ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಜಮೀನಿಗೆ ಅರ್ಜಿ ಸಲ್ಲಿಸಿದ ೫೮ ಕುಟುಂಬಗಳಿಗೆ ಶಾಸಕ ಗೋಪಾಲ ಪೂಜಾರಿ ಹಕ್ಕುಪತ್ರ ವಿತರಿಸಿದರು. ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ವಿಜಯ ಶೆಟ್ಟಿ, ಬೋಜ ನಾಯ್ಕ, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ತಾ.ಪಂ. ಸದಸ್ಯ ರಮೇಶ ಗಾಣಿಗ, ತಾ.ಪಂ. ಸದಸ್ಯ ಜಗದೀಶ ದೇವಾಡಿಗ, ರಿಯಾಜ್ ಅಹಮದ್, ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಮತ್ತಿತರರು ಉಪಸ್ಥಿತರಿದ್ದರು.










