Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮನಸ್ಸು ಎಂಬ ಪೀಠದಲ್ಲಿಟ್ಟ ಭಗವದ್ಗೀತೆಗೆ ಚಿಂತನೆಯೇ ನಿತ್ಯಪೂಜೆ: ಸುಬ್ರಾಯ ನಂದೋಡಿ
    ಊರ್ಮನೆ ಸಮಾಚಾರ

    ಮನಸ್ಸು ಎಂಬ ಪೀಠದಲ್ಲಿಟ್ಟ ಭಗವದ್ಗೀತೆಗೆ ಚಿಂತನೆಯೇ ನಿತ್ಯಪೂಜೆ: ಸುಬ್ರಾಯ ನಂದೋಡಿ

    No Comments
    Facebook Twitter Pinterest LinkedIn WhatsApp Reddit Tumblr Email
    ????????????????????????????????????
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳ ಪರಿಚಯಕ್ಕಾಗಿ ’ಗೀತಾ ಸಂದೇಶ ಸಾರ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    Click Here

    Call us

    Click Here

    ಗೀತಾಜ್ಞಾನ ಯಜ್ಞ ವೇದಿಕೆಯ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ, ಕಾಸರಗೋಡು ಅವರು ಆಗಮಿಸಿದ್ದರು. ಪಂಚಾಂಗಪಠನವನ್ನು ವೀಕ್ಷಾ ನಡೆಸಿದರೆ, ಕೃಪಾಲಿ ಗೀತಾಮಹಾತ್ಮ್ಯೆಯನ್ನು ಪಠಿಸಿದರೆ, ಮಯೂರ ಜ್ಞಾನಕಿರಣವನ್ನು ಪಠಿಸಿದನು.

    ನಂತರ ಗೀತಾ ಜ್ಞಾನ ಯಜ್ಞದ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿ ಅವರು ಮಾತನಾಡಿ, ಜೀವನವನ್ನು ಬೆಳಗಿಸುವ ಗ್ರಂಥ ಭಗವದ್ಗೀತೆ. ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಶಕ್ತಿಯಾಗಬೇಕು. ಸ್ವಾತಂತ್ರ್ಯ ಪಡೆದ ಶತಮಾನೋತ್ಸವದಲ್ಲಿ ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ ಭಗವದ್ಗೀತೆಯ ಜ್ಞಾನವನ್ನು ಹೊಂದಿದವನಾಗಬೇಕು. ಮನೆ ಮನೆಗಳಲ್ಲೂ ನಿತ್ಯ ಭಗವದ್ಗೀತೆಯ ಅಧ್ಯಯನ ಆಗಬೇಕು ಎಂದರು.

    ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ,  ವಿದ್ಯೆಯನ್ನು ಜೀವನದ ಬಾಲ್ಯದಲ್ಲಿ ಹೊಂದಿದರೆ ಸಾಧಿಸುವಾತಗೆ ಸಾವಿರಾರು ಅವಕಾಶಗಳು ಬಂದೊದಗುತ್ತವೆ. ತಾನು, ತನ್ನ ಮನೆ, ತನ್ನ ಊರು, ತನ್ನ ರಾಜ್ಯ, ತನ್ನ ದೇಶ ಎಂದು ಪ್ರತಿಯೊಂದು ಸ್ತರದಲ್ಲೂ ಅಭಿವೃದ್ಧಿಗೊಳಿಸಬಹುದು. ಭಗವದ್ಗೀತೆ ಅಮೂಲ್ಯವಾದ ಭಾರತೀಯ ತತ್ತ್ವಗಳ ಸಂಗ್ರಹ. ಅದರ ಅಧ್ಯಯನವನ್ನು ಬಾಲ್ಯದಲ್ಲಿಯೇ ನಡೆಸಬೇಕು ಎಂದರು. ವಿದ್ಯಾರ್ಥಿ ಶ್ರೀ ವತ್ಸ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

    ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಶಿಕ್ಷಕೇತರವೃಂದದವರು ಭಾಗವಹಿಸಿದ್ದರು.

    Click here

    Click here

    Click here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ

    04/02/2026

    ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ

    04/02/2026

    ಸಾಲಿಗ್ರಾಮದಲ್ಲಿ ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ

    04/02/2026
    Leave A Reply Cancel Reply

    1 + 12 =

    Call us

    Click Here

    Call us

    Call us

    Call us
    Highest Viewed Recently
    • ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ
    • 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಕಾಲೇಜಿನ ಬಾಲಕಿಯರು ಚಾಂಪಿಯನ್ಸ್
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
    • ತ್ರಾಸಿ: ವಾಕಿಂಗ್‌ ವೇಳೆ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದುಕೊಂಡು ಪರಾರಿಯಾದ ಕಳ್ಳ
    • ಸಾಲಿಗ್ರಾಮದಲ್ಲಿ ಬೃಹತ್ ಹಿಂದೂ ಸಂಗಮ, ಶೋಭಾಯಾತ್ರೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.