ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯ ಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಒಕ್ಕೂಟದ ನೂತನ ಅಧ್ಯಕ್ಷ ಜಗದೀಶ್ ವಹಿಸಿದರು. ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿ ಕಾರ್ಯಕ್ರಮದಿಂದ ಯಾವ ತರ ಮಳೆ ನೀರನ್ನು ಸಂಗ್ರಹಣೆ ಮಾಡಬಹುದು, ಅಂತರ ಜಲವನ್ನು ಹೇಗೆ ಕಾಪಾಡಿಕೊಂಡು ಹೋಗಬಹುದು ಅದರಿಂದ ಏನೆಲ್ಲ ಪ್ರಯೋಜನೆಗಳಿವೆ ಎಂಬುದರ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಬಗ್ಗೆ ತಾಲೂಕಿನ ಕೃಷಿ ಅಧಿಕಾರಿ ರಾಘವೇಂದ್ರ ಪ್ರಾತ್ಯಕ್ಷಿತೆಯ ಮೂಲಕ ಯಾವು ತರದಲ್ಲಿ ಮಳೆ ನೀರನ್ನು ಸಂಗ್ರಹಣೆ ಮಾಡಬಹುದು, ಅಲ್ಲದೆ, ಅದರ ಪ್ರಯೋಜನ ಹಾಗೂ ಮಳೆ ನೀರನ್ನು ಯಾವ ತರದಲ್ಲಿ ಸಂಗ್ರಹಣೆ ಮಾಡಿ , ಬೇಕಾದ ವಿಧಗಳನ್ನು ವಿವಿಧ ರೀತಿಯಲ್ಲಿ ತೋರಿಸಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಮಂಜುನಾಥ್ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷರಾದ ಶೇಖರ್ ಪೂಜಾರಿ, ಶೌರ್ಯ ಟೀಮಿನ ಸದಸ್ಯರಾದ ಕಾಳಿಂಗ ಪೂಜಾರಿ, ಫಲಾನುಭವಿಗಳು, ಶೌರ್ಯ ಟೀಮಿನ ಸದಸ್ಯರು ಉಪಸ್ಥಿತರಿದರು.
ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ ಸ್ವಾಗತಿಸಿ, ನಿರೂಪಿದರು. ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯ ಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ರಮೇಶ್ ಪಿ.ಕೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಸ್ಥಳೀಯರಾದ ಮಂಜುನಾಥ್ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷರಾದ ಶೇಖರ್ ಪೂಜಾರಿ, ಶೌರ್ಯ ಟೀಮಿನ ಸದಸ್ಯರಾದ ಕಾಳಿಂಗ ಪೂಜಾರಿ ಇದ್ದರು.















