Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಸಮುದಾಯದ ಮಕ್ಕಳ ನಾಟಕ -ನಕ್ಕಳಾ ರಾಜಕುಮಾರಿ
    ರಂಗಭೂಮಿ

    ಕುಂದಾಪುರ ಸಮುದಾಯದ ಮಕ್ಕಳ ನಾಟಕ -ನಕ್ಕಳಾ ರಾಜಕುಮಾರಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಎಂಟುದಿನಗಳ ಮಕ್ಕಳ ಮೇಳವನ್ನು ಸಂಘಟಿಸಿ ಆ ಮೇಳದ ಮಕ್ಕಳಿಂದಲೇ ನಾಟಕವನ್ನು ಆಡಿಸಿದೆ. ಮೇಳದ ಸಮಾರೋಪದಂದು ನಾಟಕ ಪ್ರದರ್ಶನ ನಡೆಯಿತು. ‘ನಕ್ಕಳಾ ರಾಜಕುಮಾರಿ’ ಸಮಯದ ಮಿತಿಯಲ್ಲಿ ತಯಾರಾದ ನಾಟಕವಾದರೂ ಮಕ್ಕಳ ಉತ್ಸಾಹ, ದೃಶ್ಯ ಜೋಡಣೆ ಮತ್ತು ಮಕ್ಕಳಿಂದ ಸಹಜ ಅಭಿನಯವನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ತೋರಿದ ಜಾಣ್ಮೆ ನಾಟಕವನ್ನು ಸುಂದರ ಕಲಾಕೃತಿಯನ್ನಾಗಿಸಿತು.

    Click Here

    Call us

    Click Here

    ಆಕಾಶವಾಣಿಯ ಚಿಣ್ಣರ ಚಿಲುಮೆ ಕಾರ್ಯಕ್ರಮಕ್ಕಾಗಿ ಮಕ್ಕಳ ನಾಟಕ ಮಾಡಿಸಲು ಹೊರಟ ರಂಗಕರ್ಮಿ ಎಂ ಅಬ್ದುಲ್ ರಹಮಾನ್ ಪಾಷಾ ಮಕ್ಕಳ ಜೊತೆ ಕೆಲಸಮಾಡುತ್ತಾ, ಮಕ್ಕಳ ಸಹಾಯದಿಂದಲೇ ರಚಿಸಿದ ನಾಟಕವಿದು. ಈ ನಾಟಕಕ್ಕೆ ಹೆಸರಿಟ್ಟದ್ದು ಕೂಡಾ ಮಕ್ಕಳೇ!

    ನಾಟಕದ ಮುಖ್ಯ ಪಾತ್ರಗಳಾದ ಎಂಕ, ಸೀನ ಮತ್ತು ನೊಣ ಹಳ್ಳಿಯ ಶ್ರಮಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ರಕ್ತ ಮಾಂಸಗಳ ಜೊತೆ ಹಸಿವು, ಮುಗ್ಧತೆಗಳನ್ನೂ ದೇಹಕ್ಕೆ ಮೆತ್ತಿಕೊಂಡಂತಿರುವ ಈ ಪಾತ್ರಗಳು ಕೆಟ್ಟ ಪ್ರಭುತ್ವದಿಂದ ಬವಣೆಗೊಳಗಾಗಿ ಮನೆಯಿಂದ ಹೊರಹಾಕಲ್ಪಟ್ಟವರು. ನಗದ ರಾಜಕುಮಾರಿಯನ್ನು ಸಂತೋಷ ಪಡಿಸಿ ಅವಳನ್ನು ನಗಿಸಿದವರಿಗೆ ದೊಡ್ಡ ಬಹುಮಾನ ದೊರೆಯುವುದೆಂಬ ಡಂಗುರದ ಘೋಷಣೆಯನ್ನು ಕೇಳಿ ಆಕೆಯನ್ನು ನಗಿಸುವ ಉದ್ಧೇಶದಿಂದ ಪ್ರಯಾಣ ಬೆಳೆಸುತ್ತಾರೆ. ರಾಜಕುಮಾರಿಯನ್ನು ನಗಿಸಲು ಹೊರಟ ಇವರು ಎದುರಿಸಿದ ಪೇಚಾಟಗಳು ನಾಟಕವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತವೆ.

    ವಿಶಿಷ್ಟ ಸಂದರ್ಭವೊಂದರಿಂದಾಗಿ ಎಂಕ, ಸೀನ ಮತ್ತು ನೊಣರನ್ನು ರಾಜಕುಮಾರಿಯು ಭೇಟಿಯಾಗುತ್ತಾಳೆ. ನಾಟಕದ ಕೊನೆಯಲ್ಲಿ ರಾಜಕುಮಾರಿ ನಗುತ್ತಾಳೆ ಮತ್ತು ನಾಟಕ ಸುಖಾಂತ್ಯಗೊಳ್ಳುತ್ತದೆ. ಹಿರಿಯರ ಅತಿಯಾದ ಕಣ್ಗಾವಲಿನಲ್ಲಿ ಮಕ್ಕಳು ಪಂಜರದ ಪಕ್ಷಿಯಾಗುತ್ತಾರೆ ಎಂಬ ಸಂದೇಶವನ್ನೂ ಈ ನಾಟಕ ಕೊಡುತ್ತದೆ.

    ನಾಟಕಕ್ಕೆ ಬಳಸಿದ ಸಂಗೀತ ಮತ್ತು ಆಯ್ದುಕೊಂಡ ಹಾಡುಗಳು ಈ ಹಿಂದೆ ಬೇರೆ ನಾಟಕಗಳಿಗೆ ಬಳಸಿದ್ದಾದರೂ ಈ ನಾಟಕಕ್ಕೆ ಹೊಂದಿಕೊಳ್ಳುತ್ತವೆ, ಈ ಹಿಂದೆ ಸಮುದಾಯದ ಮಕ್ಕಳ ಮೇಳಗಳಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ ಪೂರ್ಣಚಂದ್ರ, ನಿಶಾಂತ್ ತಮ್ಮ ಹಿತವಾದ ಹಿನ್ನಲೆ ಸಂಗೀತದಿಂದಾಗಿ ನಾಟಕದ ಒಟ್ಟೂ ಪರಿಣಾಮವನ್ನು ಹೆಚ್ಚಿಸಿದ್ದಾರೆ. ಎಂಕ, ಸೀನ, ನೊಣ ಪಾತ್ರದಲ್ಲಿ ಪ್ರಾರ್ಥನಾ, ಅಜಾದ್ ಮತ್ತು ಗೌತಮ ಉತ್ತಮ ಅಭಿನಯ ನೀಡಿದರು. ರಾಜಕುಮಾರಿಯಾಗಿ ಲಿಪಿ ಹೆಗ್ಡೆ ಅಭಿನಯ ಉತ್ತಮವಾಗಿತ್ತು. ಈ ನಾಟಕದ ಜೀವವಿರುವುದು ಊರಜನರಾಗಿ, ಸೈನಿಕರಾಗಿ, ಅರಮನೆಯ ಕೆಲಸದವರಾಗಿ ಆಗಾಗ ಬರುವ ಮಕ್ಕಳ ಗುಂಪಿನ ಸಹಜ ಅಭಿನಯ ಹಾಗೂ ಉತ್ಸಾಹದಲ್ಲಿ ಎಂದೇ ಹೇಳಬೇಕು.

    Click here

    Click here

    Click here

    Call us

    Call us

    ಸುಮಾರು ಅರವತ್ತು ಮಕ್ಕಳನ್ನು ರಂಗದ ಮೇಲೆ ತಂದು ಅವರಿಂದ ವಿಶಿಷ್ಟ ಚಲನ ವಿನ್ಯಾಸಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕ ವಾಸುದೇವ ಗಂಗೇರ ಯಶಸ್ವಿಯಾಗಿದ್ದಾರೆ. ಬಹಳ ಜಾಣ್ಮೆಯಿಂದ ರಂಗಪರಿಕರಗಳನ್ನು ಬಳಸಿದ್ದಾರೆ. ನಾಲ್ಕು ಪೈಪ್ ತುಂಡುಗಳಿಂದಲೇ ಅರಮನೆಯನ್ನೂ ಸೆರಮನೆಯನ್ನೂ ಸೃಷ್ಟಿಸಿದ್ದಾರೆ. ಅವೇ ಪೈಪುಗಳನ್ನೇ ಬಂದೂಕು, ನಳಿಕೆ ವಾಧ್ಯಗಳನ್ನಾಗಿ ಕೂಡಾ ಪರಿವರ್ತಿಸಿದ್ದಾರೆ. ಅತ್ಯಂತ ಸರಳವಾದ ನಿರೂಪಣಾ ತಂತ್ರ, ಹಿತವಾದ ಸಂಗೀತ, ಮಕ್ಕಳ ಧಾರಾಳ ಸಂತಸವನ್ನೇ ನಾಟಕದ ಶಕ್ತಿಯಾಗಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚುವಂತಹದ್ದು.

    ಮಕ್ಕಳೇ ಸಂಭಾಷಣೆಗಳನ್ನು ಬರೆಯುವಂತೆ, ಕತೆಯನ್ನು ಮುಂದುವರಿಸುವಂತೆ ಪ್ರೇರೇಪಿಸಿ ಅಬ್ದುಲ್ ರೆಹಮಾನ್ ಪಾಷಾರವರು ರಚಿಸಿದ ಈ ನಾಟಕವನ್ನು ವಾಸುದೇವ ಗಂಗೇರ ಅದೇ ಸ್ಪೂರ್ತಿಯಿಂದ ನಿರ್ದೇಶಿಸಿದ್ದಾರೆ. ಸಂಭಾಷಣೆಗಳನ್ನು ಮಕ್ಕಳಿಗೆ ಉರುಹೊಡೆಯಲು ಹೇಳದೆ ಅವರೇ ಸಂಭಾಷಣೆಗಳನ್ನು ರಚಿಸುವಂತೆ ಮಾಡಿರುವುದರಿಂದ ಮಕ್ಕಳು ಸಹಜವಾಗಿ ಅಭಿನಯಿಸಲು ಸಾಧ್ಯವಾಗಿದೆ. ಚಿನ್ನಾ ವಾಸುದೇವ ಅವರ ನೃತ್ಯ ಸಂಯೋಜನೆ ನಾಟಕದ ಇನ್ನೊಂದು ಧನಾತ್ಮಕ ಅಂಶ.

    ಒಟ್ಟಾರೆಯಾಗಿ, ಕುಂದಾಪುರ ಸಮುದಾಯದ ಈ ಪ್ರಯತ್ನ ಪ್ರಸಂಶನೀಯ.

    ಚಿತ್ರ- ವಿಮರ್ಶೆ: ಎಸ್. ಎಮ್. ನಾಯಕ

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಭಾರತೀಯ ಆಚರಣೆಗಳಲ್ಲಿನ ರಂಗಕ್ರಿಯೆಗಳು

    16/01/2015
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ
    • ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ: ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಭರವಸೆ
    • ಮರವಂತೆ: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆರನೇ ಶಾಖೆಯ ಉದ್ಘಾಟನೆ
    • ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯ: ಮೂಡುಬಿದಿರೆ ಭಾಗದ ಮೊದಲ ಹೃದಯ ಚಿಕಿತ್ಸಾ ಕೇಂದ್ರ
    • ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು: ಸಿ.ಇ.ಓ ಪ್ರತೀಕ್ ಬಾಯಲ್

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.