Author: Editor Desk

ಕುಂದಾಪುರ: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ಶನಿವಾರ ಸಂಜೆ ಜರುಗಿತು. ಸಹಸ್ರಾರು ಭಕ್ತರು ಶ್ರೀವೆಂಕಟರಮಣ ದೇವರ ದರ್ಶನ ಪಡೆದರು. ಬ್ರಹ್ಮರಥೋತ್ಸವದ ನಿಮಿತ್ತ ಶ್ರೀ ದೇವರಿಗೆ ಪಂಚಾಮತ ಅಭಿಷೇಕ, ಕನಕಾಭಿಷೇಕ, ಮಹಾಸಮಾರಾಧನೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನ ನಡೆದವು. ದೇವಳದ ಆಡಳಿತ ಮೊಕ್ತೇಸರ ಕೆ.ರಾಧಾಕಷ್ಣ ಶೆಣೈ, ಜತೆ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಪಿ.ಮಾಳಪ್ಪ ಪೈ ಇದ್ದರು.

Read More

ಕಾರವಾರ: ಕೈಗಾ ವಸತಿ ಸಂಕೀರ್ಣದಲ್ಲಿ ನಡೆದ ಸ್ಕೇಟಿಂಗ್ ಪ್ರದರ್ಶನದಲ್ಲಿ ಕೈಗಾ ಅಟೊಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲಿ ನಲ್ಲಿ ಓದುತ್ತಿರುವ ಇಬ್ಬರು ಪುಟ್ಟ ಬಾಲ ಕರು ಹೊಸ ದಾಖಲೆ ನಿರ್ಮಿಸಿದ್ದಾರೆ. ವಸತಿ ಸಂಕೀರ್ಣದ ರಸ್ತೆಯಲ್ಲೇ ನಡೆದ ಪ್ರದರ್ಶನದಲ್ಲಿ 2ನೇ ತರಗತಿ ಓದುತ್ತಿರುವ ಗಗನದೀಪ ಆಂಜನಪ್ಪ ಗೌಡ 8.5 ಇಂಚು ಎತ್ತರದ 80 ಬಾರುಗಳ ಕೆಳಗೆ ನುಸುಳಿ 240 ಮೀಟರ್ ಕ್ರಮಿಸುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ. ಇದಕ್ಕೆ ಗಗನ ತೆಗೆದುಕೊಂಡ ಸಮಯ 1 ನಿಮಿಷ 2 ಸೆಕೆಂಡುಗಳು . ಮುಮ್ಮುಖವಾಗಿ ಚಲಿಸುವ ಈ ಲಿಂಬೋ ಸ್ಕೇಟಿಂಗ್ ದಾಖಲೆ ಈ ಮೊದಲು ಚೆನ್ನೈನ ಮೆಡ್ವಿನ ದೇವಾ ಹೆಸರಿನಲ್ಲಿತ್ತು. ಮೆಡ್ವಿನ್ ಫೆ. 22, 2014ರಲ್ಲಿ 50 ಮೀಟರ್, 40 ಬಾರ್, 9 ಇಂಚು ಎತ್ತರ, 41 ಸೆಕಂಡುಗಳ ದಾಖಲೆ ಮಾಡಿದ್ದ. ಇದೇ ಸಮಯದಲ್ಲಿ ಒಂದನೇಯ ತರಗತಿಯಲ್ಲಿ ಓದುತ್ತಿ ರುವ ಶಿಶಿರ ಗೋವರ್ಧನ ರೆಡ್ಡಿ ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್‌ನಲ್ಲಿ 8.5 ಇಂಚು ಎತ್ತರದ 70 ಬಾರುಗಳ…

Read More

ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಹಾಗೂ ಕೋಣಿಯ ಮನೆ ನಿವೇಶನ ರಹಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೋಣಿ ಗ್ರಾ.ಪಂ. ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ ಕೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಿ, ಕಂದಾವರ ಗ್ರಾಮಗಳ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒಂದು ವರ್ಷದ ಹಿಂದೆಯೇ ಕೋಣಿ ಗ್ರಾ.ಪಂ. ಗೆ ಮೊದಲ ಹಂತದಲ್ಲಿ 329 ಹಾಗೂ ಎರಡನೇ ಹಂತದಲ್ಲಿ 43 ಅರ್ಜಿ ಹಾಕಿ ಆದ್ಯತೆಯ ಮೇರೆಗೆ ನಿರ್ಗತಿಕರಿಗೆ ನಿವೇಶನವನ್ನು ಮಂಜೂರು ಮಾಡುವಂತೆ ಕೋರಲಾಗಿತ್ತು. ಆದರೆ 372 ಅರ್ಜಿಗಳ ಪೈಕಿ 134 ಅರ್ಜಿಗಳನ್ನಷ್ಟೇ ಸ್ವೀಕರಿಸಿರುವ ಕೋಣಿ ಗ್ರಾ.ಪಂ ಉಳಿದ ಅರ್ಜಿಗಳನ್ನು ತಿರಸ್ಕರಿಸಿರುವುದಕ್ಕೆ ಕಾರಣವನ್ನು ನೀಡಿಲ್ಲ. ತಾಲೂಕು ಕಾರ್ಯನಿರ್ವಹಣಾಧಿಕಾರಿಯ ಆದೇಶವಿದ್ದರೂ ಸಹಿತ ಕೋಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಗುರುತಿಸಲು ಸೂಕ್ತ ಕ್ರಮ…

Read More

ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ಅವರ ನಿರ್ದೇಶನದಲ್ಲಿ ಕುಂದಾಪುರ ತಾಲೂಕಿನ ವಿವಿಧೆಡೆ ಸಿನಿಮಾ ಚಿತ್ರೀಕರಣ.  ಕುಂದಾಪುರ: ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ವೀ ನಿರ್ದೇಶನದ ಮೂಲಕ ಯುವ ಮನಸ್ಸುಗಳನ್ನು ಗೆದ್ದಿದ್ದ ಸೈಲೆಂಟ್ ಸುನಿ ಅವರ ನಿರ್ದೇಶನದಲ್ಲಿ ಸದ್ದಿಲ್ಲದೇ ಮತ್ತೊಂದು ಚಿತ್ರ ಸೆಟ್ಟೇರಿದೆ. ಅದಾಗಲೇ ಚಿತ್ರದ ಒಂದು ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದ್ದು, ಕರಾವಳಿಯ ಸಂಬಂಧಿಸಿ ಚಿತ್ರಕಥೆಯ ಇನ್ನೊಂದು ಭಾಗ ಕುಂದಾಪುರ ತಾಲೂಕಿನ ಬೈಂದೂರು, ಕೋಡಿ ಹಾಗೂ ಮರ್ಡೇಶ್ವರ, ಅಪ್ಸರಕೊಂಡ, ಉಡುಪಿ ಮುಂತಾದೆಡೆ ಚಿತ್ರಿಕರಣಗೊಳ್ಳುತ್ತಿದೆ. ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ! ವಿಭಿನ್ನವಾದ ಕಥಾ ಹಂದರವನ್ನು ಹೊಂದಿರುವ ಚಿತ್ರವನ್ನು ಜೀ ಕನ್ನಡದ ರಾಧಾ ಕಲ್ಯಾಣ ಧಾರಾವಾಹಿಯ ನಿರ್ಮಾಪಕ ಆಶುಬೆದ್ರ ಸುಮಾರು ಎರಡುವರೇ ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಪ್ರತಿಭಾವಂತ ನಟ ಜಾಲಿಡೇಸ್ ಖ್ಯಾತಿಯ ಪ್ರವೀಣ್ ಹಾಗೂ ಯಶಸ್ವಿ ನಟಿ ಮೇಘನಾ ಗಾವ್ಕರ್ ಅವರು ಚಿತ್ರದಲ್ಲಿ ಸಿಂಪಲ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಜಾ ರಾವ್, ಸುರೇಶ್ ಮಂಗಳೂರು, ರವಿ ಭಟ್, ಪ್ರೇಮಲತಾ, ಅರ್ಚನಾ…

Read More

ಗ೦ಗೊಳ್ಳಿ: ಇಲ್ಲಿನ ಭಗತ್‌ಸಿ೦ಗ್ ಅಭಿಮಾನಿ ಬಳಗದ ಸದಸ್ಯರುಗಳು ಇತ್ತೀಚೆಗೆ ಮ್ಯಾ೦ಗನೀಸ್ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಬೆಳೆದುನಿ೦ತಿದ್ದ ಕುರುಚಲು ಗಿಡಗ೦ಟಿಗಳನ್ನು ಸ್ವಚ್ಚಗೊಳಿಸಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸಮಾಜ ಮುಖಿ ಕಾರ‍್ಯದಲ್ಲಿ ತೊಡಗಿಸಿಕೊ೦ಡು ಮಾದರಿಯಾದರು. ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಬೆಂಗಳೂರು: ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಆರನೇ ವರ್ಷದ ಸಂಭ್ರಮ ಎಪ್ರಿಲ್ 4 ರಂದು ಎನ್‌ಕೌಂಟರ್ ಕಿಂಗ್ ಖ್ಯಾತಿಯ ದಯಾನಾಯಕ್ ಹುಟ್ಟೂರು ಎಣ್ಣೆಹೊಳೆಯ ಹಂಚಿಕಟ್ಟೆ ಶ್ರೀ ಮಹಮ್ಮಾಯಿ ದೇವಾಲಯದ ಆವರಣದಲ್ಲಿ ಸಂಜೆ 5 ರಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶೇಖರ ಅಜೆಕಾರು ಮತ್ತು ಉಪಾಧ್ಯಕ್ಷ ದಿನೇಶ ಹೊಸಂಗಡಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮ್ಮೇಳನವನ್ನು ಖ್ಯಾತ ಸಾಹಿತಿ ಅಂಬಾತನಯ ಮುದ್ರಾಡಿ ಮತ್ತು ಮಕ್ಕಳ ಪ್ರತಿಭೋತ್ಸವವನ್ನು ಝೀಟಿವಿಯ ಸರಿಗಮ ಲಿಟ್ಲ್ ಚಾಂಪ್ ಉಡುಪಿಯ ಗಗನ್ ಗಾಂವ್‌ಕರ್ ಉದ್ಘಾಟಿಸಲಿರುವರು. ಈ ಬಾರಿ ಗೌರವ ವಿಜೇತರ ಅನುಭವ ಗೋಷ್ಠಿಯನ್ನು ವಿಭಿನ್ನವಾಗಿ ಆಯೋಜಿಸಲಾಗಿದೆ. ತುಳು ಸಾಹಿತ್ಯ ಚರಿತ್ರೆಯ ಬಗ್ಗೆ ಎನ್‌ಎಸ್‌ಎಸ್ ರಾಜ್ಯ ಮಟ್ಟದ ಅಧಿಕಾರಿ ಬೆಂಗಳೂರಿನ ಡಾ.ಗಣನಾಥ ಎಕ್ಕಾರು, ಕಾವ್ಯ ಪ್ರವೇಶದ ಕುರಿತು ಮುದ್ದಣ ಕಾವ್ಯ ಪ್ರಶಸ್ತಿ ಪುರಷ್ಕೃತ ಕವಿ ಕೆ.ಪಿ ಮೃತ್ಯುಂಜಯ, ಕಥನ ಕುತೂಹಲದ ಬಗ್ಗೆ ಕಾದಂಬರಿಕಾರ ಅನುಬೆಳ್ಳೆ ವಿಶೇಷ ಮಾತುಕತೆ ನಡೆಸಲಿದ್ದು ಸಂವಾದ ನಡೆಯಲಿದೆ. ಬಹುಭಾಷಾ ಕವಿಗೋಷ್ಟಿಯಲ್ಲಿ ತುಳು- ಕನ್ನಡ ಭಾಷೆಯಲ್ಲಿ 50…

Read More

ಉಡುಪಿ: ಇಲ್ಲಿನ ನೇಟಿವ್ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷರ ಕಛೇರಿಯ ಬಳಿ ಶಿರ್ವದ ಸಂತ ಮೇರಿ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಅಭಿನಯಿಸಿದ ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯಗಳ ಕುರಿತಾದ “ಹೆಣ್ಣು ಜಗದ ಕಣ್ಣು” ಬೀದಿನಾಟಕ ಪ್ರದರ್ಶನ ನಡೆಯತು. ಬೀದಿನಾಟಕವನ್ನು ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣಾಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನೇಟಿವ್ ಸಂಸ್ಥೆಯ ನಿರ್ದೇಶಕರಾದ ಪ್ರೇಮಾನಂದ ಕಲ್ಮಾಡಿ, ಸಂತ ಮೇರಿ ಕಾಲೇಜಿನ ಉಪನ್ಯಾಸಕ ವಿಘ್ನೇಶ್‌ ಉಪಸ್ಥಿತರಿದ್ದರು.

Read More

ಪಾಕಿಸ್ತಾನದ ಬತ್ತಳಿಕೆಯಲ್ಲಿ 120 ಅಣುಬಾಂಬ್‌ಗಳಿದ್ದು, ಭಾರತಕ್ಕಿಂತಲೂ 10ರಷ್ಟು ಹೆಚ್ಚು ಬಾಂಬ್‌ಗಳನ್ನು ಹೊಂದಿದೆ ಎಂದು ಪರಮಾಣು ವಿಜ್ಞಾನಿಗಳ ವರದಿಯೊಂದು ತಿಳಿಸಿದೆ. ಚಿಕಾಗೋ ಯುನಿವರ್ಸಿಟಿಯ ವಿಜ್ಞಾನಿಗಳು 1945ರಲ್ಲಿ ಸ್ಥಾಪಿಸಿದ್ದ ಈ ನಿಯತಕಾಲಿಕ, ಜಗತ್ತಿನ 9 ಅಣ್ವಸ್ತ್ರ ದೇಶಗಳ ಪರಮಾಣು ಬಾಂಬ್‌ಗಳ ಇತಿಹಾಸದ ಚಿತ್ರಣವನ್ನು ಕಟ್ಟಿಕೊಟ್ಟಿದೆ. ‘ದ ನ್ಯೂಕ್ಲಿಯರ್‌ ಇಂಟರಾಕ್ಟಿವ್ ಇನ್ಫೋಗ್ರಾಫಿಕ್‌’ ಹೆಸರಿನ ಈ ನಿಯತಕಾಲಿಕ 1987ರಿಂದೀಚೆಗಿನ ಜಗತ್ತಿನ ಎಲ್ಲ ಬಗೆಯ ಅಣ್ವಸ್ತ್ರಗಳ ಮಾಹಿತಿಯನ್ನು ಕಲೆಹಾಕಿದೆ. 1980ರ ದಶಕದಲ್ಲಿ 65,000ಕ್ಕೂ ಹೆಚ್ಚು ಅಣ್ವಸ್ತ್ರಗಳು ಜಗತ್ತಿನಲ್ಲಿದ್ದವು. ಆದರೆ ನಂತರದ ದಿನಗಳಲ್ಲಿ ಅಣ್ವಸ್ತ್ರಗಳ ಸಂಖ್ಯೆ 10,000ಕ್ಕೆ ಕುಸಿಯಿತು. ಹಾಗಿದ್ದರೂ ಕೆಲವು ದೇಶಗಳು ಹೊಸ ಅಣ್ವಸ್ತ್ರಗಳನ್ನು ನಿರ್ಮಿಸುತ್ತಲೇ ಇವೆ ಎಂದು ವರದಿ ಹೇಳಿದೆ. ಇನ್ಫೋಗ್ರಾಫಿಕ್‌ ಪ್ರಕಾರ, ಅಮೆರಿಕ ಮತ್ತು ರಷ್ಯಾ ತಲಾ 5,000 ಅಣ್ವಸ್ತ್ರಗಳನ್ನು ಹೊಂದಿವೆ. ಫ್ರಾನ್ಸ್‌ 300, ಚೀನಾ 250, ಯುನೈಟೆಡ್‌ ಕಿಂಗ್‌ಡಂ 225 ಮತ್ತು ಇಸ್ರೇಲ್‌ 80 ಅಣ್ವಸ್ತ್ರಗಳನ್ನು ಹೊಂದಿವೆ. ಉತ್ತರ ಕೊರಿಯಾ 2006, 2009 ಮತ್ತು 2013ರಲ್ಲಿ ಅಣ್ವಸ್ತ್ರಗಳ ಪರೀಕ್ಷೆ ನಡೆಸಿತ್ತು.

Read More

ನಾವುಂದ: ನಾವುಂದ ರಿಚರ್ಡ್‌ ಅಲ್ಮೇಡಾ ಮೆಮೋರಿಯಲ್‌ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎಂ. ತರಗತಿಯ ವಿದ್ಯಾರ್ಥಿ ಗಳಿಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕೆರಿಯರ್‌ ಗೈಡೆನ್ಸ್‌ ವಿಭಾಗದ ಮುಖ್ಯಸ್ಥ ಪ್ರೊ| ಚಂದನ್‌ ರಾವ್‌ ಅವರು ಸಾಪ್ಟ್ ಸ್ಕಿಲ್‌ ತರಬೇತಿಯಲ್ಲಿ ವಿಶೇಷವಾಗಿ ಇಂದಿನ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಿದ್ಧಮಾಡಿಕೊಳ್ಳುವುದರ ಬಗ್ಗೆ ಉಪನ್ಯಾಸ ನೀಡಿದರು. ಈ ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್‌ ಡಿ’ಅಲ್ಮೇಡಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್‌. ನಾರಾಯಣ್‌ ರಾವ್‌ ತರಬೇತಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಶೈಲಿನ್‌ ಕಾರ್ಯಕ್ರಮ ನಿರ್ವಹಿಸಿದರು ವಿದ್ಯಾರ್ಥಿ ನಾಗೇಂದ್ರ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಾಪಚಂದ್ರ ಶೆಟ್ಟಿ ಅವರು ತರಬೇತುದಾರರ ಪರಿಚಯವನ್ನು ನೀಡಿದರು. ಸಂದೇಶ ಅವರು ವಂದಿಸಿದರು.

Read More

ಕುಂದಾಪುರ: ತಾಲೂಕಿನ ಹಲವರು ಚಿತ್ರರಂಗದಲ್ಲಿ ನಟ-ನಟಿಯರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಮಾಡುತ್ತಿದ್ದಾರೆ ಕೂಡ. ಆ ಪೈಕಿ ಒರ್ವಳು ಬೈಂದೂರು ಮೂಲದ ಬೆಡಗಿ ಅನಿತಾ ಭಟ್. ಜೀ ಕನ್ನಡ ವಾಹಿನಿಯಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನಿತಾ ಸೈಕೋ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟರು. ಈ ನಾಯಕಿ ಪಟ್ಟ ಅನಿತಾಗೆ ಕಾಕತಾಳಿಯ ಎಂಬಂತೆ ಒದಗಿಬಂದಿತ್ತು. ಅಂದು ಚಿತ್ರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಅವಕಾಶ ಪಡೆಯಲು ನಿರ್ದೇಶಕ ದೇವದತ್ತರನ್ನು ಭೇಟಿಯಾದ ಅನಿತಾಗೆ ನಾಯಕಿ ಪಟ್ಟ ಕಾದು ಕುಳಿತ್ತಿತ್ತು. ಸೈಕೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಮುಂಬೈ ನಟಿ ಕೈಕೊಟ್ಟಿದ್ದಳು. ನಿರ್ದೇಶಕ ದೇವದತ್ತ ಮೊದಲು ಸ್ಕ್ರೀನ್ ಟೆಸ್ಟ್ ಮಾಡಿಸೋಣ ಆಮೇಲೆ ಕಾಸ್ಟ್ಯೂಮ್ ಡಿಸೈನ್ ಬಗ್ಗೆ ಮಾತನಾಡೋಣ ಎಂದು ಸ್ಕ್ರೀನ್ ಟೆಸ್ಟ್ ಮಾಡಿಸಿದರು. ಅಲ್ಲಿ ಗೆದ್ದರು. ಇಡೀ ಚಿತ್ರತಂಡ ಒಮ್ಮತದಿಂದ ಅನಿತಾಳನ್ನು ನಾಯಕಿ ಎಂದು ಘೋಷಿಸಿಬಿಟ್ಟಿಟ್ಟು. ಆ ಬಳಿಕ ಹಲವಾರು ಪಾತ್ರಗಳು ಅವರನ್ನು ಅರಸಿ ಬರುತ್ತಿವೆ. 8 ತಾಸುಗಳಲ್ಲಿ ಚಿತ್ರೀಕರಣ ಮುಗಿಸಿ ದಾಖಲೆ ಬರೆದ ಸುಗ್ರೀವದಲ್ಲಿ ಸಣ್ಣದೊಂದು…

Read More