Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು. ಇವತ್ತು ವಿಜ್ಞಾನದ ಬಗ್ಗೆ ಕುತೂಹಲಗಳನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರುವುದರಿಂದ ತಿಳಿದುಕೊಳ್ಳುವ ವೈಚಾರಿಕ ಮನೋಭಾವನ್ನು ರೂಢಿಸಿಕೊಳ್ಳಬೇಕು ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಪಿ ಭಟ್ ಹೇಳಿದರು. ಕುಂದಾಪುರದ ಸಮುದಾಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಉಡುಪಿ ಜಿಲ್ಲಾ ಘಟಕದ ಸಹಯೋಗದೊಂದಿಗೆ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಆಯೋಜಿಸಲಾದ ಚುಕ್ಕಿ ಚಂದ್ರಮ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್ ಮಾತನಾಡಿ, ಅನುಮಾನ, ಪ್ರಶ್ನೆಗಳಿಂದ ವಿಜ್ಞಾನ ವಿಕಾಸಹೊಂದುತ್ತದೆ. ಜ್ಯೋತಿಷ್ಯದ ಮೂಲಕ ಹೆದರಿಸುವ ಪ್ರವೃತ್ತಿ ಇಂದು ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಪ್ರಗತಿಪರ ಆಲೋಚನೆಗಳನ್ನು ಮಾಡುವ ಮೂಲಕ ಕೌತುಕವನ್ನು ವಿಜ್ಞಾನದ ಮೂಲಕ ಪರಿಹರಿಸಿಕೊಳ್ಳಬೇಕು. ನಂಬಿಕೆಗಳಿಗೆ ಪುರಾವೆ ಬೇಡ ಆದರೆ ಜ್ಞಾನಕ್ಕೆ ಸೂಕ್ತ ಪುರಾವೆ ಬೇಕು. ಆ ನಿಟ್ಟಿನಲ್ಲಿ ಪ್ರಗತಿಪರ ಆಲೋಚನೆಗಳಿಗೆ ಅವಕಾಶ ಮಾಡಿಕೊಡುವುದು ಈ ಕಾರ್ಯಕ್ರಮ…

Read More

ಹಿರಿಯ ಸಾಹಿತಿ ನಾ. ಡಿಸೋಜ ಬೈಂದೂರು ಡೈರೆಕ್ಟರಿ ಬಿಡುಗಡೆಗೊಳಿಸಿ ಮಾತನಾಡಿದರು. ಬೈಂದೂರು: ಬೈಂದೂರಿಗೆ ಸಾಕಷ್ಟು ಪ್ರಾಚೀನತೆ ಇದೆ. ಇಲ್ಲಿ ಹಲವಾರು ಪುರಾತನ ಶ್ರದ್ಧಾಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳಿದ್ದರೂ ಗುರುತಿಸುವಂತಹ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಬೈಂದೂರನ್ನು ಶೀಘ್ರದಲ್ಲಿಯೇ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಬೈಂದೂರಿನ ಪ್ರಾಚಿನತೆಗೆ, ಐತಿಹಾಸಿಕ ಶ್ರೀಮಂತಿಕೆಗೆ ನ್ಯಾಯಸಮ್ಮತ ಸ್ಥಾನವನ್ನು ನೀಡಿದಂತಾಗಬಹುದೆಂದು ಪ್ರಸಿದ್ಧ ಸಾಹಿತಿ, ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಹೇಳಿದರು. ‘ಕುಂದಾಪ್ರ ಡಾಟ್ ಕಾಂ’ ನ ವಿನೂತನ ಪರಿಕಲ್ಪನೆಯಂತೆ ಮೂಡಿಬಂದ ಬೈಂದೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಕಟಿಸಿದ ’ಬೈಂದೂರು ಡೈರೆಕ್ಟರಿ’ ಪುಸ್ತಕವನ್ನು ಇಲ್ಲಿನ ಶಾರದಾ ವೇದಿಕೆಯಲ್ಲಿ ಸೆ.21 ರ ಸಂಜೆ ಜರುಗಿದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಒಂದು ದೇಶದ ಇತಿಹಾಸವನ್ನು ಎಲ್ಲಿಯ ವರೆಗೆ ನಮ್ಮದಾಗಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಒಂದು ಊರನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಲು ಸಾಧ್ಯವಾಗದು. ಇತಿಹಾಸ, ಪರಂಪರೆಯ ಅರಿವು, ಪ್ರಜ್ಞೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ಇದರಿಂದ ಒಂದು ನಾಡನ್ನು, ಒಂದು ಊರನ್ನು ಮುಂದಿನ ದಿನಗಳಲ್ಲಿ…

Read More

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ | ಮೇ. 2012. ಸಾಧನೆಯೆಂಬುದು ಯಾರೊಬ್ಬರ ಸೊತ್ತಲ್ಲ. ಏನನ್ನಾದರೂ ಸಾಧಿಸಬೇಕೆಂಬ ಹಂಬಲ, ಆತ್ಮಸ್ಥೈರ್ಯ ಜೊತೆಗೊಂದಿಷ್ಟು ಕಠಿಣ ಪರಿಶ್ರವ ಇವಿಷ್ಟಿದ್ದರೆ ಸಾಕು ವ್ಯಕ್ತಿ ತಾನಾಗಿಯೇ ಬೆಳೆಯುತ್ತಾನೆ. ಸಾಧಿಸಿಯೇ ತೀರುತ್ತಾನೆ. ಬಹುಶಃ ಆತನಿಗೆ ಇದಕ್ಕಿಂತ ಹೆಚ್ಚಿನ ಆತ್ಮತೃಪ್ತಿ ಬೇರಾವುದೂ ನೀಡದು. ಬದುಕಿನಲ್ಲಿ ಅಡ್ಡಲಾದ ಟೀಕೆಯನ್ನೇ ಮೆಟ್ಟಿಲಾಗಿಸಿಕೊಂಡು, ಪ್ರೋತ್ಸಾಹದ ಮಾತುಗಳಿಂದ ಮಾರ್ಗವೊಂದನ್ನು ಕಂಡುಕೊಂಡು, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಕುಂದಾಪುರ ತಾಲೂಕು, ದೇವಲ್ಕುಂದ ಗ್ರಾಮದ ಬಾಳೆಕೆರೆಯ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಬಿ. ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್, ಡೆಡ್ ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲೊಂದು ದಾಖಲೆಯನ್ನು ಬರೆದು, ರಾಜ್ಯ-ರಾಷ್ಟ್ರಮಟ್ಟದಲ್ಲೂ ಮಿಂಚಿ ಅಪಾರ ಮೆಚ್ಚುಗೆ ಗೆ ಪಾತ್ರರಾದವರು. ಕುಂದಾಪ್ರ ಡಾಟ್ ಕಾಂ ಲೇಖನ.ಕುಂದಾಪ್ರ ಡಾಟ್ ಕಾಂ ಲೇಖನ. ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ಆಕರ್ಷಿಸಿದ್ದು ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್ ನಂತಹ ಗಟ್ಟಿಗರ ಕ್ಷೇತ್ರ. ಯಾವುದೂ…

Read More