Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಾಯ್ಕನಬೈಲು ಮರದ ಸೇತುವೆ ದುರಸ್ಥಿಗೆ ಗ್ರಾಮಸ್ಥರ ಅಡ್ಡಿ. ಶಾಶ್ವತ ಸೇತುವೆಗೆ ಆಗ್ರಹ
    ಊರ್ಮನೆ ಸಮಾಚಾರ

    ನಾಯ್ಕನಬೈಲು ಮರದ ಸೇತುವೆ ದುರಸ್ಥಿಗೆ ಗ್ರಾಮಸ್ಥರ ಅಡ್ಡಿ. ಶಾಶ್ವತ ಸೇತುವೆಗೆ ಆಗ್ರಹ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ವಾರ್ಡ್‌ಗೆ ಸಂಬಂಧಿಸಿದ ನಾಯ್ಕನಬೈಲು ಹೊಳೆಯಲ್ಲಿ ತೋಡ್ಕಟ್ಟು ಮತ್ತು ಪಾರಂಪಳ್ಳಿ ಪಡುಕರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ಹಿಂದೆ ನಿರ್ಮಿಸಲಾಗಿದ್ದ ಮರದ ಕಾಲು ಸಂಕದ ದುರಸ್ಥಿಗೆ ಪಟ್ಟಣ ಪಂಚಾಯಿತಿ ನಿಯೋಜಿಸಿದ ಕೆಲಸಗಾರರು ಆಗಮಿಸಿದ ಸಾರ್ವಜನಿಕರು ಘೇರಾವ್ ಹಾಕಿದ ಘಟನೆ ನಡೆಯಿತು. ಶಾಶ್ವತ ಸೇತುವೆ ಮಂಜೂರಾಗದ ಹೊರತು ಪ್ರಸ್ತುತ ರಸ್ತೆ ದುರಸ್ಥಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

    Click Here

    Call us

    Click Here

    1952ರಲ್ಲಿ ಕೋ.ಲ. ಕಾರಂತರಿಂದ ಶಂಕು ಸ್ಥಾಪನೆಗೊಂಡ ಈ ಮರದ ಸೇತುವೆ ಇದುವರೆಗೆ ಅಭಿವೃದ್ಧಿ ಕಾಣದೆ ಹಾಗೇ ಉಳಿದಿದೆ. ಪ್ರತಿ ವರ್ಷ ಮಳೆಗಾಲ ಬಂದಾಗ ಸ್ಥಳೀಯ ಪಟ್ಟಣ ಪಂಚಾಯತಿ ನಿದ್ದೆಯಿಂದ ಎಚ್ಚರವಾಗಿ ದುರಸ್ಥಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣೆ ಬಂದಾಗ ರಾಜಕೀಯ ನಾಯಕರು ಸೇತುವೆಯನ್ನು ನೋಡಿ ಮೊಸಳೆ ಕಣ್ಣಿರು ಹಾಕಿ, ಸೂಕ್ತ ವ್ಯವಸ್ಥೆಯ ಭರವಸೆ ನೀಡಿ, ಮತ ಪಡೆದು ಕಣ್ಮೇರೆಯಾಗುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸಂಬಂಧಪಟ್ಟವರನ್ನು ಸಂಪರ್ಕಿಸಿ ಶಾಶ್ವತ ಸೇತುವೆ ವ್ಯವಸ್ಥೆಯ ಬಗ್ಗೆ ಯಾವುದೇ ಮನಸ್ಸು ಮಾಡುತ್ತಿಲ್ಲ. ರೈತರು ದೇಶದ ಬೆನ್ನೆಲುಬು ಎನ್ನುವ ನಮ್ಮ ಜನನಾಯಕರು ನಮ್ಮ ಕೃಷಿಗೆ ಭೂಮಿಗೆ ಸಂಪರ್ಕ ಕಲ್ಪಿಸುವ ಮರದ ಸೇತುವೆಯನ್ನು ಶಾಶ್ವತ ಸೇತುವೆ ಮಾಡುವ ಬಗ್ಗೆ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸ್ಥಳೀಯ ಹಿರಿಯರಾದ ಶೀನ ಮರಕಾಲ ತಿಳಿಸಿದರು.

    ಈ ಭಾದ ತೋಡ್ಕಟ್ಟು ಶಾಲೆಗೆ ನಮ್ಮ ಮಕ್ಕಳು ತೆರಳುತ್ತಿದ್ದಾರೆ. ನಿತ್ಯವು ಕೂಡ ನಮ್ಮ ಹೊಟ್ಟೆಪಾಡಿದ ಕೂಲಿ ಬಿಟ್ಟು ಮಕ್ಕಳ ಜೀವದ ರಕ್ಷಣೆಗಾಗಿ ಸೇತುವೆ ಮೂಲಕ ಶಾಲೆಗೆ ದಾಟಿಸು ಕೆಲಸ ಮಾಡುತ್ತಿದ್ದೇವೆ. ಪಟ್ಟಣ ಪಂಚಾಯಿತಿ ನೀಡಿದ ಅರ್ಜಿಗಳು ಲೆಕ್ಕವಿಲ್ಲದಷ್ಟು, ನಾವು ಚಿಕ್ಕಂದಿನಿಂದ ದಿನ ನಿತ್ಯದ ಕೆಲಸಗಳಿಗಾಗಿ ಇದೇ ಸೇತುವೆಯ ಮೂಲಕ ಭಯ ಪಡುತ್ತಾ ದಾಟುತ್ತಿದ್ದೇವು ಆದರೆ ಮುಂದೆ ನಮ್ಮ ಮಕ್ಕಳು ಕೂಡ ಇದೇ ಭಯದಲ್ಲಿ ಸೇತುವೆ ದಾಟುವುದು ನಮಗೆ ಇಷ್ಟವಿಲ್ಲ. ಪಟ್ಟಣ ಪಂಚಾಯಿತಿ ಅವರು ಹತ್ತಿರ ಹತ್ತಿರದಲ್ಲಿ ಸೇತುವೆ ನಿರ್ಮಾಣಕ್ಕೆ ಅವಕಾಶವಿಲ್ಲ ಮತ್ತು ನಮ್ಮಲ್ಲಿ ಅನುದಾನವಿಲ್ಲ ಎಂದು ಸಮಾಧಾನ ಮಾಡುತ್ತಿದ್ದಾರೆ ಹೊರತು ಯಾವುದೇ ನೆರವು ನೀಡುತ್ತಿಲ್ಲ. ಈ ಬಾರಿ ಇಲ್ಲಿ ಶಾಸ್ವತ ಸೇತುವೆಗೆ ಮಂಜೂರಾತಿಯಾಗದೆ ಇದ್ದರೆ ನಾವು ಸೇತುವೆ ದುರಸ್ಥಿಗೆ ಖಂಡಿತ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ಗೃಹಿಣಿ ಶ್ರೀಮತಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ಸದಸ್ಯ ರಾಘವೇಂದ್ರ ಗಾಣಿಗ ಅಪುಸ್ಥಿತರಿದ್ದರು ಸ್ಥಳೀಯರಿಗೆ ಸೇತುವೆಯ ವಿಚಾರವಾಗಿ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿದ ಕುರಿತು ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದ ವಿಚಾರವನ್ನು ತಿಳಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗ್ರಾಮಸ್ಥರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದರು. ಬ್ರಹ್ಮಾವರದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಾಧಿಕಾರಿಯವರು ತಕ್ಷಣ ಸ್ಥಳಕ್ಕೆ ಭೇಟಿ ಸೇತುವೆಯನ್ನು ಪರಿಶೀಲಿಸಿ ಸ್ಥಳೀಯರ ಸಮಸ್ಯೆಯಾಲಿಸಿದರು. ಅಲ್ಲದೇ ಈ ಬಗ್ಗೆ ಪಟ್ಟಣ ಪಂಚಾಯಿತಿ ಇದುವರೆಗೆ ಮಾಡಿದ ಪ್ರಯತ್ನವನ್ನು ತಿಳಿಸಿದರು. ಮುಂದೆ ಸ್ಥಳೀಯರೊಂದಿಗೆ ಶಾಸಕರು ಮತ್ತು ಸಚಿವರ ಬಳಿ ನಿಯೋಗ ತೆರಳಿ ಸಮಸ್ಯೆಯನ್ನು ಅವರ ಮುಂದಿಟ್ಟು ಪರಿಹಾರ ಪಡೆಯೋಣ ಎಂದು ತಿಳಿಸಿದರು.

    ಸದ್ಯ ಸೇತುವೆಯ ದುರಸ್ಥಿಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಶಾಸ್ವತ ಸೇತುವೆಯ ಬೇಡಿಕೆಯ ಕುರಿತು ಲಿಖಿತ ಮಂಜೂರಾತಿ ಸಿಕ್ಕ ಮೇಲೆ ನೀವು ದುರಸ್ಥಿ ಮಾಡಿ ಎಂದು ಸ್ಥಳೀಯರು ಈ ಸಂದರ್ಭ ತಿಳಿಸಿದರು.

    Click here

    Click here

    Click here

    Click Here

    Call us

    Call us

    news Saligrama birdge protest news Saligrama birdge protest2 news Saligrama birdge protest3

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    19 − nineteen =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.