ಗಂಗೊಳ್ಳಿ : ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಶಾರದಾ ಮಂಟಪದಲ್ಲಿ ಜರಗುವ 41ನೇ ವರ್ಷದ ಶ್ರೀ ಶಾರದಾ ಮಹೋತ್ಸವದಲ್ಲಿ ಮಂಗಳವಾರ ಶ್ರೀದೇವಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥ ಗ್ರಾಮಾಭಿವೃದ್ಧಿಗೋಸ್ಕರ ಸಾರ್ವಜನಿಕ ಶ್ರೀ ಚಂಡಿಕಾಯಾಗ ಜರಗಿತು. ವೇದಮೂರ್ತಿ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಯಾಗದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ್ ಜಿ., ಕಾರ್ಯದರ್ಶಿ ಗೋಪಾಲ ಚಂದನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶೀ ಜಯಂತಿ ಆರ್.ಖಾರ್ವಿ, ಸಮಿತಿಯ ಪದಾಧಿಕಾರಿಗಳು ಹಾಗೂ ಸೇವಾದಾರ ಕುಟುಂಬಸ್ಥರು ಉಪಸ್ಥಿತರಿದ್ದರು. ಊರಿನ ಹತ್ತು ಸಮಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾಯಾಗ ಹಾಗೂ ನವರಾತ್ರಿ ರಥೋತ್ಸವ ದೇಗುಲದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು. ದೇಗುಲದ ಸರದಿ ಅರ್ಚಕ ಕೆ. ಮಂಜುನಾಥ ಅಡಿಗ ಅವರ ನೇತೃತ್ವದಲ್ಲಿ ನಿತ್ಯಾನಂದ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್. ಗೋವಿಂದ ಅಡಿಗ ಅವರು ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.ಚಿನ್ನದ ರಥದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ ದೇಗುಲದ ಒಳಪೌಳಿಯಲ್ಲಿ ರಥ ಒಂದು ಸುತ್ತು ಬರುತ್ತಿರುವಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಭಕ್ತಿ ಪರವಶರಾಗಿ ಮೂಕಾಂಬಿಕೆಯ ದೇವಿ ಸ್ತ್ರೋತ್ರ ಜಪಿಸಿದರು. ಈ ಸಂದರ್ಭ ಅರ್ಚಕರು ಎಸೆಯುವ ನಾಣ್ಯ ಹಿಡಿಯಲು ಭಕ್ತರು ನಡೆಸುತ್ತಿದ್ದ ಪೈಪೋಟಿ ನಡೆಸುತ್ತಿದ್ದರು. ದೇಗುಲದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಸಂಕಲ್ಪದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉಪಕಾರ್ಯನಿರ್ವಹಣಾಧಿಕಾರಿ…
ಸುನಿಲ್ ಹೆಚ್. ಜಿ. ಬೈಂದೂರು ಕುಂದಾಪುರ: ಕಾಲ ಉರುಳಿದ ಹಾಗೇ ನಮ್ಮ ಆಸಕ್ತಿಯೂ ಬದಲಾಗುತ್ತದೆ. ಹೊಸತನಕ್ಕೆ ತುಡಿಯುವ ಈ ಬದಲಾವಣೆಯೊಂದಿಗೆ ನಮ್ಮ ಕಲೆ, ಸಂಸ್ಕೃತಿ ಸಂಪ್ರದಾಯಗಳ ಪೈಕಿ ಕೆಲವು ಹೊಸ ಆಯಾಮ ಪಡೆದು ಮತ್ತೆ ನಮ್ಮ ಮುಂದೆ ಬಂದರೆ, ಇನ್ನು ಕೆಲವು ಮರೆಯಾಗಿಬಿಡುತ್ತವೆ. ಆದರೆ ಅಪರೂಪಕ್ಕೊಂದು ಸಂಸ್ಥೆಗಳು ಈ ಮರೆಯಾಗುವ ಕಲೆಗಳಿಗೆ ಮರುಜೀವ ತುಂಬುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತವೆ. ಹೌದು. ಕಲಾಕ್ಷೇತ್ರ ಕುಂದಾಪುರ ಅಂಥಹದ್ದೊಂದು ಭಿನ್ನ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಆಯೋಜಿಸಿತ್ತು. ಹಿಂದೆಲ್ಲ ನವರಾತ್ರಿಯ ಸಮಯದಲ್ಲಿ ರಾತ್ರಿಯ ವೇಳೆಗೆ ಹೆಚ್ಚಾಗಿ ಕಂಡುಬರುತ್ತಿದ್ದ ಹುಲಿವೇಷವನ್ನು ಮತ್ತೆ ರಾತ್ರಿಯಲ್ಲಿಯೇ ಕಾಣುವಂತೆ ಮಾಡಿತ್ತು. ಅದೂ ಗ್ಯಾಸ್ ಲೈಟ್ ಬೆಳಕಿನೊಂದಿಗೆ. ಹುಲಿವೇಷ ಇಂದು ವ್ಯಾವಹಾರಿಕ ತಿರುವನ್ನು ಪಡೆದಿದೆ. ಹೊಸಬರು ಬರುತ್ತಿಲ್ಲ. ಕಲಿಯುವವರ್ಯಾರು, ಕುಣಿಯುವವರ್ಯಾರು ಪ್ರಶ್ನೆ. ಕುಣಿದರೂ ಅದು ಪಟ್ಟಣ, ದನಿಗಳ ಮನೆಗಳಿಗಷ್ಟೇ ಸೀಮಿತವಾಗಿದೆ. ಹೀಗಿರುವಾಗ ಹಳೆಯ ದಿನಗಳನ್ನೊಮ್ಮೆ ಮೆಲಕು ಹಾಕಿದರೆ ಎಷ್ಟು ಚಂದವಿರುತ್ತೆಂಬ ಆಲೋಚನೆಯೊಂದಿಗೆ ಆಯೋಜಿಸಿದ ಗ್ಯಾಸ್ ಲೈಟ್ ಬೆಳಕಿನ ಹುಲಿವೇಷ ಕುಂದಾಪುರ ಮಟ್ಟಿಗೆ ವಿಶೇಷವಾಗಿಯೇ ಮೂಡಿಬಂದಿತ್ತು. (ಕುಂದಾಪ್ರ…
ಗಂಗೊಳ್ಳಿ : ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ೪೧ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಮುಳ್ಳಿಕಟ್ಟೆಯಿಂದ ಶ್ರೀ ಶಾರದಾ ಮಂಟಪದ ತನಕ ಶ್ರೀ ದೇವಿಯ ವಿಗ್ರಹ ಪ್ರತಿಷ್ಠಾಪನ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಶ್ರೀ ಶಾರದಾ ಮಂಟಪದಲ್ಲಿ ಶ್ರೀದೇವಿಯ ವಿಗ್ರಹದ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಸಮಿತಿಯ ಅಧ್ಯಕ್ಷ ಸತೀಶ ಜಿ. ನೇತೃತ್ವದಲ್ಲಿ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಉದಯಶಂಕರ ರಾವ್, ಶ್ರೀಧರ ಸಕ್ಲಾತಿ, ಗೋಪಾಲ ಚಂದನ್, ಲಕ್ಷ್ಮೀಕಾಂತ ಮಡಿವಾಳ, ಸುರೇಂದ್ರ ಖಾರ್ವಿ, ಸೌಪರ್ಣಿಕ ಬಸವ ಖಾರ್ವಿ, ವೈ.ಸುರೇಶ ಖಾರ್ವಿ, ಟಿ.ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ರಾಘವೇಂದ್ರ ಗಾಣಿಗ, ಶೇಖರ ಜಿ., ರವೀಂದ್ರ ಪಟೇಲ್, ಅಶೋಕ ಪೂಜಾರಿ, ಗೋಪಾಲ ಖಾರ್ವಿ ದಾವನಮನೆ, ಗಿರೀಶ ಕುಮಾರ್, ರಘುವೀರ ಕೆ., ನಿತ್ಯಾನಂದ ಖಾರ್ವಿ, ದಿಲೀಪ ಖಾರ್ವಿ, ಮಹಿಳಾ ಮಂಡಳಿಯ ಪ್ರೇಮಾ ಸಿ.ಪೂಜಾರಿ, ಅನಿತಾ ಶೇಟ್, ರೇಣುಕಾ ವಾಸುದೇವ ದೇವಾಡಿಗ, ಶಾರದಾ ಎಸ್.ಖಾರ್ವಿ, ಜಯಂತಿ…
ಬೈಂದೂರು: ಇಲ್ಲಿನ ಶ್ರೀಸೇನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಪ್ರತಿಷ್ಟಾಪಿಸಿ ಪೂಜಿಸುತ್ತಿರುವ ಶ್ರೀ ಶಾರದಾ ಮಾತೆ.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ – ಇದರ ಸಂಯುಕ್ತ ಆಶ್ರಯದಲ್ಲಿ – ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಬೃಹತ್ ಸಮಾವೇಶವು ನವಂಬರ್ 01 ರ ಅಪರಾಹ್ನ 3 ಗಂಟೆಗೆ ಗಂಗೊಳ್ಳಿ ಪೇಟೆ ವಿರೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು. ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ-ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡ ಕರಿಯದೇವಾಡಿಗ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸುತ್ತಾರೆ. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಜನಸಾಂದ್ರತೆಯ ಗಂಗೊಳ್ಳಿ ಜನ ನಿಬಿಡ ಪ್ರದೇಶದ ಬಡ ಮೀನುಗಾರ, ಕೃಷಿ ಕೂಲಿ ಕಾರ್ಮಿಕ ನಿವೇಶನ ರಹಿತರು ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್ ಕಛೇರಿಗೆ ನಿವೇಶನ ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ಈ ಕೂಡಲೇ ವಿಲೇವಾರಿ ಮಾಡಿ, ಭೂಮಿ ಹಕ್ಕು ಪತ್ರ ಮಂಜೂರು ಮಾಡುವುದಕ್ಕೆ…
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕೆಯ ಸನ್ನಿಧಿಯ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು 7ನೇ ದಿನಕ್ಕೆ ಕಾಲಿರಿಸಿದೆ . ಅ.22ರ ವಿಜಯದಶಮಿಯ ವಿಜಯಾಚರಣೆ ಮೂಲಕ ಸಮಾಪನಗೊಳ್ಳಲಿರುವ ಉತ್ಸವದಲ್ಲಿ ಪ್ರತಿನಿತ್ಯವೂ ದೇಶ-ವಿದೇಶಗಳ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವಿಯ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಉತ್ಸವದ ಅಂಗವಾಗಿ ದೇವಿಯ ಸನ್ನಿಧಾನವು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವುದು, ನವರಾತ್ರಿಗಳಿಗೆ ರಂಗು ತುಂಬಿದಂತಾಗಿದೆ. [quote font_size=”16″ bgcolor=”#ffffff” bcolor=”#dd3333″ arrow=”yes” align=”right”]ಭಕ್ತರಿಗೆ ಸಕಲ ಸೌಕರ್ಯ: ದೇಗುಲಕ್ಕೆ ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆ ಹಾಗೂ ವಸತಿಗೃಹಗಳ ಹಾಗೂ ಇನ್ನಿತರ ವ್ಯವಸ್ಥೆಯ ಕುರಿತು ಆಡಳಿತ ಮಂಡಳಿ ವಿಶೇಷ ಕಾಳಜಿ ವಹಿಸಿದೆ. 5ನೇ ನವರಾತ್ರಿ ನಂತರದ ದಿನಗಳಲ್ಲಿ ಭಕ್ತರಿಗಾಗಿ ಭೋಜನದ ಜತೆಯಲ್ಲಿ ಬೆಳಗ್ಗಿನ ಉಪಹಾರಗಳನ್ನು ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. – ಕೃಷ್ಣಪ್ರಸಾದ ಅಡ್ಯಂತಾಯ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ[/quote] ಇಲ್ಲಿನ ನವರಾತ್ರಿಯನ್ನು ಢಾಮರಿ ತಂತ್ರಾಗಮ ಪದ್ದತಿಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸುತ್ತಿದ್ದು, ಪ್ರತಿ ದಿನವೂ ಶ್ರೀ ದೇವಿಗೆ ಕಟ್ಟಕಟ್ಟಳೆ…
