Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಮರವಂತೆ: ಸಮುದ್ರದ ಮಧ್ಯದಲ್ಲಿ ದಿಕ್ಕುತೋಚದ ನಾವಿಕರು ದೀಪಸ್ಥಂಭಗಳನ್ನು ಅನುಸರಿಸಿ ದಡ ಸೇರುತ್ತಾರೆ. ಅದೇರೀತಿ ದೇವಾಲಯಗಳು ಮನುಷ್ಯರಿಗೆ ಸಂಸಾರ ಸಾಗರವನ್ನು ದಾಟಲು ದಾರಿದೀಪಗಳಂತೆ ಬೆಳಕು ತೋರುತ್ತವೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನ:ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ‍್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮರವಂತೆಯ ವರಾಹ ದೇವಾಲಯ ತುಂಬ ವಿಶಿಷ್ಟವಾದುದು. ಹಿರಣ್ಯಾಕ್ಷನೆಂಬ ರಾಕ್ಷಸ ಭೂಮಿಯನ್ನು ಕದ್ದೊಯ್ದು ಪಾತಾಳದಲ್ಲಿರಿಸಿದಾಗ ಅದನ್ನು ಮರಳಿತಂದ ಅವತಾರ ವರಾಹ. ಹಿರಣ್ಯಾಕ್ಷ ಎಂದರೆ ಬಂಗಾರದ ಕಣ್ಣುಳ್ಳವನು ಎಂದರ್ಥ. ಆದರೆ ಆತನದು ರಕ್ಕಸ ಹೃದಯ. ವರಾಹ ಪ್ರಾಣಿ ರೂಪಿ. ಆದರೆ ಅದರೊಳಗಿರುವುದು ದೇವರ ಹೃದಯ. ಮನುಷ್ಯರೆಲ್ಲರೂ ಪರಮಾತ್ಮ ಸ್ವರೂಪಿಗಳು ಎಂದು ಭಾವಿಸಲಾಗುತ್ತದೆ. ಅದಕ್ಕೆ ಸರಿಯಾಗಿ ಅವರೆಲ್ಲರೂ ದೇವತಾ ಹೃದಯ ಹೊಂದಿರಬೇಕು ಎಂಬ ಸಂದೇಶವನ್ನು ವರಾಹ ನೀಡುತ್ತಾನೆ ಎಂದು ಅವರು ನುಡಿದರು. ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ…

Read More

ವಾರಾಹಿ ನೀರಾವರಿ ಯೋಜನೆಯ ಪ್ರಥಮ ಹಂತಹ ಕಾಮಗಾರಿ ಲೋಕಾರ್ಪಣೆ ಸಿದ್ಧಾಪುರ: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ನಮ್ಮ ಸರಕಾರ ಹೆಚ್ಚಿನ ಒತ್ತು ನೀಡಿದ್ದು ಅದರಲ್ಲಿ ವಾರಾಹಿ ಯೋಜನೆಯೂ ಸೇರಿದೆ. ಕೂಡ್ಲು ಸಂಗಮದ ಪಾದಯಾತ್ರೆ ಸಮಯದಲ್ಲಿ ನೀಡಿದ ವಾಗ್ದಾನದಂತೆ ಪ್ರತಿ ವರ್ಷ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಹಣವನ್ನು ವ್ಯಯಿಸುತ್ತಿದ್ದು, ಈ ಬಾರಿ ಮುಂಗಡ ಪತ್ರದಲಿ 12 ಸಾವಿರ ಕೋಟಿ ಹಣವನ್ನು ಮೀಸಲಿರಿಸಲಾಗಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಅವರು ಹೊಳೆಶಂಕರನಾರಾಯಣ ವಾರಾಹಿ ನೀರಾವರಿ ಯೋಜನೆಯ ಪೂರ್ಣಗೊಂಡ ಪ್ರಥಮ ಹಂತದ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸಿದ್ಧಾಪುರದ ಫ್ರೌಡಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ 2 ವರ್ಷಗಳಲ್ಲಿ ವಾರಾಹಿ ಯೋಜಯು ಸಂಪೂರ್ಣಗೊಳ್ಳಲಿದ್ದು, ಸುಮಾರು 40 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಲಿದೆ. ಈ ಬಗ್ಗೆ ಯಾರೂ ಕೂಡ ಸಂಶಯ ಹಾಗೂ ಆತಂಕ ಇಟ್ಟುಕೊಳ್ಳಬಾರದು ಎಂದರು. 35 ವರ್ಷಗಳಿಂದ ಈ ವಾರಾಹಿ ಯೋಜನೆಯ…

Read More

ಬೆಂಗಳೂರು,ಮೇ.3: ಇಂದು ಬೆಂಗಳೂರಿನಲ್ಲಿಯೂ ಕುಂದಾಪ್ರ ಕನ್ನಡದ ಸದ್ದು ಕೇಳುತ್ತಿತ್ತು. ಜಿ.ಪಿ ನಗರದ ವಿಜಯ ಬ್ಯಾಂಕ್ ಕಾಲನಿಯಲ್ಲಿ ನಡೆದ ‘ನಮ್ಮ ಕುಂದಾಪುರ’ ಫೇಸ್ಬುಕ್ ಗುಂಪಿನ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುಂಪಿನ ಸದಸ್ಯರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಒಂದಿಷ್ಟು ಕುಂದಾಪುರಿಗರು ಸೇರಿ ತಮ್ಮೂರಿನವರನ್ನು ನೇರವಾಗಿಯೇ ಕಂಡು ಮಾತನಾಡಿ ಸಂಭ್ರಮಿಸಿದರು. ನಮ್ಮ ಕುಂದಾಪುರ ಗುಂಪಿನ ಸಂಸ್ಥಾಪಕ ರಾಧಾಕೃಷ್ಣ ಶೆಟ್ಟಿ ಸದಸ್ಯರನ್ನು ಸ್ವಾಗತಿಸುತ್ತಾ ಮಾತನಾಡಿ ಇಂದು ನಮ್ಮ ಕುಂದಾಪುರ ಗುಂಪು ಸ್ಥಾಪನೆಯಾಗಿ ಐದು ವರ್ಷವಾಗಿದ್ದು ಸದ್ಯ 55,000ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಈವರೆಗೆ ವಿವಿಧ ಕಡೆಗಳಲ್ಲಿ ಗುಂಪಿನ ಸದಸ್ಯರ 11ಕ್ಕೂ ಹೆಚ್ಚು ಸಹಮಿಲನ ನಡೆದಿದೆ. ಕುಂದಾಪುರದ ಭಾಷೆ, ಸಂಸ್ಕೃತಿಗೆ ಪೂರಕವಾದ ಮಾಹಿತಿಗಳನ್ನು ಗುಂಪಿನಲ್ಲಿ ಮತ್ತಷ್ಟು ಹಂಚುವುದರ ಮೂಲಕ ನಮ್ಮೂರಿಗೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರಕಿಸಿಕೊಡುವ ಗುರಿ ನಮ್ಮದಾಗಿರಲಿ ಎಂದು ಆಶಿಸಿದರು. ಸಹಮಿಲನದಲ್ಲಿ 55ಕ್ಕೂ ಹೆಚ್ಚು ಗುಂಪಿನ ಸದಸ್ಯರು ಭಾಗವಹಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡ ಸದಸ್ಯರು ನಂತರ ಆಟ, ಊಟ, ಮಾತಿನಲ್ಲಿ ತಲ್ಲೀನರಾದರು. ಕುಂದಾಪುರದಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ,…

Read More

ಬೈಂದೂರು: ಆ ಮನೆಯವರೆಲ್ಲಾ ಮದುವೆಯ ಸಂಭ್ರಮದಲ್ಲಿದ್ದರು. ಇನ್ನೇನು ಎರಡು ದಿನ ಕಳೆದರೆ ಮದುವೆ ನಡೆದು ಹೋಗುವುದಿತ್ತು. ಆದರೆ ಮದುಮಗಳು ಮಾತ್ರ ಏಕಾಏಕಿ ನಾಪತ್ತೆಯಾಗಿದ್ದಾಳೆ! ಮದುವೆಯ ಸಡಗರವಿರಬೇಕಿದ್ದ ಮನೆಯಲ್ಲೀಗ ಈಗ ನೀರವ ಮೌನ ಆವರಿಸಿಕೊಂಡಿದೆ. ಇತ್ತಕಡೆ ವಧುವಿನ ಪ್ರಿಯಕನಾಗಿರುವ ಅನ್ಯಕೋಮಿನ ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ನಾಪತ್ತೆಯಾದವಳ ಸುಳಿವು ಮಾತ್ರ ಇನ್ನೂ ಲಭ್ಯವಾಗಿಲ್ಲ. ಪ್ರಕರಣದ ವಿವರ: ಶಿರೂರು ಗ್ರಾಮದ ದೊಂಬೆಯ ಪಡಿಯಾರಹಿತ್ಲು ರಾಮಚಂದ್ರ ಎಂಬುವವರ ಪುತ್ರಿ ಮಮತಾ (24) ಎಂಬುವವರಿಗೆ ಮೇ.3ರಂದು ವರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮಮತಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತನಗೆ ಈ ಮದುವೆ ಇಷ್ಟವಿಲ್ಲ. ತಾನು ಬೆರೋಬ್ಬರನ್ನು ಪ್ರೀತಿಸಿರುವುದಾಗಿ ಆಕೆ ಮನೆಯವರಲ್ಲಿ ತಿಳಿಸಿದ್ದಾಗ, ಮನೆಯವರು ಇದಕ್ಕೆ ಸಹಜವಾಗಿ ಪ್ರತಿರೋಧವೊಡ್ಡಿದ್ದರು. ಪ್ರೀತಿಸಿದ ಹುಡುಗನ್ನು ಮರೆತು, ಮನೆಯವರು ಗೊತ್ತುಪಡಿಸಿದ ಹುಡುಗನೊಂದಿಗೆ ವಿವಾಹವಾಗಲು ಒಪ್ಪಿಸಿದ್ದರು. ಮೊದಲು ಮನೆಯವರು ಒಪ್ಪಿದ ಹುಡುಗನೊಂದಿಗೆ ವಿವಾಹವಾಗಲು ಅರೆಸಮ್ಮತಿ ಸೂಚಿಸಿದ್ದ ಮಮತಾ ಮದುವೆ ದಿನ ಹತ್ತಿರವಿರುವಾಗ ಮತ್ತೆ ಕ್ಯಾತೆ ತೆಗೆದಿದ್ದಳು. ಎಪ್ರಿಲ್ 28ನೇ ತಾರೀಕಿನಂದು ಬೈಂದೂರು ಠಾಣೆಗೆ ಬಂದ ಮಮತಾ ತನಗೆ…

Read More

ಕುಂದಾಪುರ: ಬಹುನಿರೀಕ್ಷಿತ ವಾರಾಹಿ ನೀರಾವರಿ ಯೋಜನೆಯನ್ನು ಮೇ 4ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧಾಪುರ ಪ್ರೌಢಶಾಲಾ ಆವರಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಅವರು ಸರಕಾರದ ನಾನಾ ಸವಲತ್ತುಗಳನ್ನು ವಿತರಿಸಲಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌, ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಸುನೀಲ್‌ ಕುಮಾರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್‌, ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಶಾಸಕ ಪ್ರಮೋದ್‌ ಮದ್ವರಾಜ್‌, ವಿಧಾನಪರಿಷತ್‌ ಸದಸ್ಯ ಕೆ. ಪ್ರತಾಪಶ್ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ತಾ.ಪಂ. ಅಧ್ಯಕ್ಷ ಭಾಸ್ಕರ್‌ ಬಿಲ್ಲವ, ಸಿದ್ಧಾಪುರ ಗ್ರಾ.ಪಂ. ಅಧ್ಯಕ್ಷ ಯು. ಸುಧಾಕರ ಶೆಟ್ಟಿ…

Read More

ಕೋಟ: ಇಲ್ಲಿನ ಠಾಣಾ ವ್ಯಾಪ್ತಿಯ ಜನ್ನಾಡಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ವರದಿಯಾದ್ದು, ಮಹಿಳೆಯ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂದಿರಾ(33) ಎಂಬುವವರು ಮೃತ ದುರ್ದೈವಿ. ಘಟನೆಯ ವಿವರ: ಜನ್ನಾಡಿ ಗ್ರಾಮದ ಮಲಾಡಿಯಲ್ಲಿ ಪತಿ ದೇವೇಂದ್ರ ಶೆಟ್ಟಿ ಅವರೊಂದಿಗೆ ವಾಸವಿದ್ದ ಇಂದಿರಾಗೆ ಆರು ವರ್ಷ ಪ್ರಾಯದ ಮಗನಿದ್ದಾನೆ. ಬೆಳಿಗ್ಗೆ ಸುಮಾರು 6ಗಂಟೆಯ ವೇಳೆಗೆ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಹೆಂಡತಿಯ ಮೃತದೇಹವನ್ನು ಕಂಡು ಹೆದರಿದ ದೇವೇಂದ್ರ ತನ್ನ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಸ್ಥಳಿಯರು ಇದು ವ್ಯವಸ್ಥಿತ ಕೃತ್ಯವೆಂದು ಅರಿತು ಕೋಟ ಪೊಲೀಸರಿಗೂ ವಿಷಯ ಮುಟ್ಟಿಸಿದ್ದು ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅರುಣ್‌ ನಾಯಕ್‌, ಕೋಟ ಠಾಣಾ ಎಸ್‌.ಐ. ಕಮಲಾಕರ ನಾಯ್ಕ ಮೊದಲಾದವರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ದೇವೇಂದ್ರನ್ನನು ಪೊಲೀಸ್ ವಿಚಾರಣೆಗಾಗಿ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಅನುಮಾನ ವ್ಯಕ್ತವಾದ ನಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ್ ಆಸ್ವತ್ರೆಗೆ ರವಾನಿಸಲಾಗಿದೆ.       ಇಂದಿರಾ ಕೆಲವು…

Read More

ಬೈಂದೂರು: ಸಮೀಪದ ಬಿಜೂರಿನವರಾದ ಶಂಕರ ಪೂಜಾರಿ ಕಾಡಿನತಾರು ಎ.25ರಿಂದ 29ರ ತನಕ ಗೋವಾದ ಪಣಜಿಯಲ್ಲಿ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಫೆಡರೇಷನ್‌ ಆಯೋಜಿಸಿದ ರಾಷ್ಟ್ರ ಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಫ್ -2015 ಇದರಲ್ಲಿ 4×100 ರಿಲೇ ಓಟದ 35ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗೆದ್ದಿದ್ದಾರೆ. ಇವರು ಕಳೆದ ಬಾರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಮೂರು ಪದಕ ಪಡೆದು ಫ್ರಾನ್ಸ್‌ ದೇಶದಲ್ಲಿ ಇದೇ ಅಗಸ್ಟ್‌ನಲ್ಲಿ ನಡೆಯುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – 2015 ಕ್ಕೆ ಆಯ್ಕೆಯಾಗಿರುತ್ತಾರೆ. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಅಧೀಕ್ಷಕರ ಕಛೇರಿಯ ನಿಸ್ತಂತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಇವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಅಣ್ಣಾಮಲೈ ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಂತೋಷ್‌ ಕುಮಾರ್‌ ಹಾಗೂ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಕೆ.ಎಂ ಚಂದ್ರಶೇಖರರವರು ಅಭಿನಂದಿಸಿರುತ್ತಾರೆ.

Read More

ಬೈಂದೂರು: ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ದಿಷ್ಟವಾದ ಮಾನದಂಡದಿಂದ ಅಳೆಯುವ ಮೂರ್ಖತನಕ್ಕೆ ಮುಂದಾಗಬಾರದು. ಪ್ರತಿ ವ್ಯಕ್ತಿಯಲ್ಲೂ ಅವರದ್ದೇ ಆದ ಪ್ರತಿಭೆ ಅಡಗಿರುತ್ತದೆ ಎಂಬುದನ್ನು ಅರಿಯಬೇಕು ಎಂದು ಬರಹಗಾರ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿದ ಮಕ್ಕಳ ಲಾವಣ್ಯ-2015ರ ‘ರಜೆಯಲ್ಲಿ ರಂಗಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಕ್ಕಳು ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎಂದು ಹೇಳಿದ ಅವರು ಮನಬಂದಂತೆ ನಾಟಕಗಳನ್ನು ವಿಮರ್ಶಿಸುವ ವಿಮರ್ಶಕರು, ಮೊದಲು ಅದರ ಆಶಯ, ಹಿನ್ನೆಲೆ, ರಚನೆಯ ಕಾಲ ಮುಂತಾದವುಗಳನ್ನು ಕುರಿತು ಅರಿತು ವಿಮರ್ಷಿಸಿದರೆ ಒಳ್ಳೆಯದು ಎಂದು ಸಲಹೆಯಿತ್ತರು. ರಂಗಶಿಬಿರದ ನಿರ್ದೇಶಕ ಸತ್ಯನಾ ಕೊಡೇರಿ ಸಮಾರೋಪದ ನುಡಿಗಳನ್ನಾಡುತ್ತಾ ನಾವುಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೆವೇನೋ ಎಂಬ ಆತಂಕ ಕಾಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರೀತಿ, ಸ್ನೇಹ, ಮಮತೆ ಎಲ್ಲವನ್ನೂ ಕಲಿಯುತ್ತಾರೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ…

Read More

ಕುಂದಾಪುರ.ಮೇ.1: ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆಯಿಂದಾಗಿ ಇಂದು ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಸಾಲು ಸಾಲು ವಾಹನಗಳು ಕೆಲಹೊತ್ತು ಜಾಮ್ ಆಗಿ ನಿಲ್ಲುವ ದೃಶ್ಯ ಕಂಡುಬಂತು. ವಾಹನ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಕುಂದಾಪುರದ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದರು. ಇಂದು ಕುಂದಾಪುರದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯುನಿಂದ ಬೃಹತ್ ಬೈಕ್, ರಿಕ್ಷಾ ರ್ಯಾಲಿ, ಕಾಲ್ನಡಿಗೆಯ ಜಾಥಾ ಇದ್ದ ಕಾರಣ ಸಾವಿರ ಸಂಖ್ಯೆಯ ಮಂದಿ ಶಾಸ್ತ್ರಿ ವೃತ್ತ ಹಾಗೂ ನೆಹರು ಮೈದಾನದ ಸುತ್ತ ನೆರೆದಿದ್ದರು. ಇನ್ನೊಂದೆಡೆ ಕುಂದಾಪುರ, ಹಂಗಳೂರು ಮುಂತಾದೆಡೆ ಅನೇಕ ಶುಭ ಸಮಾರಂಭಗಳೂ ನಡೆಯುತ್ತಿದ್ದವು. ಪರಿಣಾಮವಾಗಿ ಅಧಿಕ ಸಂಖ್ಯೆಯ ಜನರು ಇಂದು ನಗರಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ಬೆಳ್ಳಿಗ್ಗೆ 9:30ರಿಂದ ಮಧ್ಯಾಹ್ನ 12:45ರ ತನಕ ಭಾರಿ ಜನಸಂದಣಿ ಕಂಡುಬಂತು. ಇಂದು ಸರಕಾರಿ ರಜಾದಿನವಾದ್ದರಿಂದ ದಿನನಿತ್ಯ ಕಛೇರಿಗೆ ತೆರಳುವ ನೌಕರರ ಸಂಖ್ಯೆ ಕಡಿಮೆ ಇತ್ತು. ಕುಂದಾಪುರ ಗಾಂಧಿ ಮೈದಾನದ ಎದುರು ಚತುಷ್ಪತ ಕಾಮಗಾರಿ ಕಳೆದ 2-3ವರ್ಷಗಳಿಂದ ನಡೆಯುತ್ತಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ…

Read More

ಮೋದಿಯದ್ದು ಕಾರ್ಮಿಕ ವಿರೋಧಿ ಸರಕಾರ: ಪ್ರಕಾಶ್ ಕುಂದಾಪುರ: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕಿಂತ ಹೆಚ್ಚು ಹಗರಣಗಳಲ್ಲಿ ತೊಡಗಿಕೊಂಡಿದೆ. ಇದು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾರ್ಮಿಕ ವಿರೋಧಿ ನೀತಿಯು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರಿಗಾಗಿ ಇರುವ ಐವತ್ನಾಲ್ಕು ಕಾನೂನುಗಳನ್ನು ಮೊಟಕುಗೊಳಿಸಿ ಕೇವಲ ಮೂರು ಕಾನೂನಿಗೆ ಪರಿವರ್ತಿಸುವ ಹುನ್ನಾರದ ಹಿಂದೆ ಬಂಡವಾಳಶಾಹಿಗಳ ಪರವಾದ ದೋರಣೆ ಅಡಗಿದೆ ಎಂದು ಸಿಐಟಿಯು ರಾಜ್ಯ ಮುಖಂಡ ಪ್ರಕಾಶ್‌ ಆರೋಪಿಸಿದರು. ಅವರು ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೋಟಿ ಕೋಟಿ ಹಣವನ್ನು ಕೇಲವ ಜಾಹೀರಾತಿಗಾಗಿ ಖರ್ಚುಮಾಡಿ ಜನರನ್ನು ಮರುಳುಗೊಳಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಒಂದು ವರ್ಷದಿಂದ ಬಡವರು, ಕಾರ್ಮಿಕರ ಏಳಿಗೆಗೆ ಶ್ರಮಿಸಿಲ್ಲ. ಮೆಕ್ ಇನ್ ಇಂಡಿಯಾದಂತಹ ಪರಿಕಲ್ಪನೆಯನ್ನು ಸೃಷ್ಟಿಸಿದ ಮೋದಿ, ದೇಶದ ಜನರಿಗೆ ನೆರವು ಮಾಡಿಕೊಡುವ ಬದಲಿಗೆ ವಿದೇಶಿ ಬಂಡವಾಳದಾರರಿಗೆ ನೆರವು…

Read More