ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರದಂದು ವಿದ್ಯಾರ್ಥಿ ಸಂಸತ್ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಗುರುಕುಲ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪಾಲ್ ಮಚಾಡೊ, ಇವರು ನಿಜವಾದ ಸಂಸತ್ತಿನ ಕಾರ್ಯ ವೈಖರಿ ಬಗ್ಗೆ ತಿಳಿಸಿದರು.
ಶಿಕ್ಷಣವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ನೀವು ಪಡೆದ ಶಿಕ್ಷಣ ಅರ್ಥಪೂರ್ಣವಾಗಬೇಕಾದರೆ ಮೊದಲು ನೀವು ನಿಮ್ಮ ಶಿಕ್ಷಕರನ್ನು ಮತ್ತು ಶಿಕ್ಷಣ ಸಂಸ್ಥೆಯನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕೌಶಲಭರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ಸಹಕಾರಿ, ಪ್ರತಿಯೊಬ್ಬ ವಿಧ್ಯಾರ್ಥಿಯು ತನ್ನಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು, ನಾಯಕತ್ವ ಗುಣ ಹುಟ್ಟಿನಿಂದ ಬರುವುದಿಲ್ಲ, ಅದನ್ನು ತಾವಾಗೇ ಬೆಳೆಸಿಕೊಳ್ಳಬೇಕು, ಆ ಗುಣವೂ ಉತ್ತಮ ಮಾತುಗಾರಿಕೆ ಮತ್ತು ನಡವಳಿಕೆಯಿಂದ ಮಾತ್ರ ಬೆಳೆಸಿಕೊಳ್ಳಲು ಸಾಧ್ಯ, ಜೊತೆಗೆ ಸಂಸ್ಥೆಯ ನೀತಿನಿಯಮಗಳನ್ನು ಪಾಲಿಸುತ್ತಾ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಸುನೀಲ್ ಪ್ಯಾಟ್ರಿಕ್ ವಿದ್ಯಾರ್ಥಿ ಸಂಸತ್ತಿನ ಕಾರ್ಯ ವೈಖರಿ ಬಗ್ಗೆ ವಿವರಿಸಿದರು. ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸತ್ತಿನ ಎಲ್ಲಾ ಮುಖಂಡರು ಮತ್ತು ಸದಸ್ಯರಿಗೂ ನಾಯಕನ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನುಪಮಾ ಎಸ್. ಶೆಟ್ಟಿ ಇವರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಮುಖಂಡರಾಗಿ ಭರತ್ ಮತ್ತು ಕೀರ್ತನಾ ಕೆ. ಆರ್, ಕ್ರೀಡಾ ಕಾರ್ಯದರ್ಶಿಗಳಾಗಿ ಈಶ್ವರ್ ಮತ್ತು ಶಶಾಂಕ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪೃಥ್ವಿ ಕೆ.ಪಿ ಮತ್ತು ತ್ರತಿ ಶೆಟ್ಟಿ, ಶಿಸ್ತು ಕಾರ್ಯದರ್ಶಿಗಳಾಗಿ ಯಶಸ್ ಬಿ. ಎಂ ಮತ್ತು ಗೌತಮಿ. ಜೊತೆಗೆ ವಿವಿಧ ಹೌಸ್ನ ಮುಖಂಡರು ಮತ್ತು ತರಗತಿಯ ಮುಖಂಡರು ಅಧಿಕಾರ ವಹಿಸಿಕೊಂಡರು.
ಅತಿಥಿ ಪರಿಚಯವನ್ನು ಸಂಯೋಜಕಿ ಸುಷ್ಮಾ ಮುರುಳಿ ಮಾಡಿದರು ಕಾರ್ಯಕ್ರಮವನ್ನು ಸಹಶಿಕ್ಷಕಿ ಸುಮಲತಾ ನಿರೂಪಿಸಿ, ಸಹಶಿಕ್ಷಕಿ ವನಿತಾ ಸ್ವಾಗತಿಸಿ, ಶಾಲಾ ಮುಖಂಡ ಮಾಸ್ಟರ್ ಭರತ್ ವಂದಿಸಿದರು.















