ಭಾರತೀಯ ಆಚರಣೆಗಳಲ್ಲಿನ ರಂಗಕ್ರಿಯೆಗಳು

Call us

Call us

Call us

Call us

Rangabhumiಭಾರತ ಪುರಾತನಕಾಲದಿಂದಲೂ ಕೂಡ ತನ್ನ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಹೆಸರಾದ ದೇಶ. ಗ್ರೀಕ್, ರೋಮನ್ ನಾಗರೀಕತೆ ಹಾಗೂ ಸಂಸ್ಕೃತಿಗೆ ಸರಿಸಾಟಿ ಎಂಬಂತೆ ಬೆಳೆದ ನಾಗರೀಕತೆ ಭಾರತದ್ದು. ಗ್ರೀಕ್,ರೋಮನ್ ರಂಗಭೂಮಿಯಷ್ಟೇ ಉನ್ನತಕ್ಕೇರಿದ ರಂಗ ಪರಂಪರೆ ಭಾರತಕ್ಕಿದೆ. ಭಾರತೀಯ ರಂಗಭೂಮಿ ಇತರ ರಂಗಭೂಮಿಗಳಿಗಿಂತ ವಿಭಿನ್ನ,ವಿಶಿಷ್ಟ. ಭಾರತೀಯ ರಂಗಭೂಮಿಯ ಮೂಲ ಇರುವುದು ಭಾರತದ ಪುರಾಣ, ಇತಿಹಾಸ ಮತ್ತು ಧಾರ್ಮಿಕತೆಯಲ್ಲಿ. ಇಂದ್ರಾದಿ ದೇವತೆಗಳು ಮನೋರಂಜನೆಗಾಗಿ ಬ್ರಹ್ಮನಿಂದ ಆಜ್ನಾಪಿಸಲ್ಪಟ್ಟು ‘ಸಮುದ್ರ ಮಂಥನ’ ಪ್ರಕರಣವನ್ನು ಅಭಿನಯಿಸಿದರು. ಮತ್ತು ವೇದಗಳು ಕೆಳಜಾತಿಗೆ ನಿಷಿದ್ಧವಾದ್ದರಿಂದ ಎಲ್ಲಾ ವರ್ಣಗಳಿಗೂ ಲಭ್ಯವಾಗುವ, ಕೇಳಲು, ನೋಡಲು ರಂಜಿತವಾಗುವಂಥಹ ಐದನೇಯ ವೇದವನ್ನು ರಚಿಸು ಎಂದು ಬ್ರಹ್ಮನು ಭರತ ಮುನಿಗೆ ಹೇಳಿದನು. ಇವುಗಳೇ ಭಾರತೀಯ ರಂಗಭೂಮಿಯ ಉಗಮದ ಕಾರಣ ಎನ್ನುವ ವಾದ ಮೇಲಿನ ಮಾತನ್ನು ಪುಷ್ಠೀಕರಿದುತ್ತದೆ.
ಹೇಗೆ ರೋಮ್ ನಲ್ಲಿ ನಡೆಯುತ್ತಿದ್ದ ಉತ್ಸವಗಳು ರೋಮನ್ ರಂಗಭೂಮಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತೋ ಹಾಗೆಯೇ ಭಾರತೀಯ ರಂಗಭೂಮಿಯ ಮೇಲೆ ನಮ್ಮ ಪುರಾಣ, ಕಥೆಗಳು ಮತ್ತು ಧಾರ್ಮಿಕ ಆಚರಣೆಗಳು ಪ್ರಭಾವ ಬೀರಿದೆ. ರಾಮಾಯಣ, ಮಹಾಭಾರತ, ಭಾಗವತಗಳೇ ಮುಂತಾದ ಪುರಾಣ ಕಥಾನಕಗಳು ರಂಗ ಪ್ರಕ್ರಿಯೆಗೆ ಬಹಳಷ್ಟು ಪೂರಕವಾಗಿದ್ದವು. ಇಂತಹ ಪುರಾಣಗಳ ಭಾವಾಭಿನಯವೇ ಭಾರತೀಯ ರಂಗಭೂಮಿಯ ಭಾಗಗಳು.

Call us

Click Here

Click here

Click Here

Call us

Visit Now

Click here

ಸಂಸ್ಕೃತ ನಾಟಕಗಳಲ್ಲಿ ಕಾಣಸಿಗುವ ಹಬ್ಬಗಳ ಪ್ರಸ್ಥಾವನೆ, ವಿವಿಧ ಆಚರಣೆಗಳು ಪೌರಾಣಿಕ ಕಥಾನಕಗಳೆಲ್ಲವೂ ಕೂಡ ಭಾರತೀಯ ರಂಗಭೂಮಿ ಮತ್ತು ಸಾಹಿತ್ಯ ಹೇಗೆ ಪುರಾಣ, ಆಚರಣೆ ಹಾಗೂ ಧಾರ್ಮಿಕತೆಯಿಂದ ಪ್ರಭಾವಿತವಾಗಿದೆ ಎನ್ನುವುದನ್ನು ತಿಳಿಸುತ್ತದೆ. ಇನ್ನು ಜನಪದ ಆಚರಣೆಗಳು, ಉತ್ಸವಗಳು, ಹಬ್ಬಗಳು, ಜನಜೀವನ ಮತ್ತು ರಂಗಭೂಮಿಯನ್ನು ಬಹಳಷ್ಟು ಬದಲಿಸಿದೆ. ಉದಾಹರಣೆಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಡೆಯುವ ನಾಗಮಂಡಲದಂತಹ ಆಚರಣೆ ಬಹಳಷ್ಟು ರಂಗ ಕ್ರಿಯೆಗಳನ್ನು ಒಳಗೊಂಡಿದೆ. ನಾಗಮಂಡಲ ನಡೆಯುವ ವೇದಿಕೆಯೇ ರಂಗಮಂಟಪವಾದರೆ, ಅಲ್ಲಿ ಬಳಸುವ ವಸ್ತುಗಳೇ ರಂಗ ಪರಿಕರಗಳು. ನಾಗಪಾತ್ರಿ, ವೈದ್ಯರೆಲ್ಲರೂ ನಟರು. ನಾಗಪಾತ್ರಿ ಪುರುಷನನ್ನು ಪ್ರತಿನಿಧಿಸಿದರೆ, ವೈದ್ಯ ಪ್ರಕೃತಿಯ ಪ್ರತಿನಿಧಿ. ಇಲ್ಲಿ ವೈದ್ಯ ನಾಗಪಾತ್ರಿಯನ್ನು ಹೊಗಳುತ್ತಾನೆ, ತೆಗಳುತ್ತಾನೆ, ಕೆಣಕುತ್ತಾನೆ, ಕುಣಿಸುತ್ತಾನೆ ಹಾಗೂ ತಾನೂ ಕುಣಿಯುತ್ತಾನೆ. ಎರಡು ಪಾತ್ರಗಳ ನಡುವೆ ಅಮೂರ್ತವಾದ ಸಂಭಾಷಣೆ ನಡೆಯುತ್ತದೆ. ಇದನ್ನು ವೀಕ್ಷಿಸಲು ಪ್ರೇಕ್ಷಕರ ಸಮೂಹವೇ ಸೇರುತ್ತದೆ. ಇದೆಲ್ಲವೂ ಕೂಡ ರಂಗಾಂಶಗಳೇ. ಇಂತಹ ರಂಗಕ್ರಿಯೆಗಳು ಜನರ ಮನಸ್ಸಿನ ಮೇಲೆ, ನಂಬಿಕೆಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ.
ಪ್ರಾಚೀನ ಗುಹೆಗಳಲ್ಲಿ ಕಾಣಸಿಗುವ ಬೇಟೆಯ ಚಿತ್ರ ಅಥವಾ ಕೆತ್ತನೆಗಳಿಂದ ರಂಗಭೂಮಿ ಪೂರ್ವಜರ ಜೀವನದ ಅವಿಭಾಜ್ಯ ಅಂಗವಾಗಿತ್ತು ಎಂದು ತಿಳಿಯುತ್ತದೆ. ಕೆಲವೆಡೆ ಮನುಷ್ಯನೇ ಪ್ರಾಣಿಯ ಹಾಗೆ ಅಭಿನಯಿಸುವುದನ್ನು ಚಿತ್ರಿಸಲಾಗಿದೆ. ಅಂದರೆ ಪೂರ್ವಜರು ಬೇಟೆಯ ಕ್ರಿಯೆಯನ್ನು ಪ್ರಸ್ತುತ ಪಡಿಸುತ್ತಿದ್ದು, ಒಬ್ಬ ಬೇಟೆಗಾರನಂತೆ ಮತ್ತೊಬ್ಬ ಪ್ರಾಣಿಯಂತೆ ಅಭಿನಯಿಸುತ್ತಿದ್ದರು ಎನ್ನುವುದು ಸ್ಪಷ್ಟ. ಈ ರಂಗಕ್ರಿಯೆಗಳಿಂದ ಬೇಟೆಯ ತಯಾರಿ ನಡೆಸುತ್ತಿದ್ದರು ಅಥವಾ ಮನೋರಂಜನೆ ಪಡೆಯುತ್ತಿದ್ದರು.
ಕಾಮದಹನ, ರಾಮಲೀಲಾದಂತಹ ಆಚರಣೆಗಳಲ್ಲಿ ಪೌರಾಣಿಕ ಕಥೆಗಳನ್ನು ಮರುಸೃಷ್ಠಿಸುವ ರಂಗಪ್ರಕ್ರಿಯೆಗಳು ನಡೆಯುತ್ತದೆ. ಕೃಷ್ಣಾಷ್ಟಮಿ ಸಮಯದಲ್ಲಿ ನಡೆಯುವ ಓಕುಳಿ ಹಾಗೂ ಮೊಸರು ಕುಡಿಕೆ ಉತ್ಸವಗಳು; ಚೌತಿಯಂದು ಮನೆ ಮನೆಗೆ ಹಾಡುತ್ತಾ ಬರುವ ಜನಪದೀಯ ಆಚರಣೆ; ತುಳುನಾಡು, ಕೇರಳದಲ್ಲಿ ನಡೆಯುವ ಪಾಡ್ದನ, ಭೂತಕೋಲಗಳು; ಪೌರಾಣಿಕ ಕಥೆಗಳನ್ನು ಆಡಿತೋರಿಸುವ ಯಕ್ಷಗಾನದಂತಹ ಕಲೆಗಳು; ಹೋಳಿಯ ಸಮಯದಲ್ಲಿ ನಡೆಯುವ ಕೋಲಾಟ; ಧಾರ್ಮಿಕ ಸ್ಥಳದಲ್ಲಿ ನಡೆಯುವ ಸಾಂಸ್ಕೃತಿಕ ಆಚರಣೆ; ಸುಗ್ಗಿಯ ಸಮಯದಲ್ಲಿ ರೈತರು ಹಾಡುವ ಹಾಡು, ನೃತ್ಯ ಇವೆಲ್ಲವೂ ಕೂಡ ಭಾರತೀಯ ರಂಗಭೂಮಿಯ ವಿವಿಧ ಮುಖಗಳು.
ಇಂತಹ ಆಚರಣೆಗಳಿಂದ, ಧಾರ್ಮಿಕ ನಡಾವಳಿಗಳಿಂದ, ಪೌರಾಣಿಕತೆಯ ಪ್ರಭಾವದಿಂದ, ಜನಪದ ಪದ್ದತಿಗಳಿಂದ ಮತ್ತು ಸಾಮಾಜಿಕ ಸ್ಥಿತಿಗತಿಗಳಿಂದ ಭಾರತೀಯ ರಂಗಭೂಮಿ ಉನ್ನತ ಸ್ಥಾನಕ್ಕೇರಿದ್ದು ಮಾತ್ರವಲ್ಲ ಇತರ ನಾಗರೀಕತೆಗಳ ಉಗಮದ ಕಾಲದಲ್ಲಿಯೇ ಶ್ರೀಮಂತ ದೇಶ, ವಿಶಿಷ್ಟ ನಾಗರೀಕತೆ ಎಂದೆನಿಸಿ ಜಗತ್ತಿನಲ್ಲೇ ಗುರುತಿಸಲ್ಪಡುವ ದೇಶವಾಗಿ ಬೆಳೆದಿದ್ದು.

– ಮೇಘ ಸಮೀರ

Leave a Reply

Your email address will not be published. Required fields are marked *

four − two =