ನವರಾತ್ರಿ ಉತ್ಸವ: ವಿದ್ಯುದಲಂಕಾರಗಳಿಂದ ಜಗಮಗಿಸುತ್ತಿದೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿ

Call us

Call us

Call us

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕೆಯ ಸನ್ನಿಧಿಯ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು 7ನೇ ದಿನಕ್ಕೆ ಕಾಲಿರಿಸಿದೆ . ಅ.22ರ ವಿಜಯದಶಮಿಯ ವಿಜಯಾಚರಣೆ ಮೂಲಕ ಸಮಾಪನಗೊಳ್ಳಲಿರುವ ಉತ್ಸವದಲ್ಲಿ ಪ್ರತಿನಿತ್ಯವೂ ದೇಶ-ವಿದೇಶಗಳ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವಿಯ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಉತ್ಸವದ ಅಂಗವಾಗಿ ದೇವಿಯ ಸನ್ನಿಧಾನವು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವುದು, ನವರಾತ್ರಿಗಳಿಗೆ ರಂಗು ತುಂಬಿದಂತಾಗಿದೆ.

Call us

Click Here

[quote font_size=”16″ bgcolor=”#ffffff” bcolor=”#dd3333″ arrow=”yes” align=”right”]ಭಕ್ತರಿಗೆ ಸಕಲ ಸೌಕರ್ಯ:
ದೇಗುಲಕ್ಕೆ ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆ ಹಾಗೂ ವಸತಿಗೃಹಗಳ ಹಾಗೂ ಇನ್ನಿತರ ವ್ಯವಸ್ಥೆಯ ಕುರಿತು ಆಡಳಿತ ಮಂಡಳಿ ವಿಶೇಷ ಕಾಳಜಿ ವಹಿಸಿದೆ. 5ನೇ ನವರಾತ್ರಿ ನಂತರದ ದಿನಗಳಲ್ಲಿ ಭಕ್ತರಿಗಾಗಿ ಭೋಜನದ ಜತೆಯಲ್ಲಿ ಬೆಳಗ್ಗಿನ ಉಪಹಾರಗಳನ್ನು ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. – ಕೃಷ್ಣಪ್ರಸಾದ ಅಡ್ಯಂತಾಯ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ[/quote]

ಇಲ್ಲಿನ ನವರಾತ್ರಿಯನ್ನು ಢಾಮರಿ ತಂತ್ರಾಗಮ ಪದ್ದತಿಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸುತ್ತಿದ್ದು, ಪ್ರತಿ ದಿನವೂ ಶ್ರೀ ದೇವಿಗೆ ಕಟ್ಟಕಟ್ಟಳೆ ಪೂಜೆಗಳ ಜೊತೆಯಲ್ಲಿ ಶತರುದ್ರಾಭೀಷೇಕ, ಕಲ್ಪೋಕ್ತ ಪೂಜೆ ಹಾಗೂ ಸುಹಾಸಿನಿ ಪೂಜೆಗಳು ನಡೆಯುತ್ತದೆ. ಕಲಶ ಸ್ಥಾಪನೆ ಹಾಗೂ ಧ್ವಜ ಗಣಪತಿ ಪೂಜೆಯೊಂದಿಗೆ ಆರಂಭವಾದ ಉತ್ಸವದ ಒಂಬತ್ತನೇ ದಿನ ರಾತ್ರಿ(ಅ.21) ದೇವಸ್ಥಾನದ ಒಳ ಪ್ರಾಂಗಾಣದಲ್ಲಿ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಪುಷ್ಪ ರಥದಲ್ಲಿ ಶ್ರೀ ದೇವಿಯ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಥದಿಂದ ನಾಣ್ಯಗಳನ್ನು ಪ್ರಸಾದ ರೂಪವಾಗಿ ಎಸೆಯಲಾಗುತ್ತದೆ. ನವಮಿಯಂದು ಪ್ರಸಾದ ರೂಪವಾಗಿ ದೊರಕುವ ಈ ನಾಣ್ಯ ಭಾಗ್ಯವನ್ನು ದಯಪಾಲಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಅ.22 ರಂದು ದೇಗುಲದಲ್ಲಿ ವಿಜಯದಶಮಿ ಸಂಭ್ರಮ. ಬೆಳಿಗ್ಗೆ 4 ಗಂಟೆಯಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನದ ವಿಧಿಗಳು ನಡೆಯುತ್ತದೆ. ಕೊಲ್ಲೂರಿನ ಗ್ರಾಮಸ್ಥರು ಅದೇ ದಿನದಂದು ಹೊಸ್ತು ಆಚರಿಸುತ್ತಾರೆ. ಸಂಜೆ ವಿಜಯೋತ್ಸವ ನಡೆಯುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ) ನವರಾತ್ರಿಯ ದಿನಗಳಲ್ಲಿ ಕ್ಷೇತ್ರಕ್ಕೆ ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. Kundapraa.com

_MG_8015 _MG_8020 _MG_8021 _MG_8032 _MG_8045 _MG_8054 _MG_8057 _MG_8065_MG_8068 _MG_8083 _MG_8095 _MG_8096 _MG_8111

Click here

Click here

Click here

Click Here

Call us

Call us

Leave a Reply