Author: Editor Desk

ಗ೦ಗೊಳ್ಳಿ: ಇತ್ತೀಚೆಗೆ ಕು೦ದಾಪುರದಲ್ಲಿ ನಡೆದ ಕು೦ದಾಪುರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ತ್ರೋಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತ೦ಡ ದ್ವಿತೀಯ ಸ್ಥಾನ ಗಳಿಸಿತು. ಟ್ರೋಫಿಯೊ೦ದಿಗೆ ವಿಜೇಶ್, ಅಖಿಲೇಶ್, ಪ್ರಜ್ವಲ್, ನಿಶಾಲ್, ನಾಗೇ೦ದ್ರ, ಅನಿಲ್, ಸುಬ್ರಮಣ್ಯ, ಯಾಸಿರ್, ಸಾಯಿಪ್ರಸಾದ್, ವೀಕ್ಷಿತ್, ಶರಣ್, ವಿಶಾಲ್ ಅವರೊ೦ದಿಗೆ ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ. ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Read More

ಕುಂದಾಪುರ: ತಾಲೂಕಿನ ಕಾಳವಾರ ಜಂಕ್ಷನ್ ಬಳಿ ಬೈಕಿನಲ್ಲಿ ಜಿಂಕೆ ಚರ್ಮವನ್ನು ಸಾಗಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಅಡಂಗಿ ಗ್ರಾಮದ ಮೊಹಮ್ಮದ್ ಶಫಿ(26) ಹಾಗೂ ಸೊರಬದ ಮಸ್ತಾಫಾ(35) ಬಂಧಿತ ಆರೋಪಿಗಳು. ಇಬ್ಬರೂ ಬೆಳಿಗ್ಗೆ ಬೈಕಿನಲ್ಲಿ ಚರ್ಮವನ್ನು ಸಾಗಿಸುತ್ತಿದ್ದಾಗ ಕಾಳವಾರ ಜಂಕ್ಷನ್ ಬಳಿ ಪೊಲೀಸರು ಅಡ್ಡಗಟ್ಟಿದ್ದರು. ಈ ವೇಳೆಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅನುಮಾನಗೊಂಡ ಪೊಲೀಸರು ಅವರ ಬ್ಯಾಗನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಜಿಂಕೆ ಚರ್ಮವಿರುವುದು ಪತ್ತೆಯಾಗಿತ್ತು. ಆರೋಪಿಗಳನ್ನು ಕೂಡಲೆ ಬಂಧಿಸಿ ಸುಮಾರು 25,000ರೂ. ಮೌಲ್ಯದ ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

Read More

ಬಂಟ್ಸ್ ಸೋಲಾರ್ ಸಹಯೋಗದೊಂದಿಗೆ ಒಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ ಕುಂದಾಪುರ: ಸೋಲಾರ್ ಕಂಪೆನಿಗಳು ಸೋಲಾರ್ ಬೆಳಕು, ಉದ್ಯೋಗವನ್ನು ನೀಡುವುದಷ್ಟೇ ಅಲ್ಲದೇ ದೇಶ ಕಟ್ಟುವ ಕಾರ್ಯವನ್ನು ಮಾಡುತ್ತಿದೆ. ಮುಂದೊಂದು ದಿನ ಸೋಲಾರ್ ಶಕ್ತಿ ನಮ್ಮ ದೇಶದ ಪರ್ಯಾಯ ಶಕ್ತಿಯಾಗಬಹುದು ಎಂದು ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಕೆ. ಟಿ. ರೈ ಹೇಳಿದರು. ಅವರು ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅಳವಡಿಸಲಾದ ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸುವುದರೊಂದಿಗೆ ಹೊಸ ಹೊಸ ಆವಿಷ್ಕಾರಗಳಿಗೆ ಇಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವುದನ್ನು ಅವರು ಶ್ಲಾಘಿಸಿದರು. ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ಸೋಲಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಮ್ಯಾನೆಜಿಂಗ್ ಟ್ರಸ್ಟಿ ಚಂದ್ರಶೇಖರ ಶೆಟ್ಟಿ ಮಾತನಾಡಿ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸಿ ಅವಶ್ಯವಿರುವಷ್ಟನ್ನೇ ಬಳಸಿಕೊಂಡು ಹೆಚ್ಚುವರಿಯಾದ ವಿದ್ಯುತ್‌ನ್ನು ಕೆಪಿಟಿಸಿಎಲ್ ಗೆ ವರ್ಗಾಯಿಸಿ ಆದಾಯ ಗಳಿಸುವ ತಮ್ಮ ಸ್ಥಾವರ ತಮ್ಮ ವಿದ್ಯುತ್ ಯೋಜನೆ ವಿನೂತನವಾಗಿದ್ದು, ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮವಾಗಿ…

Read More

ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಹಾಗೂ ಆನ್ಸ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಆಭರಣ ಜ್ಯುವೆಲ್ಲರ‍್ಸ್ ಪ್ರಾಯೋಜಕತ್ವದಲ್ಲಿ ೨೫ನೇ ವರ್ಷದ ಮುದ್ದು ರಾಧಾ ಮುದ್ದು ಕೃಷ್ಣ ಸ್ಪರ್ಧೆಯು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಮೀನುಗಾರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಬಿ. ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ., ಕಾರ್ಯದರ್ಶಿ ಹರ್ಷ ಶೇಟ್, ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುನೇತ್ರ ಸತೀಶ್ ಕೋಟ್ಯಾನ್, ರೋಟರ‍್ಯಾಕ್ಟ್ ಸಭಾಪತಿ ಹೆಚ್.ಎಸ್.ಹತ್ವಾರ್ ರೋಟರ‍್ಯಾಕ್ಟ್ ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ಇನ್ನಿತರರು ಉಪಸ್ಥಿತರಿದ್ದರು. ಸುಮಾರು 200ಕ್ಕೂ ಅಧಿಕ ಚಿಣ್ಣರು ಕೃಷ್ಣ ರಾಧೆ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ತೀರ್ಪುಗಾರರಾಗಿ ಪಾರ್ವತಿ ಕೊತ್ವಾಲ್, ಲೇಖಾ ಕಾರಂತ್, ಚೇತನ ಗೋಪಾಲಕೃಷ್ಣ ಶೆಟ್ಟಿ ಸಹಕರಿಸಿದರು. ಸಮಾರೋಪ: ಸಮಾರೋಪ…

Read More

ಕುಂದಾಪುರ: ನಗರದ ವಿಠಲವಾಡಿಯ ಯುವಕನೋರ್ವ ಗುರುವಾರ ಮಧ್ಯಾಹ್ನದ ವೇಳೆಗೆ ತನ್ನ ಮನೆಯ ಮಹಡಿಯಲ್ಲಿ ಆತ್ಮಹತ್ಯೆ ಶರಣಾದ ಘಟನೆ ವರದಿಯಾಗಿದೆ. ಮೃತ ಯುವಕ ಕೆರೆಮನೆ ನಿವಾಸಿ ಶ್ರೀಕಾಂತ ಪೂಜಾರಿ(೨೯) ಎಂದು ಗುರುತಿಸಿಲಾಗಿದೆ. ಘಟನೆಯ ವಿವರ: ಎಐಸಿ ರೋಡಿನಲ್ಲಿರುವ ಕೆರೆಮನೆ ನಿವಾಸಿ ಲಕ್ಷ್ಮಣ ಪೂಜಾರಿ ಅವರ ಕೊನೆಯ ಪುತ್ರನಾದ ಶ್ರೀಕಾಂತ ಉತ್ಪನ್ನವೊಂದರ ಡೀಲರ್‌ಶೀಪ್ ಮಾಡಿಕೊಂಡಿದ್ದರು. ಮನೆಯಲ್ಲಿ ಅಸೌಖ್ಯದಿಂದ ಇರುವ ಸಹೋದರನನ್ನು ಹೊರತು ಪಡಿಸಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಟ್ಟವನ್ನೇರಿದ ಶ್ರೀಕಾಂತ್ ನೇಣು ಬಿಗಿದುಕೊಂಡಿದ್ದಾರೆ. ಅವರು ಈ ಹಿಂದೆಯೂ ಎರಡು ಭಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ-ತಾಯಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಶ್ರೀಕಾಂತ ಒಳ್ಳೆಯ ನಡೆತೆಯ ಯುವಕನಾಗಿದ್ದು, ಅಪಾರ ಸ್ನೇಹಿತರನ್ನು ಸಂಪಾದಿಸಿದ್ದ. ಅವರ ಮೃತಪಟ್ಟ ಸುದ್ದಿ ಕೇಳಿದ ಕೂಡಲೇ ನೂರಾರು ಮಂದಿ ಆಸ್ಪತ್ರೆಯ ಬಳಿ ಜಮಾಯಿಸಿದ್ದರು.

Read More

ಕುಂದಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ನೀತಿಗಳನ್ನು ಖಂಡಿಸಿ ಮತ್ತು ಸರ್ಕಾರದ ಉದ್ದೇಶಿತ ‘ರಸ್ತೆ ಸಾರಿಗೆ ಸುರಕ್ಷತಾ ಮಸೂದೆ’ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನಿಡಿದ ಭಾರತ್ ಬಂದ್ ಗೆ ಕುಂದಾಪುರ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ನಗರದಲ್ಲಿ ಬೆಳಿಗ್ಗಿನಿಂದಲೇ ಸರಕಾರಿ ಮತ್ತು ಖಾಸಗಿ ಬಸ್, ರಿಕ್ಷಾ ಸಂಚಾರ ಸಂಪೂರ್ಣ ಸ್ಥಗಿಗೊಂಡಿದ್ದರೇ, ತಾಲೂಕಿನ ಕೆಲವೆಡೆ ಅಲ್ಲಲ್ಲಿ ರಿಕ್ಷಾಗಳ ಸಂಚಾರ ಕಂಡುಬಂತು. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘ, ಆಸ್ಪತ್ರೆ, ಮೆಡಿಕಲ್, ಗ್ಯಾರೇಜ್, ಮುಂತಾದವುಗಳನ್ನು ಹೊರತುಪಡಿಸಿ ಕುಂದಾಪುರದ ತಾಲೂಕಿನ ಬಹುಪಾಲು ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ತಾಲೂಕಿನ ಬೈಂದೂರು, ಕೊಲ್ಲೂರು, ಶಿರೂರು, ಅಮಾಸೆಬೈಲು, ಶಂಕರನಾರಾಯಣ, ಶಿರೂರು ಸೇರಿದಂತೆ ಕೆಲವೆಡೆ ಕೆಲವು ಅಂಗಡಿಗಳು ಅರ್ಧ ಬಾಗಿಲು ತೆರೆದು, ಕೆಲವೆಡೆ ಸಂಪೂರ್ಣ ಬಾಗಿಲು ತೆರೆದು ವ್ಯವಹಾರ ನಡೆಸುತ್ತಿರುವುದು ಕಂಡುಬಂತು. ಅಕ್ಷರ ದಾಸೋಹ ನೌಕರರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಶಾಲೆಗಳಲ್ಲಿ ಬಿಸಿಯೂಟ ಇರಲಿಲ್ಲ. ಎಸ್.ಎಪ್.ಐ ವಿಧ್ಯಾರ್ಥಿ ಸಂಘಟನೆ ಬಂದ್ ಗೆ ಬೆಂಬಲ ಸೂಚಿಸಿತ್ತು.…

Read More

ಕುಂದಾಪುರ: ಇಲ್ಲಿನ ಸಂಗಮ್‌ ಬಳಿಯ ಆಟೋ ಗ್ಯಾರೇಜಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ದುರಸ್ತಿಗಾಗಿ ಇರಿಸಲಾಗಿದ್ದ ಎರಡು ಆಟೋರಿಕ್ಷಾಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದು  ಸುಮಾರು ಒಂದೂವರೆ ಲಕ್ಷ  ರೂ. ಹಾನಿ ಸಂಭವಿಸಿದೆ. ಕೊಲ್ಲೂರು ದಳಿ ನಿವಾಸಿ ನಾಗರಾಜ್‌ ಅವರು ದುರಸ್ತಿಗಾಗಿ ಇರಿಸಿದ್ದ  ಆಟೋರಿಕ್ಷಾ ಹಾಗೂ ಗ್ಯಾರೇಜ್‌ ಮಾಲಕ ಸಂತೋಷ್‌ ಅವರ ರಿಕ್ಷಾಕ್ಕೂ ಬೆಂಕಿ ತಗುಲಿ ಎರಡು ರಿಕ್ಷಾಗಳೂ ಸಂಪೂರ್ಣ ಸುಟ್ಟು ಹೋಗಿದೆ. ತಡ ರಾತ್ರಿ ರಿಕ್ಷಾಕ್ಕೆ ಬೆಂಕಿ ತಗಲಿದ್ದರಿಂದ ಬೆಂಕಿ ಹೊತ್ತಿ ಉರಿಯುವ ಶಬ್ದ ಕೇಳಿ ಪಕ್ಕದ ಮನೆಯವರು ಹೊರಗೆ ಬಂದು ನೋಡುವಾಗ ಎರಡೂ ರಿಕ್ಷಾಗಳಿಗೆ ಸಂಪೂರ್ಣ ಬೆಂಕಿ ತಗಲಿತ್ತು. ಕೂಡಲೇ ಅಕ್ಕಪಕ್ಕದವರು   ಪೈಪಿನಿಂದ ನೀರು ಹಾರಿಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಕುಂದಾಪುರ ಠಾಣೆಯ ಪಿಎಸ್‌ಐ ನಾಸೀರ್‌ ಹುಸೆ„ನ್‌ ಹಾಗೂ ಡಿವೈಎಸ್ಪಿ ಮಂಜುನಾಥ್‌ ಶೆಟ್ಟಿ  ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಬೈಂದೂರು: ಇಲ್ಲಿನ ಸರಕಾರಿ ಪೌಢಶಾಲೆಯ ಪಾಲಕರ ಸಭೆ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.  ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಬಗೆಗೆ ಪಾಲಕರೊಂದಿಗೆ ಚರ್ಚಿಸಲಾಯಿತು. ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕು. ಹೆತ್ತವರು ಹಾಗೂ ಶಿಕ್ಷಕರು ಸಮಾನ ಆಸಕ್ತಿ ತೋರಿದಲ್ಲಿ ವಿದ್ಯಾರ್ಥಿಗೆ ಆತ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರಾದ ಬಿ. ಎಂ. ನಾಗರಾಜ್, ರಂಗಕರ್ಮಿ ಗಣೇಶ್ ಕಾರಂತ, ಉಪನ್ಯಾಸಕ ಮಣಿಕಂಠ ದೇವಾಡಿಗ, ಪೊಷಕ ಪ್ರಮುಖರು ಮೊದಲಾದವರು ಸಭೆಯಲ್ಲಿ ಹಾಜರಿದ್ದರು. ಪ್ರೌಡಶಾಲಾ ವಿಭಾಗದ ಉಪಪ್ರಾಂಶುಪಾಲೆ ಜ್ಯೋತಿ ಸ್ವಾಗತಿಸಿದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು.

Read More

ದಿನವೂ ಕತ್ತರಿಸುವಾಗಲಷ್ಟೇ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಒಂದು ತಿಂಗಳಿನಿಂದ ಕೊಳ್ಳುವಾಗಲೇ ಕಣೀರು ಹಾಕಿಸುತ್ತಿದೆ. ಒಂದೇ ಸವನೆ ಗಗನಕ್ಕೇರಿದ ಈರುಳ್ಳಿಯ ಬೆಲೆಗೆ ಗ್ರಾಹಕರಂತೂ ಕಂಗಾಲಾಗಿ ಹೋಗಿದ್ದರು. ಒಂದೆರಡು ದಿನಗಳಿಂದೀಚೆಗೆ ಈರುಳ್ಳಿಯ ಬೆಲೆ ಇಳಿಯುವ ಸೂಚನೆ ಏನೋ ದೊರೆತಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ವಾಟ್ಸಪ್ ನಲ್ಲಿ ಈರುಳ್ಳಿಯ ಬಗೆಗೆ ನೂರಾರು ಜೋಕುಗಳು ಹರಿದಾಡುತ್ತಿದ್ದವು. ಈರುಳ್ಳಿಯ ಬಗೆಗೆ ಜಾಲತಾಣದಲ್ಲಿ ಹುಟ್ಟಿಕೊಂಡ ಈ ಈರುಳ್ಳಿ ಜೋಕುಗಳನ್ನು ಹಲವರು ಈಗಾಗಲೇ ನೋಡಿ ಖಂಡಿತವಾಗಿಯೂ ನಕ್ಕಿರುತ್ತಾರೆ. ಅದರಲ್ಲೂ ಹದಿನೈದು ದಿನಗಳಿಂದೀಚೆಗೆ ಈರುಳ್ಳಿಯ ಬಗೆಗೆ ಹತ್ತಾರು ವಿಡಂಬನಾತ್ಮಕವಾದ ಜೋಕುಗಳು ಹುಟ್ಟಿಕೊಂಡಿದ್ದವು. ಅದು ರಜನಿಕಾಂತ್ ಜೋಕಿನಷ್ಟೇ ಪ್ರಸಿದ್ಧಿಯನ್ನೂ ಪಡೆದವು. ಈರುಳ್ಳಿ ಜೋಕಿನಲ್ಲಿ ಚಿತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದು ವಿಶೇಷವಾಗಿತ್ತು. ಜೂಜಾಡುವವರು ಹಣದ ಬದಲಾಗಿ ಈರುಳ್ಳಿ ಇಟ್ಟುಕೊಂಡಿದ್ದು, ಪ್ರೀಯತಮೆಗೆ ಈರುಳ್ಳಿಯ ಉಂಗುರದ ಉಡುಗೊರೆ, ಸಿಮ್ ಕಾರ್ಡ್ ಪೋರ್ಟ್ ಮಾಡಿಕೊಂಡರೆ ಒಂದು ಕೆ.ಜಿ. ಈರುಳ್ಳಿ ಉಚಿತ, ಹೀಗೆ ಗಾದೆ ಮಾತು, ಚಿತ್ರರಂಗ, ಮೊದಲಾದ ಕ್ಷೇತ್ರಕ್ಕೆ ಸಂಬಂಧಿಸಿ ಕಲ್ಪಿತ,…

Read More

ಮುಂದಿನ ವರ್ಷ ಮಾರ್ಚ್ 8 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2015-16 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪ್ರದಾನ ಮಾಡುವ ‘ನಾರಿ ಶಕ್ತಿ’ ಪುರಸ್ಕಾರ ಪ್ರಶಸ್ತಿಗಳಿಗಾಗಿ ಅರ್ಹ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ವಿಶೇಷವಾಗಿ ಬೇಟಿ ಬಚಾವೋ, ಬೇಟಿ ಬಡಾವೋ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವ್ಯಕ್ತಿಗಳು ಜಿಲ್ಲಾಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ರಾಣಿ ರುದ್ರಮ್ಮ ದೇವಿ ಪ್ರಶಸ್ತಿ, ಮಹಿಳೆಯರಿಗೆ ಉತ್ತಮ ಸೌಕರ್ಯ, ಸೇವೆಯನ್ನು ಒದಗಿಸುವಲ್ಲಿ ಶ್ರಮಿಸಿದ ವ್ಯಕ್ತಿ ಹಾಗೂ ಅತ್ಯುತ್ತಮ ಸ್ಥಳೀಯ ಸಂಸ್ಥೆಗಳಿಗೆ ಮಾತಾ ಜೀಜಾ ಬಾಯಿ ಪ್ರಶಸ್ತಿ, ಲಿಂಗಾನುಪಾತವನ್ನು ಉತ್ತಮಪಡಿಸಲು ಶ್ರಮಿಸಿದ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳಿಗೆ ಕನ್ನಗಿ ದೇವಿ ಪ್ರಶಸ್ತಿ, ಮಹಿಳಾ ಉದ್ಯೋಗ ಕ್ಷೇತ್ರದಲ್ಲಿ ಶ್ರಮಿಸಿದ ವ್ಯಕ್ತಿ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಗೆ/ಸಾರ್ವಜನಿಕ ಸಂಸ್ಥೆಗಳಿಗೆ ದೇವಿ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವಂತೆ ರಾಣಿ ರುದ್ರಮ್ಮ ದೇವಿ…

Read More