ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಲಾ ಸಾಂಸ್ಕೃತಿಕ ಸಂಸ್ಥೆಯಾದ ಸುರಭಿ ರಿ. ಬೈಂದೂರು ಇದರ ವಾರ್ಷಿಕ ಸಂಭ್ರಮ ಸುರಭಿ ಜೈಸಿರಿಯಲ್ಲಿ ಹಿರಿಯ ನಟಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಫೆಬ್ರವರಿ 19 ರಿಂದ 22 ಫೆಬ್ರವರಿ 2026ರ ತನಕ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣೆಯ ಸಾಂಸ್ಕೃತಿಕೋತ್ಸವವು ಪ್ರತಿದಿನ ಸಂಜೆ 6:00ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಫೆ.20ರಂದು ಬಿಂದುಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ. ಉದ್ಯಮಿ ಕೃಷ್ಣಮೂರ್ತಿ ಮಂಜ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ.
► ಫೆ.19ರಿಂದ 22ರ ತನಕ ಸುರಭಿ ರಿ. ಬೈಂದೂರು ಇದರ ವಾರ್ಷಿಕ ಸಂಭ್ರಮ ಸುರಭಿ ಜೈಸಿರಿ – https://kundapraa.com/?p=95886 .










