Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹಟ್ಟಿಯಂಗಡಿ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪಂಚಾಂಗ ಶ್ರವಣ
    ಊರ್ಮನೆ ಸಮಾಚಾರ

    ಹಟ್ಟಿಯಂಗಡಿ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪಂಚಾಂಗ ಶ್ರವಣ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಈ ಪ್ರಯುಕ್ತ ಪಂಚಾಂಗ ಶ್ರವಣ ಕಾರ್ಯ ಜರುಗಿತು.

    Click Here

    Call us

    Click Here

    ಸಂಸ್ಥೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಪಂಚಾಗ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಕಾಲವೇ ಎಲ್ಲವನ್ನು ನಡೆಸಿಕೊಂಡು ಹೋಗುತ್ತದೆ. ’ಲಲಾಟಲಿಖಿತಾ ರೇಖಾ ಪರಿಮಾರ್ಷ್ಟುನ ಶಕ್ಯತೇ’ ಎಂಬಂತೆ ಭಗವಂತನು ತನ್ನಿಷ್ಟದಂತೆ ಜಗತ್ತನ್ನು ನಡೆಸಿಕೊಂಡು ಹೋಗುತ್ತಾನೆ. ಅವನ ಆಟದ ಬೊಂಬೆಗಳು  ನಾವು. ಅವನ ಇಚ್ಛೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲಾರದು ಎಂಬೆಲ್ಲ ಮಾತುಗಳು ಕಾಲಪುರುಷನ ಮಹತ್ವವನ್ನು ತಿಳಿಸುತ್ತವೆ.

    ವೇದಗಳ ಅರ್ಥವನ್ನರಿಯಬೇಕಾದರೆ ವೇದಾಂಗಗಳ ಜ್ಞಾನ ಅಗತ್ಯ. ಅವುಗಳಲ್ಲಿ ಒಂದು ಜ್ಯೋತಿಶ್ಶಾಸ್ತ್ರ. ಆಕಾಶದಲ್ಲಿರುವ ನಕ್ಷತ್ರ ಗ್ರಹಗಳ ಚಲನವಲನಗಳ ಲೆಕ್ಕಾಚಾರದಂತೆ ದಿನದ ಸ್ಪಷ್ಟ ಮಾಹಿತಿಗಳೇ ಪಂಚಾಂಗ. ಭಾರತೀಯ ಪರಂಪರೆಯಂತೆ ವರ್ಷದ ಬದಲಾವಣೆಯನ್ನು ಯುಗಾದಿ ಶಬ್ದದಿಂದ ಕರೆದು ಆಚರಿಸಿಕೊಂಡು ಬಂದಿದ್ದೇವೆ.

    ಪ್ರಕೃತಿಯೂ ಕೂಡ ಹೊಸತನವನ್ನು ಕಾಣುವ ಸಮಯವಾದ್ದರಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಸಿಂಹಾವಲೋಕನ ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ಗುರಿಗಳ, ಮಾರ್ಗಗಳ ನಿರ್ಣಯವೂ ಅಮೂಲ್ಯ. ನಮ್ಮ ಮುಂದಿನ ಒಂದು ವರ್ಷದಲ್ಲಿ ಘಟಿಸಬಹುದಾದ ಸಾಮಾನ್ಯ ಫಲಗಳ ವಿಮರ್ಶೆ ನಡೆಸಿ, ಶುಭಫಲಗಳ ಪುಷ್ಟಿಗೆ, ಅಶುಭಫಲಗಳ ನಾಶಕ್ಕೆ ಬೇಕಾಗುವ ಸಕಲ ಸಿದ್ಧತೆಗಳೊಂದಿಗೆ ಮನೋದಾರ್ಢ್ಯವನ್ನು ಹೊಂದಲು ಫಲಜ್ಯೋತಿಷ್ಯ ಸಹಕಾರಿಯಾಗಿದೆ ಎನ್ನುತ್ತಾ ಸಂವತ್ಸರಾದಿಫಲಗಳನ್ನು, ರಾಶಿಫಲಗಳನ್ನು ತಿಳಿಸಿದರು. ಯುಗಾದಿಯ ವಿಶೇಷ ಖಾದ್ಯವಾದ ಬೇವುಬೆಲ್ಲವನ್ನು  ಎಲ್ಲರೂ ಹಂಚಿ ತಿಂದು ಸಂಭ್ರಮಿಸಿದರು.

    ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ., ಉಪಪ್ರಾ೦ಶುಪಾಲರಾದ ರಾಮ ದೇವಾಡಿಗ, ಶಿಕ್ಷಕ  ಹಾಗೂ  ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

    Click here

    Click here

    Click here

    Click Here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸಿದ್ಧಾಪುರ: ಚಿರತೆಯನ್ನು ಗುಂಡಿಟ್ಟು ಕೊಂದು ಪ್ರಕರಣದಲ್ಲಿ ನಾಲ್ವರ ಬಂಧನ

    22/05/2026

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026
    Leave A Reply Cancel Reply

    six + fifteen =

    Call us

    Click Here

    Call us

    Call us

    Call us
    Highest Viewed Recently
    • ಸಿದ್ಧಾಪುರ: ಚಿರತೆಯನ್ನು ಗುಂಡಿಟ್ಟು ಕೊಂದು ಪ್ರಕರಣದಲ್ಲಿ ನಾಲ್ವರ ಬಂಧನ
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.