುರ: ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜೇಸಿ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮಹಮ್ಮದ್ ಗೌಸ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಕುಂದಾಪುರ ವಲಯದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಆಧ್ಯಾತ್ಮ ರಹಸ್ಯ ಪತ್ರಿಕೆ ಸಂಪಾದಕ ಎಸ್. ಸತೀಶ್‌ಕುಮಾರ್, ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ, ಸಪ್ತಾಹ ಕಾರ್ಯದರ್ಶಿ ವೆಂಕಟೇಶ ಪ್ರಭು, ಖಜಾಂಚಿ ಯು. ರಾಘವೇಂದ್ರ ಭಟ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಸನತ್ ಶೇಟ್, ಜೇಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಸಪ್ತಾಹ ಸಂಚಾಲಕ ರಾಘವೇಂದ್ರ ಕೆ.ಸಿ, ಯೋಜನಾಧಿಕಾರಿ ಪ್ರಶಾಂತ್ ಹವಲ್ದಾರ್ ಉಪಸ್ಥಿತರಿದ್ದರು. ಸಪ್ತಾಹ…
ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಕೊನೆಯ ದಿನ ನಡೆಸಲಾದ ಧಾರ್ಮಿಕ ಸಭೆಯಲ್ಲಿ ಧರ್ಮದರ್ಶಿ ವೇ. ಹೆಚ್. ರಾಮಚಂದ್ರ ಭಟ್ಟರು ಸರ್ವರನ್ನೂ ಸ್ವಾಗತಿಸುತ್ತಾ, ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನವು ಹಂತಹಂತವಾಗಿ ಬೆಳೆದು ಬಂದ ರೀತಿ ಹಾಗೂ ದೇವಸ್ಥಾನದಿಂದ ತಾವು ನಡೆಸುವ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬೆಂಗಳೂರಿನ ಅರುಣ ಕುಮಾರ ಇವರು ತಾಲೂಕು ಮಟ್ಟದಲ್ಲಿ ನಡೆದ ಕಲೆ, ಸಾಹಿತ್ಯ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ನೆರವೇರಿಸಿ ಮಕ್ಕಳನ್ನು ಹುರಿದುಂಬಿಸಿದರು. ಈ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್, ವಕ್ವಾಡಿ ಹಾಗೂ ಪ್ರಾಥಮಿಕಶಾಲಾ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ ಈ ಶಾಲೆಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡವು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿಗಳಾದ ಕೃಷ್ಣಪ್ರಸಾದ ಅಡ್ಯಂತಾಯ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಿಯ ಅಭಿವೃದ್ಧಿ ಸಮಾಜಕ್ಕೆ ಪೂರಕವಾಗಿರಬೇಕು, ಸಾಧನೆ ಮಾಡಲು…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಹಂಗಳೂರಿನ ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ಪದಪ್ರದಾನ ಸಮಾರಂಭ ಜರುಗಿತು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಹಾಸಿನಿ ಕಾರ್ಯದರ್ಶಿ ಅಜೆಟನ್ ನಜರೆಲ್‌ಅವರಿಗೆ ಪದಪ್ರದಾನ ನೆರವೇರಿಸಿ ಪ್ರಮಾಣ ವಚನ ಭೋಧಿಸಿದರು. ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಐರಿನ್ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ, ಇಂಟರ‍್ಯಾಕ್ಟ್ ಚೇರ್‌ಮೆನ್ ವೆಂಕಟೇಶ ಪ್ರಭು ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿದರು. ಸೋನಾಲಿ ಎಸ್. ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿಧ್ಯಾರ್ಥಿ ನಾಯಕಿ ಪ್ರತೀಕ್ಷಾ ಬಿಲ್ಲವ ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ೪ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೀರಜ್ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಕುಂದಾಪುರ ತಾ. ಪಂ. ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಮಾತನಾಡಿ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯಿಂದ ದೇಶದ ಅಭ್ಯುದಯ ಸಾಧ್ಯ. ಈ ನಿಟ್ಟಿನಲ್ಲಿ ಉತ್ತಮ ಯುವಕರ ಪಡೆಯನ್ನು ಹೊಂದಿರುವ ಜೇಸಿ ಸಂಘಟನೆಯಿಂದ ಸಮಾಜದಲ್ಲಿ ಬದಲಾವಣೆ ತರುವಂತಹ ಉತ್ತಮ ಕಾರ್ಯಗಳು ಮೂಡಿ ಬರಲಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ನ್ಯೂ ಮೆಡಿಕಲ್ ಮಾಲಕ ದಿನಕರ ಕೆ. ಶೆಟ್ಟಿ, ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಗುತ್ತಿಗೆದಾರರಾದ ಮಹೇಶ್ ಪೂಜಾರಿ, ವಿದ್ಯುತ್ ಗುತ್ತಿಗೆದಾರರಾದ ಪ್ರಕಾಶ್ ಆನಗಳ್ಳಿ, ಕುಂದಾಪುರ ಪುರಸಭೆ ಸದಸ್ಯ ಎ. ಸಂದೀಪ ಪೂಜಾರಿ ಕೋಡಿ,…
