ತೆಕ್ಕಟ್ಟೆ‌‌ ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್: ಎಲ್ಲೋ ಕಲರ್ ಡೇ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿಶ್ವ ವಿನಾಯಕ ಸಿ.ಬಿ.ಎಸ್.ಸಿ. ಸ್ಕೂಲ್  ತೆಕ್ಕಟ್ಟೆಯಲ್ಲಿ ಪ್ಲೇ  ಸ್ಕೂಲ್,  ಎಲ್. ಕೆ. ಜಿ.  ಹಾಗೂ  ಯು. ಕೆ. ಜಿ. ಮಕ್ಕಳು ಎಲ್ಲೋ ಕಲರ್ ಡೇ ಯನ್ನು ಆಚರಿಸಿದರು.

Call us

Click Here

ಮಕ್ಕಳಲ್ಲಿ ಬಣ್ಣಗಳನ್ನು ಗುರುತಿಸಿ  ನೆನಪಿನಲ್ಲಿಟ್ಟುಕೊಳ್ಳುವ  ಕೌಶಲ್ಯವನ್ನು  ವೃದ್ಧಿಸುವ ಸಲುವಾಗಿ ಪ್ರತಿ ತಿಂಗಳು ವಿವಿಧ ಬಣ್ಣಗಳ ದಿನಾಚರಣೆಯನ್ನು ಮಾಡಿ ಮಕ್ಕಳಿಗೆ ಬಣ್ಣಗಳ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.   ಆ  ಪ್ರಯುಕ್ತ ವಿದ್ಯಾರ್ಥಿಗಳು ಹಳದಿ ಬಣ್ಣದ ವಿವಿಧ ತಿನಿಸುಗಳು ಹಾಗೂ ವಸ್ತುಗಳನ್ನು ಪ್ರದರ್ಶಿಸಿದರು. ತರಗತಿ ಕೋಣೆಗಳಲ್ಲಿ ಹಳದಿ ಬಣ್ಣದ  ವಸ್ತುಗಳ ಅಲಂಕಾರವನ್ನು ಮಾಡಿ ವಿದ್ಯಾರ್ಥಿಗಳು ನಲಿದಾಡಿದರು. ವಿದ್ಯಾರ್ಥಿಗಳು ನೃತ್ಯ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಳದಿ ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ್ ಶೆಟ್ಟಿ ಹೆಚ್., ಕಿಂಡರ್ ಗಾರ್ಟನ್ ಸಂಯೋಜಕಿ ವಿಲಾಸಿನಿ ಶೆಟ್ಟಿ, ಪ್ರಾಂಶುಪಾಲರು,  ಶಿಕ್ಷಕರು,  ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a Reply