ಕು೦ದಾಪುರ: ಈ ಜಗತ್ತಿನಲ್ಲಿ ಯಾರೂ ಕೂಡ ಪರಿಪೂರ್ಣರಲ್ಲ.ಒಳ್ಳೆಯರಾಗಿರುವುದು ಎ೦ದರೆ ಒಳ್ಳೆಯ ಅ೦ಶಗಳನ್ನು ನಮ್ಮ ನಡೆನುಡಿಗಳಲ್ಲಿ ಹೆಚ್ಚು ಹೆಚ್ಚು ಹೊ೦ದಿರುವ೦ತಾದ್ದು. ಪ್ರಪ೦ಚ ಒಳ್ಳೆಯದಾಗಿ ಕಾಣಿಸಬೇಕಾದರೆ ಪ್ರತಿಯೊಬ್ಬರೂ ತಮ್ಮಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ಇರುವುದರಲ್ಲಿ ಬದಲಾವಣೆ ಸಾಧ್ಯವಿಲ್ಲದಿರಬಹುದು ಆದರೆ ಅದರ ಬಳಕೆಯಲ್ಲಿ ಬದಲಾವಣೆ ಖ೦ಡಿತಾ ಸಾಧ್ಯ ಎ೦ದು ಬರಹಗಾರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಹೇಳಿದರು. ಅವರು ಇತ್ತೀಚೆಗೆ ಕು೦ದಾಪುರದ ವಡೇರಹೋಬಳಿಯಲ್ಲಿನ ರೋಟರಿ ಸಭಾ೦ಗಣದಲ್ಲಿ ನಡೆದ ರೋಟರಿ ಕ್ಲಬ್ ಕು೦ದಾಪುರ ದಕ್ಷಿಣ ಹಮ್ಮಿಕೊ೦ಡಿದ್ದ ಸಭಾ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಒಳ್ಳೆಯವರಾಗಿರುವುದು ಎ೦ದರೆ… ಎನ್ನುವ ವಿಷಯದ ಬಗೆಗೆ ಉಪನ್ಯಾಸ ನೀಡುತ್ತಾ ಮಾತನಾಡಿದರು. ಇತರ ವ್ಯಕ್ತಿಗಳ ಬಗೆಗೆ ಸರಿಯಾಗಿ ಅರಿತುಕೊಳ್ಳದೆ ನಾವು ನಮ್ಮದೇ ಆದ ಗ್ರಹಿಕೆಯನ್ನು ಹೊ೦ದುವುದು ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಘನತೆ ಗೌರವಗಳು ಇರುತ್ತವೆ. ಹಾಗಾಗಿ ಪ್ರತಿಯೊಬ್ಬರನ್ನು ಗೌರವಿಸಬೇಕು. ನಮ್ಮ ಮೋಜಿನ ಖರ್ಚಿನಲ್ಲಿನ ಸ್ವಲ್ಪ ಭಾಗವನ್ನಾದರೂ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಡುವುದು ಎಲ್ಲರಿಗೂ ರೂಢಿಯಾಗಬೇಕು ಎ೦ದು ಅವರು ಅಭಿಪ್ರಾಯಪಟ್ಟರು. ರೊ.ರಮೇಶ್ ಭಟ್ ಅತಿಥಿಗಳನ್ನು…
Author: Editor Desk
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಪದಾಧಿಕಾರಿಗಳು ಮತ್ತು ಸದಸ್ಯರು ಇತ್ತೀಚೆಗೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಘಟಕಕ್ಕೆ ಭೇಟಿಕೊಟ್ಟು ರಕ್ತದಾನವನ್ನು ಮಾಡಿ ಪರಿಸರದ ಜನರು ರಕ್ತನಿಧಿ ಕೇಂದ್ರದ ಸಂಪೂರ್ಣ ಅನುಕೂಲತೆಯನ್ನು ಪಡೆಯಬೇಕು ಹಾಗೂ ಹೆಚ್ಚು ಹೆಚ್ಚು ರಕ್ತದಾನ ಮಾಡಿ ಸಮಾಜದ ಅವಶ್ಯಕತೆಯನ್ನು ಪೂರೈಸುವಂತೆ ಕರೆ ನೀಡಿದರು. ವಾರದ ಸಭೆಯನ್ನು ರೋಟರಿ ಮತ್ತು ಆನ್ಸ್ ಕ್ಲಬ್ ಜಂಟಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಜಯಕರ್ ಶೆಟ್ಟಿ ಮಾತನಾಡುತ್ತಾ ರಾಜ್ಯದಲ್ಲಿಯೇ ಅತ್ಯುತ್ತಮವಾದ ಅತ್ಯಾಧುನಿಕ ರಕ್ತನಿಧಿ ಕೇಂದ್ರದ ರೂಪರೇಷೆ ಹಾಗೂ ಅದರ ಮುಂದೆ ಇರುವ ಸವಾಲುಗಳನ್ನು ವಿವರಿಸಿದರು. ಆನ್ಸ್ ಕ್ಲಬ್‌ನ ಛೇರ್‌ಮೆನ್ ಹಾಗೂ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ| ಹೆಚ್.ಎಸ್ ಮಲ್ಲಿ ಮಾತನಾಡುತ್ತಾ ರಕ್ತದಾನದ ಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಯಪಡಿಸಿದರು. ರೋಟರಿ ಅಧ್ಯಕ್ಷ ಮನೋಜ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ರಕ್ತದಾನ ಮಾಡಿದ ಎಲ್ಲಾ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಅಂಗ ಸಂಸ್ಥೆ ಆನ್ಸ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಘಟಕಕ್ಕೆ ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಜಯಕರ್ ಶೆಟ್ಟಿ, ಆನ್ಸ್ ಕ್ಲಬ್‌ನ ಛೇರ್‌ಮೆನ್ ಡಾ| ಹೆಚ್.ಎಸ್ ಮಲ್ಲಿ, ರೋಟರಿ ಅಧ್ಯಕ್ಷ ಮನೋಜ್ ನಾಯರ್, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಬಿಂದು ನಾಯರ್, ರೋಟರಿ ನಿಯೋಜಿತ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಖಜಾಂಚಿ ಪ್ರದೀಪ್ ವಾಜ್, ನಿಯೋಜಿತ ದಂಡಪಾಣಿ ನೂಜಾಡಿ ಸಂತೋಷ್ ಶೆಟ್ಟಿ, ಹಿರಿಯ ಸದಸ್ಯ ಡಾ| ಎಂ.ಎನ್. ಅಡಿಗ, ಆನ್ಸ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ಹಾಗೂ ಖಜಾಂಚಿ ರತ್ನಮ್ಮ ಹೊಳ್ಳ, ವಿ.ಆರ್.ಕೆ ಹೊಳ್ಳ, ಮುತ್ತಯ್ಯ ಶೆಟ್ಟಿ, ಡಾ| ಛಾಯಾ ಹೆಬ್ಬಾರ್, ಗೋಪಾಲ ಕೃಷ್ಣ ಶೆಟ್ಟಿ ಶಿರಿಯಾರ, ಕಾರ್ಯದರ್ಶಿ ಕೆ.ವಿ.ನಾಯಕ್, ಕೃಷ್ಣ ಕಾರಂತ್, ಚಂದ್ರ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಸಂತೋಷ ಕೋಣಿ…
ಗ೦ಗೊಳ್ಳಿ: ಇಲ್ಲಿನ ದೇವಾಡಿಗ ಕುಟು೦ಬವೊ೦ದು ಐದು ತಲೆಮಾರುಗಳನ್ನು ಕಂಡಿದೆ. ನಿಕ್ಚಿತ್ ದೇವಾಡಿಗ ಈ ಕುಟಂಬದ ಎಳೆಯ ತಲೆಮಾರಾದರೇ, ಆ ಮಗುವಿನ ತಂದೆ ಚೇತನ್ ದೇವಾಡಿಗ, ಚೇತನ ಅವರ ತಾಯಿ ಪದ್ಮಾವತಿ, ಅಜ್ಜಿ ಲಕ್ಷ್ಮಿ ಹಾಗೂ ಮುತ್ತಜ್ಜಿ ಶೇಷಿ ಹಳೆಯ ತಲೆಮಾರಿನವರಾಗಿದ್ದಾರೆ. ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.
ಕುಂದಾಪುರ: ಕನ್ನಡ ಮಾಧ್ಯಮದ ಬಗ್ಗೆ ಗ್ರಾಮೀಣ ಜನತೆ ಯಾವುದೇ ಕೀಳರಿಮೆ ಹೊಂದದೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದ ಅಗತ್ಯ ಇದೆ. ಕನ್ನಡ ಮಾಧ್ಯಮದಲ್ಲಿ ಕಲಿತವರೂ ಇಂದು ಉನ್ನತ ಸ್ಥಾನ ಪಡೆದಿದ್ದಾರೆ. ಶಿಕ್ಷಣದ ಸವಲತ್ತುಗಳನ್ನು ಪಡೆದು ಸಮಾಜದ ಋಣ ತೀರಿಸುವ ಪ್ರಯತ್ನ ನಡೆಸಿ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಹೇಳಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ವತಿಯಿಂದ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಶನಿವಾರ 5,200 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಗ್ವಾಡಿ ಕುಂದಾಪುರ ಶಾಖೆ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಸುವರ್ಣ, ಉದ್ಯಮಿ ಕೆ.ಕೆ. ಕಾಂಚನ್ ಉಪಸ್ಥಿತರಿದ್ದರು. ಗಣೇಶ್ ಕಾಂಚನ್ ಸ್ವಾಗತಿಸಿ ಸುಧಾಕರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ತೆಕ್ಕಟ್ಟೆ ವಂದಿಸಿದರು.
ರೈಲು ಪ್ರಯಾಣಿಕರಿಗೆ ವಿವಿಧ ರೀತಿಯಲ್ಲಿ ತ್ವರಿತ ಸೇವೆ ಒದಗಿಸಲು ಕೊಂಕಣ ರೈಲ್ವೇ ಹಲವು ಸಹಾಯವಾಣಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ರೈಲ್ವೇ ಪ್ರಯಾಣಿಕರು ಪಡೆದುಕೊಳ್ಳಬಹುದು. 139 ಟೋಲ್‌ಫ್ರೀ ಸಂಖ್ಯೆಗೆ ಕರೆ/ಎಸ್‌ಎಂಎಸ್ ಮಾಡುವ ಮೂಲಕ ಪಿಎನ್‌ಆರ್(ಟಿಕೆಟ್ ಸ್ಥಿತಿಗತಿ) ಮತ್ತು ದೇಶದ ವಿವಿಧೆಡೆಗಳಲ್ಲಿ ರೈಲಿನ ಓಡಾಟ, ನಿಲುಗಡೆ ಮತ್ತಿತರ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು. 18002331332ಗೆ ಕರೆ ಮಾಡಿ ಕೊಂಕಣ ರೈಲು ಮಾರ್ಗದಲ್ಲಿ ಎಲ್ಲ ರೈಲುಗಳ ಓಡಾಟದ ಸಂಪೂರ್ಣ ವಿವರವನ್ನು ಕ್ಷಿಪ್ರವಾಗಿ ಪಡೆದುಕೊಳ್ಳಬಹುದು. ರೈಲು ಪ್ರಯಾಣದ ಸಂದರ್ಭ ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ 9004470700ಗೆ ಎಸ್‌ಎಂಎಸ್ ಮಾಡಿ ದೂರು ಸಲ್ಲಿಸಬಹುದು. ಮಾತ್ರವಲ್ಲದೆ ಭಾರತೀಯ ರೈಲ್ವೇಯ ಸಹಾಯವಾಣಿ 138ನ್ನು ಇತರ ಮಾಹಿತಿಗೆ ಹಾಗೂ 182 ಸಹಾಯವಾಣಿಯನ್ನು ಭದ್ರತೆ ಸಂಬಂಧಿ ಕರೆಗೆ ಬಳಸಿಕೊಳ್ಳಬಹುದು. ಪ್ರಯಾಣಿಕ ಸ್ನೇಹಿ ಕ್ರಮವಾಗಿ ರೈಲ್ವೇ ಆರಂಭಿಸಿರುವ ಈ ಸೌಲಭ್ಯಗಳ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳುವಂತೆ ಕೊಂಕಣ ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.
ಕೋಟ: ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ನಿವಾಸಿ ಅಬ್ದುಲ್ ರೆಹಮಾನ್ ಅವರ ಪುತ್ರ ಮಹಮದ್ ಸಾಹೀಲ್ (17) ಕಳೆದ ಮೇ 23 ಶನಿವಾರದಂದು ನಾಪತ್ತೆಯಾಗಿದ್ದು 6 ದಿನಗಳ ನಂತರ ಈತ ಮೇ 28 ಗುರುವಾರ ದೆಹಲಿಯಲ್ಲಿ ಪತ್ತೆಯಾಗಿದ್ದಾನೆ . ಮೇ 28 ಗುರುವಾರ ಬೆಳಿಗ್ಗೆ ಗಂಟೆ 6:30 ಕ್ಕೆ ಸಾಹೀಲ್ ತನ್ನ ತಂದೆ ಅಬ್ದುಲ್ ರೆಹಮಾನ್ ಅವರ ಮೊಬೈಲ್‌ಗೆ ಕರೆ ಮಾಡಿ ನಾನು ದೆಹಲಿಯ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಇದ್ದೇನೆ ಎಂದು ಹೇಳಿದ್ದಾನೆ ಕೂಡಲೇ ಮನೆಯವರು ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಾಹೀಲ್ ರಕ್ಷಣೆ ಮುಂದಾಗಿದ್ದು ಮೇ 28ರಂದು ದೆಹಲಿಯಿಂದ ಮಂಗಳೂರಿಗೆ ವಿಮಾನದ ಮೂಲಕ ರಾತ್ರಿ ಮನೆಗೆ ತಲುಪಿದ್ದಾನೆ ಬ್ರಹ್ಮಾವರ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್ ಮೇ 23ರಂದು ಸಂಜೆ ಮನೆಯ ಸಮೀಪದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗುತ್ತೇನೆ ಎಂದು ಹೇಳಿ ಹೋದವನು ಸಂಜೆ 7 ಗಂಟೆಯಾದರೂ ಮನೆಗೆ ವಾಪಾಸಾಗದ ಹಿನ್ನೆಲೆಯಲ್ಲಿ ಎಲ್ಲೆಡೆಯಲ್ಲಿ ಹುಡುಕಾಟ ನಡೆಸಲಾಯಿತು ನಂತರ ಯಾವುದೇ ರೀತಿಯ…
ಕುಂದಾಪುರ: ಪ್ರತಿಯೊಬ್ಬ ವೈದ್ಯರೂ ತಾನು ಚಿಕಿತ್ಸೆ ನಡೆಸುತ್ತಿರುವ ರೋಗಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ರೋಗಿಗೆ ಹಾನಿ ಮಾಡಿ ದುರ್ಲಾಭ ಪಡೆಯಲು ಯಾವ ವೈದ್ಯನೂ ಬಯಸುವುದಿಲ್ಲ. ಆದರೂ ಪರಿಸ್ಥಿತಿಯ ವ್ಯತ್ಯಾಸಗಳಿಂದಾಗಿ ಹೆಚ್ಚಾಗಿ ವೈದ್ಯರೇ ನಿಂದನೆ ಗೊಳಗಾಗಬೇಕಾಗುತ್ತದೆ. ಈ ಪವಿತ್ರ ಸಂಬಂಧ ಸಡಿಲ ವಾಗುತ್ತಿರುವುದರಿಂದ ಈಗೀಗ ವೈದ್ಯರನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇಂದಿಗೂ ಹದಗೆಟ್ಟಿಲ್ಲ ಎಂದು ಕುಂದಾಪುರದ ಶ್ರೀ ದೇವಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ. ರವೀಂದ್ರ ರಾವ್ ಹೇಳಿದರು. ಅವರು ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ ಉಪ್ಪಿನಕುದ್ರು ದಿ| ವೇದಮೂರ್ತಿ ಸದಾಶಿವ ಹೊಳ್ಳ ದಂಪತಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಂಸ್ಮರಣ ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಸಮ್ಮಾನ ಸ್ವೀಕರಿಸಿದ ಅವರು ಮಾತನಾಡಿದರು. ಅವರ ಪತ್ನಿ ಡಾ| ಭವಾನಿ ರಾವ್ ಅವರನ್ನು ಸಮ್ಮಾ¾ನಿಸಿ ಗೌರವಿಸಲಾಯಿತು. ವೈದ್ಯ ದಂಪತಿಯನ್ನು ಪ್ರತಿಷ್ಠಾನದ ಪರವಾಗಿ ಸಮ್ಮಾ¾ನಿಸಿದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಳದ ಆಡಳಿತ ಧರ್ಮದರ್ಶಿ ವೇದಮೂರ್ತಿ, ಎಚ್. ರಾಮಚಂದ್ರ ಭಟ್, ಪ್ರತಿಷ್ಠಾನದ ಆಶ್ರಯದಲ್ಲಿ…
ಗ್ರಾ.ಪಂ ಚುನಾವಣೆ: ಹಲವು ಪಂಚಾಯತಿಗಳಲ್ಲಿ ರಾಜಿಯಾಟ, ಕೆಲವೆಡೆ ಮಳೆರಾಯನ ಆರ್ಭಟ, ಸಣ್ಣ ಪುಟ್ಟ ಹೊಡೆದಾಟ ಕುಂದಾಪುರ: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಇಂದು(ಶುಕ್ರವಾರ) ಮೊದಲ ಹಂತದ ಚುನಾವಣೆ ನಡೆದಿದ್ದು, ಈ ಭಾರಿ ಕುಂದಾಪುರ ತಾಲೂಕಿನಲ್ಲಿ ಶೇ.71.19 ಮತದಾನವಾಗಿದೆ. ಅಲ್ಲಲ್ಲಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ಹಾಗೂ ಒಂದೆರಡು ಕಡೆ ಹಲ್ಲೆ ಪ್ರಕರಣವನ್ನು ಹೊರತುಪಡಿಸಿದರೇ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ. 142 ಸ್ಥಾನಗಳಿಗೆ ಅವಿರೋಧ ಆಯ್ಕೆ: ಕುಂದಾಪುರ ತಾಲೂಕಿನ ಒಟ್ಟು 62 ಪಂಚಾಯತ್‌ಗಳ 875 ಸ್ಥಾನಗಳಿಗೆ ಈ ಚುನಾವಣೆ ಘೋಷಣೆಯಾಗಿತ್ತು. ಇವುಗಳ ಪೈಕಿ 142 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 733 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಈ ಬಾರಿ ಕುಂದಾಪುರ ತಾಲೂಕಿನಲ್ಲಿ 9 ಹೊಸ ಗ್ರಾಮಪಂಚಾಯತ್‌ಗಳ ರಚನೆಯಾಗಿತ್ತು. ಹೊಸ ಗ್ರಾಮ ಪಂಚಾಯತ್‌ಗಳಲ್ಲಿ ಕೊರ್ಗಿ ಗ್ರಾಮದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ವಿಶೇಷವಾಗಿತ್ತು. ಉಳಿದಂತೆ ಶಿರೂರು ಗ್ರಾ.ಪಂ.ನ 44 ಸ್ಥಾನಗಳಲ್ಲಿ 2 ಸ್ಥಾನಗಳಿಗೆ, ಪಡುವರಿ ಗ್ರಾ.ಪಂ.ನ 18 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಉಪ್ಪುಂದ…
ಕುಂದಾಪುರ: ಲಯನ್ಸ್ ಜಿಲ್ಲೆ 317 – ಡಿಯ ಜಿಲ್ಲಾ ಸಂಯೋಜಕರಾದ ಲಯನ್ ಕೆ. ಸದಾನಂದ ಉಪಾಧ್ಯಾಯರನ್ನು 2013-14ನೇ ಸಾಲಿನ ಅವರ ವಿಶೇಷ ಸಾಧನೆಯನ್ನು ಪರಿಗಣಿಸಿ ಗೋವಾದಲ್ಲಿ ನಡೆದ ಮಲ್ಟಿಪಲ್ ಸಮಾವೇಷದಲ್ಲಿ ಮಲ್ಟಿಪಲ್ 317ರ ಶ್ರೇಷ್ಟ ಜಿಲ್ಲಾ ಸಂಯೋಜಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಕೃಷ್ಣಾ ರೆಡ್ಡಿ ಸಹಿತ ಅನೇಕ ಮಲ್ಟಿಪಲ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
