Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ವಾಮೀಜಿ ಅವರ ಚತುರ್ಮಾಸ ವೃತ ಆರಂಭ
    ಊರ್ಮನೆ ಸಮಾಚಾರ

    ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ವಾಮೀಜಿ ಅವರ ಚತುರ್ಮಾಸ ವೃತ ಆರಂಭ

    Updated:01/08/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಗಂಗೊಳ್ಳಿ:
    ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿ ಅವರು ಬೆಂಗಳೂರಿನ ಬಸವನಗುಡಿಯ ಶ್ರೀ ದ್ವಾರಕಾನಾಥ ಭವನದಲ್ಲಿ ಕ್ರೋಧಿ ನಾಮ ಸಂವತ್ಸರದ ಚತುರ್ಮಾಸ ವೃತವನ್ನು ಶನಿವಾರ ಆರಂಭಿಸಿದರು.

    Click Here

    Call us

    Click Here

    ಅಂದು ಬೆಳಿಗ್ಗೆ ಆರಂಭವಾದ ಚಾತುರ್ಮಾಸ ಸ್ವೀಕಾರದ ಧಾರ್ಮಿಕ ವಿಧಿ ವಿಧಾನಗಳು, ಗಣಪತಿ ಪೂಜಾ, ಮೃತ್ತಿಕಾ ಪೂಜಾ, ವ್ಯಾಸ ಪೂಜಾ, ಚಾತುರ್ಮಾಸ ವೃತ ಸ್ವೀಕಾರ ವಿಧಿ ವಿಧಾನನಗಳು ನಡೆಯಿತು.

    ಸಂಜೆ ದ್ವಾರಕಾನಾಥ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮೀಜಿ ಅವರು, ಈ ಹಿಂದೆ 1979ರಲ್ಲಿ ಹಿರಿಯ ಸ್ವಾಮೀಜಿ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಅವರು ಬೆಂಗಳೂರಿನ ಶ್ರೀ ದ್ವಾರಕಾನಾಥ ಭವನದಲ್ಲಿ ಚಾತುರ್ಮಾಸ ಕಾರ್ಯಕ್ರಮವನ್ನು ಕೈಗೊಂಡಿದ್ದರು. ಇದೀಗ 45 ವರ್ಷಗಳ ಬಳಿಕ ಬೆಂಗಳೂರಿನ ಗೌಡ ಸಾರಸ್ವತ ಸಮಾಜ ಬಾಂಧವರಿಗೆ ಶ್ರೀ ರಾಮ್ ದೇವ್ ವೀರ ವಿಠಲ ದೇವರ ಹಾಗೂ ಸ್ವಾಮೀಜಿಗಳ ಸೇವಾ ಕೈಂಕರ್ಯವನ್ನು ಮಾಡುವ ಸುಯೋಗ ಮತ್ತೊಮ್ಮೆ ಒದಗಿ ಬಂದಿದೆ ಎಂದರು.

    ಮುಂಬರುವ ವರ್ಷ ಶ್ರೀ ಗೋಕರ್ಣ ಪರ್ತಗಾಳಿ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಶ್ರೀಗಳು ಸಂಕಲ್ಪಿಸಿದ ಜಿ. ಎಸ್. ಬಿ ಸಮಾಜ ಬಾಂಧವರ ಮುಖೇನ 550 ಕೋಟಿ ರಾಮನಾಮ ಜಪವನ್ನು ಪಠಿಸುವ ಮಹತ್ತರ ಅಭಿಯಾನವು ಕಳೆದ ಏಪ್ರಿಲ್ 17 ಮೊದಲ್ಗೊಂಡು ಅಕ್ಟೋಬರ್ 18, 2025 ರವರೆಗೆ ನಡೆಯಲಿದ್ದು, ದೇಶಾದ್ಯಂತ 118 ಕ್ಕೂ ಅಧಿಕ ಜಪಕೇಂದ್ರ ಮತ್ತು ಉಪಜಪಕೇಂದ್ರಗಳಲ್ಲಿ ರಾಮನಾಮ ಜಪವು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ ಶ್ರೀಗಳು, ರಾಮನಾಮ ಜಪಾಭಿಯಾನ ಮುಗಿದ ಬಳಿಕ ಅ.19 ರಿಂದ ನ.26 ರವರೆಗೆ ಶ್ರೀರಾಮ ರಥ ಯಾತ್ರೆ ನಡೆಯಲಿದೆ.

    ನ.27 ರಿಂದ ಡಿ.7 ರವರೆಗೆ ಪರ್ತಗಾಳಿ ಮಠದಲ್ಲಿ ರಾಮನಾಮ ಜಪದ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭ 77 ಅಡಿಯ ಶ್ರೀ ರಾಮಚಂದ್ರನ ಕಂಚಿನ ಪ್ರತಿಮೆಯನ್ನು ಮಠದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.

    Click here

    Click here

    Click here

    Click Here

    Call us

    Call us

    ಗುರುವಾರ ಕುಮಟಾದ ಮೊಕ್ಕಾಂನಿಂದ ಆಗಮಿಸಿದ ಶ್ರೀ ವಿದ್ಯಾಧೀಶ ಸ್ವಾಮಿಜಿ ಅವರನ್ನು ಶ್ರೀ ದ್ವಾರಕಾನಾಥ ಭವನದವರೆಗೆ ವೈಭವೋಪೇತ ಮೆರವಣಿಗೆಯಲ್ಲಿ ಕರೆತರಲಾಯಿತು.

    ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕೇಂದ್ರೀಯ ಸಮಿತಿಯ ಸದಸ್ಯರು, ಬೆಂಗಳೂರು ಚಾತುರ್ಮಾಸ ಸಮಿತಿಯ ಸದಸ್ಯರು, ವಿವಿಧ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ರಾಮನಾಮ ಜಪಕೇಂದ್ರಗಳಿಂದ ಆಗಮಿಸಿದ ಜಾಪಕರು, ಜಿಎಸ್‌ಬಿ ಸಮಾಜಬಾಂಧವರು, ಭಕ್ತರು ಚಾತುರ್ಮಾಸ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿಗುರು ಕೃಪೆಗೆ ಪಾತ್ರರಾದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    fourteen − 7 =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.