ಕುಂದಾಪುರ: ಕಳೆದ ಜೂನ್ ತಿಂಗಳಿನಿಂದಿಚೆಗೆ ಕುಂದಾಪುರ ತಾಲೂಕಿನಲ್ಲಿ ಆರಕ್ಕೂ ಹೆಚ್ಚು ದೇವಾಲಯಗಳ ಕಳ್ಳತನ ಪ್ರಕರಣ ವರದಿಯಾಗಿದೆ. ಆದರೆ ಈವರೆಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕಳ್ಳತನ ಶುರುವಿಟ್ಟುಕೊಂಡಿದ್ದ ಚೋರರು ಪ್ರಮುಖ ದೇವಾಲಯಗಳನ್ನೇ ಟಾರ್ಗೇಟ್ ಮಾಡಿ ದೇವರ ಆಭರಣ, ಹುಂಡಿಯಲ್ಲಿದ್ದ ದುಡ್ಡು ಹಾಗೂ ಇತರೆ ಸೊತ್ತುಗಳನ್ನು ಎಗರಾಯಿಸಿದ್ದರು. ಹೀಗೆ ಒಂದರ ಹಿಂದೊಂದು ಸರಣಿ ಕಳ್ಳತನ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಪೊಲೀಸ್ ಇಲಾಖೆ ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ತಾಲೂಕಿನ ಎಲ್ಲೆಲ್ಲಿ ಕಳ್ಳತನ? ಕುಂದಾಪುರ ತಾಲೂಕಿನ ಕಾಲ್ತೋಡು ಮಹಾಲಸಾ ಮಾರಿಕಾಂಬ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನ, ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಸಮೀಪದ ದೈವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ತಲ್ಲೂರು ರಕ್ತೇಶ್ವರ ದೇವಸ್ಥಾನ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಕಳವು ನಡೆದಿತ್ತು. ಲೆಕ್ಕಕ್ಕೆ ಸಿಕ್ಕವು ಇವಿಷ್ಟು ಮಾತ್ರ. ಇನ್ನು ಸಣ್ಣ ದೇವಸ್ಥಾನಗಳಲ್ಲಾದ ಸಣ್ಣ-ಪುಟ್ಟ ಕಳವಿನ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ಕಳೆದ ವರ್ಷ…
Author: ಸುನಿಲ್ ಹೆಚ್. ಜಿ. ಬೈಂದೂರು
ಕೊಲ್ಲೂರು: ನಿರಂತರವಾಗಿ ರಕ್ತದಾನ ಶಿಬಿರಗಳ ಆಯೋಜಿಸುವ ಮೂಲಕ ಇವತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ರಕ್ತದಾನದ ಅರಿವು ಮೂಡಿದ್ದ, ಜಿಲ್ಲೆಯಾದ್ಯಂತ ಜನತೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆ ಇವತ್ತು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಈಗಾಗಳೆ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ೬೦ ಸಾವಿರ ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಸಾಧನೆ ಮಾಡಿದೆ ಎಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಹೇಳಿದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ರಕ್ತನಿಧಿ, ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಉಡುಪಿ ಮತ್ತು ಶ್ರೀ ವಿನಾಯಕ ಯುವಕ ಸಂಘ ರಿ, ನೆಂಪು ಇವರ ಸಹಯೋಗದಲ್ಲಿ ನೆಂಪುವಿನ ಸ.ಪ.ಪೂ.ಕಾಲೇಜಿನಲ್ಲಿ ನqದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ…
ಕುಂದಾಪುರ: ಇಲ್ಲಿನ ಚಿಕ್ಕನ್ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಉತ್ಸವ ಸಮಿತಿ ರಚನೆಗೊಂಡಿದ್ದು, ನೂತನ ಸಮಿತಿಯ ಅಧ್ಯಕ್ಷರಾಗಿ ಸೀತರಾಮ ಹೇರಿಕುದ್ರು ಆಯ್ಕೆಯಾದರು. ವ್ಯವಸ್ಥಾಪನಾ ಮಾರ್ಗದರ್ಶಕರಾಗಿ ಗಣಪತಿ ಸುವರ್ಣ, ಗೌರವಾಧ್ಯಕ್ಷರಾಗಿ ಕೆ. ಬಿ. ಪ್ರಕಾಶ್, ಉಪಾಧ್ಯಕ್ಷರಾಗಿ ರಾಜು ಮಠದಬೆಟ್ಟು, ಚಂದ್ರಶೇಖರ, ವೀಣಾ ಪ್ರಕಾಶ್, ಕಾರ್ಯದರ್ಶಿ ರಮೇಶ್ ಮಕ್ಕಿ, ಜೊತೆ ಕಾರ್ಯದರ್ಶಿ ಶರತ್, ಲೆಕ್ಕಪರಿಶೋಧಕರಾಗಿ ಸಂತೋಷ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧೀರ್ ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಮುಖ್ಯ ಸಲಹೆಗಾರರಾಗಿ ಜನಾರ್ಧನ, ವಿನಯ ಹೇರಿಕುದ್ರು, ಗಣೇಶ್ ಡಿ. ನಾಯಕ್, ಸುಧೀರ್ ಬಿ. ಕುಂದರ್, ರತ್ನಾಕರ ಗಾಣಿಗ, ಅಣ್ಣಯ್ಯ ಹೋಬಳಿದಾರ್, ಪೂರ್ಣಿಮ ಕೋಟೇಶ್ವರ, ಸುಮತಿ, ಸರಸ್ವತಿ, ಸದಸ್ಯರಾಗಿ ಕಿರಣ್ ಮೆಂಡನ್, ನಿತ್ಯಾನಂದ, ವಿಜೇಂದ್ರ, ಪ್ರಜ್ವಲ್, ದೀಕ್ಷಿತ್, ಪವನ್, ರಂಜಿತ್, ರಾಜೇಂದ್ರ, ರಾಘವೇಂದ್ರ ಕೋಟೇಶ್ವರ ಆಯ್ಕೆಯಾದರು.
ಕುಂದಾಪುರ: ಕರ್ನಾಟಕ ವಿಕಾಸ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮಾಹಿತಿ ಹಾಗೂ ಸಾಲ ಮಂಜೂರಾತಿ ಕರ್ಯಕ್ರಮ ಜರುಗಿತು. ಶಾಖಾ ಪ್ರಬಂಧಕ ಮೋಹನದಾಸ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುದ್ರಾ ಯೋಜನೆಯ ಕಿಶೋರ ಸಾಲ ರುಪಾಯಿ 4 ಲಕ್ಷದ ಮಂಜೂರಾತಿ ಪತ್ರವನ್ನು ಫಲಾನುಭವಿ ಕುಂದಾಪುರದ ಬಾಲಾಜಿ ಟೆಕ್ಸ್ಟೈಲ್ಸ್ ಮಾಲಕ ಚಂದ್ರರವರಿಗೆ ಹಸ್ತಾಂತರಿಸಿದರು. ಮುದ್ರಾ ಯೋಜನೆಯ ಹಾಗೂ ಇತರ ಸಾಲ ಸೌಲಭ್ಯದ ಮಾಹಿತಿಯನ್ನು ಶಾಖಾ ಉಪ ಪ್ರಬಂಧಕಿ ಅನಿತಾ ಕಟ್ಟಿಯವರು ಗ್ರಾಹಕರಿಗೆ ಸುವಿಸ್ತಾರವಾಗಿ ವಿವರಿಸಿದರು. ಬ್ಯಾಂಕ್ನ ಸಿಬ್ಬಂದಿ ಜಗದೀಶ್ ಕೆದಿಲಾಯ, ಮನೋಜ ಕುಮಾರ್ ಹಾಗೂ ರೇಷ್ಮಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಾಹಕರಾದ ಬಿ.ಎಸ್.ದಾಮೋದರ್ ನಾಯಕ್ ಸ್ವಾಗತಿಸಿದರು ಹಾಗೂ ಸಚ್ಚಿದಾನಂದ ಎಮ್.ಎಲ್. ವಂದಿಸಿದರು.
ಕುಂದಾಪುರ: ದಶಮಾನೋತ್ಸವದ ಹೊಸ್ತಿನಲ್ಲಿರುವ ಬಸ್ರೂರು ರಥಬೀದಿ ಫ್ರೆಂಡ್ಸ್ನ ಲಾಂಛನ ಬಿಡುಗಡೆ ಸಮಾರಂಭವು ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಛೇರಿಯಲ್ಲಿ ಜರುಗಿತು. ಬೆಂಗಳೂರಿನ ಉದ್ಯಮಿ ಬಸ್ರೂರು ಗಣೇಶ್ ಪಡಿಯಾರ್ ಲಾಂಛನ ಬಿಡುಗಡೆ ಮಾಡಿ ದಶಮಾನೋತ್ಸವ ಆಚರಿಸುತ್ತಿರುವ ಸಮಿತಿಯ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ದಶಮಾನೋತ್ಸವ ಸಮಾರಂಭವು ಅದ್ದೂರಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಪಡಿಯಾರ್ ದಶಮಾನೋತ್ಸವ ಸಮಾರಂಭ ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯರಿಗೆ ಕರೆನೀಡಿದರು. ಬಸ್ರೂರು ರಥಬೀದಿ ಫ್ರೆಂಡ್ಸ್ನ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ನಾಗೇಶ್ ಬಳ್ಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಕೇಶ್ ಕೆಳಾಮನೆ ವಂದಿಸಿದರು.
ಗಂಗೊಳ್ಳಿ: ಕರ್ನಾಟಕ ಸರಕಾರವು ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗೈದ ಯುವಜನ ಸಂಘಗಳಿಗೆ ನೀಡಲಾಗುತ್ತಿರುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಆಯ್ಕೆಯಾಗಿದೆ. 2013-144ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ಗೆ ಪ್ರದಾನ ಮಾಡಲು ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. 1984ರಲ್ಲಿ ಸ್ಥಾಪನೆಗೊಂಡ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಅನೇಕ ಕ್ರೀಡೋತ್ಸವ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿರುವುದಲ್ಲದೆ ಸುಮಾರು 5 ಸಾವಿರ ಜನರಿಗೆ ಕೊಂಕಣಿ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಿದೆ. ಜಿಲ್ಲಾ ಮಟ್ಟದ ಯುವಜನೋತ್ಸವ, 9 ಬಾರಿ ನಾಡಿ ಪರೀಕ್ಷೆ ಶಿಬಿರ, 9 ಬಾರಿ ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯಾ ಶಿಬಿರ ಸಹಿತ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು, ಪ್ರತಿವರ್ಷ ಗುರುಜ್ಯೋತಿ ವಿದ್ಯಾನಿಧಿ ಯೋಜನೆ ಮೂಲಕ ವಿದ್ಯಾರ್ಥಿವೇತನ ವಿತರಣೆ ಮಾಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ಸಂಸ್ಥೆಯ ಉತ್ತಮ ಕಾರ್ಯಕ್ರಮಗಳಿಗೆ ಉಡುಪಿ…
ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನಡೆಸಲಾಯಿತು. ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಸುಮಾರು 5 ಲಕ್ಷ ರೂ. ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಗುದ್ದಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಸೇವಾ ಟ್ರಸ್ಟ್ನ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ದೇವಳದ ವಿಶ್ವಸ್ಥ ಜಿ.ರೋಹಿದಾಸ ನಾಯಕ್, ಗಣೇಶ ನಾಯಕ್, ನಾಡ ಸತೀಶ ನಾಯಕ್, ಗುಜ್ಜಾಡಿ ಗ್ರಾಪಂ ಸದಸ್ಯರಾದ ವೇದಾವತಿ ಪೂಜಾರಿ, ಕಾವ್ಯ ಶೇರುಗಾರ್, ತಮ್ಮಯ್ಯ ದೇವಾಡಿಗ, ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ವಾಸುದೇವ ಯಡಿಯಾಳ, ಚಂದ್ರಕಾಂತ, ಸ್ಥಳೀಯರಾದ ರಾಜೇಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪುರೋಹಿತರಾದ ವೇದಮೂರ್ತಿ ಜಿ.ವಿಠಲದಾಸ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಪ್ರಯುಕ್ತ ಗಂಗೊಳ್ಳಿಯಲ್ಲಿ ವಿಶೇಷ ದಸರಾ ಸ್ಪರ್ಧಾ ಕೂಟ ಆಯೋಜಿಸಲಾಗಿದೆ. ಪುರುಷರಿಗಾಗಿ ಅ.20ರಂದು ತ್ರಾಸಿಯಿಂದ ಗಂಗೊಳ್ಳಿಯ ಬಂದರ್ ಬಸ್ ನಿಲ್ದಾಣದವರೆಗೆ ಸೈಕಲ್ ರೇಸ್ ಸ್ಪರ್ಧೆ, ಅ.21ರಂದು ತ್ರಾಸಿಯಿಂದ ಗಂಗೊಳ್ಳಿಯ ಬಂದರ್ ಬಸ್ ನಿಲ್ದಾಣದವರೆಗೆ ಕ್ರಾಸ್ ಕಂಟ್ರಿ ರೇಸ್ ಏರ್ಪಡಿಸಲಾಗಿದೆ. ಅ.17ರಂದು ಮಧ್ಯಾಹ್ನ 2 ಗಂಟೆಯಿಂದ ಮಹಿಳೆಯರು ಹಾಗೂ ಮಕ್ಕಳಿಗಾಗಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ರಂಗೋಲಿ ಸ್ಪರ್ಧೆ, ಅ.22ರಂದು ಬೆಳಿಗ್ಗೆ 9 ಗಂಟೆಯಿಂದ ಸಾರ್ವಜನಿಕ ಮಹಿಳೆಯರಿಗಾಗಿ ಆಟೋಟ ಸ್ಪರ್ಧೆ, ಅ.23ರಂದು ಬೆಳಿಗ್ಗೆ 9 ಗಂಟೆಯಿಂದ ಮಹಿಳೆಯರು ಹಾಗೂ ಮಕ್ಕಳಿಗಾಗಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ 2 ಗಂಟೆಯಿಂದ ಭಾಷಣ ಸ್ಪರ್ಧೆ, ನಾಡಗೀತೆ ಹಾಡುವ ಸ್ಪರ್ಧೆ ಮತ್ತು ಅ.24ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಹೂಮಾಲೆ ಕಟ್ಟುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸತೀಶ್ ಜಿ. (೯೪೮೨೨೫೦೮೦೧), ಸವಿತಾ ಯು.ದೇವಾಡಿಗ (೭೩೫೩೬೨೨೩೫೭) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗೊಳ್ಳಿಯ ಮೆಸ್ಕಾಂ ಸಬ್ಸ್ಟೇಶನ್ ಕಾರ್ಯಾರಂಭಕ್ಕೆ ಆಗ್ರಹಿಸಿ ಗಂಗೊಳ್ಳಿ ಮೆಸ್ಕಾಂ ಸಬ್ಸ್ಟೇಶನ್ ಹೋರಾಟ ಸಮಿತಿ ವತಿಯಿಂದ ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಇಂದು ಕಟ್ಬೇಲ್ತೂರಿನ ಶಾಸಕರ ನಿವಾಸದಲ್ಲಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯ ನಿಯೋಗವು ಶಾಸಕರಿಗೆ ಸಬ್ಸ್ಟೇಶನ್ನ ಇಲ್ಲಿಯವರೆಗಿನ ಸಂಪೂರ್ಣ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿತು. ಗಂಗೊಳ್ಳಿಯಲ್ಲಿ ಮೆಸ್ಕಾಂ ಸಬ್ಸ್ಟೇಶನ್ ಕಾರ್ಯಾರಂಭಗೊಂಡಲ್ಲಿ ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ ಹಾಗೂ ಹೊಸಾಡು ಗ್ರಾಮಗಳ ಸಹಸ್ರಾರು ಸಂಖ್ಯೆಯ ಗ್ರಾಹಕರಿಗೆ, ಉದ್ಯಮಿಗಳಿಗೆ ಹಾಗೂ ಸಣ್ಣ ಮತ್ತು ದೊಡ್ಡ ಉದ್ದಿಮೆದಾರರಿಗೆ ಬಹಳಷ್ಟು ಅನುಕೂಲವಾಗಲಿದೆ ಅಲ್ಲದೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಮಂಡಳಿಗೆ ಬಹಳಷ್ಟು ವಿದ್ಯುತ್ ಉಳಿತಾಯದ ಜೊತೆಗೆ ಹೆಚ್ಚಿನ ಆದಾಯ ಕೂಡ ಬರಲಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಗಂಗೊಳ್ಳಿ ಸಬ್ಸ್ಟೇಶನ್ ಕಾರ್ಯಾರಂಭಕ್ಕೆ ಅರಣ್ಯ ಇಲಾಖೆ ಅನಗತ್ಯ ಕ್ಯಾತೆ ತೆಗೆದು ಅಡ್ಡಪಡಿಸುತ್ತಿರುವುದು ಖಂಡನೀಯ. ಈ ವಿಚಾರವಾಗಿ ತಾವು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರನ್ನು…
ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ ಅ.19ರಿಂದ 21ರವರೆಗೆ ಜರುಗುವ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಗೋವಿಂದರಾಜ್ ಆಚಾರ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜುನಾಥ ದಾಸ್, ಗುರುರಾಜ್ ಆಚಾರ್ಯ, ಮಂಜುನಾಥ ಹಾಡಿಮನೆ, ಸುಬ್ರಮಣ್ಯ ಆಚಾರ್ಯ, ದಯಾನಂದ ಚಂದನ್ ಆಯ್ಕೆಯಾಗಿದ್ದರೇ, ಕಾರ್ಯದರ್ಶಿಯಾಗಿ ದೇವರಾಜ ಆಚಾರ್ಯ, ಪ್ರದೀಪ್ ಶೆಟ್ಟಿ, ಪ್ರದೀಪ್ ಆಚಾರ್ಯ, ಮಂಜುನಾಥ ಆಚಾರ್ಯ ಆಯ್ಕೆಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಜೊತೆ ಕಾರ್ಯದರ್ಶಿಯಾಗಿ ಪ್ರಭಾಕರ ಮೊಗವೀರ, ಸೋಮಶೇಖರ, ಪ್ರಮೋದ್ ಆಚಾರ್ಯ, ಪ್ರಶಾಂತ ಆಚಾರ್ಯ, ಶಿವಾನಂದ ಚಂದನ್, ಸಂತೋಷ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ನಟರಾಜ ಆಚಾರ್ಯ, ರಾಜಶೇಖರ, ನಾಗರಾಜ ಚಂದನ್, ರಾಘವೇಂದ್ರ ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಕ್ರಮ್, ಅಕ್ಷಯ ಶೆಟ್ಟಿ, ಪ್ರವೀಣ ಆಚಾರ್ಯ, ಶ್ರೀನಿವಾಸ ಗುಜ್ಜಾಡಿ, ಗಿರೀಶ್ ಎನ್, ಅಂಜನ ಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ನಾಗೇಂದ್ರ ಶೆಟ್ಟಿ, ಹರೀಶ್ ಎನ್, ನವೀನ್, ಪ್ರಸನ್ನ, ಅಣ್ಣಪ್ಪ, ನಿತಿನ್ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಕೋಶಾಧಿಕಾರಿಯಾಗಿ ಲಕ್ಷ್ಮಣ ಚಂದನ್, ಮಹೇಶ್,…
