Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: ನಿವೃತ್ತ ಶಿಕ್ಷಕರಾದ ರಾಮರಾಯ ಆಚಾರ್ಯ ಹಾಗೂ ಡಾ. ಶೇಖರ ಬಿ. ಅವರಿಗೆ ಸನ್ಮಾನ
    ಊರ್ಮನೆ ಸಮಾಚಾರ

    ಕುಂದಾಪುರ: ನಿವೃತ್ತ ಶಿಕ್ಷಕರಾದ ರಾಮರಾಯ ಆಚಾರ್ಯ ಹಾಗೂ ಡಾ. ಶೇಖರ ಬಿ. ಅವರಿಗೆ ಸನ್ಮಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಬದುಕಿನಲ್ಲಿ ಭರವಸೆ ಕಳಕೊಳ್ಳದೇ ಕನಸುಗಳ ಬೆನ್ನತ್ತಿ ಪ್ರಯತ್ನದ ಬೆವರು ಸುರಿಸಿದರೆ ಪರಿಪೂರ್ಣತೆಯನ್ನು ಸಾಧಿಸಬಹುದು. ಬಡತನ, ಸೋಲು, ನೋವು, ನಿರಾಸೆಗಳ ನಡುವೆಯೂ ಛಲ ಮತ್ತು ದಿಟ್ಟತನದಿಂದ ಸವಾಲುಗಳನ್ನು ಎದುರಿಸಿದಲ್ಲಿ ಸಮೃದ್ಧಿಯ ಬದುಕು ನಮ್ಮದಾಗುತ್ತದೆಂದು ಅರಣ್ಯ ಗುತ್ತಿಗೆದಾರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜೆ.ಪಿ. ಶೆಟ್ಟಿ ಕಟ್ಕೆರೆ ಹೇಳಿದರು.

    Click Here

    Call us

    Click Here

    ಅವರು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ರಾಮರಾಯ ಆಚಾರ್ಯ ಹಾಗೂ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಶೇಖರ ಬಿ. ಅವರನ್ನು ಸನ್ಮಾನಿಸಿ ಮಾತನಾಡಿದರು.

    ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕರು ಹಲವು ಇಲ್ಲಗಳ ನಡುವೆ ತಾವು ಸಾಧನೆ ಗೈದ ಬದುಕಿನ ಹಿನ್ನೋಟವನ್ನು ಸ್ಮರಿಸಿ ಜೀವನದ ಯಶೋಗಾಥೆಯನ್ನು ಅರುಹಿ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಿರೆಂದು ವಿದ್ಯಾರ್ಥಿಗಳಿಗೆ ಹಿತನುಡಿದರು.

    ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ನಾಗರಾಜ ವೈದ್ಯ ಎಂ. ನಿವೃತ್ತರಾದ ಪ್ರಾಧ್ಯಾಪಕರ ಸೇವಾತತ್ಪರತೆ ಮತ್ತು ಕಾಯಕ ನಿಷ್ಠೆಯು ಕಾಲೇಜಿನ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದೆ. ಭವಿಷ್ಯದ ಬದುಕು ಆನಂದ ಸಾಗರವಾಗಲೆಂದು ಶುಭ ಕೋರಿದರು.

    ಉಪನ್ಯಾಸಕರು, ವಿದ್ಯಾರ್ಥಿಗಳು ತಮ್ಮ ಗುರುಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.

    Click here

    Click here

    Click here

    Click Here

    Call us

    Call us

    ನಿವೃತ್ತರನ್ನು ಉಪನ್ಯಾಸಕ ವರದರಾಜ ಬಿ. ಹಾಗೂ ರಾಜೇಂದ್ರ ಪರಿಚಯಿಸಿದರು. ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು, ಅಧ್ಯಾಪಕ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಕಾಂ. ನ ಅನುಷಾ ಹಾಗೂ ತಂಡದವರು ಪ್ರಾರ್ಥಿಸಿದರು. ಶೃತಿ ಆಚಾರ್ಯ ಎನ್. ಸ್ವಾಗತಿಸಿ, ಡಾ. ಭಾಗೀರಥಿ ನಾಯ್ಕ ವಂದಿಸಿದರು.

    ವಾಣಿಜ್ಯಶಾಸ್ತ್ರ ಪ್ರಾಧ್ಯಾಪಿಕೆ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಬೋಧಕ/ಬೋಧಕೇತರ ಸಿಬ್ಬಂದಿ, ನಿವೃತ್ತರ ಕುಟುಂಬಸ್ಥರು, ಹಳೆ ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಪ್ರಾರಂಭೋತ್ಸವ

    01/06/2026

    ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ನಾಗದೇವ್ ರಾಷ್ಟ್ರಕ್ಕೆ 196ನೇ ರ‍್ಯಾಂಕ್‌

    01/06/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಕೈಗಾರಿಕಾ ಘಟಕಕ್ಕೆ ಭೇಟಿ

    01/06/2026
    Leave A Reply Cancel Reply

    one × four =

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಪ್ರಾರಂಭೋತ್ಸವ
    • ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ನಾಗದೇವ್ ರಾಷ್ಟ್ರಕ್ಕೆ 196ನೇ ರ‍್ಯಾಂಕ್‌
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಕೈಗಾರಿಕಾ ಘಟಕಕ್ಕೆ ಭೇಟಿ
    • ಕುಂದಾಪುರ: ನಿವೃತ್ತ ಶಿಕ್ಷಕರಾದ ರಾಮರಾಯ ಆಚಾರ್ಯ ಹಾಗೂ ಡಾ. ಶೇಖರ ಬಿ. ಅವರಿಗೆ ಸನ್ಮಾನ
    • ಬಹುಮುಖ ಪ್ರತಿಭೆ ಮಣೂರಿನ ಪ್ರಭಾಕರ್‌ರಿಗೆ ಅಕ್ಷರದಕ್ಕರೆ ವಿಶೇಷ ಗೌರವ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.