ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯುವಮಾನಸ ಗಾಣಿಗ ಎಜುಕೇಷನಲ್ ಟ್ರಸ್ಟ್‌ನ ಕಚೇರಿಯಲ್ಲಿ ಶನಿವಾರದಂದು ನಡೆದ ಟ್ರಸ್ಟ್‌ನ ಕಾರ್ಯಕಾರಿ ಸಭೆಯಲ್ಲಿ ಮಂಜುನಾಥ್ ಶಿಕಾರಿಪುರ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಸವಿತಾ ದಿನೇಶ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಜಿ. ಉಪ್ಪುಂದ ಹಾಗೂ ಕೋಶಾಧಿಕಾರಿಯಾಗಿ ಅನಂತ ಗಾಣಿಗ ಅವರನ್ನು ಆಯ್ಕೆ ಮಾಡಲಾಯಿತು.
ಯುವ ಮಾನಸ ಗಾಣಿಗ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ ಕಳೆದ 3 ವರ್ಷಗಳ ಹಿಂದೆ ಎಚ್. ಸುಬ್ಬಯ್ಯ ಶಿವಮೊಗ್ಗ ಇವರ ಕನಸಿನ ಕೂಸಿನಂಥೆ ತನ್ನ ಹುಟ್ಟೂರಾದ ಉಪ್ಪುಂದದಲ್ಲಿ ಆರಂಭಿಸಿ, ಗಾಣಿಗ ಸಮುದಾಯದ ಮಕ್ಕಳ ವಿದ್ಯಾಭ್ಯಾಸ ನೆರವಿಗೆ ಮತ್ತು ಸರ್ಕಾರ ಮಟ್ಟದ ಅತ್ಯುನ್ನತ ಹುದ್ದೆ ಗಿಟ್ಟಿಸಲು ಅವಶ್ಯವಾದ ತರಬೇತಿಯನ್ನು ನೀಡುತ್ತಾ ಬಂದಿದೆ.










