Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜಂಬೂರಿಯಲ್ಲಿ ಕನ್ನಡ ಗೀತಸಂಸ್ಕೃತಿಯ ಡಿಂಡಿಮ
    alvas nudisiri

    ಜಂಬೂರಿಯಲ್ಲಿ ಕನ್ನಡ ಗೀತಸಂಸ್ಕೃತಿಯ ಡಿಂಡಿಮ

    Updated:26/12/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ವಿದ್ಯಾಗಿರಿ:
    ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಮಹತ್ವದ ಕವಿಗಳ ಕಾವ್ಯ ರಾಗಾಲಾಂಕರದೊಂದಿಗೆ ಜೀವಂತಿಕೆ ಪಡೆದಿತ್ತು. ಶಿಶುನಾಳ ಷರೀಫರ ತತ್ವಪದಗಳು ಹಾಡಾಗಿ ಹೊಮ್ಮಿ ಜೀವನಮೌಲ್ಯಗಳ ಸಂದೇಶ ಸಾರಿದವು. ರಾಜರತ್ನಂ ಅವರ ಸರಳಗನ್ನಡ ಮಧುರ ಆಲಾಪದ ಬೆಂಬಲದೊಂದಿಗೆ ಕನ್ನಡದ ಬದುಕನ್ನು ತೆರೆದಿಟ್ಟಿತ್ತು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್ ಅವರ ಸಂಗೀತ ಶಕ್ತಿ ವಿವಿಧ ಗಾಯಕರ ಧ್ವನಿಯಲ್ಲಿ ನಿರೂಪಿತವಾಗುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿಯ ಮೌಲಿಕ ಗೀತಕಾಣ್ಕೆಗಳೆಲ್ಲವೂ ಒಂದೇ ವೇದಿಕೆಯ ಮೂಲಕ ವಿವಿಧ ಗಾಯನಶೈಲಿಗಳೊಂದಿಗೆ ಮೇಳೈಸಿದ್ದವು.

    Click Here

    Call us

    Click Here

    ಈ ದೃಶಕ್ಕೆ ಸಾಕ್ಷಿಯಾಗಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ’ಕನ್ನಡ ಡಿಂಡಿಮ’ ಸಂಗೀತ ಕಾರ್ಯಕ್ರಮ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಶಂಕರ ಶಾನುಭೋಗ್ ಮತ್ತು ಬಳಗದ ಕಲಾವಿದರು ?ಕನ್ನಡ ಡಿಂಡಿಮ? ಕನ್ನಡದ ಶ್ರೇಷ್ಠ ಕವಿಗಳು ಮತ್ತು ಸಂಗೀತ ನಿರ್ದೇಶಕರ ಹಾಡುಗಳನ್ನು ಪ್ರಸ್ತುತಪಡಿಸಿ ಕನ್ನಡ ಮತ್ತು ಸಂಸ್ಕೃತಿಯ ವಿಶೇಷತೆಯನ್ನು ವಿನೂತನ ರೀತಿಯಲ್ಲಿ ಅನಾವರಣಗೊಳಿಸಿದರು.

    ಖ್ಯಾತ ಗಾಯಕರಾದ ಶಂಕರ ಶ್ಯಾನಭೋಗ, ರವಿ ಮೂರೂರು, ಸುಪ್ರಿಯಾ ರಘುನಂದನ್ ಮತ್ತು ಮೇಘನಾ ಹಳಿಯಾಳ ಅವರ ಸುಮಧುರ ಧ್ವನಿಯ ಮೂಲಕ ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳ ಆಸ್ವಾದ ಪ್ರೇಕ್ಷಕರಿಗೆ ದಾಟಿಕೊಂಡಿತು. ಗಾಯಕರು ತಮ್ಮದೇ ಆದ ವಿನೂತನ ಗಾಯನಶೈಲಿಯ ಮೂಲಕ ಹೊಸ ಪೀಳಿಗೆಯನ್ನೂ ಸೆಳೆದುಕೊಳ್ಳುವ ಹಾಗೆ ಹಾಡಿದ್ದರಿಂದ ಖ್ಯಾತ ಸಂಗೀತ ನಿರ್ದೇಶಕರು ರಾಗಸಂಯೋಜಿಸಿದ ಈ ಕವಿತೆಗಳು ಹಳೆಯದು ಎಂದೆನ್ನಿಸಲಿಲ್ಲ. ಹೊಸತು ಹೊಸತು ಭಾವಗಳನ್ನು ಮೂಡಿಸಿದವು. ಕೆಲವೊಮ್ಮೆ ಯುವಪ್ರೇಕ್ಷಕರು ಒನ್ಸ್ ಮೋರ್ ಎಂದು ಬೇಡಿಕೆ ಇರಿಸಿ ಮತ್ತೆ ಹಾಡುವಂತೆ ಕೋರಿಕೊಂಡರು.

    ದ.ರಾ.ಬೇಂದ್ರೆ ಅವರ ’ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ’ ಹಾಡನ್ನು ಶಂಕರ ಶ್ಯಾನುಭೋಗ ಅವರು ಪ್ರಸ್ತುತಪಡಿಸಿದ ತಕ್ಷಣ ವ್ಯಾಪಕ ಚಪ್ಪಾಳೆಗಳ ಮೆಚ್ಚುಗೆ ವ್ಯಕ್ತವಾಯಿತು. ಅವರು ಹಾಡಿದ ’ಕಾಣದ ಕಡಲಿಗೇ ಹಂಬಲಿಸಿದೇ ಮನ’ ಹಾಡು ಯುವಮನಸ್ಸುಗಳನ್ನು ಸೆಳೆಯಿತು.

    ರವಿ ಮೂರೂರು ಅವರು ’ನೀ ಹೀಂಗ ನೋಡಬ್ಯಾಡ ನನ್ನ’ ಹಾಡು ಅನೇಕ ವಿದ್ಯಾರ್ಥಿ ಸಮೂಹಕ್ಕೆ ಇಷ್ಟವಾಯ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಹಾಡಿದರು. ವಿಶೇಷ ಶೈಲಿಯಲ್ಲಿ ಅವರು ಹಾಡಿದ ಮತ್ತೊಂದು ಗೀತೆ ’ನನ್ನ ಗಂಗಿ ರೂಪ’ ಗಮನ ಸೆಳೆಯಿತು. ಅವರು ತಮ್ಮ ಧ್ವನಿಮಾಧುರ್ಯದ ವಿಶೇಷ ಪ್ರಯೋಗಶೀಲತೆಯೊಂದಿಗೆ ಪ್ರಸ್ತುತಪಡಿಸಿದ ಇನ್ನೊಂದು ಹಾಡು ’ಹೇಳ್ಕೊಳ್ಳಾಕ್ ಒಂದೂರು ತಲೆಮ್ಯಾಲೆ ಒಂದ್ಸೂರು’ ಪ್ರೇಕ್ಷಕರಿಗೆ ಖುಷಿ ನೀಡಿತು.

    Click here

    Click here

    Click here

    Click Here

    Call us

    Call us

    ಸುಪ್ರಿಯ ರಘುನಂದನ್ ಅವರು ಸಂತ ಶಿಶುನಾಳು ಶರಿಫರ ’ಎಂಥಾ ಮೋಜಿನ ಕುದರೆ? ಮತ್ತು ಎಮ್ ಎನ್ ವ್ಯಾಸರಾವ್ ಅವರ ?ನಿನ್ನ ಕಂಗಳ ಕೊಳದಿ? ಹಾಡುಗಳೂ ಹಲವರ ಮೆಚ್ಚುಗೆಗೆ ಪಾತ್ರವಾದವು. ಮೇಘನ ಹಳಿಯಾಳ ಹಾಡಿದ ಉತ್ತರ ಕರ್ನಾಟಕದ ಶೈಲಿಯ ಜನಪದ ?ಹಸಿರು ಕಡ್ಡಿಯ ಸೀರೆ? ಮತ್ತು ?ಸೊಜುಗಾದ ಸೂಜಿ ಮಲ್ಲಿಗೆ? ಹಾಡುಗಳಿಗೆ ಪ್ರೇಕ್ಷಕರು ಭಾವುಕರಾಗಿ ತಲೆದೂಗಿದರು.

    ದೀಪಕ್ ಮತ್ತು ಸಂಗೀತ ಥಾಮ್ಸ ( ಕೀಬೋರ್ಡ್ ) ರಾಜ್ ಗೋಪಾಲ್ ( ಗೀಟಾರ್ ) ವೀರೇಂದ್ರ ಪ್ರಸಾದ್ ( ಮ್ಯಾಂಡೋಲಿನ್ ) ಲೋಕೇಶ ( ಕೊಳಲು ) ಪದ್ಮಾನಾಭ ಕಾಮತ್ ( ರಿದಂ ಪ್ಯಾಡ್) ಭಾಸ್ಕರ ( ಢೋಲಕ್ ) ರಾಜೇಶ್ ಭಾಗವತ್ ( ತಬಲಾ ) ಸಾಥ್ ನೀಡಿದರು.ವಿದ್ಯಾರ್ಥಿನಿ ಹರ್ಷಿತ್ ಶಿರೂರು ಸ್ವಾಗತಿಸಿ ನಿರೂಪಿಸಿದರು.

    • ವರದಿ: ಮಹಾಂತೇಶ ಚಿಲವಾಡಗಿ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
    SDM Ujire Students
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು

    21/05/2026

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026

    ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರ ಸಂಕಿರಣ

    30/04/2026
    Leave A Reply Cancel Reply

    10 − 8 =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.