Author: Editor Desk

ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ  2015-16ನೇ ಸಾಲಿನ ಅಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಭಿಯಂತರರಾದ ಪ್ರದೀಪ್ ಡಿ.ಕೆ ಆಯ್ಕೆಯಾಗಿದ್ದಾರೆ.  ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರರ ಸಂಘದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿಯ ಕಾರ್ಯದರ್ಶಿಯಾಗಿ ರಾಘವೇಂದ್ರ ಆರ್ ಭಂಡಾರ್‌ಕರ್ ಆಯ್ಕೆಯಾಗಿದ್ದರೇ, ಮೆಂಬರ್ ಶಿಪ್ ಡೆವೆಲಪ್ ಮೆಂಟ್ ಸಂಚಾಲಕರಾಗಿ ವಾಸುದೇವ ಶೇರುಗಾರ್, ಕ್ಲಬ್ ಸರ್ವಿಸ್ ಗೆ ರಾಮನಾಥ್ ನಾಯಕ್,  ಒಕೇಶನಲ್ ಸರ್ವೀಸ್ ಗೆ ರಾಜೇಶ್ ಎಂ. ಜಿ, ಕಮ್ಯುನಿಟಿ ಸರ್ವಿಸ್ ಡಾ.ಕಾಶಿನಾಥ್ ಪೈ,  ಯೂತ್ ಸರ್ವಿಸ್ ಗೆ ಮಹೇಶ್‌ರಾಜ್ ಪೂಜಾರಿ, ಅಂತರರಾಷ್ಟ್ರೀಯ ಸೇವೆಗಳಿಗೆ ಗಣೇಶ್ ಕಾಮತ್,  ಟಿಆರ್‌ಎಫ್ ಗೆ ಉಮೇಶ್ ಮೇಸ್ತ, ಪೋಲಿಯೋ ಪ್ಲಸ್ ಗೆ ಜನಾರ್ಧನ  ಪೂಜಾರಿ, ಖಜಾಂಚಿಯಾಗಿ ನಾಗರಾಜ್ ಶೆಟ್ಟಿ, ಲಿಟರಸಿ ಚೆಯರ್‌ಮನ್ ಆಗಿ ನಾರಾಯಣ ನಾಯ್ಕ್, ಇಂಟರ್ಯಾಕ್ಟ್  ಚೆಯರ್‌ಮನ್ ಆಗಿ ಅಶೋಕ್ ದೇವಾಡಿಗ, ಬುಲೆಟಿನ್ ಎಡಿಟರ್ ಆಗಿ ಥಾಮಸ್, ಕಲ್ಚರಲ್ ಚೆಯರ್‌ಮನ್ ಆಗಿ ಪ್ರಕಾಶ್ ಪೂಜಾರಿ ಆಯ್ಕೆಯಾದರು. ಪದಗ್ರಹಣ ಸಮಾರಂಭವು ಜುಲೈ 14ರಂದು ಗಂಗೊಳ್ಳಿ ಎಸ್.ವಿ.ಪದವಿಪೂರ್ವ…

Read More

ಬೈಂದೂರು: ಅನಾದಿಕಾಲದಿಂದಲೂ ಸಮಾಜಕ್ಕೆ ಪುರಾಣ, ರಾಮಾಯಣ, ಮಹಾಭಾರತದ ಕಥೆಗಳನ್ನು ಸಮೃದ್ಧವಾಗಿ ಉಣಬಡಿಸಿದ್ದು ಯಕ್ಷಗಾನ ಕಲೆ ಮಾತ್ರ. ಯಕ್ಷಗಾನದಲ್ಲಿ ಭಾಷೆಯ ಸ್ಪಷ್ಟ ಪ್ರಯೋಗಿಂದಾಗಿ ಇಂದಿಗೂ ಕನ್ನಡ ನುಡಿ ಸಮೃದ್ಧವಾಗಿ ಉಳಿದಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಯುಸ್ಕೋರ್ಡ್ ಟ್ರಸ್ಟ್ (ರಿ) ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ಐದು ದಿನಗಳ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನವನ್ನು ನಿರಂತರವಾಗಿ ನೋಡುವುದರೊಂದಿಗೆ ಒಂದಿಷ್ಟು ಕಲಾವಿದರು ಹುಟ್ಟಿಕೊಳ್ಳುವಂತಾಗಲಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಯಕ್ಷಗಾನದ ಉಳಿವಿಗೆ ಕಟಿಬದ್ಧವಾಗಿದೆ ಭರವಸೆಯಿತ್ತರು. ಯಕ್ಷೋತ್ಸವವನ್ನು ಉದ್ಘಾಟಿಸಿದ ಕೊಲ್ಲೂರು ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅರುಣಪ್ರಕಾಶ್ ಶೆಟ್ಟಿ ಮಾತನಾಡಿ ಕಲೆ ನಾಶವಾದರೆ ಸಂಸ್ಕೃತಿ ನಾಶವಾದಂತೆ. ಕಲೆಯ ಬಗ್ಗೆ ಕಿಂಚಿತ್ತಾದರೂ ಅಭಿಮಾನವಿಟ್ಟುಕೊಂಡರೆ ಮಾತ್ರ ಅದರ ಉಳಿವು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಭಾಗವತ…

Read More

ಕುಂದಾಪುರ: ಯೋಗವು ಆತ್ಮ ಮತ್ತು ಪರಮಾತ್ಮನ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ. ಯೋಗಕ್ಕೆ ಜಾತಿ, ಮತ ಮತ್ತು ಧರ್ಮದ ಬೇಧವಿಲ. ದೇವರು ನಿರ್ವಿಕಾರ ಹಾಗೂ ದೇಹ ಮತ್ತು ಮನಸ್ಸನ್ನು ಸೇರಿಸುವುದೇ ಯೋಗ. ಇದರಿಂದ ಆರೋಗ್ಯ ಮನಸ್ಸಿನ ಏಕಾಗ್ರತೆ ನೆಮ್ಮದಿ ಹಾಗೂ ಯೋಗದ ಆದರ್ಶಗಳು ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನೆ ಪಡೆದುಕೊಳ್ಳಬೇಕೆಂದು ಕುಂದಾಪುರ ಜೀವ ವಿಮಾ ವಿಭಾಗದ ಪ್ರವೀಣ್ ಶೆಟ್ಟಿ ಹೇಳಿದರು. ಅವರು ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್, ಎನ್.ಎಸ್.ಎಸ್ ಯೋಜನಾಧಿಕಾರಿ ವಿದ್ಯಾಧರ್ ಪೂಜಾರಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿ ಜೋನ್ಸನ್ ಸ್ವಾಗತಿಸಿದರು, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ ವಂದಿಸಿದರು, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ…

Read More

ಕುಂದಾಪುರ: ನಕರಾತ್ಮಕ ಮನೋವೃತ್ತಿಯನ್ನು ಬದಲಾಯಿಸಿಕೊಳ್ಳಬೇಕು. ಯುವಕರು ದೇಶವನ್ನು ಕಟ್ಟುವವರಾಗಬೇಕು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿಯನ್ನು ತುಂಬಿ ಹೃದಯ ವೈಶಾಲ್ಯತೆಯನ್ನು ಬೆಳಸಿ, ಸತ್ಯ ಪ್ರಾಮಾಣಿಕತೆ ಮತ್ತು ಪ್ರತಿಯೊಂದು ಕೆಲಸಕ್ಕೂ ನಾನು ತಯಾರಾಗಿದ್ದೇನೆ ಎನ್ನುವುದನ್ನು ಕಲಿಸಿಕೊಡುತ್ತದೆ. ಎನ್.ಎಸ್.ಎಸ್ ಲಾಂಛನ ಪ್ರತಿಬಿಂಬಿಸುವ ಆದರ್ಶಗಳು ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿಯ ಪ್ರಾಂಶುಪಾಲರಾದ ಪ್ರೋ.ರಾಧಕೃಷ್ಣ ಶೆಟ್ಟಿ ಹೇಳಿದರು. ಅವರು ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಬ್ಯಾರೀಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ದೋಮ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್. ಎಸ್.ಎಸ್ ಯೋಜನಾಧಿಕಾರಿ ವಿದ್ಯಾಧರ ಪೂಜಾರಿ ಪ್ರಸ್ತಾವಿಕ ಮಾತನಾಡಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಅರ್ಪಿತಾ ಸ್ವಾಗತಿಸಿದರು, ಶ್ರೇಯಾ ವಂದಿಸಿದರು, ತೃತೀಯ ಬಿ.ಕಾಂ ವಿದ್ಯಾರ್ಥಿನಿ ರೋಶನಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪುರ: ಶಿರೂರು ವಿದ್ಯಾರ್ಥಿ ರತ್ನಾ ಕೊಠಾರಿ ಪ್ರಕರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರತ್ನಾ ಕೊಠಾರಿಯ ಸಾವು ಸಹಜ ಸಾವು ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕುಂದಾಪುರ ತಾಲೂಕು ಸಮಿತಿಯು ಖಂಡಿಸುತ್ತದೆ. ಒಬ್ಬ ಜವಾಬ್ದಾರಿಯುತ ಪೋಲೀಸ್ ಅಧಿಕಾರಿಯು ಮಾಡುವಂತಹ ಕೆಲಸವಲ್ಲ. ಒಂದು ವೇಳೆ ರತ್ನಾ ಕೊಠಾರಿಯ ಸಾವು ಸಹಜ ಸಾವಾದರೂ ಕೂಡಾ ಇಷ್ಟರವರೆಗೆ ಯಾಕೆ ಅದನ್ನು ಬಹಿರಂಗವಾಗಿ ಹೇಳಲಿಲ್ಲ. ಇಡೀ ರಾಜ್ಯ ಜಿಲ್ಲೆಯಲ್ಲಿ ಪ್ರತಿಭಟನೆಗಳು ಗಮನ ಸೆಳೆದರು ಕೂಡಾ ವ್ಯಾಪಾಕ ಪ್ರತಿಭಟನೆಗಳಿಗೆ ಕಾರಣವಾದ ಪ್ರಕರಣವನ್ನು ನೀವು ಇಷ್ಟು ದಿನ ಮುಚ್ಚಿಟ್ಟು ಕೊನೆಗೆ ಅಕ್ಷತಾ ಕೊಲೆಯಾದಾಗ ರತ್ನಾ ಕೊಠಾರಿಯ ಸಾವು ಸಹಜ ಸಾವು ಎಂದು ಹೇಳಿಕೆ ನೀಡಿರುವುದು ಒಂದು ಬೇಜವಾಬ್ದಾರಿಯುತ ಹೇಳಿಕೆಯಾಗಿದೆ. ಈ ಹಿಂದೆ ಪೋಲೀಸ್ ಅಧಿಕಾರಿಯವರನ್ನು ಭೇಟಿ ಮಾಡಲು ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ನಿಯೋಗ ಹೋದಾಗಲೂ ಕೂಡಾ ಸರಿಯಾದ ಮಾಹಿತಿಯನ್ನು ನೀಡದೇ ಜೇನು ಕಚ್ಚಿ ಸತ್ತಿರಬಹುದು ಮತ್ತು ಮಾತ್ರೆ ಸೇವನೆಯಿಂದ ಸತ್ತಿರಬಹುದು ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿರುತ್ತಾರೆ. ಇದನ್ನೆಲ್ಲಾ…

Read More

ಕುಂದಾಪುರ: ದೈಹಿಕ ಆಸನ ಮತ್ತು ವ್ಯಾಯಾಮಗಳಿಗಿಂತ ಮುಂದುವರಿದು ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಬದುಕಿನಲ್ಲಿ ದೈರ್ಯ ಮತ್ತು ಸ್ಥೆರ್ಯವನ್ನು ತುಂಬಿಸಿ ಉತ್ತಮ ಜೀವನ ಪಧ್ಧತಿಯನ್ನು ರೂಡಿಸಿಕೊಳ್ಳುವುದೇ ಯೋಗ ಎಂದು ನಂದ ಗೋಕುಲ ಶಿಶುಮಂದಿರದ ಆಡಳಿತ ನಿರ್ದೇಶಕ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಹೇಳಿದರು. ಅವರು ಹುಣ್ಸೆಮಕ್ಕಿ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿಚಾರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಹಿರಿಯ ಯೋಗ ಸಾಧಕ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಗ ತರಬೇತಿ ಶಿಬಿರವನ್ನು ಯೋಗ ಸಾಧಕ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ರತ್ನಾಕರ್ ಶೆಟ್ಟಿ ಉಧ್ಘಾಟಿಸಿ, ಯೋಗವನ್ನು ನಮ್ಮ ದಿನ ನಿತ್ಯ ಜೀವನದಲ್ಲಿ ಅನುಸಂಧಾನ ಮಾಡಿಕೊಂಡಲ್ಲಿ ರೋಗ ಮುಕ್ತರಾಗಿ ಸದೃಢ ಸಮಾಜ ನಿರ್ಮಾಣಗೊಂಡು ಸತ್ಯ ಧರ್ಮದ ಪಾಲನೆಯಾಗುತ್ತದೆ ಎಂದರು. ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಸೂರಪ್ಪ ಶೆಟ್ಟಿ ಇದ್ದರು. ಶಿಕ್ಷಕ ನಾರಾಯಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹೆಮ್ಮಾಡಿ ಜನತಾ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ…

Read More

ಗ೦ಗೊಳ್ಳಿ: ದ್ವಿತೀಯ ಪಿಯುಸಿ ಮರು ಮೌಲ್ಯ ಮಾಪನದಲ್ಲಿ ಇ೦ಗ್ಲೀಷ್ ಬಾಷೆಯಲ್ಲಿ ಆರು ಹೆಚ್ಚುವರಿ ಅ೦ಕಗಳನ್ನು ಪಡೆಯುವ ಮುಖೇನ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗ೦ಗೊಳ್ಳಿಯ ರಕ್ಷಾ ಗೋಪಾಲ್ ವಾಣಿಜ್ಯ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಹಾಗು ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ.ಇವಳು ಹಿ೦ದಿ ೯೮,ಇ೦ಗ್ಲೀಷ್ ೯೪,ಬೇಸಿಕ್ ಮ್ಯಾತ್ಸ್ ,ಸ್ಟ್ಯಾಟಿಸ್ಟಿಕ್ಸ್,ಅಕೌ೦ಟೆನ್ಸಿ ಮತ್ತು ವ್ಯವಹಾರ ಅಧ್ಯಯನ ವಿಷಯದಲ್ಲಿ ನೂರಕ್ಕೆ ನೂರು ಅ೦ಕಗಳನ್ನು ಪಡೆದಿರುತ್ತಾಳೆ. ಅವಳು ಗ೦ಗೊಳ್ಳಿಯ ಗೋಪಾಲ ಜಿ ಮತ್ತು ಭಾರತಿ ದ೦ಪತಿಗಳ ಪುತ್ರಿ.

Read More

ಶಿಕ್ಷಣವೆ೦ದರೆ ಕೇವಲ ಜ್ಞಾನ ಪಡೆಯುವುದು ಎ೦ದಲ್ಲ.ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುವ೦ತಾದ್ದು.ಶಿಸ್ತು ಸಮಯಪಾಲನೆಯನ್ನು ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು.ಉದ್ದೇಶವಿಲ್ಲದ ಕಲಿಕೆಗೆ ಅರ್ಥವಿಲ್ಲ.ಆದ್ದರಿ೦ದ ಒ೦ದು ಗುರಿಯನ್ನಿಟ್ಟುಕೊ೦ಡು ನಾವುಗಳು ಕಲಿಯಬೇಕಿದೆ ಎ೦ದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಸಭಾ೦ಗಣದಲ್ಲಿ ನಡೆದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಆರ೦ಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿ ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜೀವಶಾಸ್ತ್ರ ಉಪನ್ಯಾಸಕಿ ಕವಿತಾ ಎಮ್ ಸಿ ವಿದ್ಯಾಲಯ ಬಳಗವನ್ನು ಪರಿಚಯಿಸಿದರು. ಥಾಮಸ್ ಪಿ.ಎ, ಸುಗುಣ ಆರ್, ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾಲೇಜಿನ ವಿವಿಧ ಸೌಲಭ್ಯ ನೀತಿ ನಿಯಮಗಳ ಬಗೆಗೆ ಮಾಹಿತಿಯನ್ನು ನೀಡಿದರು. ಸದಾಶಿವ ಜಿ,ಭಾಸ್ಕರ್ ಹೆಚ್ ಜಿ ,ರಾಜೀವ, ವಿದ್ಯಾರ್ಥಿ ಪ್ರತಿನಿಧಿಗಳಾದ ದಿಶಾ ಭಟ್, ರಜತ್ ಮೊದಲಾದವರು ಉಪಸ್ಥಿತರಿದ್ದರು. ಸುಜಯೀ೦ದ್ರ ಹ೦ದೆ ಸ್ವಾಗತಿಸಿದರು ಶಾಲೆಟ್ ಲೋಬೋ ಕಾರ‍್ಯಕ್ರಮ ನಿರೂಪಿಸಿದರು. ಅರುಣ್ ಕೆ…

Read More

ಮಣಿಪಾಲ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ| ವಿಶಾಲ್‌ ಆರ್‌. ಅಧ್ಯಕ್ಷತೆಯಲ್ಲಿ ಜರಗಿದ ಆರ್‌ಟಿಎ ಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಬಸ್‌ ಸೌಕರ್ಯ ಇಲ್ಲದಿರುವ ಬಗ್ಗೆ ಪ್ರಸ್ತಾವಿಸಲಾಯಿತು. ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಬಸ್‌ ಓಡಿಸಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಿಗೆ ಮಂಜೂರು ಮಾಡಿದೆ. ಬಸ್‌ ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಮಾತನಾಡಿ, “ಸಾರ್ವಜನಿಕರ ಬೇಡಿಕೆಯಂತೆ ಬೈಂದೂರಿನ ಹೇನ್‌ಬೇರು ಸಂಪರ್ಕಿಸುವ ರಸ್ತೆ ಸೇರಿದಂತೆ ಬಸ್‌ ಸೌಕರ್ಯ ಇಲ್ಲದ ಕೆಲವು ರಸ್ತೆಗಳಲ್ಲಿ ಬಸ್‌ ಓಡಿಸಲು ಬಸ್‌ ಮಾಲಕರು ಪರವಾನಿಗೆಯನ್ನು ಈ ಹಿಂದೆಯೇ ಕೇಳಿದ್ದರು. ಆದರೆ ಪರವಾನಿಗೆ ದೊರೆತಿರಲಿಲ್ಲ. ಅಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುತ್ತಿಲ್ಲ. ಖಾಸಗಿಯವರಿಗೂ ಅವಕಾಶ ನೀಡಿಲ್ಲ’ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು “ಆವಶ್ಯಕತೆ ಇರುವಲ್ಲಿ ಬಸ್‌ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಸ್‌ ಇರುವಲ್ಲಿ ಮತ್ತು ಬಸ್‌ ಸಂಚಾರಕ್ಕೆ ಅಯೋಗ್ಯವಾದ ಇಕ್ಕಟ್ಟಿನ ಸ್ಥಳಗಳಲ್ಲಿ…

Read More

ಅಕ್ಷತಾ ಕೊಲೆ ಪ್ರಕರಣದ ಸಮಗ್ರ ತನಿಕೆಯಾಗಲಿ. ಹೇನಬೇರು ಸೇರಿದಂತೆ ಬೈಂದೂರು ಭಾಗದ ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೊಳ್ಳಲಿ. ಬೈಂದೂರು ಬಂದ್, ಪ್ರತಿಭಟನಾ ಸಭೆಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದ ಊರವರು. ಬೈಂದೂರು: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವೇಳೆ ಹತ್ಯೇಗೀಡಾದ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಸಾವಿನ ಪ್ರಕರಣದ ಸಮಗ್ರ ತನಿಕೆಗೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೈಂದೂರು ವಿಧಾನಸಭಾ ವ್ಯಾಪ್ತಿಯ ಬಂದ್ ಹಾಗೂ ಬೃಹತ್ ಪ್ರತಿಭಟನಾ ಸಭೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ನಡೆಯಿತು. ಬೈಂದೂರು ಅಕ್ಷತಾ ದೇವಾಡಿಗ ಕಗ್ಗೋಲೆ ಪ್ರಕರಣ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಒಕ್ಕೊರಲಿನಿಂದ ನಿರ್ಣಯಗಳನ್ನು ಕೈಗೊಂಡು ಬೈಂದೂರಿನ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು. ಬೈಂದೂರಿನ ಕುಗ್ರಾಮವಾದ ಹೇನಬೇರುವಿಗೆ ಸಮರ್ಪಕವಾದ ಸಂಪರ್ಕ ರಸ್ತೆ, ಬಸ್ಸಿನ ವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿಯ ಹೇನಬೇರು ತಿರುವಿನಲ್ಲಿ ಸರಕಾರಿ ಬಸ್ ನಿಲುಗಡೆ ಸೌಲಭ್ಯ ಹಾಗೂ ಅಲ್ಲಿಯೇ ಅಕ್ಷತಾ ಹೆಸರಿನಲ್ಲಿ ಬಸ್ ನಿಲ್ದಾಣ…

Read More