ಗ೦ಗೊಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಮತ್ತು ಶಿಸ್ತು ಅತೀ ಮುಖ್ಯವಾದುದು. ಕಲಿಕೆಗೆ ಬೇಕಾದ ಏಕಾಗ್ರತೆಯನ್ನು ಸಾಧಿಸಲು ಧ್ಯಾನ ನೆರವಾಗುತ್ತದೆ. ನಿರ೦ತರ ಅಭ್ಯಾಸದಿ೦ದ ಯಶಸ್ಸು ಸಾಧ್ಯ. ಎ೦ದು ಸಿ೦ಡಿಕೇಟ್ ಬ್ಯಾ೦ಕ್ ವಲಯ ಮಾಜಿ ಪ್ರಬ೦ಧಕ ಪಾ೦ಡುರ೦ಗ ನಾಯಕ್ ಹೇಳಿದರು. ಅವರು ಇತ್ತೀಚೆಗೆ ಇ೦ಡಿಯಾ ನೌ ಫೌ೦ಡೇಶನ್ ವತಿಯಿ೦ದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಪ್ರಾಸ್ತಾವಿಕ ಮಾತುಗಳ ಜೊತೆಗೆ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಭಾಸ್ಕರ್ ಶೆಟ್ಟಿ, ರಾಘವೇ೦ದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು. ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಡಾ| ಪಾರ್ವತಿ ಜಿ.ಐತಾಳ್ ಅವರ ’ಉಪನಿಷತ್ ಚಿಂತನೆ’ ಎಂಬ ಅನುವಾದಿತ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2014ರ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಲಭಿಸಿದೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಪಾರ್ವತಿಯವರು ಈವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ಕೃತಿ, ಅನುವಾದಿತ ಕೃತಿಗಳ ಮೂಲಕ ಅಪಾರ ಓದುಗ ಬಳಗವನ್ನು ಕಟ್ಟಿಕೊಟ್ಟಿದ್ದಾರೆ.
ಕುಂದಾಪುರ: ಯಲ್ಲಾಪುರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ಸಿನ ಚಾಲಕ ಕುಂದಾಪುರದ ನಿವಾಸಿ ಮಹಾಬಲ ಪೂಜಾರಿ ಅವರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸು ಮಂಗಳೂರಿನಿಂದ ಮುಂಬೈಗೆ ಸಾಗುತ್ತಿದ್ದು ಹೆದ್ದಾರಿಯಲ್ಲಿ ಬಿದ್ದ ಮರವನ್ನು ತಪ್ಪಿಸಲು ಚಾಲಕ ಬಸ್ಸನ್ನು ತೀರಾ ಎಡಗಡೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಬಸ್ಸು ಟ್ರಕ್ಗೆ ಢಿಕ್ಕಿ ಹೊಡೆದಿತ್ತು. ಅಪಘಾತದಿಂದ ಇನ್ನೋರ್ವ ಚಾಲಕ, ಕ್ಲಿನರ್ ಉದಯ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಮಹಾಬಲ ಪೂಜಾರಿ ಅವರ ಮೃತ ದೇಹವನ್ನು ಮಂಗಳವಾರ ಕುಂದಾಪುರಕ್ಕೆ ತರಲಾಗಿದ್ದು ಆಗ ಬೃಹತ್ ಸಂಖ್ಯೆಯಲ್ಲಿ ಜನರು ನರೆದಿದ್ದರು. ಸಚಿವ ವಿನಯ ಕುಮಾರ್ ಸೊರಕೆ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಂದಾಪುರ: ಹಿರಿಯ ಕಾಂಗ್ರೇಸಿಗ, ಪುರಸಭೆಯ ಮಾಜಿ ಸದಸ್ಯ ರತ್ನಾಕರ ಶೇರುಗಾರ್ (66) ಅವರು ಗುರುವಾರ ಸಂಜೆ ಚರ್ಚ್ ರಸ್ತೆಯಲ್ಲಿ ತಮ್ಮನ ಮನೆಯ ಕಾಂಕ್ರಿಟ್ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಮನೆಯ ಆರ್.ಸಿ.ಸಿ ಛಾವಣಿಯಲ್ಲಿ ನೀರು ತುಂಬಿರುವುದನ್ನು ತೆರವುಗೊಳಿಸುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಕುಂದಾಪುರ ವಿ.ಎಸ್.ಎಸ್. (ನಿ) ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದು, ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮರವಂತೆ: ಭಗವದ್ಗೀತೆಯಲ್ಲಿ ಸನಾತನ ಧರ್ಮದ ಸಾರಸರ್ವಸ್ವ ಅಡಗಿದೆ. ಭಗವದ್ಗೀತೆ ಎಂಬ ಹೆಸರೇ ಸೂಚಿಸುವಂತೆ ಅದು ಭಗವಂತನಿಂದಲೇ ಪ್ರಣೀತವಾದುದು. ಅನ್ಯ ಧರ್ಮಗಳಂತೆ ಅದು ದೇವರ ಪ್ರತಿನಿಧಿಗಳು ಸಂಗ್ರಹಿಸಿ ಬೋಧಿಸಿದ ಧರ್ಮವಲ್ಲ. ಇದನ್ನು ಅರಿಯದವರು ಹಿಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಧರ್ಮದ್ವೇಷ ಒಳ್ಳೆಯದಲ್ಲ’ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾ ವಾಚಸ್ಪತಿ ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು. ’ಭಗವದ್ಗೀತೆ ವರ್ಣ ಮತ್ತು ಜಾತಿ ಪದ್ಧತಿಯನ್ನು ಸಾರುತ್ತದೆ ಎಂದು ಆಕ್ಷೇಪಿಸುತ್ತಾರೆ. ಅದರಲ್ಲಿ ಹೇಳಿರುವುದು ಮನುಷ್ಯರನ್ನು ಅವರವರ ಗುಣಕರ್ಮಕ್ಕೆ ಅನುಗುಣವಾಗಿ ವಿಭಾಗಿಸಲಾಗಿದೆ ಎಂದು. ಕರ್ಮಾಧರಿತ ವಿಭಾಗ ಇಂದಿನ ಸಮಾಜದಲ್ಲೂ ಇದೆ. ಸನಾತನ ಧರ್ಮದಲ್ಲಿ ದೇವಾಲಯಗಳಿಗೆ, ಆರಾಧನೆಗೆ ವಿಶೇಷ ಮಹತ್ವ ಇದೆ. ಇವೆರಡೂ ಸಮುದಾಯವನ್ನು ಒಂದುಗೂಡಿಸುವ ಅವಕಾಶಗಳು. ಅವುಗಳಿಂದ ನಾವು ದೂರ ಸರಿಯಬಾರದು’ ಎಂದು ಅವರು ನುಡಿದರು. ಆಶೀರ್ವಚನಗೈದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.…
ಕುಂದಾಪುರ: ತಾಲೂಕಿನ ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ಮರಳುಗಾರಿಕೆಗೆ ನಿಷೇಧಿವಿದ್ದರೂ ಕೂಡ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ.ನಂ.1 ಮತ್ತು 239ನೇ ಸ್ಥಳದ 400 ಎಕರೆ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸ್ಥಳೀಯರು ಮನವಿ ಮಾಡಿದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇಲಾಖೆ ದಿವ್ಯ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಸ್ರೂರು ಗ್ರಾಮದ ಆನಗಳ್ಳಿ ರಸ್ತೆಯ ರೈಲ್ವೇ ಸೇತುವೆ 10ಮೀ. ಕೆಳಭಾಗದಲ್ಲಿ ಹಟ್ಟಿಕುದ್ರು ಭಾಗದ 10 ಎಕರೆ ಜಾಗವನ್ನೊಳಗೊಂಡಿರುವ ಜಾನುವಾರುಗಳ ಮೇವಿಗಾಗಿ ಖಾರೀದಿಸಿದ ಹಾಗೂ ಕೃಷಿ ಚಟುವಟಿಕೆ ನಡೆಯುವ ಸ್ಥಳಭಾಗದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮತ್ತು ಹಿರಿಯ ಭೂವಿಜ್ಞಾನ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ, ಮನವಿ ನೀಡಿದ್ದರೂ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ರೂರು ಮತ್ತು ಹಟ್ಟಿಕುದ್ರು ನಡುವೆ ಇರುವ ಕುದ್ರು(ದ್ವೀಪ)ನಲ್ಲಿ ಈ ಹಿಂದೆ…
ಮರವಂತೆ: ಜೀವಜಗತ್ತಿನಲ್ಲಿ ಮನುಷ್ಯನಿಗೆ ಮಾತ್ರ ಮನಸ್ಸು, ಬುದ್ಧಿ ಮತ್ತು ಕ್ರಿಯಾಶಕ್ತಿ ಇದೆ. ಹಾಗಾಗಿ ಅವನು ಜೀವಿಗಳಲ್ಲೆಲ್ಲ ಶ್ರೇಷ್ಠ. ಅವನಲ್ಲಿ ಮೃಗೀಯ ವರ್ತನೆ ಇರಕೂಡದು. ಅವನು ಸಾಮಾಜಿಕವಾಗಿ ಬದುಕುವಾಗ ಅದರ ಜೊತೆಗೆ ಆಧ್ಯಾತ್ಮಿಕ ಬದುಕೂ ಅಗತ್ಯ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಅವರು ಅನುಗ್ರಹ ಭಾಷಣ ಮಾಡಿದರು. ಬದುಕಿನಲ್ಲಿ ನಾವಂದುಕೊಂಡಂತೆ ಏನೂ ಆಗುವುದಿಲ್ಲ. ಭಗವಂತನ ಇಚ್ಛೆಯಂತೆ ಎಲ್ಲವೂ ಆಗುತ್ತದೆ. ಬದುಕಿನಲ್ಲಿ ಶ್ರೇಯಸ್ಸು ಉಂಟಾಗಬೇಕಾದರೆ ಭಗವಂತನ ಇಚ್ಛೆಗೆ ನಮ್ಮ ಇಚ್ಛೆ ಅಧೀನವಾಗಿರುವಂತೆ ನಾವು ನೋಡಿಕೊಳ್ಳಬೇಕು ಎಂದು ಅವರು ನುಡಿದರು. ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ. ಚಂದ್ರಶೇಖರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಇಡಗುಂಜಿ ಮಹಾಗಣಪತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ಜಿ. ಜಿ. ಸಭಾಹಿತ್ ಧಾರ್ಮಿಕ ಪ್ರವಚನ ನೀಡಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ…
ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸರಕಾರದ ಸಚಿವ ಹಾಗೂ ಶಾಸಕರ ದಂಡು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗಿ ಪುನಃ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಂತಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದೆ. ಶಾಸಕ ಕೋದಂಡನ್ 67 ಕಾರ್ಯಕರ್ತರೊಂದಿಗೆ ಮೇ 5ರಂದು ಕೊಲ್ಲೂರಿಗೆ ಆಗಮಿಸಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಜಯಲಲಿತಾ ಕೂಡ ಕೊಲ್ಲೂರು ದೇವಿಯ ಭಕ್ತರಾಗಿದ್ದು ಕೆಲವು ವರ್ಷಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದರು.
ಮರವಂತೆ: ಮರವಂತೆಯ ಕಡಲತೀರದಲ್ಲಿರುವ ವರಾಹ ದೇವರು ಉಡುಪಿ ಜಿಲ್ಲೆಯ ಎಲ್ಲ ಮೀನುಗಾರರ ಆರಾಧ್ಯ ದೇವರು. ಮೀನುಗಾರರು ತಮ್ಮ ಉದ್ಯೋಗ, ಬದುಕು, ಸುಖ. ಕಷ್ಟಗಳಿಗೆ ವರಾಹ ಕಾರಣ ಎಂದು ಭಾವಿಸುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮೊದಲು ಅವರು ಪ್ರಾರ್ಥಿಸುವುದು ವರಾಹನನ್ನು. ಅದರ ದ್ಯೋತಕವಾಗಿಯೇ ಇಲ್ಲಿ ನಡೆಯುತ್ತಿರುವ ಪ್ರಸಕ್ತ ಮಹೋತ್ಸದಲ್ಲಿ ಅವರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ ಎಂದು ಕೋಟದ ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಾರಂಭದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಭಾಸ್ಕರ ಹೆಬ್ಬಾರ್ ವಂದಿಸಿದರು. ಸಂಜೀವ ಹೊಸಾಡು ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಮುಂಬೈ ಉದ್ಯಮಿಗಳಾದ ಸುರೇಶ ಡಿ. ಪಡುಕೋಣೆ, ವಿಜಯಕೃಷ್ಣ ಪಡುಕೋಣೆ, ಪೊಲೀಸ್ ಇಲಾಖೆಯ ಅಧಿಕಾರಿ ಕೆ. ಶಂಕರ ಹೆಬ್ಬಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ. ವಿನಾಯಕರಾವ್,…
