Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೈಂದೂರು ತಾಲೂಕು: ನಾಲ್ಕು ದಶಕಗಳ ಹೋರಾಟಕ್ಕೆ ಸಂದ ಜಯ. ಆಗಿರುವುದೇನು? ಆಗಬೇಕಾದ್ದೇನು?
    Recent post

    ಬೈಂದೂರು ತಾಲೂಕು: ನಾಲ್ಕು ದಶಕಗಳ ಹೋರಾಟಕ್ಕೆ ಸಂದ ಜಯ. ಆಗಿರುವುದೇನು? ಆಗಬೇಕಾದ್ದೇನು?

    Updated:17/03/20171 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
    ಬೈಂದೂರು: ನಾಲ್ಕು ದಶಕಗಳ ಕನಸು ನನಸಾಗುವ ಹಂತ ತಲುಪಿದೆ. ರಾಜ್ಯ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆಯಾಗುವ ಮೂಲಕ ನಾಗರಿಕರು ಇಲ್ಲಿಯ ತನಕ ನಡೆಸುತ್ತಾ ಬಂದ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ. ಈ ಸಂಭ್ರಮದ ನಡುವಲ್ಲಿಯೇ ಘೋಷಣೆಯಾದ ತಾಲೂಕು ರಚನೆಯ ಪ್ರಸ್ತಾಪ ಅನುಷ್ಠಾನದ ಹಂತ ತಲುಪಬೇಕಿದ್ದರೇ, ತಾಲೂಕಿಗೆ ಪೂರಕವಾದ ಸರಕಾರಿ ಕಛೇರಿ ಹಾಗೂ ಜನರು ತಾಲೂಕು ಕೇಂದ್ರವನ್ನು ನೆಚ್ಚಿಕೊಳ್ಳಲು ಪೂರಕವಾದ ಸೌಲಭ್ಯಗಳು ಶೀಘ್ರವೇ ದೊರೆಯುವಂತಾಗಬೇಕು. ಪ್ರತ್ಯೇಕತೆಯ ಕೂಗಿಗೂ ಒಂದು ನ್ಯಾಯ ಒದಗಿಸಬೇಕು. ಈ ಎಲ್ಲದಕ್ಕೂ ನಮ್ಮ ಜನಪ್ರತಿನಿಧಿಗಳು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ.

    Click Here

    Call us

    Click Here

    ತಾಲೂಕು ಕನಸು – ಒಂದು ಹಿನ್ನೋಟ:
    ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 35 ವರ್ಷಗಳೇ ಆಗಿವೆ. ಸರಕಾರ ಆಡಳಿತ ಸುಧಾರಣೆಯ ದೃಷ್ಠಿಯಿಂದ ನೂತನ ತಾಲೂಕು ರಚನೆಗೆ ಸಮಿತಿ, ಆಯೋಗಗಳು ಶಿಫಾರಸ್ಸು ಮಾಡಿದ್ದವು. ಈ ಭಾಗದ ಜನ ನಡೆಸುತ್ತಿರುವ ಹೋರಾಟದ ಕೂಗು ನಿರಂತರವಾಗಿ ಮುಂದುವರಿದಿದ್ದವು. ನಮ್ಮ ಜನಪ್ರತಿನಿಧಿಗಳು ಹಲವು ಭಾರಿ ಭರವಸೆ ಹುಟ್ಟಿಸುವಂತಹ ಮಾತಗಳನ್ನಾಡುತ್ತಲೇ ಇದ್ದಾರಾದರೂ ಕೂಡ ತಾಲೂಕು ರಚನೆಯ ವಿಚಾರ ವಿವಿಧ ಕಾರಣಗಳಿಂದಾಗಿ ಸರಕಾರಿ ಕಡತಗಳಲ್ಲಷ್ಟೇ ಉಳಿದಿತ್ತು. ಹಿಂದಿನ ಬಿಜೆಪಿ ಸರಕಾರ ತನ್ನ ಕೊನೆಯ ಬಜೆಟ್ನಲ್ಲಿ ತಾಲೂಕು ಘೋಷಣೆ ಮಾಡಿದ್ದರೂ ಕೊನೆಗೆ ಅದು ನೆನೆಗುದಿಗೆ ಬಿದ್ದಿತ್ತು.

    ಆಯೋಗ, ಸಮಿತಿ ಶಿಪಾರಸ್ಸುಗಳು ಮತ್ತು ಸರಕಾರ ನಡೆ:
    ಬೈಂದೂರು ತಾಲೂಕಾಗಬೇಕೆಂದು 1986ರಲ್ಲಿ ಬೈಂದೂರಿಗೆ ಭೇಟಿ ನೀಡಿದ್ದ ಜಿಲ್ಲಾ ಪುನರ್ವಿಂಗಡನೆ ಮತ್ತು ತಾಲೂಕು ಪುನರ್ ರಚನೆಯ ಆಯೋಗದ ಅಧ್ಯಕ್ಷರಾಗಿದ್ದ ಹುಂಡೇಕಾರ್ ಅವರಿಗೆ ಬೈಂದೂರು ತಾಲೂಕು ರಚನಾ ಸಮಿತಿಯಿಂದ ಮನವಿಯನ್ನು ನೀಡಲಾಗಿತ್ತು.

    ನೂತನ ತಾಲೂಕು ರಚನೆಗೆ ನೇಮಿಸಿದ ವಾಸುದೇವರಾವ್ ಆಯೋಗ, ಹುಂಡೇಕರ್ ಸಮಿತಿ ಮತ್ತು ಗದ್ದಿಗೌಡರ್ ಸಮಿತಿ ಕುಂದಾಪುರ ತಾಲೂಕನ್ನು ಕುಂದಾಪುರ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಭಜಿಸಿ ಕೇಂದ್ರಿತ ತಾಲೂಕು ರಚನೆಗೆ ಶಿಫಾರಸ್ಸು ಮಾಡಿದ್ದವು. ಇದು ಬೈಂದೂರು ಕೇಂದ್ರಿತ ತಾಲೂಕು ರಚನೆಗೆ ಪುಷ್ಠಿ ನೀಡಿತ್ತು. 1987ರಲ್ಲಿ ಉಡುಪಿ ಜಿಲ್ಲೆಯ ಪುನರ್ ವಿಂಗಡನೆಯ ನಿರ್ಧಾರ ಕೈಗೊಂಡಾಗ ಮತ್ತು 1997ರಲ್ಲಿ ಉಡುಪಿ ಜಿಲ್ಲೆಯಾಗುವ ಸಂಧರ್ಭದಲ್ಲಿ ಬೈಂದೂರು ಹಾಗೂ ಬ್ರಹ್ಮಾವರ ತಾಲೂಕು ಫೋಷಣೆಯಾಗಬೇಕಿತ್ತು. ಆದರೆ ನೂತನ ಜಿಲ್ಲೆಯ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ. ಎಚ್. ಪಾಟೇಲರು ಇನ್ನು ಒಂದು ವರ್ಷದೊಳಗೆ ತಾಲೂಕು ಪುನರ್ ರಚನೆ ಮಾಡುವುದಾಗಿ ಘೋಷಿಸಿ ತಾಲೂಕು ರಚನೆಯ ಪ್ರಸ್ತಾಪವನ್ನು ಮುಂದೆ ತಳ್ಳಿದ್ದರು.

    ಆದರೆ ಈ ನಡುವೆ ಎಂ. ಬಿ. ಪ್ರಕಾಶ್ ನೇತೃತ್ವದಲ್ಲಿ ರಚನೆಗೊಂಡ ಇನ್ನೊಂದು ಸಮಿತಿ ಈ ಹಿಂದಿನ ಸಮಿತಿಗಳು ಶಿಪಾರಸ್ಸು ಮಾಡಿದ್ದ ವರದಿಯನ್ನು ತಳ್ಳಿಹಾಕಿ ಬೈಂದೂರು ಹಾಗೂ ಬ್ರಹ್ಮಾವರ ತಾಲೂಕು ರಚನೆಯ ಅಗತ್ಯವನ್ನು ಅಲ್ಲಗಳೆಯಿತು. ಇಲ್ಲಿಂದೀಚೆಗೆ ಬೈಂದೂರು ತಾಲೂಕು ರಚನಾ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬಿ. ಜಗನ್ನಾಥ ಶೆಟ್ಟಿ ಅವರು ಈ ಭಾಗದ ಶಾಸಕರು, ಸಂಸದರು, ಉಸ್ತುವಾರಿ ಸಚಿವರುಗಳಿಗೆ ನಿರಂತರವಾಗಿ ಪತ್ರ ಬರೆಯುತ್ತಾ ತಾಲೂಕು ರಚನೆಯ ಅಗತ್ಯವನ್ನು ಮನಗಾಣಿಸಿದ್ದಾರೆ. ಇವರ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ನಾಗರೀಕರು ಹಲವಾರು ಬಾರಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಕ್ಷೇತ್ರದ ಶಾಸಕರಾದ ಗೋಪಾಲ ಪೂಜಾರಿ ಹಾಗೂ ಮಾಜಿ ಶಾಸಕರಾಗಿದ್ದ ಲಕ್ಷ್ಮೀನಾರಾಯಣ ಅವರು ಇವರ ಹೋರಾಟಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ರಾಜಕೀಯ ಭಿನ್ನಾಪ್ರಾಯಗಳನ್ನು ಮರೆತು ಒಂದಾಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ

    Click here

    Click here

    Click here

    Call us

    Call us

    ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಬಿಜೆಪಿ ಸರಕಾರ 43 ಹೊಸ ತಾಲೂಕು ರಚನೆಯ ಪ್ರಸ್ತಾಪದಲ್ಲಿ ಬೈಂದೂರನ್ನೂ ಪ್ರಮುಖವಾಗಿ ಪರಿಗಣಿಸಿ ತನ್ನ ಕೊನೆಯ ಬಜೆಟ್ನಲ್ಲಿ ತಾಲೂಕು ರಚನೆಯನ್ನು ಘೋಷಿಸಿತ್ತು. ಬೈಂದೂರು ಕ್ಷೇತ್ರದ ಜನ ಇದು ಮೂರೂವರೆ ಹೋರಾಟಕ್ಕೆ ಸಂದ ಜಯ ಎಂದು ಸಂಭ್ರಮಿಸಿದ್ದರು. ಇನ್ನೇನು ತಾಲೂಕು ರಚನೆ ಆಗೇಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದರು ಆದರೆ ಆ ಬಳಿಕ ಬಂದ ಕಾಂಗ್ರೆಸ್ ಸರಕಾರ 43 ತಾಲೂಕು ರಚನೆಯ ಪ್ರಸ್ತಾಪವನ್ನು ತಡೆಹಿಡಿದು ಪುನರ್ ಪರಿಶೀಲಿಸುವ ನಿರ್ಧಾರ ಕೈಗೊಂಡಿತು. ಇದು ತಾಲೂಕು ರಚನೆಯ ಕನಸನ್ನು ಮತ್ತೆ ಮುಂದೂಡಿತು. ಈಗ ಮತ್ತೆ ಕಾಂಗ್ರೆಸ್ ಸರಕಾರ ತಾಲೂಕು ಘೋಷಣೆ ಮಾಡಿರುವುದು ಜನರಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

    ವಂಡ್ಸೆ, ಶಂಕರನಾರಾಯಣದ ಜನರ ಅಪಸ್ವರ:
    ಬೈಂದೂರು ತಾಲೂಕು ರಚನೆಯ ನಿರ್ಧಾರವನ್ನು ಸ್ವಾಗತಿಸಿದ ವಂಡ್ಸೆ ಹೋಬಳಿಯ 11 ಗ್ರಾ. ಪಂ.ಗಳು, ಬೈಂದೂರು ತಾಲೂಕು ಕೇಂದ್ರವಾಗುವುದನ್ನು ವಿರೋಧಿಸಿದವು. ಇದರೊಂದಿಗೆ ಬ್ರಿಟಿಷರ ಕಾಲದಿಂದಲೂ ಪ್ರಮುಖ ಸರಕಾರಿ ಕಛೇರಿಗಳನ್ನು ಹೊಂದಿರುವ ಶಂಕರನಾರಾಯಣ ಭಾಗದ ಜನರು ಪ್ರತ್ಯೇಕ ತಾಲೂಕು ರಚನೆಯ ಬೇಡಿಕೆಯನ್ನು ಮುಂದಿಟ್ಟು ಹೋರಾಟಕ್ಕಿಳಿದರು. ಬೈಂದೂರು ಕ್ಷೇತ್ರದ ಭಾಗವೇ ಆಗಿರುವ ವಂಡ್ಸೆ ಹಾಗೂ ಶಂಕರನಾರಾಯಣ ಪ್ರದೇಶದವರ ಈ ಹೇಳಿಕೆ ಮತ್ತಷ್ಟು ಸಂದಿಗ್ಧತೆಯನ್ನುಂಟುಮಾಡಿತ್ತಾದರೂ 1985ರಲ್ಲಿ ನಡೆದ ಸಾರ್ವಜನಿಕ ಪ್ರಾತಿನಿಧಿಕ ಸಭೆಯಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ಎಲ್ಲಾ ಪಕ್ಷಗಳ ಜನನಾಯಕರು ಚಕ್ರಾ ನದಿಯ ಉತ್ತರಕ್ಕಿರುವ 41 ಗ್ರಾಮಗಳನ್ನು ಒಳಗೊಂಡಂತೆ ಬೈಂದೂರು ತಾಲೂಕು ರಚಿಸುವುದು ಸೂಕ್ತ ಎಂಬ ನಿರ್ಣಯಕ್ಕೆ ಬಂದಿದ್ದರು ಎಂಬುದು ಗಮನಾರ್ಹ. ಕುಂದಾಪ್ರ ಡಾಟ್ ಕಾಂ ವರದಿ

    ತಾಲೂಕಿಗೆ ಪೂರಕ ಸೌಕರ್ಯಗಳಿವೆ:
    ಬೈಂದೂರು ತಾಲೂಕು ರಚನೆಗೆ ಪೂರಕವಾಗಿ ವಿಶೇಷ ತಹಶೀಲ್ದಾರ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ, ಉಪಖಜಾನೆ, ಪೊಲೀಸ್ ಠಾಣೆ, ಅಂಚೆ ಕಛೇರಿ, ಸಮುದಾಯ ಆಸ್ವತ್ರೆ, ದೂರವಾಣಿ ಉಪಮಂಡಲ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣಾಧಿಕಾರಿಗಳ ಕಛೇರಿ, ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ, ಸುಸಜ್ಜಿತ ರೈಲು ನಿಲ್ದಾಣ, ಪದವಿ ಕಾಲೇಜು ಸೇರಿದಂತೆ ಕೆಲವು ಪ್ರಮುಖ ಸರಕಾರಿ ಕಛೇರಿಗಳು ಈಗಾಗಲೇ ಕಾರ್ಯಾಚರಿಸುತ್ತಿವೆ. ಇನ್ನು ಮಿನಿ ವಿಧಾನಸೌಧ, ನ್ಯಾಯಾಲಯ ಸೇರಿದಂತೆ ಪ್ರಮುಖ ಸರಕಾರಿ ಕಛೇರಿ ಸಂಕೀರ್ಣ ಆಗಬೇಕಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಡೀಪೋ ಪ್ರಸ್ತಾಪ ಪ್ರಗತಿಯಲ್ಲಿದೆ. ಇದರೊಂದಿಗೆ ಗ್ರಾಮೀಣ ಪ್ರದೇಶ ಹಾಗೂ ದೂರದಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಸರಕಾರಿ ಬಸ್ಸುಗಳ ಅಗತ್ಯವಿದೆ. ತಾಲೂಕಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.

    ಅಭಿವೃದ್ಧಿಯ ಹಾದಿಯಲ್ಲಿರುವ ಬೈಂದೂರಿಗೆ ತಾಲೂಕು ಕೇಂದ್ರವಾಗುವ ಅಗತ್ಯ ಮತ್ತು ಅರ್ಹತೆಯಿದೆ. ಮಾತ್ರವಲ್ಲ ರಾ.ಹೆ 66ರ ಸನಿಹವೇ ಇರುವ ಬೈಂದೂರೇ ತಾಲೂಕು ಕೇಂದ್ರವಾಗುವುದು ಸೂಕ್ತ ಕೂಡ. ಇಲ್ಲಿಯೂ ರಾಜಕೀಯ ಮಾಡದೇ, ಕುಂದಾಪುರದ ಉದ್ದಿಮೆದಾರರ ಲಾಭಿಗೆ ಮಣಿಯದೇ ಘೋಷಣೆಯಾದ ತಾಲೂಕು ರಚನೆಯ ಪ್ರಸ್ತಾಪ ಶೀಘ್ರವೇ ಅನುಷ್ಠಾನದ ಹಾದಿ ಕಾಣಬೇಕಿದೆ. ಅಗತ್ಯ ಸೌಕರ್ಯ ಸಲವತ್ತುಗಳನ್ನು ಒದಗಿಸಲು ಬೈಂದೂರಿನ ಶಾಸಕರಾದ ಕೆ. ಗೋಪಾಲ ಪೂಜಾರಿಯವರು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯತೆಯೂ ಇದೆ/ಕುಂದಾಪ್ರ ಡಾಟ್ ಕಾಂ/

    Like this:

    Like Loading...

    Related

    Byndoor Byndoor taluk ವಿಶೇಷ ವರದಿ ಬೈಂದೂರು
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ

    05/12/2025

    ಡಿ.14 ರಿಂದ 21ರ ತನಕ ಸುರಭಿ ರಿ. ಬೈಂದೂರು ಆಯೋಜನೆಯಲ್ಲಿ ʼರಾಜ್ಯ ಮಟ್ಟದ ನಾಟಕ ಸ್ಪರ್ಧೆʼ

    04/12/2025

    ಎಲ್ಲೂರು ಕಂಬಳ ಸಂಪನ್ನ. 48 ಜೊತೆ ಕೋಣಗಳು ಭಾಗಿ

    28/11/2025

    1 Comment

    1. Pingback: ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಮಾರ್ಚ್ 15ಕ್ಕೆ ಉದ್ಘಾಟನೆ – Kundapra.com ಕುಂದಾಪ್ರ ಡಾಟ್ ಕಾಂ

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d