ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಸ್ಸಾಂ ಮೂಲದ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದೆ.
ಭಕ್ಸಾ ಜಿಲ್ಲೆಯ ತಾಮ್ಮಲ್ಪುರ್ ಭಗಲಾಮರಿ ನಿವಾಸಿ ಅಲೊಂಗಬರ್ ಬೊರೊ ಮೃತಪಟ್ಟ ವ್ಯಕ್ತಿ.
ಅವರು ಸೋಮವಾರ ಕೆಲಸಕ್ಕೆ ಹೋಗದೆ ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಅವರು ಹೊರಗಡೆ ತೆರಳಿದ್ದು, ಬಹಳ ಹೊತ್ತಾದರೂ ವಾಪಸ್ ಬಂದಿರಲಿಲ್ಲ. ಬಳಿಕ ಅವರನ್ನು ಹುಡುಕಲು ತೆರಳಿದಾಗ, ಕಾರ್ಖಾನೆಯ ಸಮೀಪ ಹಾಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈತ ಮೂರು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದು, ಒಬ್ಬ ಮಗನ ಜವಾಬ್ದಾರಿ ಅವರ ಮೇಲಿತ್ತು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















