ಶೈಕ್ಷಣಿಕ ಸಾಧನೆಗಾಗಿ ಧೀರಜ್ ಹೆಜಮಾಡಿಗೆ ಸನ್ಮಾನ

Call us

Call us

Call us

ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ೪ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಧೀರಜ್ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು.

Call us

Click Here

ಮುಖ್ಯ ಅತಿಥಿ ಕುಂದಾಪುರ ತಾ. ಪಂ. ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಮಾತನಾಡಿ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯಿಂದ ದೇಶದ ಅಭ್ಯುದಯ ಸಾಧ್ಯ. ಈ ನಿಟ್ಟಿನಲ್ಲಿ ಉತ್ತಮ ಯುವಕರ ಪಡೆಯನ್ನು ಹೊಂದಿರುವ ಜೇಸಿ ಸಂಘಟನೆಯಿಂದ ಸಮಾಜದಲ್ಲಿ ಬದಲಾವಣೆ ತರುವಂತಹ ಉತ್ತಮ ಕಾರ್ಯಗಳು ಮೂಡಿ ಬರಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ನ್ಯೂ ಮೆಡಿಕಲ್ ಮಾಲಕ ದಿನಕರ ಕೆ. ಶೆಟ್ಟಿ, ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಗುತ್ತಿಗೆದಾರರಾದ ಮಹೇಶ್ ಪೂಜಾರಿ, ವಿದ್ಯುತ್ ಗುತ್ತಿಗೆದಾರರಾದ ಪ್ರಕಾಶ್ ಆನಗಳ್ಳಿ, ಕುಂದಾಪುರ ಪುರಸಭೆ ಸದಸ್ಯ ಎ. ಸಂದೀಪ ಪೂಜಾರಿ ಕೋಡಿ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ, ಸಪ್ತಾಹ ಕಾರ್ಯದರ್ಶಿ ವೆಂಕಟೇಶ ಪ್ರಭು, ಖಜಾಂಚಿ ಯು. ರಾಘವೇಂದ್ರ ಭಟ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಸನತ್ ಶೇಟ್, ಜೇಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ್, ಸಪ್ತಾಹ ಸಂಚಾಲಕ ರಾಘವೇಂದ್ರ ಕೆ.ಸಿ, ಯೋಜನಾಧಿಕಾರಿ ರತಿಕ್ ಮುರ್ಡೇಶ್ವರ, ಶ್ರೀಕರ ಉಪಸ್ಥಿತರಿದ್ದರು. ಸಪ್ತಾಹ ಸಭಾಪತಿ ವಿಜಯ ಭಂಡಾರಿ ಕಾರ್ಯಕ್ರಮದ ಮುನ್ನೋಟ ನೀಡಿದರು. ಕಾರ್ಯದರ್ಶಿ ನಾಗೇಶ್ ನಾವಡ ವಂದಿಸಿದರು. ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

Leave a Reply