Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ
    ಊರ್ಮನೆ ಸಮಾಚಾರ

    ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರಿಗೆ ವಿವಿಧ ಕೌಶಲಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

    Click Here

    Call us

    Click Here

    ಬೇಸ್‌ನ ನಿರ್ದೇಶಕರಾದ ಡಾ. ರಾಮಪ್ರಸಾದ್ ಎಚ್.ಎಸ್. ಇಂದಿನ ದಿನಗಳಲ್ಲಿ ಶಿಕ್ಷಕರು ಅಭಿವೃದ್ಧಿಪಡಿಸಿಕೊಳ್ಳಬೇಕಾದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿ, ಶಿಕ್ಷಕರನ್ನು ಅವುಗಳಲ್ಲಿ ತರಬೇತಿಗೊಳಿಸಿದರು. ಇಶಾ ಪೌಂಡೇಶನ್‌ನ ತರಬೇತಿದಾರರಾದ ಪ್ರವೀಣ್ ಅವರು ಈ ದಿನಗಳಲ್ಲಿ ಉಪಸ್ಥಿತರಿದ್ದು, ಮನಸ್ಸಿನ ನಿಯಂತ್ರಣ, ಒತ್ತಡ ನಿವಾರಣೆ, ದೈಹಿಕ ಆರೋಗ್ಯ- ಮಾನಸಿಕ ನೆಮ್ಮದಿಗಳ ಸಂಪಾದನೆಯನ್ನು ಯೋಗಮಾರ್ಗದ ಮೂಲಕ ಹೇಗೆ ಸಾಧಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಕೆಲವಷ್ಟು ಸಾಮಾನ್ಯ ಯೋಗಗಳ ಪ್ರಕ್ರಿಯೆಗಳಲ್ಲಿ ತರಬೇತಿ ನೀಡಿದರು.

    ಸುಮಾರು 200 ಜನ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉತ್ತಮ ಮಾರ್ಗದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಶಾಲೆಯ ಪ್ರಾಂಶುಪಾಲರು, ಶ್ರೀ ಸಿದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಮಾತನಾಡಿ,  ಇಂದಿನ ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಅರಿತಿದ್ದು, ಬಹಳ ಚುರುಕುತನದಿಂದ ಕೂಡಿರುತ್ತಿದ್ದಾರೆ. ಪ್ರತಿವರ್ಷ ಒಂದೇ ರೀತಿಯ ಪಾಠಪ್ರವಚನಗಳು ಅವರಿಗೆ ರುಚಿಸುವುದಿಲ್ಲ. ಆದ್ದರಿಂದ ಶಿಕ್ಷಕರೂ ಸಹ ಮಕ್ಕಳ ಮನೋರಂಜನೆಗೊಳಿಸತಕ್ಕ ಕೌಶಲಗಳಿಂದ ಕೂಡಿರತಕ್ಕದ್ದು. ಈ ಸದುದ್ದೇಶದಿಂದ ದೇಶ ಸುತ್ತಿ ಸಾವಿರಾರು ಜನರನ್ನು ತರಬೇತಿಗೊಳಿಸುತ್ತಿರುವ ರಾಮಪ್ರಸಾದ್ ರವರ ಮಾರ್ಗದರ್ಶನವನ್ನು ನಾವು ಕೂಡ ಪಡೆದುಕೊಳ್ಳುತ್ತಿದ್ದೇವೆ. ಸದ್ಗುರುವಿನ ಇಶಾ ಪೌಂಡೇಶನ್‌ನ ಮೂಲಕ ಸಾವಿರಾರು ಜನರು ನೆಮ್ಮದಿಯನ್ನು ಪಡೆಯುತ್ತಿದ್ದು, ಅದರ ತರಬೇತಿದಾರರಾದ ಪ್ರವೀಣ್ ಅವರ ಮಾರ್ಗದರ್ಶನ ನಮ್ಮ ನೆಮ್ಮದಿಗೆ ಸಹಕಾರಿಯಾಗಿದೆ. ಕೆಲವಷ್ಟು ಯೋಗಾಸನಗಳ ಅಭ್ಯಾಸವನ್ನು ಶಿಕ್ಷಕ-ಶಿಕ್ಷಕೇತರ ವೃಂದದವರೂ ಹೊಂದಿರಬೇಕು. ಸರ್ವರೂ ಆರೋಗ್ಯದಿಂದಿರಬೇಕು ಮತ್ತು ವಿದ್ಯಾರ್ಥಿಗಳಿಗೆ ಯೋಗಾಸನಗಳ ಅಭ್ಯಾಸ ನಡೆಸುವ ಮೊದಲು ಪ್ರತಿಯೊಬ್ಬ ಶಿಕ್ಷಕನೂ ಅರಿತಿದ್ದರೆ ಕೆಲಸ ಸುಲಭ ಸಾಧ್ಯ. ಆದ್ದರಿಂದ ಈ ಕಾರ್ಯಾಗಾರಗಳನ್ನು ನಡೆಸಿರುತ್ತೇವೆ ಎಂದು ತಿಳಿದರು.

    ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಮ್., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಾಸಕ ಗುರುರಾಜ ಗಂಟಿಹೊಳೆ ಸಭೆ – ಮಾನವೀಯ ಸ್ಪಂದನೆಯೊಂದಿಗೆ ಕರ್ತವ್ಯ ನಿರ್ವಹಿಸಲು ಸಲಹೆ

    02/06/2026

    ತೆಕ್ಕಟ್ಟೆ: ವಿಶ್ವ ತಂಬಾಕು ವಿರೋಧ ದಿನಾಚರಣೆ

    02/06/2026

    ಶಿರೂರು: ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು

    02/06/2026
    Leave A Reply Cancel Reply

    eleven − ten =

    Call us

    Click Here

    Call us

    Call us

    Call us
    Highest Viewed Recently
    • ಜೆಇಇ ಅಡ್ವಾನ್ಸ್ 2026: ಆಳ್ವಾಸ್‌ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ
    • ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಾಸಕ ಗುರುರಾಜ ಗಂಟಿಹೊಳೆ ಸಭೆ – ಮಾನವೀಯ ಸ್ಪಂದನೆಯೊಂದಿಗೆ ಕರ್ತವ್ಯ ನಿರ್ವಹಿಸಲು ಸಲಹೆ
    • ತೆಕ್ಕಟ್ಟೆ: ವಿಶ್ವ ತಂಬಾಕು ವಿರೋಧ ದಿನಾಚರಣೆ
    • ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ
    • ಶಿರೂರು: ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.